ಬಿಡದಿ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಕಾರು ಉತ್ಪಾದನಾ ಘಟಕದ ಕಾರ್ಯಕ್ಷಮತೆ ಹೆಚ್ಚಿಸಲು ವಾರ್ಷಿಕ ನಿರ್ವಹಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಿರ್ವಹಣಾ ಕಾರ್ಯಾಗಾರ ಸಂದರ್ಭದಲ್ಲಿ ಟೊಯೊಟಾ ಕಾರುಗಳ ಉತ್ಪಾದನೆಯು ಕನಿಷ್ಠ ಪ್ರಮಾಣದಲ್ಲಿರಲಿದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಕಾರು ಉತ್ಪಾದನಾ ಘಟಕಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಟೊಯೊಟಾ ಕಂಪನಿಯು ಈ ತಿಂಗಳು 24ರಿಂದ ಮೇ 14ರ ತನಕ ವಾರ್ಷಿಕ ನಿರ್ವಹಣಾ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಕಾರ್ಯಗಾರದ ಸಂದರ್ಭದಲ್ಲಿ ಹೊಸ ಕಾರುಗಳ ಉತ್ಪಾದನೆಯು ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ನಿರ್ವಹಣಾ ಕಾರ್ಯಗಾರದ ವೇಳೆ ಉತ್ಪಾದನೆಯಲ್ಲಿ ಕುಂಠಿತಗೊಳ್ಳುವ ಬಗೆಗೆ ಈಗಾಗಲೇ ಅಧಿಕೃತವಾಗಿಯೇ ಮಾಹಿತಿ ಹಂಚಿಕೊಂಡಿರುವ ಕಂಪನಿಯು ಕಾರು ಉತ್ಪಾದನೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗಾಗಿ ಹೊಸ ಕಾರ್ಯಗಾರ ಅಗತ್ಯ ಎಂದಿದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಜೊತೆಗೆ ಕಾರು ಉತ್ಪಾದನೆಯು ಸ್ಥಗಿತಗೊಳ್ಳುವುದರಿಂದ ಕಾರು ವಿತರಣೆಯಲ್ಲಿ ತುಸು ವಿಳಂಬವಾಗುವ ಸಾಧ್ಯತೆಗಳಿದ್ದು, ಒಂದೇ ಹಂತದಲ್ಲಿ ಎರಡು ಕಾರು ಉತ್ಪಾದನಾ ಘಟಕಗಳಲ್ಲೂ ತಾಂತ್ರಿಕ ಉನ್ನತೀಕರಣದ ಕಾರ್ಯಗಾರ ನಡೆಸಲಾಗುತ್ತಿದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಬೆಂಗಳೂರಿನ ಹೊರವಲಯದಲ್ಲಿ ಬಿಡದಿಯಲ್ಲಿ ಒಟ್ಟು 432 ಎಕರೆ ವಿಸ್ತೀರ್ಣದಲ್ಲಿ ಎರಡು ಕಾರು ಉತ್ಪಾದನಾ ಘಟಕ ಹೊಂದಿರುವ ಟೊಯೊಟಾ ಇಂಡಿಯಾ ಕಂಪನಿಯು ಮೊದಲ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 2.10 ಲಕ್ಷ ಯುನಿಟ್ ಕಾರು ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೆ ಎರಡನೇ ಘಟಕದಲ್ಲಿ ವಾರ್ಷಿಕವಾಗಿ 1 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುತ್ತದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ದೇಶಿಯ ಮಾರುಕಟ್ಟೆಗಾಗಿ ಮಾತ್ರವಲ್ಲ ಬಿಡದಿ ಘಟಕದಿಂದಲೇ ವಿಶ್ವದ ಮಾರುಕಟ್ಟೆಗಳಿಗೆ ರಫ್ತು ಸೌಲಭ್ಯ ಹೊಂದಿರುವ ಟೊಯೊಟಾ ಕಂಪನಿಯು ಸದ್ಯ ಜಾಗತಿಕ ಮಟ್ಟದ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ತಯಾಕರನ್ನು ಹಿಂದಿಕ್ಕಿ ನಂ.1 ಸ್ಥಾನದಲ್ಲಿದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಭಾರತದಲ್ಲಿ ಸದ್ಯ ಕಾರು ಮಾರಾಟದ ಪ್ರಮಾಣದ ಮೇಲೆ ತಿಂಗಳ ಕಾರು ಮಾರಾಟ ಪಟ್ಟಿಯಲ್ಲಿ ಐದನೇ ಅಥವಾ ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆ ಸೇರಿ ರೀಬ್ಯಾಡ್ಜ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ರೀಬ್ಯಾಡ್ಜ್ ಮಾದರಿಗಳಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಹೊಸ ಯೋಜನೆಯು ಎರಡು ಕಂಪನಿಗಳಿಗೂ ಸಹಕಾರಿಯಾಗಿದೆ. ರೀಬ್ಯಾಡ್ಜ್ ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಟೊಯೊಟಾ ಕಂಪನಿಯು ಹೊಸ ಯೋಜನೆಯಿಂದ ಉತ್ತಮ ಆದಾಯ ಕಂಡುಕೊಂಡಿದೆ.

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ರೀಬ್ಯಾಡ್ಜ್ ಮಾದರಿಗಳನ್ನು ಒದಗಿಸುವ ಮಾರುತಿ ಸುಜುಕಿ ಕಂಪನಿಗೂ ವಾಹನ ಮಾರಾಟ ಸುಧಾರಿಸಲು ಅನುಕೂಲಕರವಾಗಿದ್ದು, ಮಾರುತಿ ಸುಜುಕಿ ಮಾರಾಟ ಮಳಿಗೆಗಳು ಇಲ್ಲದ ಪ್ರದೇಶಗಳಲ್ಲಿ ಟೊಯೊಟಾ ರೀಬ್ಯಾಡ್ಜ್ ಮಾದರಿಗಳನ್ನು ಮಾರಾಟ ಮಾಡಲು ಅನುಕೂಲಕರವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಾರ್ಷಿಕ ನಿರ್ವಹಣಾ ಕಾರ್ಯಾಗಾರ ಘೋಷಿಸಿದ ಟೊಯೊಟಾ ಇಂಡಿಯಾ

ಜೊತೆಗೆ ರೀಬ್ಯಾಡ್ಜ್ ಕಾರುಗಳನ್ನು ಮೂಲ ಕಾರು ಮಾದರಿಗಿಂತಲೂ ಉತ್ತಮವಾಗಿಸಲು ಕೆಲವು ಪ್ರಮುಖ ತಾಂತ್ರಿಕ ಅಂಶಗಳನ್ನು ಅಳವಡಿಸುವ ಟೊಯೊಟಾ ಕಂಪನಿಯು ಹೊಸ ಮಾದರಿಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದು, ಹೊಸ ರೀಬ್ಯಾಡ್ಜ್ ಕಾರುಗಳು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಗ್ರಾಹಕರನ್ನು ಸೆಳೆಯುತ್ತಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Maintenance Program To Be Held From 26th April To 14th May. Read in Kannada.
Story first published: Friday, April 23, 2021, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X