ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಟೊಯೊಟಾ ಕಂಪನಿಯು ತನ್ನ ಈ ಹಿಂದಿನ ಕೊರೊಲ್ಲಾ ಸೆಡಾನ್ ಕಾರು ಮಾದರಿಯನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಕಂಪನಿಯು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಮತ್ತೊಂದು ಕೊರೊಲ್ಲಾ ಸರಣಿಯಲ್ಲಿರುವ ಕ್ವೆಸ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಹೊಸ ಎಮಿಷನ್ ಜಾರಿ ನಂತರ ಕೊರೊಲ್ಲಾ ಸೆಡಾನ್ ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಕೊರೊಲ್ಲಾ ಕ್ವೆಸ್ಟ್ ಆವೃತ್ತಿಯು ಹೊಸ ಬದಲಾವಣೆಯೊಂದಿಗೆ ಭಾರತದಲ್ಲಿ ಪರಿಚಯಿಸುವ ಸುಳಿವು ನೀಡಿದ್ದು, ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೆಡ್‌ಮಾರ್ಕ್ ದಾಖಲಿಸಿದೆ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ಸೆಡಾನ್ ಆವೃತ್ತಿಯು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಟೆಸ್ಟಿಂಗ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಮಧ್ಯಮ ಕ್ರಮಾಂಕದ ಸೆಡಾನ್ ಮಾದರಿಗಳಲ್ಲಿ ಕೊರೊಲ್ಲಾ ಮತ್ತು ಹೋಂಡಾ ಸಿವಿಕ್ ಮತ್ತು ಸ್ಕೋಡಾ ಒಕ್ಟಿವಿಯಾ ಪ್ರಮುಖ ಪ್ರತಿಸ್ಪರ್ಧಿ ಮಾದರಿಗಳಾಗಿದ್ದು, ಇದೀಗ ಈ ಕಾರು ಮಾದರಿಗಳು ಮಾರಾಟದಿಂದ ಸ್ಥಗಿತವಾಗಿವೆ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಇದರಲ್ಲಿ ಸ್ಕೋಡಾ ಒಕ್ಟಿವಿಯಾ ಕಾರು ಮಾದರಿಯು ಮುಂದಿನ ಕೆಲವೇ ವಾರಗಳಲ್ಲಿ ಹೊಸ ಎಂಜಿನ್ ಆಯ್ಕೆಯೊಂದಿಗೆ ಭಾರತದಲ್ಲಿ ಮರುಬಿಡುಗಡೆಯಾಗುತ್ತಿದ್ದು, ಇದೇ ಕಾರಣಕ್ಕೆ ಟೊಯೊಟಾ ಕಂಪನಿಯು ಸಹ ಗ್ರಾಹಕರ ಬೇಡಿಕೆಯೆಂತೆ ಕೊರೊಲ್ಲಾ ಕಾರನ್ನು ಹೊಸ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಈ ಹಿಂದೆ ಮಾರುಕಟ್ಟೆಯಲ್ಲಿದ್ದ ಕೊರೊಲ್ಲಾ ಕಾರು ಮಾದರಿಯು 1.4-ಲೀಟರ್ ಟರ್ಬೊ ಡೀಸೆಲ್ ಮತ್ತು 1.8-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿತ್ತು. ಆದರೆ ಕಾರಣಾಂತರಗಳಿಂದ ಟೊಯೊಟಾ ಕಂಪನಿಯು ಬಿಎಸ್-6 ಮಾದರಿಯನ್ನು ಉನ್ನತೀಕರಿಸಲಿಲ್ಲ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಕಳೆದ ವರ್ಷದಿಂದಲೇ ಮಾರಾಟ ಸ್ಥಗಿತವಾಗಿರುವ ಕೊರೊಲ್ಲಾ ಸ್ಥಾನಕ್ಕೆ ಇದೀಗ ಹೊಸ ಎಂಜಿನ್ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಿತ ಪ್ಲ್ಯಾಟ್‍ಫಾರ್ಮ್ ಅಡಿ ಅಭಿವೃದ್ದಿಗೊಂಡಿರುವ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನ ಯಾವುದೇ ನಿಖರ ಎಂಜಿನ್ ಮಾಹಿತಿ ಇನ್ನು ಲಭ್ಯವಾಗಿಲ್ಲ.

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಆದರೆ ಹೊಸ ಕಾರು ಮಾದರಿಯು ಹೈಬ್ರಿಡ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, ಕೊರೊಲ್ಲಾ ಆಟ್ಲಿಸ್ ಮಾದರಿಯ ರೂಪವನ್ನೇ ಹೊಂದಿರುವ ಕಾರು ಮಾದರಿಯು ಕ್ಯಾಮ್ರಿ ಹೈಬ್ರಿಡ್ ಮಾದರಿಗಿಂತಲೂ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

 ಭಾರತದಲ್ಲಿ ಕೊರೊಲ್ಲಾ ಕ್ವೆಸ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ

ಕ್ಯಾಮ್ರಿ ಮತ್ತು ವೆಲ್‌ಫೈರ್ ನಂತರ ಭಾರತದಲ್ಲಿ ಸರಣಿ ಕಾರುಗಳನ್ನು ಹೆಚ್ಚಿಸುತ್ತಿರುವ ಟೊಯೊಟಾ ಕಂಪನಿಯು ಮೂರನೇ ಕಾರು ಮಾದರಿಯಾಗಿ ಇದೀಗ ಕೊರೊಲ್ಲಾ ಕ್ವೆಸ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಹೊಸ ಕಾರು ಸ್ಕೋಡಾ ಒಕ್ಟಿವಿಯಾ ಮಾದರಿಗೆ ನೇರ ಪೈಪೋಟಿ ನೀಡಲಿದೆ.

Article Published On: Friday, June 4, 2021, 20:26 [IST]
English summary
Toyota Corolla Quest Name Trademarked In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+