ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಕಾರು ಮಾಲೀಕತ್ವವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಟೊಯೊಟಾ ಕಂಪನಿಯು ಇದೀಗ ಕೋವಿಡ್‌ನಿಂದಾಗಿ ಹಳಿತಪ್ಪಿರುವ ಗ್ರಾಹಕರ ಸೇವೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಸಿದ್ದತೆಯಲ್ಲಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಕೋವಿಡ್‌ ಹೆಚ್ಚಳದಿಂದಾಗಿ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದ್ದು, ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಳ್ಳಲಿರುವ ವಾಹನಗಳ ವಾರಂಟಿ ಅವಧಿಯ ಕುರಿತಾಗಿ ಮಹತ್ವ ನಿರ್ಧಾರ ಪ್ರಕಟಿಸಿರುವ ಟೊಯೊಟಾ ಕಂಪನಿಯು ವಾರಂಟಿ ಅವಧಿಯನ್ನು ವಿಸ್ತರಣೆ ಮಾಡುವುದರ ನಿಗದಿತ ಅವಧಿಯಲ್ಲಿ ಗ್ರಾಹಕರ ಸೇವೆಗಳನ್ನು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಪೂರ್ಣಗೊಳಿಸಲು ಹೊಸ ಯೋಜನೆ ರೂಪಿಸಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಲಾಕ್‌ಡೌನ್ ಅವಧಿಯಲ್ಲಿ ಮುಕ್ತಾಯಗೊಳ್ಳುವ ವಾಹನ ವಾರಂಟಿ ವಿಸ್ತರಿಸುವುದರ ಜೊತೆಗೆ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿರುವ ಟೊಯೊಟಾ ಕಂಪನಿಯು ಹೊಸ ಕಾರ್ಯಕ್ರಮದಡಯಲ್ಲಿ ವಾರಂಟಿ ಜೊತೆ ಉಚಿತ ಸೇವಾ ಆಫರ್‌ಗಳನ್ನ, ಪಾವತಿಸಲಾದ ಸೇವೆಗಳನ್ನು ಮುಂದಿನ ಒಂದೂವರೆ ತಿಂಗಳಿನಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಯೋಜನೆಯಲ್ಲಿ ಲಾಕ್‌ಡೌನ್ ಸಡಿಕೆ ನಂತರ ಗ್ರಾಹಕರ ಬೇಡಿಕೆ ಆಧಾರದ ಮೇಲೆ ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ಇಲ್ಲವೆ ಮನೆ ಬಾಗಿಲುಗಳಿಗೆ ಸೇವೆಗಳನ್ನು ಒದಗಿಸಲಿದ್ದು, ಗ್ರಾಹಕ ಸೇವೆಗಳಿಗೂ ಮುನ್ನ ಕಾರನ್ನು ಸಂಪೂರ್ಣವಾಗಿ ನಂಜು ನಿರೋಧಕ ರಾಸಾಯನಿಕಗಳನ್ನು ಸಿಂಪರಣೆ ಮಾಡಿದ ನಂತರವೇ ಸೇವೆಗಳನ್ನು ಒದಗಿಸಲಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಕೋವಿಡ್ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ಷರತ್ತು ಬದ್ದ ಅವಕಾಶಗಳಿದ್ದರೂ ಗ್ರಾಹಕರ ಸೇವೆಗಳನ್ನು ಪೂರೈಸುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಸವಾಲಿನ ಕೆಲಸವಾಗಿದೆ. ಆದರೆ ಲಾಕ್‌ಡೌನ್ ಅವಧಿಯಲ್ಲಿ ನಿಗದಿತ ಅವಧಿಯ ಸೇವೆಗಳನ್ನು ಪಡೆದುಕೊಳ್ಳದ ವಾಹನಗಳ ವಾರಂಟಿ ಅವಧಿಯು ಮುಗಿದುಹೋಗಲಿದ್ದು, ವಾರಂಟಿ ಅವಧಿ ಮುಕ್ತಾಯದಿಂದ ಉಚಿತ ಸೇವೆಗಳನ್ನು ಕಳೆದುಕೊಳ್ಳಲಿರುವ ಗ್ರಾಹಕರಿಗೆ ಟೊಯೊಟಾ ಕಂಪನಿಯು ವಾರಂಟಿ ಅವಧಿ ವಿಸ್ತರಿಸಿ ಗ್ರಾಹಕನೇ ಮೊದಲು ಎನ್ನುವ ಬದ್ದತೆ ಪ್ರದರ್ಶಿಸಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಉನ್ನತ ಮಟ್ಟದ ಗುಣಮಟ್ಟದ ಸೇವೆಯನ್ನು ಒದಗಿಸುವ ಟೊಯೋಟಾ ಕಂಪನಿಗೆ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪ್ರಮುಖವಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ವಾರಂಟಿ ಮುಕ್ತಾಯಗೊಳ್ಳುವ ಉಚಿತ ಸೇವೆಗಳನ್ನು ಹೇಗೆ ಪಡೆದುಕೊಳ್ಳಬೇಕೆಂಬ ಗ್ರಾಹಕರ ಗೊಂದಲವನ್ನು ನಿವಾರಿಸಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ವಾರಂಟಿ ಅವಧಿ ವಿಸ್ತರಣೆಯಾಗಿರುವುದರಿಂದ ವಾರಂಟಿ ಪ್ಯಾಕೇಜ್‌ನಲ್ಲಿರುವ ಸೇವೆಗಳನ್ನು ಪರಿಸ್ಥಿತಿ ತುಸು ಸುಧಾರಣೆಗೊಂಡ ನಂತರವೇ ಪಡೆದುಕೊಳ್ಳಬಹುದಾಗಿದ್ದು, ವಾರಂಟಿ ಅವಧಿಯನ್ನು ವಿಸ್ತರಿಸಿರುವುದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಇನ್ನು ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಮತ್ತೆ ಉತ್ಪಾದನೆಯು ತಗ್ಗಿರುವುರುವುದು ಭಾರೀ ನಷ್ಟ ಎದುರಿಸುವ ಭೀತಿ ಎದುರಾಗಿದ್ದು, ಹೊಸ ಸುರಕ್ಷಾ ಕ್ರಮ ಕೈಗೊಂಡು ಉತ್ಪಾದನೆಯನ್ನು ಕೈಗೊಳ್ಳಲಾಗುತ್ತಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ವಾರಂಟಿ ಅವಧಿ ವಿಸ್ತರಿಸುವ ಗ್ರಾಹಕ ಸಂಪರ್ಕ ಕಾರ್ಯಕ್ರಮ 2.0 ಪರಿಚಯಿಸಿದ ಟೊಯೊಟಾ

ಪ್ರಮುಖ ಆಟೋ ಕಂಪನಿಗಳು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುತ್ತಿದ್ದು, ವಾಹನ ಮಾರಾಟದಲ್ಲೂ ಕೂಡಾ ಹೊಸ ತಂತ್ರಗಳನ್ನು ಅಳವಡಿಸಿಕೊಂಡು ವೈರಸ್ ಹರಡುವಿಕೆ ತಡೆಯೊಂದಿಗೆ ಸುರಕ್ಷಿತ ಉದ್ಯಮ ವ್ಯವಹಾರ ಕೈಗೊಳ್ಳುತ್ತಿವೆ.

Most Read Articles

Kannada
Read more on ಟೊಯೊಟಾ toyota
English summary
Toyota Introduced Customer Connect Program 2.0 in India. Read in Kannada.
Story first published: Thursday, May 13, 2021, 0:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X