ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಜಪಾನ್ ಮೂಲದ ಜನಪ್ರಿಯ ಟೊಯೊಟಾ ಕಂಪನಿಯು ತನ್ನ ಫಾರ್ಚುನರ್ ಜಿಆರ್ ಸ್ಪೋರ್ಟ್ ವೆರಿಯೆಂಟ್ ಅನ್ನು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಈ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ವೆರಿಯೆಂಟ್ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಟೊಯೊಟಾ ಕಂಪನಿಯು ಫಾರ್ಚುನರ್ ಜಿಆರ್ ಸ್ಪೋರ್ಟ್ ಜೊತೆಗೆ ಅಗ್ಯಾ ಜಿಆರ್ ಸ್ಪೋರ್ಟ್, ಯಾರಿಸ್ ಜಿಆರ್ ಸ್ಪೋರ್ಟ್ ಮತ್ತು ವೆಲೋಜ್ ಜಿಆರ್ ಲಿಮಿಟೆಡ್ ಅನ್ನು ಕೂಡ ಪರಿಚಯಿಸಿದೆ. ಇದರಲ್ಲಿ ಹೊಸ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್ ಸಾಮಾನ್ಯ ಮಾದರಿಯಿಂದ ಭಿನ್ನವಾಗಲು ಹೊರಭಾಗ ಮತ್ತು ಒಳಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ, ಇನ್ನು ಈ ಎಸ್‍ಯುವಿಯಲ್ಲಿ ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಏಳು ಸೀಟುಗಳ ಲೋಜ್ ಜಿಆರ್ ಲಿಮಿಟೆಡ್ ಎಂಪಿವಿಯನ್ನು ಇಂಡೋನೇಷ್ಯಾದಲ್ಲಿ ಸೀಮಿತ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತದೆ ಟೊಯೊಟಾ ಯಾರಿಸ್ ಮತ್ತು ಅಗ್ಯಾ ಮೂಲಕ ಜಿಆರ್ ಸ್ಪೋರ್ಟ್ ಅನ್ನು ಹ್ಯಾಚ್ ಬ್ಯಾಕ್ ವಿಭಾಗಕ್ಕೆ ವಿಸ್ತರಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಜಿಆರ್ ವಿಭಾಗವು ಟೊಯೊಟಾ ಮಾದರಿಗಳ ಸರಣಿಯನ್ನು ಅಭಿವೃದ್ಧಿಪಡಿಸುತ್ತಿದೆ. ಜಿಆರ್ ಸುಪ್ರ ಈ ವಿಂಗ್‌ನಿಂದ ಹೊರಬಂದ ಮೊದಲ ಸ್ಪೋರ್ಟ್ಸ್‌ಕಾರ್ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಹೊಸ ಫಾರ್ಚೂನರ್ ಜಿಆರ್ ಸ್ಪೋರ್ಟ್‌ನ ಹೊರಭಾಗದಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಸ್ಪೋರ್ಟಿ ಫ್ರಂಟ್ ಮತ್ತು ರಿಯರ್ ಬಂಪರ್ ಸ್ಪಾಯ್ಲರ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, ಹೊಸದಾಗಿ ವಿನ್ಯಾಸಗೊಳಿಸಿದ ಡ್ಯುಯಲ್-ಟೋನ್ ಅಲಾಯ್ ವ್ಹ್ಗೀಲ್‌ಗಳು, ಟೈಲ್‌ಗೇಟ್‌ನೊಂದಿಗೆ ಕಿಕ್ ಸೆನ್ಸರ್, ಹೊಸ ಜಿಆರ್ ಗ್ರೇಡ್ ಬ್ಯಾಡ್ಜ್ ಮತ್ತು ಸೈಡ್ ಸ್ಟಿಕ್ಕರ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಈ ಜಿಆರ್ ಸ್ಪೋರ್ಟ್ ಎ/ಟಿ ವೇರಿಯಂಟ್ 2.7 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ ಈ ಎಂಜಿನ್ 163 ಬಿಹೆಚ್‍ಪಿ ಪವರ್ ಮತ್ತು 163 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಮಾತ್ರ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಇನ್ನು ಫಾರ್ಚೂನರ್ ಜಿಆರ್ ಸ್ಪೋರ್ಟ್‌ನಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 149.6 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಇನ್ನು ಕ್ಯಾಬಿನ್ ಲೆಥೆರೆಟ್ ಸೀಟುಗಳು, ಬ್ಲ್ಯಾಕ್ ಇಂಟಿರಿಯರ್ ಥೀಮ್, ಒಂಬತ್ತು ಇಂಚಿನ ಹೆಡ್ ಯೂನಿಟ್, ಡ್ರೈವ್ ಮೋಡ್‌ಗಳು, ಪವರ್ಡ್ ಸೀಟುಗಳು, ಎಲೆಕ್ಟ್ರೋ-ಕ್ರೋಮಿಕ್ IRVM, ಸರೌಂಡ್ ಮಾನಿಟರ್, ಹೊಸ ವೈರ್‌ಲೆಸ್ ಚಾರ್ಜರ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಡಿಪರ್ಚರ್ ಅಲರ್ಟ್ ಮತ್ತು ಇತ್ಯಾಧಿ ಫೀಚರ್ಸ್ ಗಳನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಇನ್ನು ಬ್ರೆಜಿಲ್‌ನಲ್ಲಿ ಟೊಯೊಟಾ ಕಂಪನಿಯು ಹೊಸ ಟೊಯೊಟಾ ಬಾರ್ಟರ್ ಎಂಬ ನೇರ ಮಾರಾಟ ಚಾನಲ್ ಅನ್ನು ಪ್ರಾರಂಭಿಸಿದೆ. ಈ ಟೊಯೊಟಾ ಬಾರ್ಟರ್ ಕೃಷಿ ಕ್ಷೇತ್ರದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ. ಉಳಿದ ಗ್ರಾಹಕರು ಸಾಮಾನ್ಯವಾಗಿ ಟೊಯೊಟಾ ಡೀಲರ್ ಬಳಿಯಿಂದ ಕಾರುಗಳನ್ನು ಖರೀದಿಸಬೇಕಾಗಿದೆ, ಟೊಯೊಟಾ ಬ್ರೆಜಿಲ್‌ನಲ್ಲಿ ಪ್ರಸ್ತುತ ಕೃಷಿ ಉದ್ಯಮ ವಲಯದಲ್ಲಿ ತನ್ನ ನೇರ ಮಾರಾಟದಲ್ಲಿ ಶೇ.16 ರಷ್ಟು ಪಾಲು ಇದೆ ಎಂದು ಹೇಳಿಕೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಈ ಹೊಸ ಯೋಜನೆಯಿಂದ ಮತ್ತಷ್ಟು ಕೃಷಿಗರಿಗೆ ಸಹಾಯವಾಗಲಿದೆ ಎಂದು ಕಂಪನಿ ಹೇಳಿದೆ. ಟೊಯೊಟಾ ಬಾರ್ಟರ್ ಎಂದು ಕರೆಯಲ್ಪಡುವ ಈ ಯೋಜನೆಯಲ್ಲಿ ಗ್ರಾಹಕರಿಗೆ ಹೊಸ ವಾಹನ ಖರೀದಿಸಲು ಜೋಳ ಹಾಗೂ ಸೋಯಾಬೀನ್ ಅನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಜೋಳ ಮತ್ತು ಸೋಯಾಬೀನ್ ಬೆಲೆ ವಾಹನದ ಬೆಲೆಯಷ್ಟೇ ಇರಬೇಕು. ಅಂದರೆ ವಾಹನದ ಬೆಲೆಯ ಮೌಲ್ಯದ ಜೋಳ ಮತ್ತು ಸೋಯಾಬೀನ್ ಅನ್ನು ಗ್ರಾಹಕರು ನೀಡಬೇಕಾಗುತ್ತದೆ .ಟೊಯೊಟಾ ಕಂಪನಿಯ ಹಿಲುಕ್ಸ್ ಪಿಕಪ್ ಟ್ರಕ್, ಕೊರೊಲ್ಲಾ ಕ್ರಾಸ್ ಎಸ್‍ಯುವಿ ಮತ್ತು SW4 SV ನಂತಹ ಮಾದರಿಗಳನ್ನು ಈ ಯೋಜನೆಯಡಿ ಖರೀದಿಸಬಹುದು. SW4 ಮೂಲತಃ ಭಾರತದಲ್ಲಿ ಲಭ್ಯವಿರುವ ಫಾರ್ಚೂನರ್ ಎಸ್‍ಯುವಿ ಆಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಇನ್ನು ಭಾರತದಲ್ಲಿ ಟೊಯೊಟಾ ಕಂಪನಿಯು 2021ರ ಜುಲೈ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 13,105 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಟೊಯೊಟಾ ಕಂಪನಿಯು ಈ ವರ್ಷದ ಜೂನ್ ತಿಂಗಳಿನಲ್ಲಿ 8801 ಯುನಿಟ್ ಗಳನ್ನು ಮಾರಾಟಗೊಳಿಸಿತ್ತು. ಇದು ಜುಲೈನಿಂದ ಮಾರಾಟ ಸಂಖ್ಯೆಗೆ ಹೋಲಿಸಿದರೆ 4,304 ಯುನಿಟ್‌ಗಳು ಕಡಿಮೆಯಾಗಿದೆ. ಇದು ಮಾಸಿಕ ಮಾರಾಟದಲ್ಲಿ ಶೇ.49 ರಷ್ಟು ಬೆಳವಣಿಗೆಯನ್ನು ಸಾಧಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ ಟೊಯೊಟಾ ಫಾರ್ಚುನರ್ ಜಿಆರ್ ಸ್ಪೋರ್ಟ್

ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 5,386 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇದನ್ನು 2021ರ ಜುಲೈ ತಿಂಗಳ ಮಾರಾಟದ ಅಂಕಿಅಂಶಗಳಿಗಿಂತ 7719 ಯುನಿಟ್‌ಗಳಷ್ಟು ಕಡಿಮೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.143 ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಪೂರ್ಣ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಫಾರ್ಚೂನರ್ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

Most Read Articles

Kannada
Read more on ಟೊಯೊಟಾ toyota
English summary
Toyota introduced fortuner gr sport variant new updates details
Story first published: Wednesday, August 11, 2021, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X