ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಕೋವಿಡ್ ಪರಿಣಾಮ ಸುರಕ್ಷಿತ ವಾಣಿಜ್ಯ ವ್ಯವಹಾರಗಳು ಹೊಸ ಸವಾಲಾಗಿ ಪರಿಣಮಿಸಿದ್ದು, ಕೋವಿಡ್ 2ನೇ ಅಲೆಯ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ವಾಣಿಜ್ಯ ವ್ಯವಹಾರಗಳು ಇದೀಗ ಮತ್ತೆ ವೈರಸ್ ಭೀತಿ ಎದುರಿಸುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೂ ತೀವ್ರ ಆರ್ಥಿಕ ಹಿನ್ನಡೆ ಉಂಟು ಮಾಡುವ ಸಾಧ್ಯತೆಗಳವೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಮತ್ತೆ ಏರಿಕೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಲಾಕ್‌ಡೌನ್ ಚರ್ಚೆಗಳು ನಡೆಸುತ್ತಿದ್ದು, ವೈರಸ್ ಪರಿಣಾಮ ನಿರಂತರವಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಾಹನ ಉತ್ಪಾದನಾ ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ವಾಹನಗಳ ಮಾರಾಟವನ್ನು ಸುಧಾರಿಸುವತ್ತ ಹೊಸ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿವೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಕೋವಿಡ್ ಹೆಚ್ಚುತ್ತಿರುವ ಪರಿಣಾಮ ಗ್ರಾಹಕರನ್ನು ನೇರವಾಗಿ ಶೋರೂಂ ಭೇಟಿಯನ್ನು ತಪ್ಪಿಸಲು ಬಹುತೇಕ ವಾಹನ ಕಂಪನಿಗಳು ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದಿದ್ದು, ವಾಹನ ಕಂಪನಿಗಳ ಹೊಸ ಉಪಕ್ರಮಕ್ಕೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಇದರ ಜೊತೆಗೆ ಹೊಸ ವಾಹನಗಳ ವೀಕ್ಷಣೆಗಾಗಿ ಮತ್ತೊಂದು ಪ್ರಮುಖ ಹೆಜ್ಜೆಯಿರಿಸಿರುವ ಆಟೋ ಉತ್ಪದನಾ ಕಂಪನಿಗಳು ವರ್ಚುವಲ್ ಶೋರೂಂಗಳನ್ನು ಸಹ ತೆರೆಯುತ್ತಿದ್ದು, ಇದು ಸಾಮಾನ್ಯ ವೆಬ್‌ತಾಣಗಳಲ್ಲಿ ಸಿಗುವ ವಾಹನಗಳ ಮಾಹಿತಿ ಪ್ರಸ್ತುತಪಡಿಸುವ ಶೈಲಿ ವಿಭಿನ್ನವಾಗಿರುತ್ತದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಇದೀಗ ಚಾಲನೆ ನೀಡಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಹೊಸ ವಾಹನಗಳಿಗಾಗಿ ಟೊಯೊಟಾ ಕಂಪನಿಯು ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ್ದು, ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

3ಡಿ ತಂತ್ರಜ್ಞಾನದ ಮೂಲಕ ನೀವು ಆಯ್ದಕೊಳ್ಳುವ ಕಾರಿನ ಸಂಪೂರ್ಣ ಮಾಹಿತಿಯನ್ನು ವಿಭಿನ್ನವಾಗಿ ಪ್ರಸ್ತುತಪಡಿಸಲಿದ್ದು, 360 ಡಿಗ್ರಿ ಮಾದರಿಯಲ್ಲಿ ಹೊಸ ಕಾರನ್ನು ಕೂಲಂಕುಶ ಪರಿಶೀಲನೆ ಮಾಡಬಹುದಾಗಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ವರ್ಚುವಲ್ ಶೋರೂಂನಲ್ಲಿ ಟೊಯೊಟಾ ನಿರ್ಮಾಣದ ಎಲ್ಲಾ ಕಾರು ಮಾದರಿಗಳು ವೀಕ್ಷಣೆಗೆ ಲಭ್ಯವಿದ್ದು, ಹೊಸ ವರ್ಚುವಲ್ ಪ್ಲ್ಯಾಟ್‌ಫಾರ್ಮ್ ಸದ್ಯ ಕೋವಿಡ್ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ವರ್ಚುವಲ್ ಶೋರೂಂನಲ್ಲಿ ಗ್ರಾಹಕರು ಖರೀದಿಗೆ ಲಭ್ಯವಿರುವ ಕಾರು ಮಾದರಿಗಳ ಪ್ರತ ವೆರಿಯೆಂಟ್‌ಗಳ ತಾಂತ್ರಿಕ ಅಂಶಗಳು, ಬೆಲೆ, ಮತ್ತು ತಾಂತ್ರಿಕ ಅಂಶಗಳನ್ನು ಸ್ಪಷ್ಟವಾಗಿ ಮತ್ತು ಸುಲಭವಾಗಿ ವೀಕ್ಷಣೆ ಮಾಡಬಹುದಾಗಿದ್ದು, ವರ್ಚುವಲ್ ಶೋರೂಂನಲ್ಲಿ ನಿಮಗೆ ಇಷ್ಟವಾಗುವ ಕಾರನ್ನು ಖರೀದಿಸಲು ಬಯಸಿದರೆ ಮುಂದಿನ ವ್ಯವಹಾರಗಳನ್ನು ಕೈಗೊಳ್ಳಬಹುದು.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ವರ್ಚುವಲ್ ವೀಕ್ಷಣೆಯ ನಂತರ ಕಾರು ಖರೀದಿಗೆ ಬಯಸಿದರೆ ಟೆಸ್ಟ್ ಡ್ರೈವ್‌ಗೆ ನೋಂದಣಿ ಮಾಡುವ ಮೂಲಕ ಮನೆ ಬಾಗಿಲಿಗೆ ಕಾರನ್ನು ತರಿಸಿಕೊಳ್ಳಬಹುದಾಗಿದ್ದು, ಟೆಸ್ಟ್ ಡ್ರೈವ್ ನಂತರದಲ್ಲಿ ಕಾರು ಖರೀದಿ ಪ್ರಕ್ರಿಯೆ ಕೂಡಾ ಸಂಪೂರ್ಣವಾಗಿ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ನಡೆಯಲಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಟೆಸ್ಟ್ ಡ್ರೈವ್ ವಾಹನಗಳನ್ನು ಆಸಕ್ತ ಗ್ರಾಹಕರಿಗೆ ಹಸ್ತಾಂತರ ಮಾಡುವಾಗಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದ್ದು, ಟೆಸ್ಟ್ ಡ್ರೈವ್‌ನಲ್ಲೂ ವಾಹನವು ಇಷ್ಟವಾದಲ್ಲಿ ಮುಂದಿನ ಖರೀದಿ ಪ್ರಕ್ರಿಯೆ ಕೂಡಾ ಸಂಪೂರ್ಣ ಡಿಜಿಟಲ್ ಪ್ಲ್ಯಾಟ್‌ಫಾರ್ಮ್ ಮೂಲಕವೇ ನಡೆಯಲಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಖರೀದಿ ಪ್ರಕ್ರಿಯೆ ನಂತರ ವಾಹನ ವಿತರಣೆ ಕೂಡಾ ಗ್ರಾಹಕರ ಮನೆ ಬಾಗಿಲಿಗೆ ವಿತರಣೆ ಮಾಡಲಿದ್ದು, ಈ ವೇಳೆಯು ಕೋವಿಡ್ ಸುರಕ್ಷಾ ಕ್ರಮಗಳನ್ನು ಪಾಲನೆ ಮಾಡಿಯೇ ಕಾರು ಹಸ್ತಾಂತರ ಮಾಡಲಾಗುತ್ತದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮುಖ್ಯ ಉದ್ದೇಶವೆಂದರೆ ಗ್ರಾಹಕರು ಮತ್ತು ಸಿಬ್ಬಂದಿ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದು ಮತ್ತು ಕೋವಿಡ್ ಹರಡುವಿಕೆಯನ್ನು ತಪ್ಪಿಸುವುದಾಗಿದ್ದು, ಟೊಯೊಟಾ ವರ್ಚುವಲ್ ಶೋರೂಂ ಕೂಡಾ ಅತ್ಯುತ್ತಮವಾಗಿ ವಿನ್ಯಾಸಗೊಂಡಿದೆ.

ಕೋವಿಡ್ ಭೀತಿ: ಹೊಸ ಕಾರುಗಳ ಖರೀದಿಗಾಗಿ ಭಾರತದಲ್ಲಿ ವರ್ಚುವಲ್ ಶೋರೂಂ ತೆರೆದ ಟೊಯೊಟಾ

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆಯ ಮತ್ತೊಂದು ಲಾಭವೆಂದರೆ ಖರೀದಿ ಪ್ರಕ್ರಿಯೆಯಲ್ಲಿ ಪಾಯಿಂಟ್ಸ್ ಆಧಾರದ ಮೇಲೆ ಹಲವಾರು ಆಫರ್‌ಗಳನ್ನು ಕೂಡಾ ಪಡೆದುಕೊಳ್ಳಬಹುದಾಗಿದ್ದು, ವೈರಸ್ ಭೀತಿಯಿಂದಾಗಿ ಸುರಕ್ಷಿತ ವಾಹನ ಖರೀದಿಗೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಯಾಗಿದೆ.

Most Read Articles

Kannada
Read more on ಟೊಯೊಟಾ toyota
English summary
Toyota kirloskar motor unveils virtual showroom for customers details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X