ಮಾರ್ಚ್ ತಿಂಗಳ ಕಾರು ಮಾರಾಟದಲ್ಲಿ ಏರಿಕೆ ದಾಖಲಿಸಿದ ಟೊಯೊಟಾ
ಖ್ಯಾತ ಕಾರು ತಯಾರಕ ಕಂಪನಿಯಾದ ಟೊಯೊಟಾ 2021ರ ಮಾರ್ಚ್ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ, ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 14,997 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ 7,023 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕಂಪನಿಯು ತನ್ನ ಮಾರಾಟದಲ್ಲಿ 114%ನಷ್ಟು ಹೆಚ್ಚಳ ದಾಖಲಿಸಿದೆ. ಜೊತೆಗೆ ಕಂಪನಿಯು ತಿಂಗಳ ಮಾರಾಟದಲ್ಲಿ 7%ನಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಸಾಧಿಸಿದೆ.

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕಂಪನಿಯು 14,069 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳಿನಲ್ಲಿ ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಎಂಪಿವಿಯಾದ ಇನೋವಾದ 5,743 ಯುನಿಟ್‌ಗಳನ್ನು ಮಾರಾಟ ಮಾಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯು ಈ ಎಂಪಿವಿಯ ಒಟ್ಟು 3,810 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಈ ಎಂಪಿವಿಯ ಮಾರಾಟವು 51%ನಷ್ಟು ಹೆಚ್ಚಾಗಿದೆ.

ಇದೇ ವೇಳೆ ತಿಂಗಳ ಮಾರಾಟದ ಪ್ರಕಾರ ಈ ಕಾರಿನ ಮಾರಾಟವು ಫೆಬ್ರವರಿ ತಿಂಗಳ ಮಾರಾಟಕ್ಕಿಂತ 5%ನಷ್ಟು ಕಡಿಮೆಯಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಈ ಎಂಪಿವಿಯ 6,018 ಯುನಿಟ್‌ಗಳು ಮಾರಾಟವಾಗಿದ್ದವು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟೊಯೊಟಾ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಅರ್ಬನ್ ಕ್ರೂಸರ್ ಕಾಂಪ್ಯಾಕ್ಟ್ ಎಸ್‌ಯುವಿಯ 3,162 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಫೆಬ್ರವರಿ ತಿಂಗಳಮಾರಾಟಕ್ಕೆ ಹೋಲಿಸಿದರೆ ಈ ಎಸ್‌ಯುವಿಯ ಮಾರಾಟವು 24%ನಷ್ಟು ಹೆಚ್ಚಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಈ ಎಸ್‌ಯುವಿಯ 2,549 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಇನ್ನು ಟೊಯೊಟಾ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆದ ಗ್ಲಾಂಜಾ ಕಾರಿನ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಈ ಕಾರಿನ 2,989 ಯುನಿಟ್‌ಗಳನ್ನು ಮಾರಾಟ ಮಾಡಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಂಪನಿಯು ಕಳೆದ ವರ್ಷ ಇದೇ ತಿಂಗಳಿನಲ್ಲಿ ಈ ಕಾರಿನ ಒಟ್ಟು 1,533 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಬಾರಿ ಈ ಕಾರಿನ ಮಾರಾಟ ಪ್ರಮಾಣವು 95%ನಷ್ಟು ಹೆಚ್ಚಾಗಿದೆ.

ಟೊಯೊಟಾ ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಫಾರ್ಚೂನರ್ ಎಸ್‌ಯುವಿಯ 2,136 ಯುನಿಟ್‌ಗಳನ್ನು ಮಾರಾಟ ಮಾಡಿದೆ. 2020ರ ಫೆಬ್ರವರಿ ತಿಂಗಳಿನಲ್ಲಿಈ ಎಸ್‌ಯುವಿಯ 1,100 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ವರ್ಷ ಈ ಎಸ್‌ಯುವಿಯ ಮಾರಾಟ ಪ್ರಮಾಣವು 94%ನಷ್ಟು ಏರಿಕೆಯಾಗಿದೆ. ಇನ್ನು ಪ್ರತಿ ತಿಂಗಳ ಮಾರಾಟದಲ್ಲಿ ಈ ಎಸ್‌ಯುವಿಯ ಮಾರಾಟವು 4%ನಷ್ಟು ಹೆಚ್ಚಾಗಿದೆ.

ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಯಾರಿಸ್ ಕಾರಿನ 871 ಯುನಿಟ್'ಗಳನ್ನು ಮಾರಾಟ ಮಾಡಿದೆ. ಈ ಕಾರಿನ ಮಾರಾಟದಲ್ಲಿ 105%ನಷ್ಟು ಏರಿಕೆಯಾಗಿದೆ.ಕಳೆದ ತಿಂಗಳು ವೆಲ್ ಫೇರ್ ಕಾರಿನ 65 ಯೂನಿಟ್'ಗಳನ್ನು ಮಾರಾಟ ಮಾಡಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಪ್ರಮಾಣವು ಕಳೆದ ವರ್ಷಕ್ಕಿಂತ 32%ನಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಈ ಕಾರಿನ 96 ಯುನಿಟ್'ಗಳನ್ನು ಮಾರಾಟ ಮಾಡಲಾಗಿತ್ತು.

ಕಂಪನಿಯು ಕಳೆದ ತಿಂಗಳು ಕ್ಯಾಮ್ರಿ ಕಾರಿನ 31 ಯುನಿಟ್'ಗಳನ್ನು ಮಾರಾಟ ಮಾಡಿದೆ. 2020ರ ಫೆಬ್ರವರಿ ತಿಂಗಳಿನಲ್ಲಿ ಈ ಕಾರಿನ 60 ಯುನಿಟ್'ಗಳು ಮಾರಾಟವಾಗಿದ್ದವು. ಈ ಕಾರಿನ ಮಾರಾಟ ಪ್ರಮಾಣವು ಕಳೆದ ಬಾರಿಗಿಂತ ಈ ಬಾರಿ 48%ನಷ್ಟು ಕಡಿಮೆಯಾಗಿದೆ.
ಮೂಲ: ಆಟೋಪಂಡಿಟ್ಜ್


Click it and Unblock the Notifications








