ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ನವೀಕರಿಸಿದ ಆಕ್ವಾ ಹೈಬ್ರಿಡ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಅನ್ನು ಜಪಾನ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರಿನ ಉತ್ತಮ ಪರ್ಫಾಮೆನ್ಸ್ ನೊಂದಿಗೆ ಶೇ.20 ರಷ್ಟು ಮೈಲೇಜ್ ಹೆಚ್ಚಳವಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಟೊಯೊಟಾ ಕಂಪನಿಯು ಜಪಾನ್ ಮಾರುಕಟ್ಟೆಯಲ್ಲಿ 2011ರಲ್ಲಿ ಮೊದಲ ಬಾರಿಗೆ ಆಕ್ವಾ ಹೈಬ್ರಿಡ್ ಕಾರನ್ನು ಬಿಡುಗಡೆ ಮಾಡಿತು. ಆಕ್ವಾವನ್ನು ಮೊದಲು ಹೆಚ್‌ಇವಿ-ಮಾತ್ರ ಮಾದರಿಯಾಗಿ ಪರಿಚಯಿಸಲಾಗಿತು. ಈ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಹೆಚ್ಚಿನ ಇಂಧನ ದಕ್ಷತೆ ಮತ್ತು ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಕಾರು ಬಿಡುಗಡೆಯಾದಗಿನಿಂದ 1.87 ದಶಲಕ್ಷಕ್ಕೂ ಹೆಚ್ಚಿನ ಯುನಿಟ್ ಗಳು ಮಾರಾಟ ಮಾಡಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಆಕ್ವಾ ಹೈಬ್ರಿಡ್ ನಿಕ್ಕಲ್ ಹೈಡ್ರೋಜನ್ ಬ್ಯಾಟರಿ ಸಿಸ್ಟಂ ಅನ್ನು ಹೊಂದಿದ್ದು, ಇದು ಹಿಂದಿನ ಮಾದರಿಗಿಂತ ಎರಡು ಪಟ್ಟು ಹೆಚ್ಚು ಪವರ್ ಉತ್ಪಾದಿಸುತ್ತದೆ. ಇದು ಸಾಂಪ್ರದಾಯಿಕ ಇಂಧನವನ್ನು ಬಳಸದೆ ಎಲೆಕ್ಟ್ರಿಕ್ ಪವರ್ ನಲ್ಲಿ ಹೆಚ್ಚಿನ ದೂರ ಪ್ರಯಾಣಿಸಬಹುದು.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಟೊಯೊಟಾ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ನಿಕಲ್ ಹೈಡ್ರೋಜನ್ ಬ್ಯಾಟರಿಗೆ ಬಳಸುವ ಭಾಗಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇತ್ತೀಚಿನ ಮಾದರಿಯು ಪೆಟ್ರೋಲ್‌ನಲ್ಲಿ ಚಲಿಸುವಾಗ ಸುಮಾರು 36 ಕಿಲೋಮೀಟರ್ ಮೈಲೇಜ್ ಹಿಂದಿರುಗಿಸುತ್ತದೆ ಎಂದು ಹೇಳಲಾಗುತ್ತಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಆಕ್ವಾ ಹೈಬ್ರಿಡ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಕಾರು 4,050 ಎಂಎಂ ಉದ್ದ, 1,695 ಎಂಎಂ ಅಗಲ ಮತ್ತು 1,485 ಎತ್ತರವನ್ನು ಹೊಂದಿದೆ. ಇನ್ನು ಈ ಕಾರು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇದರ ಒಟ್ಟಾರೆ ಉದ್ದ ಮತ್ತು ಅಗಲ ಒಂದೇ ಆಗಿರುತ್ತದೆ, ಆದರೆ ಒಟ್ಟಾರೆ ಎತ್ತರವು 30 ಎಂಎಂ ವರೆಗೆ ಹೆಚ್ಚಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಇನ್ನು ವ್ಹೀಲ್‌ಬೇಸ್ ಅನ್ನು ಕೂಡ 50 ಎಂಎಂ ವರೆಗೂ ಹೆಚ್ಚಿಸಲಾಗಿದೆ. ಈ ಆಕ್ವಾ ಹೈಬ್ರಿಡ್ ಕಾರಿನಲ್ಲಿ ಪಾರ್ಕಿಂಗ್ ಅಸಿಸ್ಟ್ ಸಿಸ್ಟಂ, ಅದು ಚಾಲಕನಿಗೆ ಕಾರು ಪಾರ್ಕಿಂಗ್ ಮಾಡಲು ಸಹಾಯ ಮಾಡುತ್ತದೆ. ಇದನ್ನು ಮೊದಲ ಬಾರಿಗೆ ಐಷಾರಾಮಿ ಅಲ್ಲದ ಟೊಯೊಟಾ ಕಾರಿನಲ್ಲಿ ಅಳವಡಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಈ ಹೊಸ ಆಕ್ವಾ ಹೈಬ್ರಿಡ್ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಟೊಯೊಟಾದ ಟಿಎನ್‌ಜಿಎಯ ಜಿಎ-ಬಿ ಪ್ಲಾಟ್‌ಫಾರ್ಮ್‌ ಅಡಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈ ಕಾರಿನಲ್ಲಿ 1.5-ಲೀಟರ್ ಎಂ 15 ಎ-ಎಫ್‌ಎಕ್ಸ್‌ಇ ಡೈನಾಮಿಕ್ ಫೋರ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಈ ಎಂಜಿನ್ 91 ಬಿಹೆಚ್‍ಪಿ ಪವರ್ ಮತ್ತು 120 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಟಿಎಚ್ಎಸ್ II ಹೈಬ್ರಿಡ್ ಸಿಸ್ಟಂನೊಂದಿಗೆ ಕಡಿತಗೊಳಿಸುವ ಕಾರ್ಯವಿಧಾನದೊಂದಿಗೆ ಸಂಯೋಜಿಸಲಾಗಿದೆ.

ಅಧಿಕ ಮೈಲೇಜ್ ನೀಡುವ ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಬಿಡುಗಡೆ

ಹೊಸ ಟೊಯೊಟಾ ಆಕ್ವಾ ಹೈಬ್ರಿಡ್ ಕಾರಿನ ಪರ್ಫಾನೆನ್ಸ್ ಕೂಡ ಹೆಚ್ಚಾಗಿದೆ. ಅಲ್ಲದೇ ಮೈಲೇಜ್ ಅನ್ನು ಕೂಡ ಶೇ.20 ರಷ್ಟು ಹೆಚ್ಚಳವಾಗಿದೆ. ಇದರಿಂದ ಈ ಟೊಯೊಟಾ ಆಕ್ವಾ ಹೈಬ್ರಿಡ್ ಕಾರು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
Read more on ಟೊಯೊಟಾ toyota
English summary
Toyota Aqua hybrid Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X