ಏಪ್ರಿಲ್ ಅವಧಿಯಲ್ಲಿ 9,622 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ ಟೊಯೊಟಾ
ಕೋವಿಡ್‌ನಿಂದಾಗಿ ಹೊಸ ವಾಹನ ಮಾರಾಟವು ಇದೀಗ ಸಾಕಷ್ಟು ಇಳಿಕೆಯಾಗಿದ್ದರೂ ಕಳೆದ ತಿಂಗಳ ಆರಂಭದಲ್ಲಿ ಹಲವಾರು ಕಾರು ಕಂಪನಿಗಳು ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಟೊಯೊಟಾ ಕಂಪನಿಯು ಸಹ ಸುಮಾರು 9,622 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ.

ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಂಪೂರ್ಣವಾಗಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಬಂದ್ ಮಾಡಿದ್ದ ಆಟೋ ಕಂಪನಿಗಳು ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಗರಿಷ್ಠ ಮಟ್ಟದ ಬೇಡಿಕೆ ಪಡೆದುಕೊಂಡಿದ್ದವು. ಕಳೆದ ತಿಂಗಳ ಮಧ್ಯಂತರದ ತನಕವು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿದ್ದ ಕಾರು ಕಂಪನಿಗಳಿದೆ ಕೋವಿಡ್ 2ನೇ ಅಲೆ ಮತ್ತೆ ಹೊಡೆತ ನೀಡುತ್ತಿದೆ. ಇದರ ನಡುವೆ ಟೊಯೊಟಾ ಕಂಪನಿಯು ಕಳೆದ ತಿಂಗಳು 9,622 ಯುನಿಟ್ ಕಾರುಗಳನ್ನು ವಿತರಣೆ ಮಾಡಿದೆ.

ಕಳೆದ ವರ್ಷ ಕೋವಿಡ್‌ನಿಂದಾದ ಆರ್ಥಿಕ ಸಂಕಷ್ಟದಿಂದಾಗಿ ವಾಹನ ಖರೀದಿ ಯೋಜನೆಯನ್ನು ಕೈಬಿಟ್ಟಿದ್ದ ಗ್ರಾಹಕರು ಈ ವರ್ಷದ ಯುಗಾದಿ ವೇಳೆಗೆ ಹೊಸ ವಾಹನ ಖರೀದಿ ಯೋಜನೆಯೊಂದಿಗೆ ಭಾರೀ ಪ್ರಮಾಣದ ಬುಕ್ಕಿಂಗ್ ದಾಖಲಿಸಿದ್ದರು.

ಬುಕ್ಕಿಂಗ್ ಮತ್ತು ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಟೊಯೊಟಾ ಕಂಪನಿಯು ಸುಮಾರು 9,622 ಯುನಿಟ್ ಕಾರುಗಳನ್ನು ವಿತರಣೆ ಮಾಡಿದ್ದು, ಇದೀಗ ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಹೊಸ ವಾಹನಗಳ ವಿತರಣೆಯನ್ನು ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಕೈಗೊಳ್ಳಲಾಗುತ್ತಿದೆ.

ವಾಹನಗಳ ಬುಕ್ಕಿಂಗ್ ಪ್ರಕ್ರಿಯೆಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕೋವಿಡ್ 2ನೇ ಅಲೆ ಹೆಚ್ಚಿರುವುದರಿಂದ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಕುಸಿತ ಕಂಡುಬರುತ್ತಿರುವುದು ಆಟೋ ಕಂಪನಿಗಳಿಗೆ ಮತ್ತೆ ನಷ್ಟ ಭೀತಿ ಎದುರಾಗಿದೆ. ಸದ್ಯ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಕೈಗೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರೀ ಪ್ರಮಾಣದ ನಷ್ಟ ಸಂಭವಿಸುವ ಸಾಧ್ಯತೆಗಳಿವೆ.

ಇನ್ನು ಟೊಯೊಟಾ ಇಂಡಿಯಾ ಕಂಪನಿಯು ಲಾಕ್‌ಡೌನ್ ಸಂದರ್ಭದಲ್ಲಿ ವಾಹನ ಉತ್ಪಾದನೆ ತಗ್ಗುವ ಕಾರಣಕ್ಕೆ ಇದೇ ಸಂದರ್ಭದಲ್ಲಿ ತನ್ನ ಕಾರು ಉತ್ಪಾದನಾ ಘಟಕದ ಕಾರ್ಯಕ್ಷಮತೆ ಹೆಚ್ಚಿಸಲು ವಾರ್ಷಿಕ ನಿರ್ವಹಣಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಿರ್ವಹಣಾ ಕಾರ್ಯಾಗಾರ ಸಂದರ್ಭದಲ್ಲಿ ಟೊಯೊಟಾ ಕಾರುಗಳ ಉತ್ಪಾದನೆಯು ಕನಿಷ್ಠ ಪ್ರಮಾಣದಲ್ಲಿದ್ದು, ಕಳೆದ ತಿಂಗಳು 24ರಿಂದ ಮೇ 14ರ ತನಕ ವಾರ್ಷಿಕ ನಿರ್ವಹಣಾ ಕಾರ್ಯಗಾರವನ್ನು ನಡೆಸುತ್ತಿದೆ.

ಹೊಸ ತಂತ್ರಜ್ಞಾನ ಅಳವಡಿಕೆಗಾಗಿ ಕಾರ್ಯಗಾರ ನಡೆಸುತ್ತಿರುವ ಕಂಪನಿಯು ಲಾಕ್‌ಡೌನ್ ನಂತರ ಉತ್ಪಾದನೆಯನ್ನು ಹೆಚ್ಚಿಸುವ ಸಿದ್ದತೆಯಲ್ಲಿದ್ದು, ಒಂದೇ ಹಂತದಲ್ಲಿ ಬಿಡದಿಯಲ್ಲಿರುವ ಎರಡು ಕಾರು ಉತ್ಪಾದನಾ ಘಟಕಗಳಲ್ಲೂ ತಾಂತ್ರಿಕ ಉನ್ನತೀಕರಣದ ಕಾರ್ಯಗಾರ ನಡೆಸುತ್ತಿದೆ.

ಬೆಂಗಳೂರಿನ ಹೊರವಲಯದಲ್ಲಿ ಬಿಡದಿಯಲ್ಲಿ ಒಟ್ಟು 432 ಎಕರೆ ವಿಸ್ತೀರ್ಣದಲ್ಲಿ ಎರಡು ಕಾರು ಉತ್ಪಾದನಾ ಘಟಕ ಹೊಂದಿರುವ ಟೊಯೊಟಾ ಇಂಡಿಯಾ ಕಂಪನಿಯು ಮೊದಲ ಕಾರು ಉತ್ಪಾದನಾ ಘಟಕದಲ್ಲಿ ವಾರ್ಷಿಕವಾಗಿ 2.10 ಲಕ್ಷ ಯುನಿಟ್ ಕಾರು ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೆ ಎರಡನೇ ಘಟಕದಲ್ಲಿ ವಾರ್ಷಿಕವಾಗಿ 1 ಲಕ್ಷ ಕಾರುಗಳನ್ನು ಉತ್ಪಾದನೆ ಮಾಡುತ್ತದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ದೇಶಿಯ ಮಾರುಕಟ್ಟೆಗಾಗಿ ಮಾತ್ರವಲ್ಲ ಬಿಡದಿ ಘಟಕದಿಂದಲೇ ವಿಶ್ವದ ಮಾರುಕಟ್ಟೆಗಳಿಗೆ ರಫ್ತು ಸೌಲಭ್ಯ ಹೊಂದಿರುವ ಟೊಯೊಟಾ ಕಂಪನಿಯು ಸದ್ಯ ಜಾಗತಿಕ ಮಟ್ಟದ ಕಾರು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ವಿಶ್ವಾದ್ಯಂತ ಪ್ರಮುಖ ಕಾರು ಉತ್ಪಾದನಾ ತಯಾಕರನ್ನು ಹಿಂದಿಕ್ಕಿ ನಂ.1 ಸ್ಥಾನದಲ್ಲಿದೆ.

ಭಾರತದಲ್ಲಿ ಸದ್ಯ ಕಾರು ಮಾರಾಟದ ಪ್ರಮಾಣದ ಮೇಲೆ ತಿಂಗಳ ಕಾರು ಮಾರಾಟ ಪಟ್ಟಿಯಲ್ಲಿ ಐದನೇ ಅಥವಾ ಆರನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಜೊತೆ ಸೇರಿ ರೀಬ್ಯಾಡ್ಜ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.
MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ರೀಬ್ಯಾಡ್ಜ್ ಮಾದರಿಗಳಲ್ಲಿ ಕೆಲವು ಹೊಸ ಬದಲಾವಣೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ಹೊಸ ಯೋಜನೆಯು ಎರಡು ಕಂಪನಿಗಳಿಗೂ ಸಹಕಾರಿಯಾಗಿದೆ. ರೀಬ್ಯಾಡ್ಜ್ ಮಾದರಿಗಳೊಂದಿಗೆ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಟೊಯೊಟಾ ಕಂಪನಿಯು ಹೊಸ ಯೋಜನೆಯಿಂದ ಉತ್ತಮ ಆದಾಯ ಕಂಡುಕೊಂಡಿದೆ.


Click it and Unblock the Notifications








