ಡಿಸೆಂಬರ್ ತಿಂಗಳಲ್ಲಿ ಕಾರು ಖರೀದಿಸುವವರಿಗೆ Toyota ನೀಡುತ್ತಿದೆ ಭರ್ಜರಿ ಆಫರ್
ಟೊಯೊಟಾ (Toyota) ಕಂಪನಿಯು ಡಿಸೆಂಬರ್‌ನಲ್ಲಿ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ. ಕಂಪನಿಯ ಗ್ಲಾಂಝಾ, ಅರ್ಬನ್ ಕ್ರೂಸರ್, ಇನೋವಾ ಕ್ರಿಸ್ಟಾ ಮಾದರಿಗಳ ಮೇಲೆ ಕೊಡುಗೆಗಳನ್ನು ನೀಡಲಾಗುತ್ತಿದೆ. ಟೊಯೊಟಾ ಕಾರು ಖರೀದಿಸುವವರಿಗೆ ರೂ. 22,000 ಗಳವರೆಗೆ ರಿಯಾಯಿತಿ ನೀಡಲಾಗುತ್ತದೆ. ಜನಪ್ರಿಯ ಟೊಯೊಟಾ ಕಾರುಗಳ ಮೇಲೆ ಇಎಂಐ ಸೌಲಭ್ಯವನ್ನು ಸಹ ನೀಡಲಾಗುತ್ತದೆ.

ಆದರೆ ಈ ಸೌಲಭ್ಯವು ಸ್ಥಳ, ವಾಹನದ ಮಾದರಿ, ಎಂಜಿನ್, ಬಣ್ಣ, ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಇನ್ನು ಟೊಯೊಟಾ ಕಂಪನಿಯು ತನ್ನ ಯಾವ ಯಾವ ಕಾರು ಮಾದರಿಗಳ ಮೇಲೆ ಎಷ್ಟು ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡುತ್ತಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಟೊಯೊಟಾ ಗ್ಲಾಂಝಾ
ಕಂಪನಿಯು ಈ ಕಾರಿನ ಮೇಲೆ ರೂ. 22,000 ಗಳವರೆಗೆ ರಿಯಾಯಿತಿ ನೀಡುತ್ತಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮೇಲೆ ರೂ. 4999 ಗಳ ಆಕರ್ಷಕ ಇಎಂಐ ಸೌಲಭ್ಯವನ್ನು ಸಹ ನೀಡಲಾಗುತ್ತದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 7.49 ಲಕ್ಷಗಳಾಗಿದೆ. ಟೊಯೊಟಾ ಕಂಪನಿಯು ಈ ಕಾರ್ ಅನ್ನು ಜಿ ಹಾಗೂ ವಿ ಎಂಬ ಎರಡು ಮಾದರಿಗಳಲ್ಲಿ ಹಾಗೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಟೊಯೊಟಾ ಅರ್ಬನ್ ಕ್ರೂಸರ್
ಕಂಪನಿಯು ಈ ಕಾರಿನ ಮೇಲೆ ರೂ. 15,000 ಗಳ ರಿಯಾಯಿತಿ ನೀಡುತ್ತದೆ. ಈ ಎಸ್‌ಯುವಿಯ ಮೇಲೆ ರೂ. 5699 ಗಳ ಆಕರ್ಷಕ ಇಎಂಐ ಸಹ ನೀಡಲಾಗುತ್ತದೆ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 8.72 ಲಕ್ಷಗಳಾಗಿದೆ. ಕಂಪನಿಯು ಈ ಕಾರ್ ಅನ್ನು ಮಿಡ್, ಹೈ ಹಾಗೂ ಪ್ರೀಮಿಯಂ ಎಂಬ ಮೂರು ಮಾದರಿಗಳಲ್ಲಿ ಹಾಗೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಟೊಯೊಟಾ ಇನೋವಾ ಕ್ರಿಸ್ಟಾ
ಕಂಪನಿಯ ಈ ಕಾರಿನ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಈ ಎಸ್‌ಯುವಿಯ ಮೇಲೆ ಆಕರ್ಷಕ ಇಎಂಐ ಸಹ ನೀಡಲಾಗುತ್ತದೆ. ಆದರೆ ಅದರ ಮೊತ್ತವನ್ನು ಬಹಿರಂಗಪಡಿಸಲಾಗಿಲ್ಲ. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 17.18 ಲಕ್ಷಗಳಾಗಿದೆ. ಕಂಪನಿಯು ಈ ಕಾರ್ ಅನ್ನು G, GX, GX ಲಿಮಿಟೆಡ್ ಎಡಿಷನ್, VX ಹಾಗೂ ZX ಎಂಬ ಐದು ಮಾದರಿಗಳಲ್ಲಿ ಹಾಗೂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಮಾರಾಟ ಮಾಡುತ್ತದೆ.

ಟೊಯೊಟಾ ಕಂಪನಿಯ ಮಾರಾಟದ ಬಗ್ಗೆ
ಟೊಯೊಟಾ ಕಂಪನಿಯು ತನ್ನ ನವೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕಳೆದ ತಿಂಗಳು ಕಂಪನಿಯು 13,003 ಯುನಿಟ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಸಗಟು ಮಾರಾಟ ಮಾಡಿದೆ. 2020 ರ ನವೆಂಬರ್ ತಿಂಗಳಿಗೆ ಹೋಲಿಸಿದರೆ, ಈ ಬಾರಿಯ ಮಾರಾಟದಲ್ಲಿ 53% ನಷ್ಟು ಹೆಚ್ಚಳ ಕಂಡು ಬಂದಿದೆ.

ಕಂಪನಿಯು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2020ರ ನವೆಂಬರ್ ತಿಂಗಳಲ್ಲಿ ಕಂಪನಿಯು ಒಟ್ಟು 8,508 ಯುನಿಟ್ ಕಾರುಗಳನ್ನು ಸಂಪೂರ್ಣ ಮಾರಾಟದಲ್ಲಿ ಮಾರಾಟ ಮಾಡಿದೆ. ಪ್ರತಿ ತಿಂಗಳ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯ ಮಾರಾಟ ಪ್ರಮಾಣವು ಅಕ್ಟೋಬರ್ ತಿಂಗಳಿಗಿಂತ 5% ನಷ್ಟು ಹೆಚ್ಚಾಗಿದೆ. ಕಂಪನಿಯು ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 12,440 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು.

ಟೊಯೊಟಾ ಕಿರ್ಲೋಸ್ಕರ್ ಹಾಗೂ ಮಾರುತಿ ಸುಜುಕಿ ಕಂಪನಿಗಳ ನಡುವಿನ ಪಾಲುದಾರಿಕೆಯ ನಂತರ ಟೊಯೊಟಾ ಅರ್ಬನ್ ಕ್ರೂಸರ್ ಕಂಪನಿಯಿಂದ ರಿಬ್ಯಾಡ್ಜ್ ಮಾಡಲಾದ ಎರಡನೇ ಕಾರ್ ಆಗಿದೆ. ಈ ಮೊದಲು ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರ್ ಅನ್ನು ರಿಬ್ಯಾಡ್ಜ್ ಮಾಡಿತ್ತು. ಈ ಕಾರ್ ಅನ್ನು ಗ್ಲಾಂಝಾ ಹೆಸರಿನಲ್ಲಿ ರಿಬ್ಯಾಡ್ಜ್ ಮಾಡಲಾಗಿತ್ತು.

ಈಗ ಮಾರುತಿ ಸುಜುಕಿ ಕಂಪನಿಯ ವಿಟಾರಾ ಬ್ರೆಝಾ ಕಾರ್ ಅನ್ನು ಅರ್ಬನ್ ಕ್ರೂಸರ್ ಹೆಸರಿನಲ್ಲಿ ರಿಬ್ಯಾಡ್ಜ್ ಮಾಡಿದೆ. ಟೊಯೊಟಾ ಕಂಪನಿಗಳು ರಿಬ್ಯಾಡ್ಜ್ ಮಾಡಿರುವ ಕಾರುಗಳ ಮಾರಾಟದ ವಿಷಯದಲ್ಲಿ ಮಾರುತಿ ಸುಜುಕಿಯ ಆವೃತ್ತಿಗಳೊಂದಿಗೆ ಸ್ಪರ್ಧಿಸುವುದಿಲ್ಲ.

ಆದರೆ ಇದರ ನಂತರವೂ ಮಾರಾಟದಲ್ಲಿ ಟೊಯೊಟಾದ ಮಾರಾಟವು ಹೆಚ್ಚು ಉತ್ತಮವಾಗಿದೆ. ಟೊಯೊಟಾ ಕಂಪನಿಯು ಭವಿಷ್ಯದಲ್ಲಿಯೂ ಹೆಚ್ಚು ರಿಬ್ಯಾಡ್ಜ್ ಮಾಡಿದ ಕಾರುಗಳನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಸುತ್ತಿದೆ. ರಫ್ತು ಮಾರುಕಟ್ಟೆಯಲ್ಲಿ ಮೇಲೆ ತಿಳಿಸಿದ ಎರಡು ಕಾರುಗಳ ಹೊರತಾಗಿ ಟೊಯೊಟಾ ಕಂಪನಿಯು ಈಗಾಗಲೇ ಟೊಯೊಟಾ ಬೆಲ್ಟಾ (ಸಿಯಾಜ್ ರಿಬ್ಯಾಡ್ಜ್) ಹಾಗೂ ರೂಮಿಯಾನ್ (ಎರ್ಟಿಗಾ ರಿಬ್ಯಾಡ್ಜ್) ಗಳನ್ನು ಹೊಂದಿದೆ.

ಟೊಯೊಟಾ ಕಂಪನಿಯು ರೂಮಿಯನ್ ಎಂಪಿವಿಯನ್ನು ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಇದು 7 ಸೀಟರ್ ಮಾರುತಿ ಸುಜುಕಿ ಎರ್ಟಿಗಾದ ರಿಬ್ಯಾಡ್ಜ್ ಮಾದರಿಯಾಗಿದೆ. ಈಗ ಟೊಯೊಟಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ರೂಮಿಯನ್ ಹೆಸರಿಗಾಗಿ ಟ್ರೇಡ್‌ಮಾರ್ಕ್ ಅರ್ಜಿಯನ್ನು ಸಲ್ಲಿಸಿದೆ. ಇದರಿಂದ 7 ಸೀಟರ್ ಎಂಪಿವಿಯನ್ನು ಭಾರತದಲ್ಲಿ ಅದೇ ಹೆಸರಿನಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ.

ಆದರೆ ಟೊಯೊಟಾ ಕಂಪನಿಯು ಇದರ ಬಗ್ಗೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಎಂಪಿವಿಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಕೈಗೆಟುಕುವ ದರದಲ್ಲಿ ಹೊಸ ಎಂಪಿವಿಯನ್ನು ಬಿಡುಗಡೆಗೊಳಿಸಿ ಮಾರಾಟವನ್ನು ಹೆಚ್ಚಿಸುವ ತಂತ್ರಗಾರಿಕೆಯನ್ನು ಹೊಂದಿರಬಹುದು.

ಇದರ ಜೊತೆಗೆ ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ಸಿಯಾಜ್ ಆಧಾರಿತ ಬೆಲ್ಟಾ ಸೆಡಾನ್ ಅನ್ನು ಪರಿಚಯಿಸಲು ಸಜ್ಜಾಗಿದೆ. ಟೊಯೊಟಾ ರೂಮಿಯನ್ ಈಗ ಮಾರುಕಟ್ಟೆಯಲ್ಲಿರುವ ಎರ್ಟಿಗಾ ಕಾರಿನ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಕಾರ್ ಅನ್ನು 2018 ರಲ್ಲಿ ಬಿಡುಗಡೆಗೊಳಿಸಲಾಯಿತು. ಇಂಡಿಯಾ ಸ್ಪೆಕ್ ಮಾದರಿಯು ಶೀಘ್ರದಲ್ಲೇ ಮಿಡ್ ಲೈಫ್ ಫೇಸ್ ಲಿಫ್ಟ್ ಸ್ವೀಕರಿಸುವ ಸಾಧ್ಯತೆಗಳಿವೆ.


Click it and Unblock the Notifications