ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ bZ4X BEV (ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್) ಸರಣಿಯಲ್ಲಿ ಮೊದಲ ಮಾದರಿಯಾಗಿ ಪರಿಚಯಿಸಿದೆ. ಜಪಾನಿನ ಕಾರು ದೈತ್ಯರಿಂದ ಸಂಪೂರ್ಣವಾಗಿ ಬ್ಯಾಟರಿ ಇವಿ ಮಾದರಿಯಾಗಿ ಅಭಿವೃದ್ಧಿಪಡಿಸಿದ ಮೊದಲ ಕಾರು ಇದಾಗಿದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಟೊಯೊಟಾ bZ4X ಕಾನ್ಸೆಪ್ಟ್ ಮಾದರಿಯು ವಿಭಿನ್ನ ಶೈಲಿಯನ್ನು ಹೊಂದಿದೆ. ಇದನ್ನು ಈ ವರ್ಷದ ಆರಂಭದಲ್ಲಿ ಪ್ರದರ್ಶಿಸಲಾಯಿತು. ಟೊಯೊಟಾ bZ4X ಬ್ರ್ಯಾಂಡ್‌ನ ಹೊಸ "ಹ್ಯಾಮರ್‌ಹೆಡ್" ವಿನ್ಯಾಸದೊಂದಿಗೆ ಅಗ್ರೇಸಿವ್ ಮುಂಭಾಗದ ಫಾಸಿಕವನ್ನು ಹೊಂದಿದೆ. ಇದು ತೀಕ್ಷ್ಣವಾಗಿ ಕಾಣುವ ಸಮಗ್ರ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ನಯವಾದ ಹೆಡ್‌ಲೈಟ್‌ಗಳನ್ನು ಸಹ ಪಡೆಯುತ್ತದೆ. ಸೈಡ್ ಪ್ರೊಫೈಲ್ ಸಾಕಷ್ಟು ಸ್ಪೋರ್ಟಿಯಾಗಿದೆ, ಕಡಿಮೆ ಎತ್ತರ, ಸ್ಲಿಮ್ ಎ-ಪಿಲ್ಲರ್‌ಗಳು ಮತ್ತು ಬಿ-ಪಿಲ್ಲರ್‌ಗಳು, ಸ್ಕೊಪಿಂಗ್ ಬಾನೆಟ್ ಲೈನ್ ಮತ್ತು ಸ್ಕೊಪಿಂಗ್ ರೇರ್ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಈ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಟೈಲ್ ವಿಭಾಗವು ಫಾಸಿಕದಂತೆ ದಪ್ಪವಾಗಿರುತ್ತದೆ, ಸಿಂಗಲ್-ಪೀಸ್ ವಿನ್ಯಾಸದೊಂದಿಗೆ ಸುತ್ತುವ ಟೈಲ್‌ಲೈಟ್‌ಗಳನ್ನು ಒಳಗೊಂಡಿದೆ.ಎಲೆಕ್ಟ್ರಿಕ್ ಎಸ್‌ಯುವಿಯನ್ನು ಸಂಪೂರ್ಣ ಅಂಡರ್‌ಬಾಡಿ ಕವರ್, ಸ್ಪ್ಲಿಟ್ ರೂಫ್ ಸ್ಪಾಯ್ಲರ್, ಡಕ್‌ಟೈಲ್ ಸ್ಪಾಯ್ಲರ್, ರಿಯರ್ ಡಿಫ್ಯೂಸರ್, ಕರಾರುವಾಕ್ಕಾಗಿ ಕೋನೀಯ ಹಿಂಬದಿಯ ವಿಂಡ್‌ಸ್ಕ್ರೀನ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಹಲವಾರು ವಿನ್ಯಾಸ ಅಂಶಗಳನ್ನು ತಯಾರಕರು ಸಂಯೋಜಿಸಿದ್ದಾರೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಟೊಯೊಟಾ bZ4X e-TNGA ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿದೆ, ಇದು ಕೆಲವು ಅಂತರ್ಗತ ಪ್ರಯೋಜನಗಳನ್ನು ಹೊಂದಿದೆ. RAV4 ಹೈಬ್ರಿಡ್‌ಗೆ ಹೋಲಿಸಿದರೆ, ಇದು ಕಡಿಮೆ ಎತ್ತರವನ್ನು ಹೊಂದಿದೆ ಆದರೆ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿದೆ (ಕಡಿಮೆ ಓವರ್‌ಹ್ಯಾಂಗ್‌ಗಳೊಂದಿಗೆ). ಬಾನೆಟ್ ಲೈನ್ ಸಹ ಕಡಿಮೆಯಾಗಿದೆ,

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಕಾಕ್‌ಪಿಟ್‌ನಿಂದ ವೀಕ್ಷಣೆಯನ್ನು ಹೆಚ್ಚು ಸ್ಪಷ್ಟವಾಗಿದೆ. ಟೊಯೊಟಾ ಎಲೆಕ್ಟ್ರಿಕ್ ಎಸ್‌ಯುವಿ 5.7 ಮೀಟರ್‌ಗಳಷ್ಟು ಉತ್ತಮವಾದ ಟರ್ನಿಂಗ್ ಸರ್ಕಲ್ ಅನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಒಳಭಾಗವು ಪ್ರೀಮಿಯಂ ಆಗಿ ಕಾಣುತ್ತದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಈ ಎಲೆಕ್ಟ್ರಿಕ್ ಕಾರಿನಲ್ಲಿ ಮೃದುವಾದ, ನೇಯ್ದ ಟ್ರಿಮ್ ಟೆಕಶ್ಚರ್ ಮತ್ತು ಸ್ಯಾಟಿನ್-ಫಿನಿಶ್ ವಿವರಗಳನ್ನು ಹೊಂದಿದೆ, ಇದರಲ್ಲಿ ಪನೋರಮಿಕ್ ಸನ್‌ರೂಫ್, TFT ಇನ್‌ಸ್ಟ್ರುಮೆಂಟ್ ಕನ್ಸೋಲ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇತ್ಯಾದಿಗಳನ್ನು ಇಲ್ಲಿ ನೀಡುತ್ತಿರುವ ವೈಶಿಷ್ಟ್ಯಗಳು. ಕ್ಯಾಬಿನ್‌ನಲ್ಲಿನ ಸ್ಥಳವು ಆಕರ್ಷಕವಾಗಿದೆ ಮತ್ತು ಈ ಎಲೆಕ್ಟ್ರಿಕ್ ಎಸ್‍ಯುವಿ ಹಿಂಭಾಗದ ಸೀಟುಗಳನ್ನು ಮಡಚಿ 452 ಲೀಟರ್‌ಗಳಷ್ಟು ಬೂಟ್ ಸ್ಪೇಸ್ ಹೊಂದಿದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಫ್ರಂಟ್-ವೀಲ್-ಡ್ರೈವ್ ಮತ್ತು ಆಲ್-ವೀಲ್-ಡ್ರೈವ್ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಮೊದಲನೆಯದು 203 ಬಿಹೆಚ್‍ಪಿ ಪವರ್ ಮತ್ತು 265 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಎರಡನೆಯದು 217 ಬಿಹೆಚ್‍ಪಿ ಪವರ್ ಮತ್ತು 336 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಟೊಯೊಟಾ ತನ್ನ ತಾಯಿನಾಡಿನಲ್ಲಿ ಹಿಲಕ್ಸ್ ಪಿಕ್ಅಪ್‌ನ ಹೊಸ ಜಿಆರ್ ಸ್ಪೋರ್ಟ್ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸಿತ್ತು. ಈ ಹೊಸ ಟೊಯೊಟಾ ಹಿಲಕ್ಸ್ ಜಿಆರ್ ಸ್ಪೋರ್ಟ್ ಎಡಿಷನ್ ಆಕರ್ಷಕ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ.2022ರ ಟೊಯೊಟಾ ಹಿಲಕ್ಸ್ ಜಿಆರ್ ಸ್ಪೋರ್ಟ್ ಎಡಿಷನ್ ಮಾದರಿಯು ಈ ವರ್ಷದ ಆಗಸ್ಟ್‌ನಲ್ಲಿ ಥೈಲ್ಯಾಂಡ್‌ನಲ್ಲಿ ಪರಿಚಯಿಸಲಾಗಿತ್ತು.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಹಿಲಕ್ಸ್ ಜಿಆರ್ ಸ್ಪೋರ್ಟ್ ಮಾದರಿಯು ಸ್ಟ್ಯಾಂಡರ್ಡ್ ಪಿಕ್ಅಪ್ ಗಿಂತ ಕಾಸ್ಮೆಟಿಕ್ ಅಪ್‌ಗ್ರೇಡ್ ಅನ್ನು ಪಡೆಯುತ್ತದೆ, ಆದರೂ ಪೂರ್ಣ ಪ್ರಮಾಣದ GR (Gazoo ರೇಸಿಂಗ್) ಮಾದರಿಯಂತಹ ಯಾವುದೇ ಕಾರ್ಯಕ್ಷಮತೆ ಅಥವಾ ನಿರ್ವಹಣೆ ನವೀಕರಣಗಳಿಲ್ಲ. ಸ್ಟ್ಯಾಂಡರ್ಡ್ ಮಾಡೆಲ್‌ಗೆ ಹೋಲಿಸಿದರೆ ಹಿಲಕ್ಸ್ ಜಿಆರ್ ಸ್ಪೋರ್ಟ್ ಸಂಪೂರ್ಣವಾಗಿ ವಿಶಿಷ್ಟವಾದ ಮುಂಭಾಗದ ಫಾಸಿಕವನ್ನು ಪಡೆಯುತ್ತದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಇದು ಒಂದು ವಿಶಿಷ್ಟವಾದ ಹೊಸ ಬ್ಲ್ಯಾಕ್ ಗ್ರಿಲ್ ಅನ್ನು ಅದರ ಸುತ್ತಲೂ ಹೆಚ್ಚು ಬಾಡಿಯ-ಬಣ್ಣದ ಅಂಶಗಳೊಂದಿಗೆ ಮತ್ತು ಮಧ್ಯದಲ್ಲಿ ದೊಡ್ಡ 'ಟೊಯೋಟಾ' ಎಂದು ಬರೆಯಲಾಗಿದೆ. ಇದು ದೇಹ-ಬಣ್ಣದ ವ್ಹೀಲ್ ಅರ್ಚಾರ್ ಗಳನ್ನು ಸಹ ಪಡೆಯುತ್ತದೆ, ಇದು ವಾಹನದ ಅಗಲವನ್ನು 45 ಎಂಎಂ ಹೆಚ್ಚಿಸಿದೆ. ಇತರ ಮುಖ್ಯಾಂಶಗಳಲ್ಲಿ ಹೊಸ 18-ಇಂಚಿನ ವ್ಹೀಲ್ ಗಳು, ಬ್ಲ್ಯಾಕ್ ರಾಕ್ ಸ್ಲೈಡರ್‌ಗಳು, ಮುಂಭಾಗದಲ್ಲಿ ರೆಡ್ ಬ್ರೇಕ್ ಕ್ಯಾಲಿಪರ್‌ಗಳು, ಹೊಸ ಬ್ಲ್ಯಾಕ್ ರೇರ್ ಬಂಪರ್ ಮತ್ತು ಒಂದೆರಡು GR ಸ್ಪೋರ್ಟ್ ಬ್ಯಾಡ್ಜ್‌ಗಳನ್ನು ಒಳಗೊಂಡಿವೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಸಿಂಥೆಟಿಕ್ ಲೆದರ್ ಅಪ್ಹೋಲ್ಸ್ಟರಿಯೊಂದಿಗೆ ಹೊಸ ಸೀಟ್‌ಗಳು, ಹೆಡ್‌ರೆಸ್ಟ್‌ಗಳಲ್ಲಿ ಜಿಆರ್ ಲೋಗೊಗಳು ಮತ್ತು ಮುಂಭಾಗದ ಸೀಟ್‌ಗಳ ಮೇಲಿನ ಬೋಲ್ಸ್ಟರ್‌ಗಳಲ್ಲಿ ಕೆಂಪು ಸ್ಯೂಡ್ ಸೇರಿದಂತೆ ಕ್ಯಾಬಿನ್‌ನೊಳಗೆ ಸಾಕಷ್ಟು ನವೀಕರಣಗಳಿವೆ ಈ ಟೊಯೊಟಾ ಹಿಲಕ್ಸ್ ಪಿಕಪ್‌ನ ಹೊಸ ಜಿಆರ್ ಸ್ಪೋರ್ಟ್ ವರ್ಷನ್ ಜಪಾನ್‌ನಲ್ಲಿ ಸ್ಟ್ಯಾಂಡರ್ಡ್ ಮಾಡೆಲ್‌ನಂತೆಯೇ 2.4-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 147 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಆರು-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಆಯ್ಕೆ ಮಾಡಬಹುದಾಗಿದೆ.

ಹೊಸ bZ4X ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದ Toyota

ಟೊಯೊಟಾ bZ4X ಎಲೆಕ್ಟ್ರಿಕ್ ಕಾರಿನಲ್ಲಿ 71.4 kWh ಬ್ಯಾಟರಿ ಪ್ಯಾಕ್ ಸುಮಾರು 280 ಮೈಲುಗಳಷ್ಟು ರೇಂಜ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಈ ಟೊಯೊಟಾ bZ4X ಎಲೆಕ್ಟ್ರಿಕ್ ಕಾರಿನ ನಿಖರವಾದ ರೇಂಜ್ ಮಾಹಿತಿಯು ಬಹಿರಂಗವಾಗಿಲ್ಲ. ಇದರಲ್ಲಿ 150 kW ವೇಗದ ಚಾರ್ಜರ್‌ನೊಂದಿಗೆ ಕೇವಲ 30 ನಿಮಿಷಗಳಲ್ಲಿ ಬ್ಯಾಟರಿಯನ್ನು ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದು.ಈ ಹೊಸ ಟೊಯೊಟಾ bZ4X ಎಲೆಕ್ಟ್ರಿಕ್ ಕಾರು ಡ್ರೈವ್‌ಟ್ರೇನ್ 'ಸಿಂಗಲ್ ಪೆಡಲ್ ಡ್ರೈವ್' ಆಯ್ಕೆಯನ್ನು ಪಡೆಯುತ್ತದೆ,

Article Published On: Saturday, October 30, 2021, 12:41 [IST]
English summary
Toyota unveiled first electric vehicle bz4x find here details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+