ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಜಪಾನ್ ಮೂಲದ ಕಾರು ತಯಾರಕ ಕಂಪನಿಯಾದ ಟೊಯೊಟಾ ಇತ್ತೀಚೆಗೆ ಜಾಗತಿಕವಾಗಿ ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು ಅನಾವರಣಗೊಳಿಸಿತ್ತು. ಐಕಾನಿಕ್ ಆಫ್-ರೋಡರ್ ಲ್ಯಾಂಡ್ ಕ್ರೂಸರ್ ಬ್ರ್ಯಾಂಡ್‌ನ 70 ವರ್ಷದ ಸಂಭ್ರಮದ ಭಾಗವಾಗಿ 70ನೇ ಆನಿವರ್ಸರಿ ಎಡಿಷನ್ ಅನ್ನು ಅನಾವರಣಗೊಳಿಸಿದ್ದಾರೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಆನಿವರ್ಸರಿ ಎಡಿಷನ್ ಮಾದರಿಯು ಲ್ಯಾಂಡ್ ಕ್ರೂಸರ್ 70 ಸೀರಿಸ್ ಅನ್ನು ಆಧರಿಸಿದೆ. ಇದನ್ನು ಮೊದಲು 1984 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯದಂತಹ ಕೆಲವು ಮಾರುಕಟ್ಟೆಗಳಲ್ಲಿ ಇನ್ನೂ ಮಾರಾಟದಲ್ಲಿದೆ. ಈ ಎಸ್‍ಯುವಿ ತನ್ನ ರೆಟ್ರೊ-ಶೈಲಿಯ ವಿನ್ಯಾಸವನ್ನು ಹೊಂದಿದೆ. ಈ ಮಾದರಿಯನ್ನು 1984 ರಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಟೊಯೊಟಾ ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಪ್ರಮುಖ ಜಿಎಕ್ಸ್ಎಲ್ ದರ್ಜೆಯನ್ನು ಆಧರಿಸಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಇದು ಫ್ರೆಂಚ್ ವೆನಿಲ್ಲಾ, ಮೆರ್ಲಾಟ್ ರೆಡ್, ಮತ್ತು ಸ್ಯಾನಿ ಟೌಪೆ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ವ್ಯಾಗನ್ ವಿನ್ಯಾಸ ಮತ್ತು 79 ಸೀರಿಸ್ ಸಿಂಗಲ್ ಕ್ಯಾಬ್ ಮತ್ತು ಡಬಲ್ ಕ್ಯಾಬ್ ಪಿಕಪ್ ಬಾಡಿ ಸ್ಟೈಲ್‌ಗಳಲ್ಲಿ ಲಭ್ಯವಿರಲಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಕೇವಲ 600 ಯುನಿಟ್ ಗಳನ್ನು ತಯಾರಿಸಲಾಗುತ್ತದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

320 ಡಬಲ್ ಕ್ಯಾಬ್‌ಗಳು, 200 ಸಿಂಗಲ್ ಕ್ಯಾಬ್‌ಗಳು ಮತ್ತು 80 ವ್ಯಾಗನ್‌ಗಳು ಎಂಬ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಸ್ಟ್ಯಾಂಡರ್ಡ್ 70 ಸೀರೀಸ್ ಲ್ಯಾಂಡ್ ಕ್ರೂಸರ್‌ಗೆ ಹೋಲಿಸಿದರೆ, ಆನಿವರ್ಸರಿ ಎಡಿಷನ್ ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಅನ್ನು ಪಡೆಯುತ್ತದೆ ಮತ್ತು ಇದನ್ನು ಸಾಂಪ್ರದಾಯಿಕ ಲೋಗೋದ ಬದಲಾಗಿ 'ಟೊಯೊಟಾ' ಅಕ್ಷರಗಳನ್ನು ಒಳಗೊಂಡಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಮುಂಭಾಗದ ಬಂಪರ್ ಮತ್ತು ವ್ಹೀಲ್ ಅರ್ಚಾರ್ ಮೇಲೆ ಹೊದಿಕೆಯನ್ನು ಕೂಡ ಬ್ಲ್ಯಾಕ್ ಮಾಡಲಾಗಿದೆ. ಡಾರ್ಕ್ ಟ್ರೀಟ್ಮೆಂಟ್ ಅನ್ನು 16-ಇಂಚಿನ ಅಲಾಯ್ ವ್ಹೀಲ್ ಲ್‌ಗಳು ಮತ್ತು ಹೆಡ್‌ಲ್ಯಾಂಪ್ ಬೆzೆಲ್‌ಗಳಿಗೆ ಸಾಗಿಸಲಾಗುತ್ತದೆ, ಆದರೆ ಡಿಎಲ್‌ಆರ್‌ಗಳು ಮತ್ತು ಫಾಗ್ ಲ್ಯಾಂಪ್ ಗಳನ್ನು ಎಲ್‌ಇಡಿ ಯೂನಿಟ್‌ಗಳಿಗೆ ಅಪ್‌ಗ್ರೇಡ್ ಮಾಡಲಾಗಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಕೊನೆಯದಾಗಿ ಹೆರಿಟೇಜ್" ಮತ್ತು "70ನೇ ಆನಿವರ್ಸರಿ ಎಡಿಷನ್ ಲೋಗೋ ಬಹಳ ವಿಶೇಷವಾಗಿದೆ. ಇನ್ನು ಈ 70ನೇ ಆನಿವರ್ಸರಿ ಎಡಿಷನ್ ಮಾದರಿಯು ಸೀಟುಗಳಿಗಾಗಿ ಪ್ರೀಮಿಯಂ ಬ್ಲ್ಯಾಕ್ ಅಪ್ಹೋಲ್ಸ್ಟರಿಯೊಂದಿಗೆ ತನ್ನನ್ನು ಪ್ರತ್ಯೇಕಿಸಿಕೊಳ್ಳುತ್ತದೆ. ಇದು ಹಿಲಕ್ಸ್-ಡೇರಿವ್ಡ್ ಲೆದರ್-ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಲೆದರ್-ಸುತ್ತಿದ ಗೇರ್ ಶಿಫ್ಟ್ ಲಿವರ್ ಅನ್ನು ಸಹ ಪಡೆಯುತ್ತದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಇನ್ನು ಬ್ಲ್ಯಾಕ್ ಮತ್ತು ಬೆಳ್ಳಿಯ ಅಸ್ಸೆಂಟ್ ಗಳನ್ನು ಹೊಂದಿರುವ ಡ್ಯಾಶ್‌ಬೋರ್ಡ್ ಅನ್ನು ಫಾಕ್ಸ್ ವುಡ್ ಟ್ರಿಮ್‌ನಿಂದ ಅಲಂಕರಿಸಲಾಗಿದೆ. ಇದರಲ್ಲಿ ಚ್ಚುವರಿ ಟೈಪ್-ಎ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ಗಳು, ಸೆಂಟರ್ ಕನ್ಸೋಲ್‌ನಲ್ಲಿ ಎರಡು ಕಪ್ ಹೋಲ್ಡರ್‌ಗಳು ಮತ್ತು ಎಲ್ಲಾ ನಾಲ್ಕು ಪವರ್ ವಿಂಡೋಗಳಂತಹ ಕೆಲವು ನಿಫ್ಟಿ ಫೀಚರ್‌ಗಳನ್ನು ಟೊಯೋಟಾ ಸೇರಿಸಿದೆ. ಸುರಕ್ಷತೆಯ ದೃಷ್ಟಿಯಿಂದ, ಕೆಲವು ರೂಪಾಂತರಗಳು ಐದು ಏರ್‌ಬ್ಯಾಗ್‌ಗಳೊಂದಿಗೆ ಬರುತ್ತವೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ನಿಸ್ಸಂಶಯವಾಗಿ ಸರಿಯಾದ ಬಾಡಿ-ಆನ್-ಫ್ರೇಮ್ ಎಸ್‌ಯುವಿ ಮತ್ತು ಎಲ್ಲಾ ವೆರಿಯಂಟ್‌ಗಳ ಟ್ರಾನ್ಸ್‌ಫರ್ ಕೇಸ್, ಫ್ರಂಟ್ ಮತ್ತು ರಿಯರ್ ಲಾಕಿಂಗ್ ಡಿಫರೆನ್ಷಿಯಲ್ಸ್ ಅನ್ನು ಹೊಂದಿದೆ. ಇನ್ನು ಈ ಸ್ಪೆಷಲ್ ಎಡಿಷನ್ 3,500 ಕೆಜಿ ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು 130-ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ಲ್ಯಾಂಡ್ ಕ್ರೂಸರ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಅನಾವರಣಗೊಂಡ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ನ್ಯೂ ಜನರೇಷನ್ ಮಾದರಿಯನ್ನು ಹಿಂದಿನದಕ್ಕಿಂತ ಹೆಚ್ಚು ಮಾರ್ಡನ್ ಮತ್ತು ಪ್ರೀಮಿಯಂ ಮಾದರಿಯಾಗಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೋಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ. ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ಲ್ಯಾಂಡ್ ಕ್ರೂಸರ್ 70ನೇ ಆನಿವರ್ಸರಿ ಎಡಿಷನ್ ಅನಾವರಣಗೊಳಿಸಿದ ಟೊಯೊಟಾ

ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota unveiled land cruiser 70 series anniversary edition details
Story first published: Monday, August 9, 2021, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X