ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಯಾರಿಸ್ ಸೆಡಾನ್ ಕಾರು ಮಾದರಿಯ ಮಾರಾಟವನ್ನು ಹೆಚ್ಚಿಸಲು ಹೊಸ ಮಾದರಿಯ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡುತ್ತಿದ್ದು, ಆಸಕ್ತ ಗ್ರಾಹಕರು ಹೊಸ ಕಾರಿಗಾಗಿ ವಿವಿಧ ಮಾದರಿಯ ಡಿಕಾಲ್ ಬಣ್ಣದ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಡಿಕಾಲ್ ಬಣ್ಣದ ಆಯ್ಕೆಯನ್ನು ಕಾರಿನ ಬ್ಯಾನೆಟ್, ರೂಫ್ ಮತ್ತು ಸೈಡ್‌ನಲ್ಲಿ ಗ್ರಾಫಿಕ್ಸ್ ಪೇಟಿಂಗ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಬಣ್ಣದ ಆಯ್ಕೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ. ಹೊಸ ಗ್ರಾಫಿಕ್ಸ್ ಬಣ್ಣದ ಆಯ್ಕೆಯನ್ನು ಆಸಕ್ತ ಗ್ರಾಹಕರಿಗೆ ಮಾತ್ರವೇ ನೀಡಲಾಗುತ್ತಿದ್ದು, ವಿವಿಧ ಸ್ಟ್ಯಾಂಡರ್ಡ್ ಬಣ್ಣಗಳಿಗೆ ಅನುಸರಿಸಿ ಡಿಕಾಲ್ ಆಯ್ಕೆಗಳು ಲಭ್ಯವಿರಲಿವೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಯಾರಿಸ್ ಮಾದರಿಯಲ್ಲಿ ಕಂಪನಿಯು ರೆಡ್, ಅಂಬರ್, ಸ್ಟೆಲ್ತ್ ಮತ್ತು ಗ್ರೇ ಬಣ್ಣಗಳಿಗೆ ಅನುಗುಣವಾಗಿ ಗ್ರಾಫಿಕ್ಸ್ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದ್ದು, ಯಾವುದೇ ಹೆಚ್ಚುವರಿ ದರವಿಲ್ಲದೆ ಹೊಸ ಬಣ್ಣದ ಆಯ್ಕೆಯನ್ನು ಪಡೆಯಬಹುದಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಇನ್ನು ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಕಾರು ಮಾದರಿಗಳಲ್ಲಿ ಒಂದಾಗಿರುವ ಯಾರಿಸ್ ಫೇಸ್‌ಲಿಫ್ಟ್ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಮೊದಲ ಬಾರಿಗೆ ಫಿಲಿಫೀನ್ಸ್‌‌ನಲ್ಲಿ ಹೊಸ ಕಾರನ್ನು ಅನಾವರಣಗೊಳಿಸಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಭಾರತವನ್ನು ಹೊರತುಪಡಿಸಿ ವಿದೇಶಿ ಮಾರುಕಟ್ಟೆಗಳಲ್ಲಿ ವಿಯೊಸ್ ಹೆಸರಿನೊಂದಿಗೆ ಮಾರಾಟವಾಗುವ ಯಾರಿಸ್ ಕಾರು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಹೊಸ ಕಾರು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. ಯಾರಿಸ್ ಸೆಡಾನ್ ಮಾದರಿಯು ಭಾರತದಲ್ಲಿ ಬಹುಬೇಡಿಕೆಯ ಕಾರು ಮಾದರಿ ಆಗಿಲ್ಲವಾದರೂ ಥೈಲ್ಯಾಂಡ್, ಇಂಡೋನೇಷ್ಯಾ ಮತ್ತು ಫಿಲಿಫೀನ್ಸ್‌ನಲ್ಲಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಫೇಸ್‌ಲಿಫ್ಟ್ ಆವೃತ್ತಿಯ ಮೂಲಕ ಇದೀಗ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಯಾರಿಸ್ ಫೇಸ್‌ಲಿಫ್ಟ್ ಮಾದರಿಯು ಭಾರತದಲ್ಲೂ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಲಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಆದರೆ ಕರೋನಾ ವೈರಸ್‌ನಿಂದಾಗಿ ಸಹಜ ಸ್ಥಿತಿಯತ್ತ ಮರಳಿರುವ ಫಿಲಿಫೀನ್ಸ್‌, ಥೈಲ್ಯಾಂಡ್‌ನಲ್ಲಿ ಹೊಸ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿರುವುದರಿಂದ ಅಲ್ಲಿ ಯಾರಿಸ್ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ವಿನ್ಯಾಸದಲ್ಲಿ ಈ ಬಾರಿ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಹೊಸ ಫೇಸ್‌ಲಿಫ್ಟ್ ಮಾದರಿಯಲ್ಲಿ ಈ ಬಾರಿ 2020ರ ಫಾರ್ಚೂನರ್ ವಿನ್ಯಾಸದ ಫ್ರಂಟ್ ಫಾಸಿಯಾ ವಿನ್ಯಾಸವನ್ನು ನೀಡಲಾಗಿದ್ದು, ಮರುವಿನ್ಯಾಸಗೊಳಿಸಲಾದ ಬಂಪರ್, ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವಾರು ಬದಲಾವಣೆಗಳನ್ನು ತರಲಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಜೊತೆಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್ಹ್, ಫಾಗ್ ಲ್ಯಾಂಪ್‌ ಹೌಸಿಂಗ್ ನೀಡಲಾಗಿದ್ದು, ಹೊಸ ಕಾರನ ಹಿಂಭಾಗದ ವಿನ್ಯಾಸದಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದೆ. ಇದರ ಜೊತೆಗೆ ಕಾರಿನ ಒಳ ವಿನ್ಯಾಸದಲ್ಲೂ ಕೆಲವು ಬದಲಾವಣೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ತಾಂತ್ರಿಕ ಅಂಶಗಳನ್ನೇ ಮುಂದುವರಿಸಲಾಗಿದೆ.

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಬಿಎಸ್-6 ಅಪ್‌ಡೇಟ್ ನಂತರ ಯಾರಿಸ್ ಕಾರಿನಲ್ಲಿ ಐದು ಮ್ಯಾನುವಲ್ ಮತ್ತು ಆರು ಆಟೋಮ್ಯಾಟಿಕ್ ಆವೃತ್ತಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಯಾರಿಸ್ ಕಾರು ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಹೊಂದಿದೆ. ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮಾದರಿಯಲ್ಲೇ ಮ್ಯಾನುವಲ್ ಅಥವಾ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಖರೀದಿಸಬಹುದಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಯಾರಿಸ್ ಕಾರು ಮಾದರಿಗಾಗಿ ಸ್ಪೋರ್ಟಿ ಗ್ರಾಫಿಕ್ಸ್ ಪೇಟಿಂಗ್ ಆಯ್ಕೆ ನೀಡಿದ ಟೊಯೊಟಾ

ಬಿಎಸ್-6 ಎಂಜಿನ್ ನಂತರ ಸೆಡಾನ್ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.17 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನ ರೂ. 14.61 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಫೇಸ್‌ಲಿಫ್ಟ್ ಮಾದರಿಯು ಮತ್ತಷ್ಟು ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

Most Read Articles

Kannada
English summary
Toyota Updated Yaris Sedan With New Decal Options. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X