ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಖ್ಯಾತ ಕ್ಯಾಬ್ ಕಂಪನಿಯಾದ ಉಬರ್, ದೆಹಲಿ ಸರ್ಕಾರದ ಜೊತೆಗೂಡಿ ದೆಹಲಿಯಲ್ಲಿ 10,000 ಆಟೋ ರಿಕ್ಷಾಗಳಿಗೆ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾಗಿದೆ. ಕರೋನಾ ಸಾಂಕ್ರಾಮಿಕದ ಅವಧಿಯಲ್ಲಿ ಈ ಸೆಫ್ಟಿ ಸ್ಕ್ರೀನ್'ಗಳು ಆಟೋ ರಿಕ್ಷಾ ಚಾಲಕ ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುತ್ತವೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಎಲ್ಲಾ ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಉಚಿತವಾಗಿ ಅಳವಡಿಸಲಾಗುವುದು. ಉಬರ್ ಕಂಪನಿಯು ದೆಹಲಿ ಸರ್ಕಾರದ ಸಹಯೋಗದೊಂದಿಗೆ ಕರೋನಾ ಲಸಿಕೆ ಪಡೆಯುವ ಬಗ್ಗೆ ಆಟೋ ಚಾಲಕರಲ್ಲಿ ಅರಿವು ಮೂಡಿಸುತ್ತಿದೆ. ಕರೋನಾ ಲಸಿಕೆಗೆ ಸಂಬಂಧಿಸಿದಂತೆ ಜನರ ಮನಸ್ಸಿನಲ್ಲಿ ಇನ್ನೂ ಅನೇಕ ತಪ್ಪು ಕಲ್ಪನೆಗಳಿವೆ ಎಂದು ಕಂಪನಿ ಹೇಳಿದೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಉಬರ್ ಕಂಪನಿಯು ಈ ಕಲ್ಪನೆಗಳನ್ನು ಹೋಗಲಾಡಿಸುವ ಕೆಲಸಕ್ಕೆ ಮುಂದಾಗಿದೆ. ಆಟೋ ಚಾಲಕರು ಉಚಿತ ಲಸಿಕೆಗಳನ್ನು ಪಡೆಯಲು ಉಬರ್ ಕಂಪನಿಯು ನೆರವಾಗುತ್ತಿದೆ. ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸುವ ಬಗ್ಗೆ ದೆಹಲಿ ಸರ್ಕಾರದ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ದೆಹಲಿಯಲ್ಲಿ ಅನ್ ಲಾಕ್ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಜನರು ಮನೆಗಳಿಂದ ಹೊರ ಬರುತ್ತಿದ್ದಾರೆ. ಆಟೋ ರಿಕ್ಷಾಗಳು ನಗರದ ಜೀವನಾಡಿಯಾಗಿವೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಯಾಣಿಕರನ್ನು ಸುರಕ್ಷಿತವಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ದೆಹಲಿಯ ಎಲ್ಲಾ ಆಟೋ ಚಾಲಕರಿಗೆ ನೆರವು ನೀಡಲಾಗುತ್ತಿದೆ. ಆಟೋದಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸುವುದರಿಂದ, ಚಾಲಕ ಹಾಗೂ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುವುದು. ಇದರಿಂದ ಆಟೋದಲ್ಲಿ ಸುರಕ್ಷಿತ ಪ್ರಯಾಣ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಅವರು ಉಬರ್ ಕಂಪನಿಯ ಕಾರ್ಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಕರೋನಾ ಲಸಿಕೆ ಪಡೆಯುವ ಮೂಲಕ ದೆಹಲಿಯಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕೈ ಜೋಡಿಸುವಂತೆ ನಾವು ಆಟೋ ಚಾಲಕರಿಗೆ ಮನವಿ ಮಾಡುತ್ತೇವೆ ಎಂದು ಗೆಹ್ಲೋಟ್ ತಿಳಿಸಿದರು.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಇದೇ ಸಂದರ್ಭದಲ್ಲಿ ಮಾತನಾಡಿದ ಉಬರ್ ಇಂಡಿಯಾ ಹಾಗೂ ದಕ್ಷಿಣ ಏಷ್ಯಾದ ಮುಖ್ಯಸ್ಥ ರಾಜೀವ್ ಅಗರ್ವಾಲ್, ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆ ನಮಗೆ ಮುಖ್ಯವಾಗಿದೆ. ದೆಹಲಿಯ ಆಟೋ ರಿಕ್ಷಾಗಳನ್ನು ಸುರಕ್ಷಿತವಾಗಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಈ ಅಭಿಯಾನದ ಮೂಲಕ ದೆಹಲಿ ನಗರವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸುತ್ತಿದ್ದೇವೆ. ಆಟೋ ರಿಕ್ಷಾಗಳನ್ನು ಸುರಕ್ಷಿತಗೊಳಿಸುವುದರಿಂದ ದೆಹಲಿಯಲ್ಲಿ ಮತ್ತೊಮ್ಮೆ ಸಾರಿಗೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದರು.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಕಳೆದ ವರ್ಷ ಕರೋನಾ ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಉಬರ್ ಕಂಪನಿಯು ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸಿತ್ತು. ಸೆಫ್ಟಿ ಸ್ಕ್ರೀನ್'ಗಳನ್ನು ತೆಳುವಾದ ಪಾರದರ್ಶಕ ಪ್ಲಾಸ್ಟಿಕ್‌ ಹಾಳೆಯಿಂದ ತಯಾರಿಸಲಾಗಿದೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಈ ಸೆಫ್ಟಿ ಸ್ಕ್ರೀನ್'ಗಳನ್ನು ಆಟೋ ರಿಕ್ಷಾಗಳಲ್ಲಿ ಚಾಲಕನ ಹಿಂದೆ ಅಳವಡಿಸಲಾಗುತ್ತದೆ. ಇದರಿಂದ ಪ್ರಯಾಣಿಕರ ಹಾಗೂ ಚಾಲಕನ ನಡುವೆ ನೇರ ಸಂಪರ್ಕವಿಲ್ಲದಂತಾಗುತ್ತದೆ. ಚಾಲಕ ಹಾಗೂ ಪ್ರಯಾಣಿಕರ ನಡುವೆ ನೇರ ಸಂಪರ್ಕ ತಪ್ಪುವುದರಿಂದ ಆಟೋ ರಿಕ್ಷಾಗಳಲ್ಲಿ ಕರೋನಾ ಸೋಂಕು ಹರಡುವ ಅಪಾಯ ಕಡಿಮೆಯಾಗುತ್ತದೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಉಬರ್ ತನ್ನ ಪ್ಲಾಟ್‌ಫಾರಂನಲ್ಲಿರುವ 1.60 ಲಕ್ಷ ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್'ಗಳನ್ನು ಅಳವಡಿಸಿದೆ. ಉಬರ್ ಕಂಪನಿಯು ತನ್ನ ಚಾಲಕ ಪಾಲುದಾರರಿಗೆ ರೂ.18.5 ಕೋಟಿಗಳ ಪ್ರೋತ್ಸಾಹಕ ಪ್ಯಾಕೇಜ್ ಘೋಷಿಸಿದೆ.

ಆಟೋ ರಿಕ್ಷಾಗಳಲ್ಲಿ ಸೆಫ್ಟಿ ಸ್ಕ್ರೀನ್ ಅಳವಡಿಸಲು ಮುಂದಾದ ಉಬರ್

ಉಬರ್‌ನ 37,000 ಚಾಲಕರು ಈಗಾಗಲೇ ಕರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಸುಮಾರು 1.50 ಲಕ್ಷ ಚಾಲಕರು ಕರೋನಾ ಲಸಿಕೆಯ ಎರಡೂ ಡೋಸ್'ಗಳನ್ನು ಪಡೆಯಲಿದ್ದಾರೆ ಎಂದು ಕಂಪನಿ ಅಂದಾಜು ಮಾಡಿದೆ.

Most Read Articles

Kannada
English summary
Uber to install safety screens in auto rickshaws in Delhi. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X