ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಕೇಂದ್ರ ಸರ್ಕಾರವು ನಿನ್ನೆ ತನ್ನ 2021-22ರ ಸಾಲಿನ ಬಜೆಟ್ ಮಂಡಿಸಿದೆ. ಈ ಬಜೆಟ್'ನಲ್ಲಿ ಘೋಷಿಸಲಾದ ಕೆಲವು ಪ್ರಮುಖ ವಿಷಯಗಳು ಆಟೋ ಮೊಬೈಲ್ ಉದ್ಯಮದ ಮೇಲೆ ನೇರವಾಗಿ ಹಾಗೂ ಪರೋಕ್ಷವಾಗಿ ಮಹತ್ವದ ಪರಿಣಾಮವನ್ನು ಬೀರುತ್ತವೆ ಎಂದು ಹೇಳಲಾಗಿದೆ.

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ನಿನ್ನೆ ಸಂಸತ್ತಿನಲ್ಲಿ ಮಂಡಿಸಿದರು. ಈ ಬಜೆಟ್‌ನಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಈ ಯೋಜನೆಗಳಲ್ಲಿ ಹಳೆಯ ವಾಹನಗಳನ್ನು ನಾಶಪಡಿಸುವ ಯೋಜನೆಯು ಸಹ ಸೇರಿದೆ.

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಈ ಯೋಜನೆಯನ್ವಯ ಅಪಘಾತವಾಗುವ ಸಾಧ್ಯತೆಗಳಿರುವ ಹಾಗೂ ಹೆಚ್ಚು ಮಾಲಿನ್ಯವನ್ನು ಹೊರಸೂಸುವ 20 ವರ್ಷ ಹಳೆಯ ವೈಯಕ್ತಿಕ ವಾಹನಗಳು ಹಾಗೂ 15 ವರ್ಷ ಹಳೆಯ ಕಮರ್ಷಿಯಲ್ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಇದರ ಜೊತೆಗೆ ಹೊಸ ವಾಹನಗಳ ಮಾಲೀಕರಿಗೆ ಪ್ರೋತ್ಸಾಹ ಧನ ನೀಡುವುದರಿಂದ ಹೊಸ ವಾಹನಗಳ ಮಾರಾಟವು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಗಳಿವೆ. ಈ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಾಗುವುದು.

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಭಾರತದಲ್ಲಿರುವ ಹಲವು ಕಾರು ತಯಾರಕ ಕಂಪನಿಗಳು ವಿದೇಶಗಳಿಂದ ವಾಹನಗಳ ಪ್ರಮುಖ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತವೆ. ನಂತರ ಭಾರತದಲ್ಲಿ ಇವುಗಳನ್ನು ಜೋಡಿಸಿ ಮಾರಾಟ ಮಾಡುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಈ ರೀತಿಯಲ್ಲಿ ಆಮದು ಮಾಡಿಕೊಳ್ಳುವ ಕೆಲವು ಪ್ರಮುಖ ಕಾರು ಬಿಡಿಭಾಗಗಳಿಗೆ 15%ನಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲಾಗುತ್ತದೆ. ಇದರಿಂದ ಭಾರತದಲ್ಲಿಅಸೆಂಬಲ್ ಆಗಿ ಮಾರಾಟವಾಗುವ ಕಾರುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಭಾರತದಲ್ಲಿ ಮಾರಾಟವಾಗುವ ಬಹುತೇಕ ಐಷಾರಾಮಿ ಕಾರು ಮಾದರಿಗಳನ್ನು ಈ ರೀತಿ ಮಾರಾಟ ಮಾಡುತ್ತಿರುವುದರಿಂದ ಈ ಕಾರುಗಳ ಬೆಲೆಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಇದೇ ವೇಳೆ 2021-22ರ ಸಾಲಿನ ಕೇಂದ್ರ ಬಜೆಟ್'ನಲ್ಲಿ ವಾಹನಗಳ ತಯಾರಿಕೆಯಲ್ಲಿ ಬಳಸಲಾಗುವ ಸ್ಟೇನ್‌ಲೆಸ್ ಸ್ಟೀಲ್ ಮೇಲಿನ ಕಸ್ಟಮ್ಸ್ ಸುಂಕವನ್ನು 7.5%ನಷ್ಟು ಕಡಿಮೆಗೊಳಿಸಲಾಗಿದೆ.

ಕೇಂದ್ರ ಬಜೆಟ್'ನಿಂದ ಆಟೋಮೊಬೈಲ್ ಉದ್ಯಮದ ಮೇಲಾಗುವ ಪರಿಣಾಮಗಳಿವು

ಇದರಿಂದಾಗಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಕಾರು ತಯಾರಕ ಕಂಪನಿಗಳಿಗೆ ಅವಕಾಶ ನೀಡಿದಂತಾಗಿದೆ. ಇದರಿಂದ ಕಾರಿನ ಬೆಲೆಗಳು ಇಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

Most Read Articles

Kannada
English summary
Union Budget impact on automobile industry. Read in Kannada.
Story first published: Tuesday, February 2, 2021, 14:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X