ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಎರಡನೇ ಹಂತದ ಫೇಮ್ ಯೋಜನೆಯ ಗಡುವನ್ನು ಮತ್ತೆ ಎರಡು ವರ್ಷಗಳವರೆಗೆ ವಿಸ್ತರಿಸಿದೆ. ಈ ಯೋಜನೆಯನ್ನು 2019ರ ಏಪ್ರಿಲ್ 1ರಿಂದ ಮೂರು ವರ್ಷಗಳ ಅವಧಿಗೆ ಜಾರಿಗೆ ತರಲಾಗಿತ್ತು.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಅವಧಿ ವಿಸ್ತರಣೆಯ ನಂತರ ಈ ಯೋಜನೆಯು ಈಗ 2024ರ ಮಾರ್ಚ್ 24ರವರೆಗೆ ದೇಶಾದ್ಯಂತ ಜಾರಿಯಲ್ಲಿರಲಿದೆ. ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2015ರಲ್ಲಿ ಫೇಮ್ ಯೋಜನೆಯನ್ನು ಆರಂಭಿಸಿತು.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಫೇಮ್ 2 ಯೋಜನೆಯ ಗಡುವು ವಿಸ್ತರಣೆಯು ಎಲೆಕ್ಟ್ರಿಕ್ ವಾಹನ ಉದ್ಯಮದ ಬೇಡಿಕೆಗಳನ್ನು ಪೂರೈಸಲು ಹಾಗೂ ಈ ಯೋಜನೆಯಡಿ ಗುರಿಗಳನ್ನು ಪೂರೈಸಲು ಸಾಕಷ್ಟು ಸಮಯವನ್ನು ಒದಗಿಸಲಿದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಫೇಮ್ 2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹಾಗೂ ಮಾರಾಟವನ್ನು ಉತ್ತೇಜಿಸಲು ಬೃಹತ್ ಕೈಗಾರಿಕೆ ಇಲಾಖೆಯು ರೂ.10,000 ಕೋಟಿಗಳ ಯೋಜನೆಗೆ ಅನುಮೋದನೆ ನೀಡಿದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಫೇಮ್ 2 ಯೋಜನೆಯದಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಫೇಮ್ 2 ಯೋಜನೆಯ ಪ್ರಸ್ತಾವನೆಯಡಿಯಲ್ಲಿ 2020ರ ಮಾರ್ಚ್ ವೇಳೆಗೆ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 5 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನ, 55,000 ಎಲೆಕ್ಟ್ರಿಕ್ ಕಾರು ಹಾಗೂ 7,000 ಎಲೆಕ್ಟ್ರಿಕ್ ಬಸ್‌ಗಳಿಗೆ ಸಬ್ಸಿಡಿ ಸೌಲಭ್ಯ ನೀಡಬೇಕಾಗಿದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಆದರೆ ಫೇಮ್ 2 ವೆಬ್‌ಸೈಟ್‌ನಲ್ಲಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೂ ಕೇವಲ 78,000 ಎಲೆಕ್ಟ್ರಿಕ್ ವಾಹನಗಳು ಮಾತ್ರ ಮಾರಾಟವಾಗಿವೆ. ಫೇಮ್ 2 ಯೋಜನೆಯಡಿಯಲ್ಲಿ ದ್ವಿಚಕ್ರ ವಾಹನಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಈ ಸಬ್ಸಿಡಿ ಮೊತ್ತವನ್ನು ಪ್ರತಿ ಕಿ.ವ್ಯಾ ಸಾಮರ್ಥ್ಯಕ್ಕೆ ರೂ.10,000ಗಳಿಂದ ರೂ.15,000ಗಳಿಗೆ ಹೆಚ್ಚಿಸಲಾಗಿದೆ. ಅಂದರೆ ಇನ್ನು ಮುಂದೆ 1 ಕಿ.ವ್ಯಾ ಬ್ಯಾಟರಿ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.15 ಸಾವಿರಗಳ ಸಬ್ಸಿಡಿ ನೀಡಲಾಗುತ್ತದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಇದರ ಜೊತೆಗೆ ಗರಿಷ್ಠ ಸಬ್ಸಿಡಿಯ ಮಿತಿಯನ್ನು ವಾಹನ ವೆಚ್ಚದ 20%ನಿಂದ 40%ಗಳಿಗೆ ಹೆಚ್ಚಿಸಲಾಗಿದೆ. ಫೇಮ್ 2 ಯೋಜನೆಯಡಿ ಪೂರ್ತಿಯಾಗಿ ಚಾರ್ಜ್ ಆದ ನಂತರ ಕನಿಷ್ಠ 80 ಕಿ.ಮೀಗಳವರೆಗೆ ಚಲಿಸುವ ಹಾಗೂ ಗಂಟೆಗೆ 40 ಕಿ.ಮೀ ವೇಗವನ್ನು ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿಯ ಲಾಭವನ್ನು ನೀಡಲಾಗುತ್ತದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಈ ವಾರ ಗುಜರಾತ್ ಸರ್ಕಾರವು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸಿದೆ. ಗುಜರಾತ್ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ರೂ.20,000ಗಳವರೆಗೆ ಹಾಗೂ ಎಲೆಕ್ಟ್ರಿಕ್ ಕಾರುಗಳಿಗೆ ರೂ.1.50 ಲಕ್ಷಗಳವರೆಗೆ ಸಬ್ಸಿಡಿ ನೀಡಲಾಗುತ್ತದೆ.

ಫೇಮ್ 2 ಯೋಜನೆಯ ಗಡುವನ್ನು 2024ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ಈ ಎಲೆಕ್ಟ್ರಿಕ್ ವಾಹನ ನೀತಿಯಡಿಯಲ್ಲಿ ಗುಜರಾತ್'ನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಬಂಡವಾಳ ಹೂಡಿಕೆಯಲ್ಲಿ 25%ನಷ್ಟು ಸಬ್ಸಿಡಿ ನೀಡಲಾಗುವುದು. ಇದರ ಗರಿಷ್ಠ ಮಿತಿ ರೂ.10 ಲಕ್ಷಗಳಾಗಿದೆ.

Most Read Articles

Kannada
English summary
Union Government extends Fame 2 scheme deadline till March 2024. Read in Kannada.
Story first published: Saturday, June 26, 2021, 18:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X