ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಭಾರತದಲ್ಲಿರುವ ಕಾರು ತಯಾರಕ ಕಂಪನಿಗಳು ಮುಂದಿನ ಆರು ತಿಂಗಳೊಳಗೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಹೊಂದಿರುವ ಕಾರುಗಳನ್ನು ಪರಿಚಯಿಸಬೇಕಾಗುತ್ತದೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಗುರುವಾರ ಈ ಸಂಬಂಧ ಆಟೋಮೊಬೈಲ್ ಕಂಪನಿಗಳಿಗೆ ಸೂಚನೆ ನೀಡಿದ್ದಾರೆ. ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಫ್ಲೆಕ್ಸ್ ಫ್ಯೂಯಲ್ ಎಂಜಿನ್‌ಗಳನ್ನು ತಯಾರಿಸಲು ಸಲಹೆ ನೀಡುವ ಕಡತಕ್ಕೆ ಸಹಿ ಹಾಕಿದ್ದೇನೆ ಎಂದು ಗಡ್ಕರಿ ಹೇಳಿದ್ದಾರೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಒಂದಕ್ಕಿಂತ ಹೆಚ್ಚು ಇಂಧನದಿಂದ ಚಲಿಸುವ ವಾಹನಗಳಿಗೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್ ಅಳವಡಿಸಲು ಕಾರು ತಯಾರಕ ಕಂಪನಿಗಳಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಪರಿಸರ ಸ್ನೇಹಿಯಾದ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಟಿವಿಎಸ್ ಮೋಟಾರ್ಸ್ ಹಾಗೂ ಬಜಾಜ್ ಆಟೋಗಳಂತಹ ಕಂಪನಿಗಳು ತಮ್ಮ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗಾಗಿ ಫ್ಲೆಕ್ಸ್ ಫ್ಯೂಯಲ್ ಎಂಜಿನ್‌ಗಳನ್ನು ತಯಾರಿಸಲು ಆರಂಭಿಸಿವೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ 100% ನಷ್ಟು ಎಥೆನಾಲ್ ಚಾಲಿತ ನಾಲ್ಕು ಚಕ್ರದ ವಾಹನಗಳನ್ನು ಪರಿಚಯಿಸಿದರೆ ನಮಗೆ ಪೆಟ್ರೋಲ್'ನ ಅಗತ್ಯವೇ ಇರುವುದಿಲ್ಲವೆಂದು ಗಡ್ಕರಿ ಹೇಳಿದ್ದಾರೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ವಾಹನ ತಯಾರಕ ಕಂಪನಿಗಳು 100% ನಷ್ಟು ಪೆಟ್ರೋಲ್ ಅಥವಾ ಎಥೆನಾಲ್‌ನಿಂದ ಚಲಿಸುವ ವಾಹನಗಳಿಗೆ ಪರ್ಯಾಯವನ್ನು ಒದಗಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ. ಅಂತಹ ವಾಹನಗಳಿಗೆ ಅನುಮತಿ ನೀಡಲು ಸರ್ಕಾರ ಸಿದ್ಧವಾಗಿದೆ. ಫ್ಲೆಕ್ಸ್ ಫ್ಯುಯಲ್ ಎಂಜಿನ್ ತಂತ್ರಜ್ಞಾನವು ಸುಲಭವಾಗಿ ಲಭ್ಯವಿದ್ದು, ಆಟೋ ಕಂಪನಿಗಳು ಬಯಸಿದರೆ ಭಾರತೀಯ ಆಟೋ ಉದ್ಯಮವು ಶುದ್ಧ ಇಂಧನದತ್ತ ದೊಡ್ಡ ಹೆಜ್ಜೆ ಇಡಬಹುದು ಎಂದು ಅವರು ಹೇಳಿದ್ದಾರೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಕಚ್ಚಾ ತೈಲದ ಮೇಲಿನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಫ್ಲೆಕ್ಸ್ ಫ್ಯೂಯಲ್ ಬಳಕೆಗೆ ಒತ್ತು ನೀಡುತ್ತಿದೆ. ಇದಕ್ಕಾಗಿ ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸಲು ಸರ್ಕಾರವು ಅನುಮೋದನೆ ನೀಡಿದೆ. ಮಾರ್ಚ್ 8 ರಂದು, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು E20 ಇಂಧನ ಬಳಕೆಯನ್ನು ಅನುಮೋದಿಸುವ ಅಧಿಸೂಚನೆಯನ್ನು ಹೊರಡಿಸಿದೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

E20 ಇಂಧನವು 20% ನಷ್ಟು ಎಥೆನಾಲ್ ಹಾಗೂ 80%ನಷ್ಟು ಪೆಟ್ರೋಲ್ ಮಿಶ್ರಣವನ್ನು ಹೊಂದಿರುತ್ತದೆ. ಫ್ಲೆಕ್ಸ್ ಫ್ಯೂಯಲ್ ಇಂಧನವು ಪೆಟ್ರೋಲ್ ಅನ್ನು ಮೆಥನಾಲ್ ಅಥವಾ ಎಥೆನಾಲ್'ನೊಂದಿಗೆ ಬೆರೆಸುವ ಮೂಲಕ ತಯಾರಿಸಲಾದ ಪರ್ಯಾಯ ಇಂಧನವಾಗಿದೆ. ಫ್ಲೆಕ್ಸ್ ಫ್ಯೂಯಲ್ ಇಂಧನವು ಪ್ರಕೃತಿಯಲ್ಲಿ ಸಾವಯವವಾಗಿರುವುದರಿಂದ ಪೆಟ್ರೋಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಪರಿಸರವನ್ನು ಮಾಲಿನ್ಯಗೊಳಿಸುತ್ತದೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಫ್ಲೆಕ್ಸ್ ಫ್ಯೂಯಲ್ ಎಂಜಿನ್‌ಗಳು ಪೆಟ್ರೋಲ್ ಹಾಗೂ ಜೈವಿಕ ಇಂಧನ ಎರಡರಲ್ಲೂ ಸಹ ಕಾರ್ಯನಿರ್ವಹಿಸುತ್ತವೆ. ಈಗ ಬ್ರೆಜಿಲ್ ಹಾಗೂ ಅಮೆರಿಕಾ ದೇಶಗಳು ಎಥೆನಾಲ್ ಮಿಶ್ರಿತ ಇಂಧನ ಹಾಗೂ ಫ್ಲೆಕ್ಸ್ ಎಂಜಿನ್‌ಗಳನ್ನು ಹೆಚ್ಚು ಬಳಸುವ ಎರಡು ಪ್ರಮುಖ ಮಾರುಕಟ್ಟೆಗಳಾಗಿವೆ. ಭಾರತವು ಪೆಟ್ರೋಲ್, ಡೀಸೆಲ್ ಇಂಧನಗಳ ಪ್ರಮುಖ ಗ್ರಾಹಕರಲ್ಲಿ ಒಂದಾಗಿದ್ದು, ಈ ಇಂಧನಗಳ ಅಗತ್ಯತೆಯ 80% ನಷ್ಟು ಆಮದು ಮಾಡಿಕೊಳ್ಳುತ್ತದೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಕೇಂದ್ರ ಸರ್ಕಾರವು ಎಥೆನಾಲ್ ಹಾಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರವು ಈಗಾಗಲೇ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಹಾಗೂ ಫ್ಲೆಕ್ಸ್ ಫ್ಯೂಯಲ್ ಇಂಜಿನ್‌ಗಳನ್ನು ಪರಿಚಯಿಸುವ ಗುರಿಯು ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡುತ್ತದೆ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಇದರಿಂದ ಭಾರತವು ಇಂಧನವನ್ನು ಆಮದು ಮಾಡಿಕೊಳ್ಳುವುದು ಕಡಿಮೆಯಾಗುತ್ತದೆ. ಜೊತೆಗೆ ಮಾಲಿನ್ಯವು ಸಹ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಜೈವಿಕ ಇಂಧನ ಅಂದರೆ ಎಥೆನಾಲ್‌ನ ಬೆಲೆ ಪೆಟ್ರೋಲ್‌ಗಿಂತ ರೂ. 30 - 35ಗಳಷ್ಟು ಅಗ್ಗವಾಗಿದೆ. ಪೆಟ್ರೋಲ್ ಬೆಲೆಯಲ್ಲಿನ ಬದಲಾವಣೆಯು ಸಂಪೂರ್ಣವಾಗಿ ಎಥೆನಾಲ್'ನಲ್ಲಿ ಚಲಿಸುವ ವಾಹನಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಎಥೆನಾಲ್ ಅನ್ನು ಜೋಳ, ಕಬ್ಬು ಹಾಗೂ ಗೋಧಿಯಿಂದ ತಯಾರಿಸಲಾಗುತ್ತದೆ. ವಾಹನ ಕಂಪನಿಗಳು ಫ್ಲೆಕ್ಸ್ ಎಂಜಿನ್ ವಾಹನಗಳನ್ನು ಪರಿಚಯಿಸಿದರೆ ವಾಹನ ಸವಾರರು ಅಗ್ಗದ ಇಂಧನದ ಪ್ರಯೋಜನವನ್ನು ಪಡೆಯಬಹುದು. ಜೊತೆಗೆ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬಹುದು.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಇನ್ನು ಜನವರಿ 1ರಿಂದ 10 ವರ್ಷ ಹಳೆಯ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದುಪಡಿಸುವುದಾಗಿ ದೆಹಲಿ ಸರ್ಕಾರವು ತಿಳಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನಿರ್ದೇಶನದಂತೆ ದೆಹಲಿ ಸರ್ಕಾರವು ಈ ಕ್ರಮ ಕೈಗೊಳ್ಳುತ್ತಿದೆ. ನೋಂದಣಿ ರದ್ದುಪಡಿಸಿದ ಡೀಸೆಲ್ ವಾಹನಗಳಿಗೆ ಯಾವುದೇ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (ಎನ್‌ಒಸಿ) ನೀಡಲಾಗುವುದಿಲ್ಲ.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಇದರಿಂದ ಅವುಗಳನ್ನು ಬೇರೆಡೆ ಮರು ನೋಂದಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ದೆಹಲಿ ಸಾರಿಗೆ ಇಲಾಖೆಯು 15 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಯಾವುದೇ ಎನ್‌ಒಸಿ ನೀಡುವುದಿಲ್ಲವೆಂದು ಹೇಳಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಈಗಾಗಲೇ ದೆಹಲಿ - ಎನ್‌ಸಿಆರ್‌ನಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ಹಾಗೂ 15 ವರ್ಷಕ್ಕಿಂತ ಹಳೆಯ ಪೆಟ್ರೋಲ್ ವಾಹನಗಳ ನೋಂದಣಿ ಹಾಗೂ ಸಂಚಾರ ಓಡಾಟದ ನಿಷೇಧಕ್ಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಿತ್ತು.

ಕಾರುಗಳಲ್ಲಿ ಕಡ್ಡಾಯವಾಗಲಿದೆ ಫ್ಲೆಕ್ಸ್ ಫ್ಯೂಯಲ್ ಎಂಜಿನ್

ಈ ಹಿನ್ನೆಲೆಯಲ್ಲಿ ದೆಹಲಿ ಎನ್‌ಸಿ‌ಆರ್ ಪ್ರದೇಶದಲ್ಲಿ ಈ ವಾಹನಗಳನ್ನು ಚಾಲನೆ ಮಾಡುವುದನ್ನು ಕಾನೂನು ಬಾಹಿರವೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2016ರ ಜುಲೈನಲ್ಲಿ ನೀಡಿದ್ದ ನಿರ್ದೇಶನವನ್ನು ರಾಷ್ಟ್ರ ರಾಜಧಾನಿಯಲ್ಲಿ ವಾಹನ ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಜಾರಿಗೊಳಿಸಲಾಗುತ್ತಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government issues advisory to introduce flex engine in cars details
Story first published: Friday, December 24, 2021, 14:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X