ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗಾಗಿ ಇ-ಅಮೃತ್ ಎಂಬ ವೆಬ್ ಪೋರ್ಟಲ್ ಅನ್ನು ಆರಂಭಿಸಿದೆ. ಇ-ಅಮೃತ್ ವೆಬ್‌ಸೈಟ್ ಎಲೆಕ್ಟ್ರಿಕ್ ವಾಹನಗಳ ಖರೀದಿ, ಹೂಡಿಕೆ ಅವಕಾಶ, ನೀತಿ ಹಾಗೂ ಸಬ್ಸಿಡಿಗಳಂತಹ ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ ಒಂದು ತಾಣವಾಗಿದೆ ಎಂದು ನೀತಿ ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಈ ವೆಬ್ ಪೋರ್ಟಲ್ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಸಂಬಂಧಿಸಿದ ಸಂಗತಿಗಳನ್ನು ಸಹ ಹೊರಹಾಕುತ್ತದೆ. ಇ-ಅಮೃತ್ ವೆಬ್ ಪೋರ್ಟಲ್ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡಲು ತೆಗೆದುಕೊಳ್ಳುತ್ತಿರುವ ಎಲ್ಲಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಇದಲ್ಲದೆ ಇ-ಅಮೃತ್ ಪೋರ್ಟಲ್ ಅನ್ನು ಹೆಚ್ಚು ಸಂವಾದಾತ್ಮಕ ಹಾಗೂ ಬಳಕೆದಾರ ಸ್ನೇಹಿಯನ್ನಾಗಿ ಮಾಡಲು ಹೆಚ್ಚಿನ ಫೀಚರ್ ಗಳನ್ನು ಸೇರಿಸಲು ಹಾಗೂ ಹೊಸ ಪರಿಕರಗಳನ್ನು ಪರಿಚಯಿಸಲು ನೀತಿ ಆಯೋಗ ಉದ್ದೇಶಿಸಿದೆ. ಇ-ಅಮೃತ್ ಪೋರ್ಟಲ್ ಅನ್ನು ನೀತಿ ಆಯೋಗವು ಬ್ರಿಟನ್ ಸರ್ಕಾರದ ಸಹಯೋಗದ ಜ್ಞಾನ ವಿನಿಮಯ ಕಾರ್ಯಕ್ರಮದ ಭಾಗವಾಗಿ ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಈ ಯೋಜನೆಯು ಭಾರತ - ಬ್ರಿಟನ್ ಜಂಟಿ ಮಾರ್ಗಸೂಚಿ 2030 ರ ಭಾಗವಾಗಿದೆ. ಇದಕ್ಕೆ ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಸಹಿ ಹಾಕಿದ್ದಾರೆ. ಪೋರ್ಟಲ್‌ ಬಿಡುಗಡೆ ಸಂದರ್ಭದಲ್ಲಿ ಇಂಗ್ಲೆಂಡಿನ ಹೈ ಲೆವೆಲ್ ಕ್ಲೈಮೇಟ್ ಆಕ್ಷನ್ ಚಾಂಪಿಯನ್ ನಿಗೆಲ್ ಟಾಪಿಂಗ್ ಹಾಗೂ ನೀತಿ ಆಯೋಗದ ಸಲಹೆಗಾರರಾದ ಸುಧೇಂದು ಜ್ಯೋತಿ ಸಿನ್ಹಾ ಭಾಗವಹಿಸಿದ್ದರು.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಇತ್ತೀಚಿನ ದಿನಗಳಲ್ಲಿ ಸಾರಿಗೆಯ ಡಿಕಾರ್ಬೊನೈಸೇಶನ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಬದಲಾಗಲು ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳಲ್ಲಿ ಫೇಮ್ ಹಾಗೂ ಪಿ‌ಎಲ್‌ಐನಂತಹ ಯೋಜನೆಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಪ್ರಮುಖವಾಗಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ವಿವಿಧ ರಾಜ್ಯ ಸರ್ಕಾರಗಳು ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿಗಳನ್ನು ಪರಿಚಯಿಸಿವೆ. ಈ ನೀತಿಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ಮೂರು ಚಕ್ರ ವಾಹನ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳ ಖರೀದಿಗೆ ಸಬ್ಸಿಡಿ ನೀಡುವುದು ಸೇರಿದೆ. ಇದರ ಜೊತೆಗೆ ಹಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕ ಹಾಗೂ ರಸ್ತೆ ತೆರಿಗೆಯಿಂದ ವಿನಾಯಿತಿ ನೀಡಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ದೇಶದ ರಾಜಧಾನಿ ದೆಹಲಿಯು ಎಲೆಕ್ಟ್ರಿಕ್ ವಾಹನ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಇತರ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು. ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಸಾಕಷ್ಟು ಹೆಚ್ಚಳ ಕಂಡು ಬಂದಿದೆ. ಈಗ ದೆಹಲಿ ಸರ್ಕಾರವು ತನ್ನ ಎಲೆಕ್ಟ್ರಿಕ್ ವಾಹನ ನೀತಿಯಿಂದ ಸಬ್ಸಿಡಿ ನೀಡುವುದನ್ನು ಹಿಂಪಡೆದಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಇವಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ರೆಸಿಡೆನ್ಶಿಯಲ್ ಸೊಸೈಟಿ, ಅಪಾರ್ಟ್‌ಮೆಂಟ್‌, ಉದ್ಯಾನವನ ಹಾಗೂ ಶಾಪಿಂಗ್ ಮಾಲ್‌ಗಳಂತಹ ಸ್ಥಳಗಳಲ್ಲಿಯೂ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಇದರಿಂದ ಎಲೆಕ್ಟ್ರಿಕ್ ವಾಹನ ಸವಾರರು ಸುಲಭವಾಗಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಯ ವೆಚ್ಚವನ್ನು ಕಡಿಮೆ ಮಾಡಲು ದೆಹಲಿ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದ ಅನ್ವಯ ದೆಹಲಿ ಸರ್ಕಾರವು ಯಾವುದೇ ಖಾಸಗಿ ಆಸ್ತಿ, ಮಾಲ್, ಆಸ್ಪತ್ರೆ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವವರಿಗೆ ಸಬ್ಸಿಡಿ ನೀಡಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನ ಗ್ರಾಹಕರಿಗಾಗಿ ಏಕ ಗವಾಕ್ಷಿ ಆನ್‌ಲೈನ್ ಸೇವೆಯನ್ನು ಆರಂಭಿಸಿದೆ. ಈ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸುವ ಮೂಲಕ ಅಥವಾ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಖಾಸಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬಹುದು. ದೆಹಲಿ ಸರ್ಕಾರವು ಚಾರ್ಜಿಂಗ್ ಸ್ಟೇಷನ್‌ಗಳಿಗಾಗಿ ಮೊದಲ 30,000 ಅರ್ಜಿದಾರರಿಗೆ ರೂ. 6,000 ಸಬ್ಸಿಡಿ ನೀಡಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಇದರಿಂದ ಪ್ರತಿ ಚಾರ್ಜರ್‌ ಸ್ಥಾಪಿಸಲು ಸುಮಾರು ರೂ. 2,500 ವೆಚ್ಚವಾಗಲಿದೆ. ದೆಹಲಿ ಸರ್ಕಾರವು ನೀಡುವ ಸಬ್ಸಿಡಿಯಿಂದಾಗಿ ಚಾರ್ಜರ್‌ಗಳ ನಿರ್ಮಾಣ ವೆಚ್ಚವು 70% ನಷ್ಟು ಕಡಿಮೆಯಾಗುತ್ತದೆ. ನಿಗದಿ ಪಡಿಸಿದ ಸ್ಥಳದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜರ್‌ನ ಸ್ಥಾಪನೆ ಹಾಗೂ ಕಾರ್ಯಾಚರಣೆಯನ್ನು ಅರ್ಜಿ ಸಲ್ಲಿಸಿದ ಏಳು ಕೆಲಸದ ದಿನಗಳಲ್ಲಿ ಆರಂಭಿಸಬೇಕು.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಅರ್ಜಿದಾರರು ತಮ್ಮ ಸ್ವಂತ ಸ್ಥಳದಲ್ಲಿ ಎರಡು ರೀತಿಯಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಬಹುದು. ಮೊದಲ ಆಯ್ಕೆಯಲ್ಲಿ, ಅರ್ಜಿದಾರರು ಚಾರ್ಜಿಂಗ್ ಸ್ಟೇಷನ್‌ಗೆ ಹೊಸ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸಿದರೆ, ನಂತರ ಅವರಿಗೆ ಪ್ರಿಪೇಯ್ಡ್ ಮೀಟರ್‌ನೊಂದಿಗೆ ಹೊಸ ಸಂಪರ್ಕವನ್ನು ನೀಡಲಾಗುತ್ತದೆ. ಅದರ ದರವು ಸ್ವಂತದ ಸಂಪರ್ಕಕ್ಕಿಂತ ಕಡಿಮೆಯಿರುತ್ತದೆ. ಎರಡನೇ ಆಯ್ಕೆಯಲ್ಲಿ, ಅರ್ಜಿದಾರರು ಸ್ವಂತ ಮೀಟರ್ ಸಂಪರ್ಕದಲ್ಲಿ ಚಾರ್ಜಿಂಗ್ ಸ್ಟೇಷನ್‌ಗೆ ಸಂಪರ್ಕವನ್ನು ಪಡೆಯಬಹುದು.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಈ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಮೂಲಕ ವಾಹನಗಳನ್ನು ಚಾರ್ಜ್ ಮಾಡಲು ಸರ್ಕಾರವು ಪ್ರತಿ ಯೂನಿಟ್‌ಗೆ ರೂ. 4.5 ನಿಗದಿ ಪಡಿಸಿದೆ. ಸಿಂಗಲ್ ವಿಂಡೋ ಪೋರ್ಟಲ್ ಅರ್ಜಿದಾರರಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸ್ಥಾಪನೆ ಮಾಡಲು ಅನುಮತಿ ನೀಡಲಾಗುತ್ತದೆ. ಗ್ರಾಹಕರು ಹಗುರವಾದ ಇವಿ ಚಾರ್ಜರ್‌ಗೆ ರೂ. 6,000 ಗಳವರೆಗೆ ಸಬ್ಸಿಡಿ ಪಡೆದು, ಇನ್ನುಳಿದ ರೂ. 2,500 ಪಾವತಿಸಬೇಕು.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಇವಿ ಚಾರ್ಜರ್ ಗಳನ್ನು ಅಳವಡಿಸಲು ಕಡಿಮೆ ಸ್ಥಳಾವಕಾಶ ಬೇಕಾಗುತ್ತದೆ. ಎಲ್‌ಇವಿ ಎಸಿ ಚಾರ್ಜರ್‌ಗೆ ಕೇವಲ ಒಂದು ಚದರ ಅಡಿ ಹಾಗೂ ಎಸಿ 001 ಚಾರ್ಜರ್‌ಗೆ ಎರಡು ಚದರ ಅಡಿ ಜಾಗದ ಅಗತ್ಯವಿದ್ದರೆ, ಡಿಸಿ 001 ಚಾರ್ಜರ್‌ಗೆ ಎರಡು ಚದರ ಮೀಟರ್ ಜಾಗದ ಅಗತ್ಯವಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೊಸ ಪೋರ್ಟಲ್ ಆರಂಭಿಸಿದ ಕೇಂದ್ರ ಸರ್ಕಾರ

ಎಲ್‌ಇವಿ ಎಸಿ ಚಾರ್ಜರ್ ಹಾಗೂ ಎಸಿ 001 ಚಾರ್ಜರ್ ಎರಡೂ ವಾಲ್ ಮೌಂಟೆಡ್ ಆಗಿವೆ. ದೆಹಲಿ, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಧಿಕೃತ ಅಧಿಸೂಚನೆ ಹೊರಡಿಸಿದ ಎರಡು ತಿಂಗಳೊಳಗೆ 2021ರ ಚಾರ್ಜಿಂಗ್ ಮಾನದಂಡಗಳಿಗೆ ಅನುಗುಣವಾಗಿ ಎಲ್‌ಇವಿ ಎಸಿ ಚಾರ್ಜರ್‌ಗಳನ್ನು ಪರಿಚಯಿಸುವ ದೇಶದ ಮೊದಲ ಸರ್ಕಾರವಾಗಿದೆ ಎಂದು ದೆಹಲಿ ಸಾರಿಗೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಮನಿಸಿ: ಈ ಲೇಖನದಲ್ಲಿರುವ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government launches e amrit web portal for electric vehicles related info details
Story first published: Friday, November 12, 2021, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X