ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಭಾರತದಲ್ಲಿ ಮಾರಾಟವಾಗುವ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲಿನ ಜಿ‌ಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡುವಂತೆ ಹಲವು ಬಾರಿ ವಾಹನ ತಯಾರಕ ಕಂಪನಿಗಳು ಮನವಿ ಮಾಡಿದ್ದವು. ಈ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಕಾರು ಹಾಗೂ ದ್ವಿಚಕ್ರ ವಾಹನಗಳ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲು ಮಾತುಕತೆಗೆ ಸಿದ್ಧವಿರುವುದಾಗಿ ತಿಳಿಸಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಕಳೆದ ಬುಧವಾರ ನಡೆದ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ರವರು ಭಾರತೀಯ ಆಟೋ ಮೊಬೈಲ್ ಉದ್ಯಮದೊಂದಿಗೆ ಈ ವಿಷಯದ ಬಗ್ಗೆ ಮತ್ತಷ್ಟು ಚರ್ಚಿಸಲು ಸಿದ್ಧವಿರುವುದಾಗಿ ತಿಳಿಸಿದರು. ಕಾರು, ದ್ವಿಚಕ್ರ ವಾಹನ ಹಾಗೂ ಟ್ರಕ್‌ಗಳಂತಹ ವಾಹನಗಳ ಮೇಲೆ ಸದ್ಯಕ್ಕೆ 28% ನಷ್ಟು ಜಿಎಸ್‌ಟಿ ತೆರಿಗೆಯನ್ನು ವಿಧಿಸಲಾಗುತ್ತಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಇದರ ಜೊತೆಗೆ ಹಲವು ರಾಜ್ಯ ಸರ್ಕಾರಗಳೂ ತೆರಿಗೆ ವಿಧಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಸೇರಿಸಿದ ನಂತರ ವಾಹನಗಳ ಅಂತಿಮ ಬೆಲೆಯು ತುಲನಾತ್ಮಕವಾಗಿ ದುಬಾರಿಯಾಗುತ್ತದೆ. ಈ ಕಾರಣಕ್ಕೆ ಜಿ‌ಎಸ್‌ಟಿ ತೆರಿಗೆ ದರಗಳನ್ನು ಕಡಿಮೆ ಮಾಡುವಂತೆ ಆಟೋ ಮೊಬೈಲ್ ಉದ್ಯಮವು ಹಲವು ದಿನಗಳಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಜಿ‌ಎಸ್‌ಟಿ ತೆರಿಗೆ ದರವನ್ನು ಕಡಿಮೆ ಮಾಡುವುದರಿಂದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿ, ಮಾರಾಟ ಪ್ರಮಾಣವು ಹೆಚ್ಚಾಗಬಹುದು ಎಂದು ಹೇಳಲಾಗಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಸಿಯಾಮ್) ಆಯೋಜಿಸಿದ್ದ ಸೆಮಿನಾರ್ ನಲ್ಲಿ ಇತ್ತೀಚೆಗೆ ಮಾತನಾಡಿದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ರವರು ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಜಿ‌ಎಸ್‌ಟಿ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಸರ್ಕಾರವು ಪರಿಗಣಿಸಬಹುದು ಎಂದು ಹೇಳಿದರು.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಜಿಎಸ್‌ಟಿ ತೆರಿಗೆ ದರಗಳನ್ನು ಕಡಿಮೆ ಮಾಡುವ ಬಗ್ಗೆ ಏನು ಮಾಡಬಹುದು ಎಂಬುದನ್ನು ನಿಮ್ಮೊಂದಿಗೆ ಚರ್ಚಿಸಲು ನಾವು ಸಿದ್ದರಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ವಾಹನ ಮಾರಾಟ ಪ್ರಮಾಣವು ಯಾವ ಕಾರಣಕ್ಕೆ ಕಡಿಮೆಯಾಗಿದೆ. ಹೆಚ್ಚಿನ ಜಿಎಸ್‌ಟಿ ತೆರಿಗೆ ವಿಧಿಸುತ್ತಿರುವುದು ಇದಕ್ಕೆ ಕಾರಣವೇ ಎಂಬುದನ್ನು ಚರ್ಚಿಸಲು ತಾವು ಸಿದ್ಧ ಎಂದು ತರುಣ್ ಬಜಾಜ್ ಹೇಳಿದರು.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಆಟೋ ಮೊಬೈಲ್ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಉದ್ಯಮದವರಿಂದ ಸಲಹೆಗಳನ್ನು ತೆಗೆದುಕೊಳ್ಳುವುದು ಅವರ ಗುರಿಯಾಗಿದೆ, ಭಾರತದ ಒಟ್ಟಾರೆ ಜಿಡಿಪಿಗೆ ಆಟೋ ಮೊಬೈಲ್ ಉದ್ಯಮದ ಕೊಡುಗೆಯು ಕೇಂದ್ರ ಸರ್ಕಾರಕ್ಕೆ ಪ್ರಮುಖವಾಗಿದೆ. ಭಾರತವು ವಿಶ್ವದ ಅತಿ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಆದರೆ ಪ್ರತಿ 100 ಜನರಿಗೆ ವಾಹನ ಖರೀದಿಸುವ ವಿಷಯದಲ್ಲಿ ಭಾರತವು ಪಾಶ್ಚಿಮಾತ್ಯ ದೇಶಗಳು ಹಾಗೂ ಚೀನಾ ದೇಶಕ್ಕಿಂತ ಇನ್ನೂ ಹಿಂದಿದೆ. ಮಾರಾಟ ಹಾಗೂ ಉತ್ಪಾದನೆ ಎರಡರಲ್ಲೂ ಚೀನಾ ವಿಶ್ವದ ಅತಿ ದೊಡ್ಡ ಆಟೋ ಮೊಬೈಲ್ ಮಾರುಕಟ್ಟೆಯಾಗಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಆಟೋ ಮೊಬೈಲ್ ಉದ್ಯಮದ ಪ್ರಕಾರ, ಭಾರತದಲ್ಲಿ ಕಡಿಮೆ ವಾಹನ ಮಾರಾಟವಾಗುವುದಕ್ಕೆ ಪ್ರಮುಖ ಕಾರಣ ದುಬಾರಿ ಬೆಲೆಯ ತೆರಿಗೆ. ಇತ್ತೀಚಿನ ದಿನಗಳಲ್ಲಿ ವಾಹನಗಳ ಉತ್ಪಾದನಾ ವೆಚ್ಚವು ಹೆಚ್ಚಾಗಿದೆ. ಕಠಿಣ ಮಾಲಿನ್ಯ ಮಾನದಂಡಗಳನ್ನು ಪೂರೈಸುವ ಸುರಕ್ಷಿತ ವಾಹನಗಳನ್ನು ತಯಾರಿಸುವ ಅಗತ್ಯವು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಇಂತಹ ಸಂದರ್ಭದಲ್ಲಿ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದರಿಂದ ವಾಹನ ತಯಾರಕ ಕಂಪನಿಗಳಿಗೆ ಹಾಗೂ ವಾಹನ ಸವಾರರಿಗೆ ಅನುಕೂಲವಾಗುತ್ತದೆ. Maruti Suzuki, Tata Motors, Honda Motorcycle And Scooters India, Hero Motocorp ಹಾಗೂ Ashok Leyland ನಂತಹ ವಾಹನ ತಯಾರಕ ಕಂಪನಿಗಳು ಹೆಚ್ಚು ಜಿಎಸ್‌ಟಿ ದರವನ್ನು ವಿಧಿಸುತ್ತಿರುವ ಬಗ್ಗೆ ಸರ್ಕಾರದ ಬಳಿ ಪ್ರಸ್ತಾಪಿಸಿವೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಜಿ‌ಎಸ್‌ಟಿ ದರವನ್ನು ಇಳಿಸಿ ಕೈಗೆಟುಕುವ ದರದಲ್ಲಿ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರದ ನೆರವನ್ನು ಕೋರಿದ್ದಾರೆ. ಆಟೋ ಮೊಬೈಲ್‌ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದರಿಂದ ಒಇಎಂಗಳಿಗೆ (ಮೂಲ ಸಲಕರಣೆ ತಯಾರಕರು) ಮಾತ್ರವಲ್ಲದೇ ಗ್ರಾಹಕರಿಗೂ ಪ್ರಯೋಜನವಾಗಲಿದೆ.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಈ ಕ್ರಮವು 2018 - 2019 ರಿಂದಲೂ ನಿಧಾನಗತಿಯಲ್ಲಿ ಸಾಗುತ್ತಿರುವ ಆಟೋ ಮೊಬೈಲ್ ಉದ್ಯಮದ ಮಾರಾಟವನ್ನು ಹೆಚ್ಚಿಸ ಬಹುದು ಎಂಬುದು ಆಟೋ ಮೊಬೈಲ್ ಉದ್ಯಮದ ಪರಿಣಿತರ ಅಭಿಪ್ರಾಯ. ಕರೋನಾ ವೈರಸ್ ಹರಡ ಬಾರದು ಎಂಬ ಕಾರಣಕ್ಕೆ 2020 ರ ಮಾಚ್ ತಿಂಗಳಿನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ಲಾಕ್ ಡೌನ್ ಸಂದರ್ಭದಲ್ಲಿ ಅನಿವಾರ್ಯವಾಗಿ ಹಲವು ಕಾರ್ಖಾನೆಗಳನ್ನು ಹಾಗೂ ವಾಹನ ತಯಾರಕ ಕಂಪನಿಗಳ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲಾಗಿತ್ತು.

ವಾಹನಗಳ ಮೇಲಿನ ಜಿ‌ಎಸ್‌ಟಿ ದರವನ್ನು ಕಡಿಮೆ ಮಾಡಲು ಸಿದ್ದವಿರುವುದಾಗಿ ತಿಳಿಸಿದ ಕೇಂದ್ರ ಸರ್ಕಾರ

ಉತ್ಪಾದನೆ ಕುಂಠಿತಗೊಂಡ ಕಾರಣಕ್ಕೆ ಹಲವು ಕಂಪನಿಗಳು ತಮ್ಮ ನೌಕರರನ್ನು ಕೆಲಸದಿಂದ ತೆಗೆದು ಹಾಕಿದವು. ಒಟ್ಟಾರೆಯಾಗಿ ಕರೋನಾ ವೈರಸ್ ಮಹಾಮಾರಿಯ ಕಾರಣಕ್ಕೆ ಜನರ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿತು. ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವವರಿಗೆ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಭಾರೀ ಪ್ರಮಾಣದ ಜಿ‌ಎಸ್‌ಟಿ ದರವು ಗಾಯದ ಮೇಲೆ ಬರೆ ಎಳದಂತೆ ಮಾಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Union government ready to reduce gst rate on vehicles says revenue secretary details
Story first published: Friday, August 27, 2021, 13:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X