Just In
- 1 hr ago
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- 3 hrs ago
35 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಉಚಿತ ಲಸಿಕೆ ನೀಡಲು ಮುಂದಾದ ಟಿವಿಎಸ್ ಕಂಪನಿ
- 6 hrs ago
ವಾರದ ಪ್ರಮುಖ ಸುದ್ದಿ: ಏರ್ಬ್ಯಾಗ್ ಕಡ್ಡಾಯ, ಬಿಡುಗಡೆಗೆ ಸಜ್ಜಾದ ಸಿಟ್ರನ್, ಟೊಯೊಟಾ ನೌಕರರ ಮುಷ್ಕರ ಅಂತ್ಯ!
- 16 hrs ago
ವೆಂಟೊ ಟ್ರೆಂಡ್ಲೈನ್ ವೆರಿಯೆಂಟ್ ಬುಕ್ಕಿಂಗ್ ಪ್ರಕ್ರಿಯೆಗೆ ಸ್ಥಗಿತಗೊಳಿಸಿದ ಫೋಕ್ಸ್ವ್ಯಾಗನ್
Don't Miss!
- News
ಪಶ್ಚಿಮ ಬಂಗಾಳ ಕಾಶ್ಮೀರವಾದರೆ ತಪ್ಪೇನು ಹೇಳಿ; ಸುವೇಂದುಗೆ ಒಮರ್ ತಿರುಗೇಟು
- Movies
ದೀದಿ ಸಾಮ್ರಾಜ್ಯದಲ್ಲಿ ಕಮಲದ ಕೈ ಹಿಡಿದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ
- Finance
ದಕ್ಷಿಣ ಭಾರತದ ಅತಿದೊಡ್ಡ ಆಭರಣ ರೀಟೈಲರ್ ಮೇಲೆ ಐಟಿ ದಾಳಿ
- Sports
ಐಪಿಎಲ್ 2021: ಅಧಿಕೃತ ವೇಳಾಪಟ್ಟಿ ಬಿಡುಗಡೆ, ಮೊದಲ ಪಂದ್ಯದಲ್ಲಿ ಆರ್ಸಿಬಿಗೆ ಮುಂಬೈ ಎದುರಾಳಿ
- Lifestyle
"ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?"
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ 200 ಕೋಟಿಗೂ ಹೆಚ್ಚು ಹಣ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ
ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 2015ರಲ್ಲಿ ಫೇಮ್ ಯೋಜನೆಯನ್ನು ಆರಂಭಿಸಿತು. ಈಗ ಫೇಮ್ -2 ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್'ಗಳನ್ನು ಖರೀದಿಸಲು ರೂ.212.31 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ.

ಫೇಮ್ ಯೋಜನೆಯಡಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ಸಹ ಸಿದ್ಧಪಡಿಸಲಾಗುತ್ತದೆ. ಫೇಮ್ 2 ಯೋಜನೆಯಡಿಯಲ್ಲಿ ದೇಶದ 65 ನಗರಗಳಲ್ಲಿ 5,565 ಎಲೆಕ್ಟ್ರಿಕ್ ಎಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸಲಾಗುವುದು. ದೇಶದ 26 ರಾಜ್ಯಗಳು ಹಾಗೂಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 15 ಸಾವಿರ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸಲು ಯೋಜಿಸಲಾಗಿದೆ.

ಈ ಬಸ್ಸುಗಳ ಮೂಲಕ ಇಂಟರ್ ಸಿಟಿ, ರೈಲು ಹಾಗೂ ಮೆಟ್ರೋ ನಿಲ್ದಾಣಗಳಿಗೆ ಸಂಚಾರ ಕಲ್ಪಿಸಲಾಗುತ್ತದೆ. ಈ ಯೋಜನೆಯಲ್ಲಿ 5,565 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ರೂ.212.31 ಕೋಟಿ ನೀಡಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಸ್ಮಾರ್ಟ್ ಸಿಟಿ ನಿರ್ಮಾಣಕ್ಕಾಗಿ ಸಾರಿಗೆ ಸಂಪನ್ಮೂಲಗಳನ್ನು ಬದಲಿಸುವುದು ಸಹ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರಣಕ್ಕೆ ಡೀಸೆಲ್‌ನಲ್ಲಿ ಚಲಿಸುವ ಬಸ್‌ಗಳನ್ನು ಸಿಎನ್‌ಜಿ, ಎಲ್‌ಎನ್‌ಜಿ ಹಾಗೂ ಎಲೆಕ್ಟ್ರಿಕ್ ಬಸ್‌ಗಳಿಗೆ ಬದಲಿಸಲಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಒತ್ತು ನೀಡಲಾಗಿದೆ. ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಫೇಮ್ -2 ಯೋಜನೆ ಪ್ರಮುಖ ಕೊಡುಗೆ ನೀಡಲಿದೆ.

ಫೇಮ್ ಯೋಜನೆಯಡಿ ಪ್ರತಿಯೊಂದು ಸ್ಮಾರ್ಟ್ ಸಿಟಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ ನೀಡಲಾಗುತ್ತದೆ. ಇದರ ಜೊತೆಗೆ ತೆರಿಗೆ ವಿನಾಯಿತಿ ಹಾಗೂ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳ ಗ್ರಾಹಕರಿಗೆ ಸಬ್ಸಿಡಿ ನೀಡಲಾಗುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಹಾಗೂ ಅಭಿವೃದ್ಧಿಗಾಗಿ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯು 2015ರ ಏಪ್ರಿಲ್ ತಿಂಗಳಿನಲ್ಲಿ ಫೇಮ್ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗಾಗಿ ನಿಯಮಗಳನ್ನು ರೂಪಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸುವುದು, ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸೃಷ್ಟಿಸುವುದು ಹಾಗೂ ತಂತ್ರಜ್ಞಾನದ ಸಹಾಯದಿಂದ ಎಲೆಕ್ಟ್ರಿಕ್ ವಾಹನಗಳನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫೇಮ್ ಯೋಜನೆಯ ಮೊದಲ ಹಂತವನ್ನು ಏಪ್ರಿಲ್ 2015ರಲ್ಲಿ ಎರಡು ವರ್ಷಗಳ ಅವಧಿಗೆ ಜಾರಿಗೊಳಿಸಲಾಯಿತು. ನಂತರ ಈ ಯೋಜನೆಯನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ಈ ಯೋಜನೆಯ ಮೊದಲ ಹಂತವು 2019ರ ಮಾರ್ಚ್ 31ರಂದು ಪೂರ್ಣಗೊಂಡಿತು.

ಫೇಮ್ -2 ಯೋಜನೆಯ ಗುರಿ ಮುಖ್ಯವಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸುವುದು ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸುವುದು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆಯನ್ನು ಕಡಿಮೆಗೊಳಿಸಲು ಮುಂದಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳಿಗೆ 5%ನಷ್ಟು ಜಿಎಸ್'ಟಿ ವಿಧಿಸಲಾಗುತ್ತಿದ್ದರೆ, ಪೆಟ್ರೋಲ್ ಡೀಸೆಲ್ ವಾಹನಗಳಿಗೆ 28%ನಷ್ಟು ಜಿಎಸ್'ಟಿ ವಿಧಿಸಲಾಗುತ್ತಿದೆ.ಫೇಮ್ - 2 ಯೋಜನೆಯಲ್ಲಿ ಕಮರ್ಷಿಯಲ್ ಎಲೆಕ್ಟ್ರಿಕ್ ತ್ರಿಚಕ್ರ, ಎಲೆಕ್ಟ್ರಿಕ್ ನಾಲ್ಕು ಚಕ್ರ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಯ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಈ ಯೋಜನೆಯ ಮೂಲಕ 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, 5 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನ, 55,000 ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನ ಹಾಗೂ 7,000 ಎಲೆಕ್ಟ್ರಿಕ್ ಬಸ್ಸುಗಳ ಖರೀದಿಗೆ ಸರ್ಕಾರವು ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರವು 2030ರ ವೇಳೆಗೆ 100%ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ಮಹತ್ವಾಕಾಂಕ್ಷೆ ಗುರಿಯನ್ನು ಹೊಂದಿದೆ.