ಫಾಸ್ಟ್‌ಟ್ಯಾಗ್ ಕಡ್ಡಾಯ ಅಳವಡಿಕೆ ವಿಸ್ತರಣೆ ಬಗ್ಗೆ ಸ್ಪಷ್ಟನೆ ನೀಡಿದ ಸಾರಿಗೆ ಸಚಿವ
ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಬೂತ್‌ಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಈ ವರ್ಷದ ಜನವರಿ 1ರಿಂದ ಕಡ್ಡಾಯಗೊಳಿಸಲಾಯಿತು. ವಾಹನ ಸವಾರರ ಹಿತದೃಷ್ಟಿಯಿಂದ ಈ ಗಡುವನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಯಿತು.

ಈ ಗಡುವು ಕೊನೆಯ ಅವಕಾಶವಾಗಿದೆ. ಮತ್ತೊಮ್ಮೆ ಗಡುವನ್ನು ವಿಸ್ತರಿಸುವುದಿಲ್ಲವೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಅನೇಕ ವಾಹನ ಸವಾರರು ಈ ಗಡುವನ್ನು ವಿಸ್ತರಿಸಬಹುದೆಂಬ ನಿರೀಕ್ಷೆಯಲ್ಲಿ ಇನ್ನೂ ಫಾಸ್ಟ್‌ಟ್ಯಾಗ್'ಗಳನ್ನು ಖರೀದಿಸಿಲ್ಲ.

ಈ ಹಿನ್ನೆಲೆಯಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಸಂಸದರು ಕೇಳಿದ ಲಿಖಿತ ಪ್ರಶ್ನೆಗಳಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆಯನ್ನು ನೀಡಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದೇಶಾದ್ಯಂತವಿರುವ ಟೋಲ್'ಗಳಲ್ಲಿ 100%ನಷ್ಟು ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಅಳವಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಅಳವಡಿಸಿಕೊಳ್ಳುವ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮುಂದೆ ಟೋಲ್ ಶುಲ್ಕವನ್ನು ಫಾಸ್ಟ್‌ಟ್ಯಾಗ್'ಗಳ ಮೂಲಕ ಮಾತ್ರ ವಿಧಿಸಲಾಗುತ್ತದೆ. 2020ರ ಡಿಸೆಂಬರ್ ತಿಂಗಳಿನಲ್ಲಿ ಸಂಗ್ರಹವಾದ ಟೋಲ್ ಶುಲ್ಕದಲ್ಲಿ 73.36%ನಷ್ಟು ಟೋಲ್ ಶುಲ್ಕವು ಫಾಸ್ಟ್‌ಟ್ಯಾಗ್ ಮೂಲಕ ಸಂಗ್ರಹವಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಟ್ಟಾರೆಯಾಗಿ ಫಾಸ್ಟ್‌ಟ್ಯಾಗ್ ಮೂಲಕ ರೂ.2,088.26 ಕೋಟಿ ಸಂಗ್ರಹಿಸಲಾಗಿದೆ. ಕಳೆದ ತಿಂಗಳ 12 ನೇ ತಾರೀಖಿನವರೆಗೆ ತಮಿಳುನಾಡಿನಲ್ಲಿ ಒಟ್ಟು 18,64,115 ಫಾಸ್ಟ್‌ಟ್ಯಾಗ್'ಗಳನ್ನು ವಿತರಿಸಲಾಗಿತ್ತು.

ಟೋಲ್ ಪ್ಲಾಜಾಗಳಲ್ಲಿ 100%ನಷ್ಟು ಫಾಸ್ಟ್‌ಟ್ಯಾಗ್'ಗಳನ್ನು ಕಡ್ಡಾಯಗೊಳಿಸಿದಾಗ, ಟೋಲ್ ಪ್ಲಾಜ್ ಬಳಿ ಶುಲ್ಕ ಪಾವತಿಸಲು ವಾಹನಗಳು ಸಾಲುಗಟ್ಟಿನಿಲ್ಲುವುದು ತಪ್ಪುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೋಲ್ ಪ್ಲಾಜಾಗಳಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ತಪ್ಪಿಸಿ, ವಾಹನಗಳು ವೇಗವಾಗಿ ಚಲಿಸುವಂತೆ ಮಾಡಲು ಟೋಲ್ ಪ್ಲಾಜಾಗಳ ಟೋಲ್ ಶುಲ್ಕ ಸಂಗ್ರಹವನ್ನು ಡಿಜಿಟಲ್'ಗೆ ಬದಲಿಸಲಾಗಿದೆ.

ಈ ಕಾರಣಕ್ಕೆ ವಾಹನದ ವಿಂಡ್ ಷೀಲ್ಡ್ ಮೇಲೆ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಅಳವಡಿಸಲಾಗುತ್ತದೆ. ಈ ಸ್ಟಿಕ್ಕರ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾ ಬಳಿ ಹಾದು ಹೋದಾಗ ಅಲ್ಲಿರುವ ಸೆನ್ಸಾರ್'ಗಳು ಆಟೋಮ್ಯಾಟಿಕ್ ಆಗಿ ಟೋಲ್ ಶುಲ್ಕವನ್ನು ಕಡಿತಗೊಳಿಸುತ್ತವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್ ಖಾತೆಯಿಂದ ಕಡಿತಗೊಳ್ಳುವ ಟೋಲ್ ಶುಲ್ಕವು ಸಂಬಂಧಿತ ಟೋಲ್ ಏಜೆನ್ಸಿಗೆ ವರ್ಗಾವಣೆಯಾಗುತ್ತದೆ. ಈ ವಿಧಾನದಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೇ ಕಾಯುವುದು ತಪ್ಪುತ್ತದೆ. ಜೊತೆಗೆ ಇಂಧನ ವ್ಯರ್ಥವಾಗುವುದು ಹಾಗೂ ಮಾಲಿನ್ಯ ಉಂಟಾಗುವುದು ತಪ್ಪುತ್ತದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.


Click it and Unblock the Notifications