Just In
- 1 hr ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 3 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 3 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 3 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಮದು ಪ್ರಮಾಣವನ್ನು ಕಡಿಮೆ ಮಾಡುವಂತೆ ಆಟೋಮೊಬೈಲ್ ಕಂಪನಿಗಳಿಗೆ ಸೂಚಿಸಿದ ನಿತಿನ್ ಗಡ್ಕರಿ
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿದೇಶಿ ಆಮದನ್ನು ಕಡಿಮೆ ಮಾಡಿಕೊಳ್ಳುವಂತೆ ಆಟೋಮೊಬೈಲ್ ಕಂಪನಿಗಳಿಗೆ ಮನವಿ ಮಾಡಿದ್ದಾರೆ. ದುಬಾರಿ ಬೆಲೆಯ ಆಮದನ್ನು ಕಡಿಮೆ ಮಾಡುವ ಮೂಲಕ ವಾಹನ ಕ್ಷೇತ್ರದಲ್ಲಿ ದೇಶಿಯ ಉತ್ಪನ್ನಗಳತ್ತ ಗಮನ ಹರಿಸುವಂತೆ ಅವರು ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಅಭಿಯಾನಕ್ಕಾಗಿ ಆಟೋ ಮೊಬೈಲ್ ಕಂಪನಿಗಳು ಭಾರತದಲ್ಲಿ ಹೊಸದಾಗಿ ಉಪಕರಣಗಳನ್ನು ತಯಾರಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಕಳೆದ ತಿಂಗಳು ನಡೆದ ಕಾರ್ಯಕ್ರಮವೊಂದರಲ್ಲಿ ಆಟೋ ಕಂಪನಿಗಳನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ಆಟೋ ವಲಯದಲ್ಲಿ ಸ್ಥಳೀಯ ಉತ್ಪಾದನೆಯನ್ನು 70%ನಿಂದ 100%ಗೆ ಹೆಚ್ಚಿಸುವಂತೆ ತಿಳಿಸಿದರು.

ಬಿಡಿಭಾಗಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವುದು ಅವಶ್ಯಕವೆಂದು ಅವರು ಹೇಳಿದರು. ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವುದರಿಂದ ವಾಹನ ಉತ್ಪಾದನಾ ವೆಚ್ಚವು ಕಡಿಮೆಯಾಗುವುದರ ಜೊತೆಗೆ ದೇಶದಲ್ಲಿ ಉದ್ಯೋಗವಕಾಶ ಹೆಚ್ಚಲಿದೆ ಎಂದು ಅವರು ಹೇಳಿದರು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕಂಪನಿಗಳು ಬಿಡಿ ಭಾಗಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಳೀಯವಾಗಿಸುವ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವಂತೆ ನಿತಿನ್ ಗಡ್ಕರಿ ವಾಹನ ತಯಾರಕ ಕಂಪನಿಗಳಿಗೆ ಮನವಿ ಮಾಡಿಕೊಂಡರು.

ಆಟೋಮೊಬೈಲ್ ಉದ್ಯಮವು ಈ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರಲು ವಿಫಲವಾದರೆ, ಕೇಂದ್ರ ಸರ್ಕಾರವು ಬಿಡಿ ಭಾಗಗಳ ಆಮದಿನ ಮೇಲೆ ಹೆಚ್ಚಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವ ಬಗ್ಗೆ ನಿರ್ಧರಿಸಲಿದೆ. ಇದರಿಂದ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕೇಂದ್ರ ಸರ್ಕಾರವು ರೂಪಿಸಿರುವ ಯೋಜನೆಯ ಭಾಗವಾಗಿ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಕೇಂದ್ರ ಸಾರಿಗೆ ಇಲಾಖೆಯು ಹೂಡಿಕೆ ಮಾಡುತ್ತಿದೆ ಎಂದು ಗಡ್ಕರಿ ಹೇಳಿದರು.

ಸದ್ಯಕ್ಕೆ ಭಾರತದಲ್ಲಿ ಪ್ರತಿ ದಿನ 34 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ದೇಶವು ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ರಸ್ತೆ ಜಾಲವನ್ನು ಹೊಂದಿದೆ ಎಂದು ಈ ಸಂದರ್ಭದಲ್ಲಿ ನಿತಿನ್ ಗಡ್ಕರಿ ತಿಳಿಸಿದರು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಉದ್ಯಮವು ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) 7%ನಷ್ಟು ಕೊಡುಗೆ ನೀಡುತ್ತದೆ. ವಾಹನ ಉತ್ಪಾದನೆಯ ಸ್ಥಳೀಕರಣವು ದೇಶದ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ, ಉದ್ಯೋಗ ಹೆಚ್ಚಳವು ಜಿಡಿಪಿಯ ಮೇಲೆ ಪರಿಣಾಮ ಬೀರುತ್ತದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು 62 ಮಿಲಿಯನ್ ಎಲೆಕ್ಟ್ರಿಕ್ ಕಾರು ಹಾಗೂ ಬಸ್ಸುಗಳ ಜೊತೆಗೆ 1.5 ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡುತ್ತಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫೇಮ್ 2 ಯೋಜನೆಗಾಗಿ ಬಜೆಟ್'ನಲ್ಲಿ ರೂ.10,000 ಕೋಟಿ ಮೀಸಲಿಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಹೆಚ್ಚಿನ ಸಂಖ್ಯೆಯಲ್ಲಿಚಾರ್ಜಿಂಗ್ ಕೇಂದ್ರಗಳನ್ನು ತೆರೆಯುತ್ತಿದೆ.

ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಎಲ್ಲಾ ಎಲೆಕ್ಟ್ರಿಕ್ ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಸರ್ಕಾರವು ನೋಂದಾಯಿಸುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದರು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಭಾರೀ ಕೈಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ, 2021 ಫೆಬ್ರವರಿ 8ರವರೆಗೆ ದೇಶದಲ್ಲಿ 98 ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಫೇಮ್ 2 ಯೋಜನೆ ಅಡಿಯಲ್ಲಿ ನೋಂದಾಯಿಸಲಾಗಿದೆ.

ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಮೇಲೆ 5% ಜಿಎಸ್‌ಟಿ ವಿಧಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತಿದೆ.