ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಸದ್ಯ ಮಾರಾಟವಾಗುತ್ತಿರುವ ಕಾರುಗಳ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಗಡುವನ್ನು ಸುಮಾರು ನಾಲ್ಕು ತಿಂಗಳವರೆಗೆ ಅಂದರೆ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಕರೋನಾ ವೈರಸ್ ಕಾರಣದಿಂದಾಗಿ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಈ ಗಡುವನ್ನು ವಿಸ್ತರಿಸಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕೆಲ ತಿಂಗಳ ಹಿಂದಷ್ಟೇ ಆದೇಶ ಹೊರಡಿಸಲಾಗಿತ್ತು.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಈ ಮೂಲಕ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ. ಹೊಸದಾಗಿ ಮಾರಾಟವಾಗುವ ಕಾರುಗಳ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಬಗ್ಗೆ ಏಪ್ರಿಲ್ 1ರಂದು ಆದೇಶ ಹೊರಡಿಸಲಾಯಿತು.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಇದೇ ವೇಳೆ ಈಗಾಗಲೇ ಮಾರಾಟದಲ್ಲಿರುವ ಕಾರುಗಳ ಮುಂಭಾಗದಲ್ಲಿ 2 ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಅಳವಡಿಸುವ ಆದೇಶ ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಯಿತು.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಈಗ ಈ ಗಡುವನ್ನು ಡಿಸೆಂಬರ್ 31ರವರೆಗೆ ಸುಮಾರು 4 ತಿಂಗಳುಗಳ ಕಾಲ ವಿಸ್ತರಿಸಲಾಗಿದೆ. ಈಗ ಮಾರಾಟದಲ್ಲಿರುವ ಕಾರುಗಳ ಮುಂಭಾಗದಲ್ಲಿ ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಅಳವಡಿಸಲು ಹೆಚ್ಚುವರಿ ಸಮಯ ನೀಡುವಂತೆ ಭಾರತೀಯ ಆಟೋಮೊಬೈಲ್ ತಯಾರಕರ ಒಕ್ಕೂಟವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಈ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಗಡುವನ್ನು ವಿಸ್ತರಿಸಿದೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಪಘಾತಗಳಾಗುವ ದೇಶಗಳಲ್ಲಿ ಒಂದಾಗಿದೆ. ರಸ್ತೆ ಅಪಘಾತಗಳಿಂದ ಹೆಚ್ಚು ಸಾವನ್ನಪ್ಪುವವರ ಸಂಖ್ಯೆಯು ಭಾರತದಲ್ಲಿ ಹೆಚ್ಚಾಗಿದೆ.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಈ ಕಾರಣಕ್ಕೆ ಭಾರತದಲ್ಲಿ ರಸ್ತೆ ಸುರಕ್ಷತೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಾರುಗಳ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳನ್ನು ಒದಗಿಸುವಂತೆ ಆದೇಶ ಹೊರಡಿಸಲಾಗಿದೆ.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಏರ್‌ಬ್ಯಾಗ್‌ ಪ್ರಮುಖ ಸುರಕ್ಷತಾ ಸಾಧನವಾಗಿದ್ದು, ಕಾರು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರ ಪ್ರಾಣ ಉಳಿಸಲು ನೆರವಾಗುತ್ತದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಏರ್‌ಬ್ಯಾಗ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.

ಕಾರುಗಳ ಮುಂಭಾಗದ ಏರ್‌ಬ್ಯಾಗ್‌ ಅಳವಡಿಕೆ ಗಡುವನ್ನು ವಿಸ್ತರಿಸಿದ ಕೇಂದ್ರ ಸಾರಿಗೆ ಇಲಾಖೆ

ಗಡುವನ್ನು ವಿಸ್ತರಿಸಲಾಗಿದ್ದರೂ ಡಿಸೆಂಬರ್ 31ರ ನಂತರ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಕಾರುಗಳ ಮುಂಭಾಗದಲ್ಲಿ 2 ಏರ್‌ಬ್ಯಾಗ್‌ಗಳು ಕಡ್ಡಾಯವಾಗಿರಲಿವೆ. ಈ ಕ್ರಮಗಳಿಂದ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
Union transport ministry extends deadline for installing front airbags in existing cars. Read in Kannada.
Story first published: Tuesday, June 29, 2021, 12:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X