ವಾಹನ ಮಾಲೀಕರೇ ಇನ್ಮುಂದೆ ದೋಷಯುಕ್ತ ವಾಹನಗಳ ಸಮಸ್ಯೆ ಬಗ್ಗೆ ಚಿಂತಿಸಬೇಕಿಲ್ಲ!

ಇನ್ನು ಮುಂದೆ ವಾಹನ ಮಾಲೀಕರು ದೋಷಯುಕ್ತ ವಾಹನಗಳನ್ನು ಮಾರಾಟ ಮಾಡುವ ಕಂಪನಿಗಳ ವಿರುದ್ಧ ಸರ್ಕಾರಕ್ಕೆ ಸುಲಭವಾಗಿ ದೂರು ನೀಡಬಹುದು. ವಾಹನಗಳ ಮಾಲೀಕರ ಅನುಕೂಲಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ವೆಹಿಕಲ್ ರಿಕಾಲ್ ಪೋರ್ಟಲ್ ಅನ್ನು ಆರಂಭಿಸಿದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಈ ಪೋರ್ಟಲ್'ನಲ್ಲಿ ವಾಹನ ಮಾಲೀಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಬಹುದು. ಈ ಮೂಲಕ ವಾಹನಗಳಿಗೆ ಸಂಬಂಧಿಸಿದ ದೂರುಗಳನ್ನು ಶೀಘ್ರವೇ ಬಗೆಹರಿಸಬಹುದು ಎಂಬುದು ಸರ್ಕಾರದ ಅಭಿಪ್ರಾಯ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಈಗ ಭಾರತದಲ್ಲಿರುವ ವಾಹನ ತಯಾರಕ ಕಂಪನಿಗಳು ಸ್ವಯಂಪ್ರೇರಿತವಾಗಿ ವಾಹನಗಳನ್ನು ರಿಕಾಲ್ ಮಾಡುತ್ತಿವೆ. ವಾಹನಗಳಲ್ಲಿ ಏನಾದರೂ ದೋಷಗಳು ಕಂಡು ಬಂದರೆ ಕಂಪನಿಗಳು ಆ ವಾಹನಗಳನ್ನು ರಿಕಾಲ್ ಮಾಡಿ ಅವುಗಳನ್ನು ಸರಿಪಡಿಸಿ ಗ್ರಾಹಕರಿಗೆ ಹಿಂದಿರುಗಿಸುತ್ತವೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಆದರೆ ಕೆಲವು ಗ್ರಾಹಕರು ರಿಕಾಲ್ ಮಾಡಿದ ನಂತರವೂ ತಮ್ಮ ವಾಹನಗಳನ್ನು ಸರಿಪಡಿಸಿರುವುದಿಲ್ಲವೆಂದು ದೂರುತ್ತಾರೆ. ಇದರಿಂದ ಗ್ರಾಹಕರು ದೋಷಯುಕ್ತ ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತಿದಿನ ಎದುರಿಸಬೇಕಾಗುತ್ತದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಈ ವಾಹನಗಳ ಬಳಕೆಯಿಂದಾಗಿ ರಸ್ತೆ ಅಪಘಾತಗಳ ಸಾಧ್ಯತೆಯೂ ಹೆಚ್ಚಾಗುತ್ತದೆ. ಹೊಸ ವಾಹನ ಮರುಪಡೆಯುವಿಕೆ ನೀತಿಯಡಿಯಲ್ಲಿ, ವಾಹನ ಮಾಲೀಕರು ತಮ್ಮ ವಾಹನಕ್ಕೆ ಸಂಬಂಧಿಸಿದ ಸಮಸ್ಯೆಗಳ ದೂರುಗಳನ್ನು 7 ವರ್ಷಗಳಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ವಾಹನ ಮಾಲೀಕರಿಂದ ಬರುವ ದೂರುಗಳ ಆಧಾರದ ಮೇಲೆ ಕೇಂದ್ರೀಕೃತ ಏಜೆನ್ಸಿಯಾದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (ಎನ್‌ಎಚ್‌ಟಿಎಸ್‌ಎ) ತನಿಖೆ ನಡೆಸಲಿದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಈ ಏಜೆನ್ಸಿ ವಾಹನಗಳನ್ನು ನಿರ್ದಿಷ್ಟ ಸಮಯದೊಳಗೆ ದುರಸ್ತಿ ಪಡಿಸುವಂತೆ ಅಥವಾ ಬದಲಿಸುವಂತೆ ಸೂಚಿಸುತ್ತದೆ. ಕಳೆದ ವರ್ಷ ಸಾರಿಗೆ ಇಲಾಖೆಯು ಮೋಟಾರು ವಾಹನ ಕಾಯ್ದೆಗೆ (1988) ತಿದ್ದುಪಡಿ ಮಾಡಿ ವಾಹನಗಳ ರಿಕಾಲ್'ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಇದರ ಅನ್ವಯ ವಾಹನ ತಯಾರಕ ಕಂಪನಿಗಳು ವಾಹನಗಳಲ್ಲಿ ದೋಷ ಕಂಡುಬಂದಲ್ಲಿ ಕಡ್ಡಾಯವಾಗಿ ವಾಹನ ಮರುಪಡೆಯಬೇಕಾಗುತ್ತದೆ. ಈ ಕಾನೂನಿನ ಪ್ರಕಾರ, ಕಂಪನಿಯು ದೋಷಯುಕ್ತ ವಾಹನವನ್ನು ಮರುಪಡೆಯಲು ನಿರಾಕರಿಸಿದರೆ ಅಥವಾ ಪದೇ ಪದೇ ನಿಯಮಗಳನ್ನು ಉಲ್ಲಂಘಿಸಿದರೆ ರೂ.10 ಲಕ್ಷದಿಂದ ರೂ.10 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ವಾಹನ ಮಾಲೀಕರ ಹಕ್ಕುಗಳನ್ನು ರಕ್ಷಿಸಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೊಸ ನಿಯಮವನ್ನು ಈ ವರ್ಷದ ಏಪ್ರಿಲ್ 1ರಿಂದ ಜಾರಿಗೊಳಿಸಲಾಗಿದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ಈ ನಿಯಮವು ಎಲ್ಲಾ ರೀತಿಯ ವಾಹನಗಳಿಗೂ ಅನ್ವಯವಾಗುತ್ತದೆ. ಅಂದರೆ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಲಘು ವಾಹನಗಳು, ಭಾರೀ ಗಾತ್ರದ ಕಮರ್ಷಿಯಲ್ ವಾಹನಗಳಿಗೆ ಈ ನಿಯಮವು ಅನ್ವಯವಾಗುತ್ತದೆ.

ವಾಹನ ಸವಾರರೇ ಗಮನಿಸಿ: ದೋಷಯುಕ್ತ ವಾಹನಗಳ ಸಮಸ್ಯೆ ಬಗೆಹರಿಸಲಿದೆ ಈ ಪೋರ್ಟಲ್

ವಾಹನಗಳನ್ನು ಮರುಪಡೆಯುವ ಸಂಪೂರ್ಣ ವೆಚ್ಚವನ್ನು ಕಂಪನಿಗಳು ಭರಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. 6 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಅಥವಾ 1 ಲಕ್ಷಕ್ಕಿಂತ ಹೆಚ್ಚಿನ ನಾಲ್ಕು ಚಕ್ರ ವಾಹನಗಳನ್ನು ಮರುಪಡೆಯುವ ಕಂಪನಿಗಳಿಗೆ ದೋಷಯುಕ್ತ ಉತ್ಪನ್ನಗಳನ್ನು ಮಾರಾಟ ಮಾಡಿದ ಕಾರಣಕ್ಕೆ ರೂ.1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ.

Most Read Articles

Kannada
English summary
Union transport ministry launches vehicle recall portal. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X