ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ವಾಹನಗಳ ನೋಂದಣಿ ಪ್ರಮಾಣಪತ್ರದಲ್ಲಿ (ಆರ್‌ಸಿ) ನಾಮಿನಿಗಳನ್ನು ನಮೂದಿಸುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು 1989ರ ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಈ ಬದಲಾವಣೆಗಳಿಂದಾಗಿ ವಾಹನ ಮಾಲೀಕರು ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿಗಳ ಹೆಸರಿನಲ್ಲಿ ಮೋಟಾರು ವಾಹನವನ್ನು ನೋಂದಾಯಿಸಲು ಅಥವಾ ವರ್ಗಾಯಿಸಲು ಸಾಧ್ಯವಾಗಲಿದೆ. ವಾಹನ ಮಾಲೀಕರು ಇನ್ನು ಮುಂದೆ ವಾಹನ ನೋಂದಣಿ ಸಮಯದಲ್ಲಿ ನಾಮಿನಿ ಹೆಸರನ್ನು ನಮೂದಿಸಬಹುದು.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ನೋಂದಣಿ ವೇಳೆ ನಾಮಿನಿಗಳ ಹೆಸರನ್ನು ನಮೂದಿಸಲು ಸಾಧ್ಯವಾಗದಿದ್ದರೆ ಆನ್‌ಲೈನ್ ಮೂಲಕವೂ ನಾಮಿನಿ ಹೆಸರನ್ನು ನಮೂದಿಸಬಹುದು. ಈಗಿರುವ ಪದ್ದತಿಯು ಜಟಿಲವಾಗಿದ್ದು, ದೇಶಾದ್ಯಂತ ವಿಭಿನ್ನವಾಗಿದೆ.

MOSTREAD: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಅಧಿಸೂಚಿತ ನಿಯಮಗಳ ಅಡಿಯಲ್ಲಿ ನಾಮಿನಿಯನ್ನು ನಮೂದಿಸಿದರೆ ವಾಹನ ಮಾಲೀಕರು ನಾಮಿನಿಯ ಗುರುತಿನ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ. ವಾಹನ ಮಾಲೀಕರು ಸಾವಿಗೀಡಾದ ಸಂದರ್ಭದಲ್ಲಿ ನೋಂದಣಿ ಸಮಯದಲ್ಲಿ ವಾಹನ ಮಾಲೀಕರಿಂದ ನೇಮಿಸಲ್ಪಟ್ಟ ವ್ಯಕ್ತಿಯಾಗಿರಲಿ ಅಥವಾ ವಾಹನವನ್ನು ಅನುವಂಶಿಕವಾಗಿ ಪಡೆದ ವ್ಯಕ್ತಿಯಾಗಿರಲಿ ವಾಹನ ಮಾಲೀಕರು ಸಾವನ್ನಪ್ಪಿದ ಮೂರು ತಿಂಗಳವರೆಗೆ ವಾಹನವನ್ನು ಅವರ ಹೆಸರಿಗೆ ವರ್ಗಾಯಿಸಿದ ರೀತಿಯಲ್ಲಿ ಬಳಸಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಇದಕ್ಕಾಗಿ ವಾಹನ ಮಾಲೀಕರು ಸಾವನ್ನಪ್ಪಿದ 30 ದಿನಗಳೊಳಗಾಗಿ ನಾಮಿನಿಗಳು ವಾಹನ ಮಾಲೀಕರ ಸಾವಿನ ಬಗ್ಗೆ ನೋಂದಣಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಇನ್ನು ಮುಂದೆ ಆ ವಾಹನವನ್ನು ಬಳಸುವುದಾಗಿ ತಿಳಿಸಬೇಕಾಗುತ್ತದೆ.

MOSTREAD: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಫಾರಂ 31 ಮೂಲಕ ವಾಹನ ವರ್ಗಾವಣೆ

ವಾಹನ ಮಾಲೀಕರು ಸಾವನ್ನಪ್ಪಿದ ಮೂರು ತಿಂಗಳೊಳಗೆ ವಾಹನದ ಮಾಲೀಕತ್ವವನ್ನು ವರ್ಗಾವಣೆ ಮಾಡಲು ನಾಮಿನಿ ಅಥವಾ ವಾಹನದ ಮಾಲೀಕತ್ವವನ್ನು ಪಡೆದುಕೊಳ್ಳುವ ವ್ಯಕ್ತಿ ನೋಂದಣಿ ಪ್ರಾಧಿಕಾರಕ್ಕೆ ಫಾರಂ 31ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ವಿಚ್ಛೆೇದನ ಅಥವಾ ಆಸ್ತಿ ಹಂಚಿಕೆಯಂತಹ ಸಂದರ್ಭಗಳಲ್ಲಿ, ವಾಹನ ಮಾಲೀಕರು ನಾಮಿನಿ ಬದಲಾವಣೆಗಳನ್ನು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಮೂಲಕ ಮಾಡಬಹುದು.

MOSTREAD: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ವಾಹನ ಮರು ನೋಂದಣಿ ಸುಲಭ

ಕೇಂದ್ರ ಸಾರಿಗೆ ಇಲಾಖೆಯು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರಡಿಯಲ್ಲಿ ವಾಹನ ಮರು ನೋಂದಣಿ ಪ್ರಕ್ರಿಯೆಯನ್ನು ಸರಳೀಕರಿಸಲು ಹೊಸ ವಾಹನ ನೋಂದಣಿ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಹೊಸ ನೋಂದಣಿ ವ್ಯವಸ್ಥೆಯು ರಕ್ಷಣಾ ವಲಯದ ನೌಕರರು, ಕೇಂದ್ರ ಮತ್ತು ರಾಜ್ಯ ನೌಕರರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗಾಗಿ 5ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಚೇರಿಗಳನ್ನು ಹೊಂದಿದೆ.

MOSTREAD: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಇಲಾಖೆಯು ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, ಆ ವಾಹನಗಳಿಗಾಗಿ ಐಎನ್ ಸರಣಿಯ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ವ್ಯವಸ್ಥೆಯನ್ನು ಸದ್ಯಕ್ಕೆ ಪ್ರಾಯೋಗಿಕ ಯೋಜನೆಯಾಗಿ ಬಳಸಲಾಗುತ್ತದೆ.

ವಾಹನಗಳ ನಾಮಿನಿ ನಮೂದು ಪ್ರಕ್ರಿಯೆಯನ್ನು ಸುಲಭವಾಗಿಸಿದ ಕೇಂದ್ರ ಸಾರಿಗೆ ಇಲಾಖೆ

ಇದರ ಅಡಿಯಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆಯಾಗುವ ನೌಕರರ ವಾಹನಗಳನ್ನು ನೋಂದಣಿ ಮಾಡಲು ಐಎನ್ ಸರಣಿ ಬಳಕೆಯನ್ನು ಪ್ರಸ್ತಾಪಿಸಲಾಗಿದೆ.

Most Read Articles

Kannada
English summary
Union transport ministry makes new guidelines for vehicle registration nominee. Read in Kannada.
Story first published: Monday, May 3, 2021, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X