ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಕರೋನಾ ಸಮಸ್ಯೆಯು ಅಂತರರಾಷ್ಟ್ರೀಯ ವಿಮಾನ ಯಾನದ ಮೇಲೆ ಪ್ರಮುಖ ಪರಿಣಾಮ ಬೀರುತ್ತಿದೆ. ಇದರಿಂದಾಗಿ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರು ಭಾರತಕ್ಕೆ ಮರಳಲು ಸಮಸ್ಯೆ ಎದುರಿಸುವಂತಾಗಿದೆ.

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಈ ಹಿನ್ನೆಲೆಯಲ್ಲಿ ವಿದೇಶದಲ್ಲಿ ವಾಸಿಸುವ ಭಾರತೀಯರಿಗಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಹೊಸ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯನ್ವಯ ವಿದೇಶದಲ್ಲಿ ವಾಸಿಸುವ ಭಾರತೀಯರು ಬಳಸುತ್ತಿರುವ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ಅವಧಿ ಮೀರಿದರೆ ಅದನ್ನು ಹಾಗೆಯೇ ನವೀಕರಿಸಲಾಗುವುದು.

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಸಂಬಂಧಪಟ್ಟ ದೇಶದ ಭಾರತೀಯ ರಾಯಭಾರ ಕಚೇರಿ ಮೂಲಕ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ನವೀಕರಿಸಲು ಅನುಕೂಲ ಮಾಡಿಕೊಡಲಾಗಿದೆ. ಅದರಂತೆ ಮಾಹಿತಿಯನ್ನು ರಾಯಭಾರ ಕಚೇರಿ ಮೂಲಕ ವಾಹನ ವೆಬ್‌ಸೈಟ್ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ರವಾನಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಅಲ್ಲಿ ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣದ ಕಾರ್ಯವಿಧಾನಗಳನ್ನು ಪರಿಶೀಲಿಸಿದ ನಂತರ ಪರವಾನಗಿಯನ್ನು ನವೀಕರಿಸಲಾಗುವುದು. ನವೀಕರಣಗೊಂಡ ಹೊಸ ಅಂತರರಾಷ್ಟ್ರೀಯ ಚಾಲಕರ ಪರವಾನಗಿಯನ್ನು ವಿದೇಶದಲ್ಲಿರುವ ವಿಳಾಸಕ್ಕೆ ಮೇಲ್ ಮಾಡಲಾಗುತ್ತದೆ.

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಇದರಿಂದಾಗಿ ಎರಡು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ನವೀಕರಿಸಲು ಅರ್ಜಿದಾರರು ವೀಸಾ ಹಾಗೂ ವೈದ್ಯಕೀಯ ಪ್ರಮಾಣಪತ್ರ ಎರಡನ್ನೂ ಸಲ್ಲಿಸುವುದು ತಪ್ಪುತ್ತದೆ ಎಂದು ತಿಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಹೀಗಾಗಿ ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ತಮ್ಮ ಅವಧಿ ಮೀರಿದ ಅಥವಾ ಅವಧಿ ಮೀರುತ್ತಿರುವ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಸುಲಭವಾಗಿ ನವೀಕರಿಸಿಕೊಳ್ಳಲು ಸಾಧ್ಯವಾಗಲಿದೆ.

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಚಾಲಕರ ಪರವಾನಗಿಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿದ್ದರೂ, ಅಂತರರಾಷ್ಟ್ರೀಯ ಚಾಲನಾ ಪರವಾನಗಿಗೆ ಮಾತ್ರ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲವೆಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆಯು ತಿಳಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನವೀಕರಣವನ್ನು ಸರಳಗೊಳಿಸಿದ ಕೇಂದ್ರ ಸರ್ಕಾರ

ಕೆಲವು ದೇಶಗಳು ಭಾರತೀಯರಿಗೆ ತಕ್ಷಣವೇ ವೀಸಾ ನೀಡುತ್ತವೆ. ವಿದೇಶಗಳಲ್ಲಿರುವ ಭಾರತೀಯರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಆ ದೇಶಗಳು ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿವೆ. ಈ ನಿರ್ಧಾರವು ವಿದೇಶದಲ್ಲಿ ವಾಸಿಸುವ ಭಾರತೀಯರಿಗೆ ನಿಜಕ್ಕೂ ವರದಾನವಾಗಲಿದೆ. ಅವಧಿ ಮೀರಿದ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ವಿದೇಶದಲ್ಲಿದ್ದ ಕಾರಣ ನವೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ಗಮನಾರ್ಹ.

Most Read Articles

Kannada
English summary
Union transport ministry makes renewal of international driving license easier. Read in Kannada.
Story first published: Wednesday, January 13, 2021, 13:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X