ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಭಾರತದಲ್ಲಿ ತರಬೇತಿ ಪಡೆದ ಟ್ರಕ್ ಡ್ರೈವರ್‌ಗಳ ಕೊರತೆಯಿದೆ. ಜೊತೆಗೆ ಭಾರತೀಯ ಟ್ರಕ್ ಡ್ರೈವರ್‌ಗಳ ಕೆಲಸವು ಯುರೋಪ್ ಹಾಗೂ ಅಮೆರಿಕಾ ಟ್ರಕ್ ಡ್ರೈವರ್‌ಗಳಿಗಿಂತ ಹೆಚ್ಚು ಸವಾಲಿನಿಂದ ಕೂಡಿದೆ. ಈ ಬಗ್ಗೆ ಲಾತೂರ್‌ನ ಫೀನಿಕ್ಸ್ ಟ್ರಕ್ ಡ್ರೈವಿಂಗ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ, ಭಾರತೀಯ ಟ್ರಕ್ ಚಾಲಕರ ಕಷ್ಟಕರ ಕೆಲಸದ ಪರಿಸ್ಥಿತಿಗಳನ್ನು ಎತ್ತಿ ತೋರಿಸಿದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಯುರೋಪಿಯನ್ ದೇಶಗಳಿಗಿಂತ ಭಿನ್ನವಾಗಿ ಭಾರತೀಯ ಚಾಲಕರು ವಿವಿಧ ಅಡೆತಡೆಗಳನ್ನು ಎದುರಿಸುವಾಗ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಎತ್ತಿ ತೋರಿಸಿದರು. ಯುರೋಪಿಯನ್ ದೇಶಗಳಲ್ಲಿ ಚಾಲಕರು ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಾರೆ, ಆದರೆ ಭಾರತದಲ್ಲಿ ಅವರು ದಿನಕ್ಕೆ 12 ರಿಂದ 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಭಾರತದಲ್ಲಿ ಟ್ರಕ್ ಚಾಲಕರ್‌ಗಳು 48 ಡಿಗ್ರಿ ಸೆಲ್ಸಿಯಸ್‌ನಂತಹ ಹೆಚ್ಚಿನ ತಾಪಮಾನದಲ್ಲಿಯೂ ಟ್ರಕ್ ಚಾಲನೆ ಮಾಡಬೇಕಾಗುತ್ತದೆ. ಇದರ ಜೊತೆಗೆ ದೇಶದಲ್ಲಿ ಮಾರಾಟವಾಗುವ ಬಹುತೇಕ ಟ್ರಕ್‌ಗಳು ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ಹೊಂದಿಲ್ಲ. ದೇಶದ ಸಾರಿಗೆ ವಲಯವು ಟ್ರಕ್ ಚಾಲಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಇದೇ ವೇಳೆ ನಿತಿನ್ ಗಡ್ಕರಿ ಹೇಳಿದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಸದ್ಯಕ್ಕೆ ದೇಶದಲ್ಲಿ 22 ಲಕ್ಷ ತರಬೇತಿ ಪಡೆದ ಟ್ರಕ್ ಚಾಲಕರ ಕೊರತೆಯಿದ್ದು, ಈ ಕೊರತೆಯನ್ನು ನೀಗಿಸಲು, ಮುಂಬರುವ ವರ್ಷಗಳಲ್ಲಿ 80 ಚಾಲನಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಗಡ್ಕರಿ ತಿಳಿಸಿದರು. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಬಗ್ಗೆ ಮಾತನಾಡಿದ ನಿತಿನ್ ಗಡ್ಕರಿ, ಭಾರತದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಅವರಲ್ಲಿ ಬಹುತೇಕ ಜನರು 18 - 25 ವರ್ಷ ವಯಸ್ಸಿನವರು ಎಂದು ಹೇಳಿದರು. ನಿತಿನ್ ಗಡ್ಕರಿ ರವರು ಈ ಹಿಂದೆ ಹಲವು ಬಾರಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಒತ್ತಿ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ತಾಲ್ಲೂಕು ಮಟ್ಟದಲ್ಲಿ 80 ಚಾಲಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ದೇಶದಲ್ಲಿರುವ ಬ್ಲಾಕ್ ಸ್ಪಾಟ್'ಗಳ ದುರಸ್ತಿಗಾಗಿ ಕೇಂದ್ರ ಸಾರಿಗೆ ಇಲಾಖೆಯು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಹಾಗೂ ವಿಶ್ವ ಬ್ಯಾಂಕ್ ಮೂಲಕ ರೂ. 15,000 ಕೋಟಿ ಒದಗಿಸಿದೆ. 2025 ರ ವೇಳೆಗೆ ದೇಶದಾದ್ಯಂತ ರಸ್ತೆ ಅಪಘಾತಗಳ ಪ್ರಮಾಣವನ್ನು 50% ನಷ್ಟು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಚಾಲಕರಿಗೆ ತರಬೇತಿ ನೀಡುವ ಸಂಸ್ಥೆಗಳ ಹೊರತಾಗಿ, ಅಪಘಾತ ಹಾಗೂ ಸಾವು ನೋವುಗಳನ್ನು ಕಡಿಮೆ ಮಾಡಲು ಜಾಗೃತಿ ಕಾರ್ಯಕ್ರಮಗಳ ಹಾಗೂ ಸುರಕ್ಷಿತ ವಾಹನಗಳ ಅಗತ್ಯವಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ದೇಶದ ರಸ್ತೆಗಳಲ್ಲಿ ಶೂನ್ಯ ರಸ್ತೆ ಅಪಘಾತ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ 14 ರಾಜ್ಯಗಳನ್ನು ಕೇಂದ್ರ ಸಾರಿಗೆ ಇಲಾಖೆಯು ಗುರುತಿಸಿದೆ.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಈ ರಾಜ್ಯಗಳಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ರೂ. 7,270 ಕೋಟಿ ಮೀಸಲಿಡಲಾಗಿದೆ. ಈ ಹದಿನಾಲ್ಕು ರಾಜ್ಯಗಳು ದೇಶದಲ್ಲಿ ಸಂಭವಿಸುವ ಒಟ್ಟು ರಸ್ತೆ ಅಪಘಾತಗಳಲ್ಲಿ 85% ನಷ್ಟು ಪಾಲನ್ನು ಹೊಂದಿವೆ. ಈ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ಬಿಹಾರ, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ ಹಾಗೂ ಅಸ್ಸಾಂ ರಾಜ್ಯಗಳು ಸೇರಿವೆ. ಈ ರಾಜ್ಯಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಗುರಿಯನ್ನು ಹೊಂದಲಾಗಿದೆ

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ತಳಮಟ್ಟದಲ್ಲಿ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ಈ ಯೋಜನೆಯು ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡುತ್ತದೆ. 2019 ರಲ್ಲಿ ಭಾರತದಲ್ಲಿ ಸಂಭವಿಸಿರುವ 4.49 ಲಕ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 1.51 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ರಸ್ತೆ ಅಪಘಾತಗಳಿಂದ ಸಂಭವಿಸಿರುವ ಒಟ್ಟು ಸಾವುಗಳಲ್ಲಿ 1,27,379 ಪ್ರಕರಣಗಳು ಈ 14 ರಾಜ್ಯಗಳಿಂದ ವರದಿಯಾಗಿದೆ. ಕಳೆದ ಐದು ವರ್ಷಗಳಿಂದ ಸಾವಿನ ಸಂಖ್ಯೆ ಸ್ಥಿರವಾಗಿದೆ. ಕಳೆದ ವರ್ಷ ಕೋವಿಡ್ 19 ಲಾಕ್‌ಡೌನ್‌ ನಡುವೆಯೂ ದೇಶಾದ್ಯಂತ 1.32 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿವೆ. ಇತ್ತೀಚಿಗೆ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಐಸಿಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲು ಸರ್ಕಾರವು ಜನರನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಪರ್ಯಾಯ ಇಂಧನಗಳಾದ ಎಥೆನಾಲ್, ಬಯೋ - ಎಲ್‌ಎನ್‌ಜಿ ಹಾಗೂ ಹಸಿರು ಹೈಡ್ರೋಜನ್ ವಾಹನಗಳ ಬಳಕೆಯನ್ನು ಸಹ ಸರ್ಕಾರವು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದರು.

ಟ್ರಕ್ ಚಾಲಕರಿಗಾಗಿ ಚಾಲನಾ ಕೇಂದ್ರ ತೆರೆಯಲು ಮುಂದಾದ ಕೇಂದ್ರ ಸರ್ಕಾರ

ಯಾವುದೇ ಕಾರಣಕ್ಕೂ ಐ‌ಸಿ‌ಇ (ಇಂಟರ್ನಲ್ ಕಂಬಸ್ಜನ್ ಎಂಜಿನ್) ವಾಹನಗಳ ನೋಂದಣಿಯನ್ನು ನಿಲ್ಲಿಸುವುದಿಲ್ಲವೆಂದು ಇದೇ ವೇಳೆ ನಿತಿನ್ ಗಡ್ಕರಿರವರು ಸ್ಪಷ್ಟನೆ ನೀಡಿದ್ದರು. ಕೆಲವು ದಿನಗಳ ಹಿಂದಷ್ಟೇ ಕಾಮಗಾರಿ ಹಂತದಲ್ಲಿರುವ ಹೆದ್ದಾರಿಯೊಂದಕ್ಕೆ ಗಡ್ಕರಿರವರು ಕಾರಿನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದರು.

Most Read Articles

Kannada
English summary
Union transport ministry to open driving training institutes for truck drivers details
Story first published: Friday, November 26, 2021, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X