ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಮುಂಬರುವ ಹಬ್ಬದ ಋುತುವಿನಲ್ಲಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ತಮ್ಮ ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆ ಮಾಡುತ್ತಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಪ್ರಮುಖ ಕಾರು ಉತ್ಪಾದನಾ ಕಂಪನಿಗಳ ನಾಲ್ಕು ಹೊಸ ಕಾರುಗಳು ರಸ್ತೆಗಿಳಿಯಲು ಸಜ್ಜಾಗಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಕಳೆದ ವರ್ಷಕ್ಕೆ ಬಿಡುಗಡೆಯಾಗಬೇಕಿದ್ದ ಪ್ರಮುಖ ಕಾರುಗಳು ಕೋವಿಡ್ ಪರಿಣಾಮ ಬಿಡುಗಡೆ ಯೋಜನೆ ಮುಂದೂಡುತ್ತಾ ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರುಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಪ್ರಮುಖ ಕಾರು ಕಂಪನಿಗಳು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸಿವೆ. ಇದರಲ್ಲಿ ಶೀಘ್ರದಲ್ಲೇ ಬಿಡುಗಡೆಗಾಗಿ ಸಿದ್ದವಾಗಿರುವ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

Volkswagen Taigun ಕಂಪ್ಯಾಕ್ಟ್ ಎಸ್‌ಯುವಿ

ಬಿಡುಗಡೆಯಾಗಲಿರುವ ಹೊಸ ಕಾರುಗಳಲ್ಲಿ Volkswagen India ಕಂಪನಿಯ ತನ್ನ ಹೊಚ್ಚ ಹೊಸ Taigun ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದು, ಅನಾವರಣಗೊಂಡಿರುವ ಹೊಸ ಕಾರು ಇದೇ ತಿಂಗಳು 24ರಂದು ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಹೊಸ Taigun ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆ ಅನುಸಾರವಾಗಿ ಸ್ಟ್ಯಾಂಡರ್ಡ್ ಮತ್ತು ಜಿಟಿ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, 1.0-ಲೀಟರ್ ಟಿಎಸ್ಐ ಪೆಟ್ರೋಲ್ ಮತ್ತು 1.5-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಒಂದೇ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಹಂಚಿಕೊಂಡಿರುವ Kushaq ಮತ್ತು Taigun ಕಾರುಗಳು ಬ್ರಾಂಡ್ ಬ್ಯಾಡ್ಜ್ ಮತ್ತು ಕಾರಿನ ವಿನ್ಯಾಸಗಳು ಹೊರತುಪಡಿಸಿ ಉಳಿದೆಲ್ಲಾ ತಾಂತ್ರಿಕ ವೈಶಿಷ್ಟ್ಯತೆಗಳು, ಎಂಜಿನ್ ಆಯ್ಕೆಯು ಒಂದೇ ಮಾದರಿಯಾಗಿದ್ದು, ಬೆಲೆಯು ಕೂಡಾ Kushaq ಕಾರಿಗಿಂತಲೂ ತುಸು ಕಡಿಮೆಯಾಗಿರಬಹುದು ಎನ್ನಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

Tata Punch ಮೈಕ್ರೊ ಎಸ್‌ಯುವಿ

ALFA-ARC ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ ಆಧರಿಸಿರುವ Tata Punch ಮೈಕ್ರೊ ಎಸ್‌ಯುವಿ ಮಾದರಿಯು ಎಂಟ್ರಿ ಲೆವಲ್ ಕಾರು ಮಾದರಿಯಲ್ಲೇ ಹಲವಾರು ಹೊಸ ಸುಧಾರಿತ ತಂತ್ರಜ್ಞಾನ ಪ್ರೇರಣೆ ಪಡೆದುಕೊಂಡಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಹೊಸ ಕಾರು ಆಕರ್ಷಕ ವಿನ್ಯಾಸ, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಸೆಗ್ಮೆಂಟ್ ಬೆಸ್ಟ್ ಫಿಚರ್ಸ್, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ಸೇರಿದಂತೆ ಹಲವು ವಿಶೇಷತೆಗಳನ್ನು ಪಡೆದುಕೊಂಡಿದ್ದು, ಹೊಸ ಕಾರು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲಿ ಅತ್ಯುತ್ತಮ ಡಿಸೈನ್ ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಪಂಚ್ ಕಾರು ಮಾರುತಿ ಇಗ್ನಿಸ್, ಹ್ಯುಂಡೈ ಸ್ಯಾಂಟ್ರೊ ಜೊತೆಗೆ ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳ ಎಂಟ್ರಿ ಲೆವಲ್ ವೆರಿಯೆಂಟ್ ಪೈಪೋಟಿ ನೀಡುವ ನೀರಿಕ್ಷೆಯಿದ್ದು, ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 4.90 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

2021 Force Gurkha ಆಫ್ ರೋಡ್ ಎಸ್‌ಯುವಿ

ಬಹುನೀರಿಿಕ್ಷಿತ 2021ರ Gurkha ಬಿಎಸ್-6 ಆವೃತ್ತಿಯು ಕೋವಿಡ್ ಕಾರಣಕ್ಕಾಗಿ ವಿಳಂಬವಾಗಿ ಬಿಡುಗಡೆಯಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ ಕಾರಿನ ಟೀಸರ್ ಬಹಿರಂಗವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ Gurkha ಎಸ್‌ಯುವಿಯನ್ನು Force Motors ಕಂಪನಿಯು ಉನ್ನತೀಕರಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಬಿಎಸ್-6 ಎಮಿಷನ್ ನಿಯಮದೊಂದಿಗೆ ಉನ್ನತೀಕರಣಗೊಂಡಿರುವ Force Gurkha ಕಾರು ಮಾದರಿಯು ಪ್ರತಿಸ್ಪರ್ಧಿ ಮಾದರಿಗಿಂತಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಣೆ ಹೊಂದಿರಲಿದ್ದು, ಆಫ್-ರೋಡ್ ಕೌಶಲ್ಯತೆಗೆ ಪೂರಕವಾದ ಹಲವು ಹೊಸ ತಾಂತ್ರಿಕ ಅಂಶಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಪರ್ಫಾಮೆನ್ಸ್‌ಗೆ ಪೂರಕವಾದ ಬಲಿಷ್ಠವಾದ ಎಂಜಿನ್ ಆಯ್ಕೆಯು ಆಫ್ ರೋಡ್ ಖದರ್‌ಗೆ ಸಹಕಾರಿಯಾಗಿದ್ದು, ಹೊಸ ಕಾರು ಹಳೆಯ ಮಾದರಿಗಿಂತಲೂ ಉತ್ತಮ ಹೊರವಿನ್ಯಾಸದೊಂದಿಗೆ ಪ್ರೀಮಿಯಂ ಮಾದರಿಯಾಗಿ ಮಿಂಚಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

Ford Ecosport ಫೇಸ್‌ಲಿಫ್ಟ್ ವರ್ಷನ್

Ford India ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ Ecosport ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಈ ತಿಂಗಳಾಂತ್ಯಕ್ಕೆ ಬಿಡುಗಡೆಗೆ ಸಿದ್ದವಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ವಿವಿಧ ಕಾರು ಸರಣಿಗಳಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿರುವ Ford ಕಂಪನಿಯು ಹೊಸ ಬದಲಾವಣೆಗಳ ಮೂಲಕ ಗ್ರಾಹಕರ ಬೇಡಿಕೆಯಲ್ಲಿ ಮತ್ತೆ ಮುಂಚೂಣಿ ಸಾಧಿಸುವ ತವಕದಲ್ಲಿದ್ದು, Ecosport ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಸಹ ಭಾರೀ ಬದಲಾವಣೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಈ ನಾಲ್ಕು ಹೊಸ ಕಾರುಗಳು!

ಭಾರತದಲ್ಲಿ ಸದ್ಯ ಮಾರಾಟವಾಗುತ್ತಿರುವ ಬಿಎಸ್-6 Ecosport ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರಿನಲ್ಲಿ ಆಟೋಮ್ಯಾಟಿಕ್ ಆವೃತ್ತಿಗಾಗಿ ಸೆಲೆಕ್ಟ್ ಶಿಫ್ಟ್ ಟೆಕ್ನಾಲಜಿ ಆಧಾರಿತ ಎಎಂಟಿ ಗೇರ್‌ಬಾಕ್ಸ್ ಜೊತೆಗೆ ಮ್ಯಾನುವಲ್ ಆಗಿ ನಿಯಂತ್ರಣ ಮಾಡಬಹುದಾದ ಸ್ಪೋರ್ಟ್ ಬಟನ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯಗಳನ್ನು ನೀಡಲಾಗುತ್ತದೆ.

Most Read Articles

Kannada
English summary
Upcoming car launches in 2021 september.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X