ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಬ್ರಿಟಿಷ್ ಕಾರು ತಯಾರಕರ ಕಂಪನಿಯಾದ MG Motor ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದೆ. MG Motor India ಕಂಪನಿಯು ಎಂಜಿ ಆಸ್ಟರ್ ಬಿಡುಗಡೆಗೊಳಿಸಿದ ಬಳಿಕ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ, ಕಾಂಪ್ಯಾಕ್ಟ್ ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

MG ಕಂಪನಿಯು ತನ್ನ ಎಲೆಕ್ಟ್ರಿಕ್ ಮಾದರಿಗಳ ಸರಣಿಯನ್ನು ವಿಸ್ತರಿಸುತ್ತದೆ. MG ಕಂಪನಿಯು ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಎರಡೂ ಮಾದರಿಗಳು 2024ರ ನಂತರ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ. ಮುಂಬರುವ ಎಂಜಿ ಇವಿಗಳ ಬೆಲೆ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಇನ್ನು ಈ ಎರಡು ಮಾದರಿಗಳು SAIC ನ Baojun E200 ಮಾದರಿಗಳ ಆರ್ಕಿಟೆಕ್ಚರ್ ಅನ್ನು ಹೊಂದಿರುತ್ತದೆ. ಇವುಗಳು ಚೀನೀ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಈ ಕಾಂಪ್ಯಾಕ್ಟ್ ಎಸ್‍ಯುವಿ ಎಲೆಕ್ಟ್ರಿಕ್ ಮಾದರಿಯ ಪವರ್‌ಟ್ರೇನ್ ಸಿಸ್ಟಂ, 39 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿರುತ್ತದೆ. ಎನ್ಇಡಿಸಿ (ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್) ಟೆಸ್ಟ್ ಪ್ರಕಾರ, ಪೂರ್ಣ ಪ್ರಮಾಣದ ಚಾರ್ಜ್‌ನಲ್ಲಿ 210-270 ಕಿಮೀ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಇನ್ನು ಎರಡು ಸೀಟುಗಳ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು 100kmph ಗರಿಷ್ಠ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಇದು ಮೋಟಾರಿನ ಎರಡು ಭಾಗಗಳನ್ನು ಮತ್ತು ಪ್ರಸರಣ ಶಬ್ದ ಮತ್ತು ಮೋಟಾರ್ ಕಂಪನಕ್ಕಾಗಿ ರಿಡ್ಯೂಸರ್ ಅನ್ನು ಸಂಯೋಜಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

Baojun E200 ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿದೆ ಮತ್ತು ರಿಮೋಟ್ ಇಂಟರಾಕ್ಟಿವ್ ಸಿಸ್ಟಂ ಅನ್ನು ಹೊಂದಿದ್ದು, ಅದು ಬಳಕೆದಾರರಿಗೆ ಪಾರ್ಕಿಂಗ್ ನ್ಯಾವಿಗೇಷನ್, ಚಾರ್ಜಿಂಗ್, ವಿದ್ಯುತ್ ಪೂರೈಕೆ, ವಾಹನ ತಪಾಸಣೆ ಮತ್ತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಇದು 11 ಸ್ಟೋರೇಂಜ್ ಸ್ಪೇಸ್ ಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಕಾರ್ಡ್ ಸ್ಲಾಟ್‌ಗಳು, ವಿಶೇಷ ಕೊಕ್ಕೆಗಳು, ಆರ್ಮ್‌ರೆಸ್ಟ್‌ಗಳಲ್ಲಿ ಸ್ಲಾಟ್‌ಗಳು ಮತ್ತು ಪ್ರಯಾಣಿಕರ ಸೀಟಿನಲ್ಲಿ ಮರೆಮಾಡಿದ ಜಾಗವನ್ನು ಒಳಗೊಂಡಿದೆ. ದೊಡ್ಡ ವಸ್ತುಗಳಿಗೆ ಜಾಗವನ್ನು ಸೃಷ್ಟಿಸಲು ಒಬ್ಬರು ಅದರ ಹಿಂದಿನ ಪ್ರಯಾಣಿಕರ ಸೀಟನ್ನು ಮುಂದಕ್ಕೆ ಮಡಚಬಹುದು. ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು ಕಡಿಮೆ ಶಬ್ದದ ಕಂಪ್ರೆಸರ್ ಮತ್ತು ಕಡಿಮೆ ಶಬ್ದದ ಫ್ಯಾನ್ ಹೊಂದಿರುವ ಎಸಿ ಯುನಿಟ್ ಅನ್ನು ಹೊಂದಿದೆ

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

MG ZS EV ಗೆ ಹೋಲಿಸಿದರೆ, ಮುಂಬರುವ ಕೈಗೆಟುಕುವ MG ಎಲೆಕ್ಟ್ರಿಕ್ ಕಾರುಗಳು ಸಣ್ಣ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತವೆ ಮತ್ತು ಕಡಿಮೆ ರೇಂಜ್ ಅಬ್ಬು ನೀಡುತ್ತವೆ. ದೈನಂದಿನ ನಗರ ಪ್ರಯಾಣದ ಉದ್ದೇಶಗಳನ್ನು ಪೂರೈಸಲು ಇದು ಸಾಕಷ್ಟು ಉತ್ತಮವಾಗಿರುತ್ತದೆ. ಕಾರು ತಯಾರಕರು ಭಾರತದಲ್ಲಿ ಇವಿಗಳು "ಉತ್ತಮ ಕಾರ್ಯಕ್ಷಮತೆ, ವಿನ್ಯಾಸ ಮತ್ತು ಗ್ರೌಂಡ್ ಕ್ಲಿಯರೆನ್ಸ್" ಅನ್ನು ನೀಡಬೇಕೆಂದು ನಂಬಿರುವಂತೆ,

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಇನ್ನು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಳೆದ ತಿಂಗಳು ಎಂಜಿ ಮೋಟರ್ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಗೆ 600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಈ ವಿಷಯವನ್ನು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ ಅವರು ಟ್ವೀಟ್ ಮಾಡಿ ಹೇಳಿದ್ದಾರೆ. ಇದು ಎಂಜಿನ್ ಜೆಡ್ಎಸ್ ಎಲೆಕ್ಟ್ರಿಕ್ ಕಾರಿಗೆ ಪಡೆದ ಬುಕ್ಕಿಂಗ್ ನಲ್ಲಿ ಅತ್ಯಧಿಕವಾಗಿದೆ. ಜನರು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುತ್ತಿದ್ದಾರೆ ಎಂದು ತಿಳಿದು ಬರುತ್ತದೆ. ಎಂಜಿ ಮೋಟಾರ್ ಇಂಡಿಯಾ ಕಳೆದ ವರ್ಷ ಜನವರಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯಾದ ಜೆಡ್ಎಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಆ ಸಮಯದಲ್ಲಿ ದೇಶದಲ್ಲಿ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿ ಈ ZS EV ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ MG ZS EV ಮಾದರಿಯ ಆರಂಭಿಕ ಬೆಲೆಯು ರೂ, 20.99 ಲಕ್ಷಗಳಾಗಿದೆ, ಈ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಹ್ಯುಂಡೈ ಕ್ರೆಟಾದಷ್ಟು ದೊಡ್ಡದಾಗಿದೆ, ಇದರ ಉದ್ದ 4,314 ಎಂಎಂ, ಅಗಲ 1,809 ಎಂಎಂ ಮತ್ತು ಎತ್ತರ 1,644 ಎಂಎಂ ಆಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಈ MG ZS EV ಮಾದರಿಯಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿ. ಇದನ್ನು ಮೂರು-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಜೋಡಿಸಲಾಗಿದೆ. ಇದು ಒಟ್ಟು 142.7 ಬಿಹೆಚ್‍ಪಿ ಮತ್ತು ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿವೆ ಕೈಗೆಟುಕುವ ದರದ MG ಎಲೆಕ್ಟ್ರಿಕ್ ಕಾರುಗಳು

ಮುಂಬರುವ MG ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಹೊಸ MG ಎಲೆಕ್ಟ್ರಿಕ್ ಕಾರುಗಳು ಹೆಚ್ಚಾಗಿ ಸಿಟಿ ಜನರನ್ನು ಗುರಿಯಾಗಿಸಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ನಿರೀಕ್ಷಿಸುತ್ತೇವೆ. ಮುಂದಿನ ದಿನಗಳಲ್ಲಿ ಹೊಸ MG ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ,

Most Read Articles

Kannada
English summary
Upcoming mg electric compact suv and hatchback india launch details
Story first published: Wednesday, August 25, 2021, 19:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X