ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಎಂಪಿವಿ ವಿಭಾಗವು ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಇದರ ನಡುವೆ ಹಲವು ಜನಪ್ರಿಯ ಕಂಪನಿಗಳು ಎಂಪಿವಿ ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಎಂಪಿವಿ ಕಾರುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಮಾರುತಿ ಎಕ್ಸ್‌ಎಲ್6

ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಎಕ್ಸ್‌ಎಲ್6 ಅನ್ನು ಜನವರಿ 2022 ರಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ವರದಿಗಳಾಗಿದೆ. ಈ ಮಾದರಿಯು ಒಳಗೆ ಮತ್ತು ಹೊರಗೆ ಸಣ್ಣ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಕಂಪನಿಯು ಇಂಡೋನೇಷಿಯನ್ ಮಾರುಕಟ್ಟೆಯಲ್ಲಿ ಸುಜುಕಿ ಎಕ್ಸ್‌ಎಲ್ 7 ಎಂದು ಮಾರಾಟವಾಗುವ ಎಕ್ಸ್‌ಎಲ್6 7 ಸೀಟುಗಳ ಆವೃತ್ತಿಯನ್ನು ತರಬಹುದು.ಮಾರುತಿ ಎಕ್ಸ್‌ಎಲ್6 ಅರೆನಾ ಮೂಲಕ ಮಾರಾಟವಾಗುವ ಎರ್ಟಿಗಾವನ್ನು ಆಧರಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಪ್ರಸ್ತುತ ತಲೆಮಾರಿನ ಎರ್ಟಿಗಾದ ನಂತರ ಮಾರುತಿ ಎಕ್ಸ್‌ಎಲ್6 ಎಂಪಿವಿಯನ್ನು 2019 ರಲ್ಲಿ ಬಿಡುಗಡೆ ಮಾಡಿತು. ವಿನ್ಯಾಸದ ದೃಷ್ಟಿಯಿಂದ, ಎರ್ಟಿಗಾಕ್ಕಿಂತ ಎಕ್ಸ್‌ಎಲ್6 ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆಮಾರುತಿ ಸಾಮಾನ್ಯ ಎರ್ಟಿಗಾದಿಂದ ಪ್ರತ್ಯೇಕಿಸಲು ಕಾರಿನ ಒಟ್ಟಾರೆ ನೋಟಕ್ಕೆ ಅಗತ್ಯ ಬದಲಾವಣೆಗಳನ್ನು ಮಾಡಿದೆ. ಮುಂಭಾಗವನ್ನು ಮರುವಿನ್ಯಾಸಗೊಳಿಸಲಾಗಿದೆ. ಇದು ಈಗ ಪ್ರೀಮಿಯಂ ಲುಕಿಂಗ್ ಫ್ರಂಟ್ ಗ್ರಿಲ್ ಅನ್ನು ಪಡೆಯುತ್ತದೆ,

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಕ್ರೋಮ್ ಸ್ಟ್ರಿಪ್‌ಗಳು ಮಧ್ಯದಲ್ಲಿ ಗ್ರಿಲ್ ಅನ್ನು ಎರಡು ಭಾಗಗಳಾಗಿ ವಿಭಜಿಸುತ್ತವೆ. 2019ರಲ್ಲಿ ಬಿಡುಗಡೆಯಾದ ಮಾರುತಿ ಎಕ್ಸ್‌ಎಲ್ 6 ಎಂಪಿವಿ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ ಮತ್ತು 6 ಆಸನಗಳ ವಿನ್ಯಾಸದೊಂದಿಗೆ ಬರುತ್ತದೆ. ಫೆಬ್ರವರಿ 2020 ರಲ್ಲಿ ಸುಜುಕಿ ಕಂಪನಿಯು ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಸುಜುಕಿ ಎಕ್ಸ್‌ಎಲ್7 ಎಂಬ 7-ಸೀಟರ್ ಮಾದರಿಯನ್ನು ಅನ್ನು ಪರಿಚಯಿಸಿತು. 2022ರ ಮಾರುತಿ ಎಕ್ಸ್‌ಎಲ್6 ಅನ್ನು ಮುಂದಿನ ವರ್ಷದ ಆರಂಭದಲ್ಲಿ 7-ಸೀಟರ್ ಸಂರಚನೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಹ್ಯುಂಡೈ ಕಾಂಪ್ಯಾಕ್ಟ್ ಎಂಪಿವಿ

ಹುಂಡೈ ಹೊಸ ಮಾದರಿಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ಕಾಂಪ್ಯಾಕ್ಟ್ ಎಂಪಿವಿ ವಿಭಾಗಕ್ಕೆ ಪ್ರವೇಶಿಸಲು ಸಿದ್ಧವಾಗಿದೆ. ಇದು ಖಂಡಿತವಾಗಿಯೂ ಬಹುನಿರೀಕ್ಷಿತ ಮುಂಬರುವ ಎಂಪಿವಿಗಳಲ್ಲಿ ಒಂದಾಗಿದೆ, ಈ ಹೊಸ ಹ್ಯುಂಡೈ ಎಂಪಿವಿಯು ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಎರ್ಟಿಗಾಗೆ ಪೈಪೋಟಿ ನೀಡುತ್ತದೆ. ಇಂಡೋನೇಷ್ಯಾ ಮತ್ತು ಕೊರಿಯಾದಲ್ಲಿ ಕಾಣಿಸಿಕೊಂಡ ರ್‌ಗೇಜರ್ ಭಾರತಕ್ಕೆ ಕಾಲಿಡಲಿದೆ ಎಂಬ ವದಂತಿಗಳಿವೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

7 ಸೀಟುಗಳ ಎಂಪಿವಿಯನ್ನು ವಿಶೇಷವಾಗಿ ಆಗ್ನೇಯ ಏಷ್ಯಾದ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗುವುದು. ಹ್ಯುಂಡೈನ ಚೆನ್ನೈ ಮೂಲದ ಸ್ಥಾವರವು ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಉತ್ಪಾದನೆಯಾಗಿ ಕಾರ್ಯನಿರ್ವಹಿಸುತ್ತದೆ. ಸ್ಟಾರ್‌ಗೇಜರ್ ಸುಮಾರು 4.5 ಮೀಟರ್ ಉದ್ದ ಮತ್ತು ವೀಲ್‌ಬೇಸ್ ಅನ್ನು ಅಲ್ಕಾಜಾರ್‌ಗೆ ಸಮನಾಗಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಈ ಹೊಸ ಹ್ಯುಂಡೈ ಕಾಂಪ್ಯಾಕ್ಟ್ ಎಂಪಿವಿವಿಯಲ್ಲಿ 1.5ಎಲ್ ಪೆಟ್ರೋಲ್ ಎಂಜಿನ್ ಹೊಂದಿರಬಹುದು. ಈ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 145 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 1.5ಎಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಮಾರುತಿ ಎರ್ಟಿಗಾ ಆಧಾರಿತ ಟೊಯೊಟಾ ಎಂಪಿವಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್ ಎಂಬ ಎರಡು ರಿಬ್ಯಾಡ್ಜ್ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಈ ಎರಡು ಮಾದರಿಗಳು ಕೂಡ ಮಾರುತಿ ಸುಜುಕಿ ಕಾರುಗಳ ರಿಬ್ಯಾಡ್ಜ್ ಮಾದರಿಗಳಾಗಿವೆ. ಟೊಯೊಟಾ ಕಿರ್ಲೊಸ್ಕರ್ ಮೋಟರ್ ಹಾಗೂ ಮಾರುತಿ ಸುಜುಕಿ ಕಂಪನಿಗಳು 2017ರಲ್ಲಿ ಜಂಟಿ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಟೊಯೊಟಾ ಕಂಪನಿ ಹಾಗೂ ಮಾರುತಿ ಸುಜುಕಿ ಕಂಪನಿಗಳು ತಮ್ಮ ಕಾರುಗಳನ್ನು ಒಬ್ಬರಿಗೊಬ್ಬರು ತಮ್ಮ ಕಂಪನಿಗಳ ಬ್ಯಾಡ್ಜ್ ಅಡಿ ತಯಾರಿಸಿ ಬಿಡುಗಡೆಗೊಳಿಸಿ ಮಾರಾಟ ಮಾಡಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಅದರಂತೆ ಟೊಯೊಟಾ ಮೂರನೇ ರಿಬ್ಯಾಡ್ಜ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿಗಳಿಗೆ ಬೇಡಿಕೆ ಹೆಚ್ಚಳವಾಗುವುದಕ್ಕೆ ಎರ್ಟಿಗಾ ಎಂಪಿವಿಯ ರಿಬ್ಯಾಡ್ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಎರ್ಟಿಗಾ ಎಂಪಿವಿಯ ರಿಬ್ಯಾಡ್ಜ್ ಮಾದರಿಯು ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಯಲ್ಲಿರುವ ಅದೇ ಎಂಜಿನ್ ಅನ್ನು ಹೊಂದಿರುತ್ತದೆ. ಇದು 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಆಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮಾರುತಿ ಎರ್ಟಿಗಾ ಕಾರಿನಂತೆಯೇ ಅದೇ ಹಿಯರ್‌ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಎಂಜಿ 360ಎಂ

ಎಂಜಿ ಮೋಟಾರ್ಸ್ ಇಂಡಿಯಾ ಕಳೆದ ವರ್ಷದ ಆಟೋ ಎಕ್ಸ್‌ಪೋದಲ್ಲಿ 360ಎಂ ಮತ್ತು G10 MPV ಗಳನ್ನು ಪ್ರದರ್ಶಿಸಿತು. ಮೊದಲಿನವು ಮಾರುತಿ ಎರ್ಟಿಗಾ ಪ್ರತಿಸ್ಪರ್ಧಿಯಾಗಿ ಬಂದರೆ, ಎರಡನೆಯದನ್ನು ಕಿಯಾ ಕಾರ್ನಿವಲ್ ಮಾದರಿಗೆ ಪೈಪೋಟಿ ನೀಡುತ್ತದೆ. ಎಂಜಿ 360ಎಂ ಮುಖ್ಯವಾಗಿ 2-2+2 ಸೀಟ್ ವ್ಯವಸ್ಥೆಯನ್ನು ಹೊಂದಿರುವ ಚೀನಾ-ಸ್ಪೆಕ್ ಬಾವುಜುನ್ 360 ಆಗಿದೆ. . ಎರ್ಟಿಗಾಕ್ಕೆ ಹೋಲಿಸಿದರೆ, ಎಂಜಿ ಎಂಪಿವಿ ಉದ್ದವಾಗಿದೆ ಮತ್ತು ಹೆಚ್ಚಿನ ಕ್ಯಾಬಿನ್ ಸ್ಥಳವನ್ನು ನೀಡುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಇದು 8-ಇಂಚಿನ ಸೆಂಟ್ರಲ್ ಕಂಟ್ರೋಲ್ ಸ್ಕ್ರೀನ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಬಾಷ್‌ನ ಹೊಸ ತಲೆಮಾರಿನ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಿಕ್ ಸನ್ ರೂಫ್ ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ಇನ್ನು ಈ ಎಂಪಿವಿಯಲ್ಲಿ 1.5 ಲೀ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಕಿಯಾ ಕೆವೈ

ಭಾರತಕ್ಕಾಗಿ ತನ್ನ ನಾಲ್ಕನೇ ಮಾದರಿಯಾಗಿ 2022 ರ ಆರಂಭದಲ್ಲಿ ಬರುತ್ತದೆ ಎಂದು ದಕ್ಷಿಣ ಕೊರಿಯಾದ ವಾಹನ ತಯಾರಕರು ಈಗಾಗಲೇ ಖಚಿತಪಡಿಸಿದ್ದಾರೆ. ಕಂಪನಿಯು ಹೊಸ ಮಾದರಿಯ ಹೆಸರು ಮತ್ತು ವಿವರಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಇದು ಸೆಲ್ಟೋಸ್ ಪ್ಲಾಟ್‌ಫಾರ್ಮ್ ಆಧಾರಿತ ಕಾಂಪ್ಯಾಕ್ಟ್ ಎಂಪಿವಿ ಆಗಿರಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಎಂಪಿವಿ ಕಾರುಗಳಿವು

ಕಿಯಾ ಕೆವೈ ಕಾಂಪ್ಯಾಕ್ಟ್ ಎಂಪಿವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರಾ ಮರಾಜೋ ಮತ್ತು ಹ್ಯುಂಡೈನ ಮುಂಬರುವ ಕಾಂಪ್ಯಾಕ್ಟ್ ಎಂಪಿವಿಗೆ ಪೈಪೋಟಿ ನೀಡುತ್ತದೆ. ಇದು 7 ಆಸನಗಳ ಮಾದರಿಯಾಗಿದ್ದು, ಕಿಯಾ ಸೆಲ್ಟೋಸ್‌ನೊಂದಿಗೆ ಅದರ ವೈಶಿಷ್ಟ್ಯಗಳು ಮತ್ತು ಎಂಜಿನ್‌ಗಳನ್ನು ಹಂಚಿಕೊಳ್ಳುತ್ತದೆ.

Most Read Articles

Kannada
English summary
Upcoming mpv modesl in indian market from new maruti xl6 to kia ky details
Story first published: Saturday, September 18, 2021, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X