Just In
- 4 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 6 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 6 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 8 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆಲ್ಟೊಸ್ ಪ್ಲ್ಯಾಟ್ಫಾರ್ಮ್ ಅಡಿಯಲ್ಲೇ ನಿರ್ಮಾಣಗೊಳ್ಳಲಿದೆ ಕಿಯಾ ಮೋಟಾರ್ಸ್ ಹೊಸ ಎಂಪಿವಿ
ದೇಶಿಯ ಮಾರುಕಟ್ಟೆಯಲ್ಲಿನ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಮುನ್ನಡೆ ಸಾಧಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಪ್ರಮುಖ ಕಾರು ಉತ್ಪಾದನಾ ಕಂಪನಿಗಳನ್ನು ಹಿಂದಿಕ್ಕಿ ಸದ್ಯ ನಾಲ್ಕನೇ ಅತಿ ದೊಡ್ಡ ಕಾರು ಕಂಪನಿಯಾಗಿ ಹೊರಹೊಮ್ಮಿದ್ದು, ಸೆಲ್ಟೊಸ್, ಕಾರ್ನಿವಾಲ್ ಮತ್ತು ಸೊನೆಟ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.
ಕರೋನಾ ಅಬ್ಬರದ ನಡುವೆಯೂ ದೇಶದ ಆಟೋ ಉದ್ಯಮವು ತೀವ್ರವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಕಾರು ಮಾದರಿಗಳು ಇದೀಗ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹ್ಯಾಚ್ಬ್ಯಾಕ್ ಮತ್ತು ಕಂಪ್ಯಾಕ್ಟ್ ಎಸ್ಯುವಿ ವಿಭಾಗವು ಉಳಿದ ಕಾರು ಮಾದರಿಗಳಿಂತ ಹೆಚ್ಚು ಬೇಡಿಕೆಯಲ್ಲಿದ್ದು, ತದನಂತರ ಎಸ್ಯುವಿ ಮತ್ತು ಎಂಪಿವಿ ಕಾರುಗಳು ಹೆಚ್ಚಿನ ಮಟ್ಟದ ಬೇಡಿಕೆಯಲ್ಲಿರುವ ಕಾರು ಮಾದರಿಗಳಾಗಿವೆ.
ಇತರೆ ಕಾರು ಮಾದರಿಗಳಿಂತಲೂ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಮಾದರಿಗಳಲ್ಲಿನ ಪ್ರತಿಸ್ಪರ್ಧಿ ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿರುವ ಕೆಲವೇ ಕೆಲವು ಎಂಪಿವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿವೆ.
ಎಂಪಿವಿ ಕಾರು ಮಾದರಿಯ ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ ಎರ್ಟಿಗಾ ಕಾರು ಅಧಿಕ ಬೇಡಿಕೆಯೊಂದಿಗೆ ಮೊದಲ ಸ್ಥಾನದಲ್ಲಿದ್ದು, ದುಬಾರಿ ಬೆಲೆ ನಡುವೆಯೂ ಟೊಯೊಟಾ ಇನೋವಾ ಕ್ರಿಸ್ಟಾ ಕಾರು ಎರ್ಟಿಗಾ ಮಾದರಿಯಷ್ಟೇ ಬೇಡಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ಆದರೆ ಎರ್ಟಿಗಾ ಕಾರಿಗಿಂತಲೂ ದುಪ್ಪಟ್ಟು ಬೆಲೆ ಹೊಂದಿರುವ ಇನೋವಾ ಕ್ರಿಸ್ಟಾ ಕಾರು ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಎರ್ಟಿಗಾ ಮತ್ತು ಇನೋವಾ ಕ್ರಿಸ್ಟಾ ನಡುವೆ ಬೆಲೆ ಅಂತರ ಸಾಕಷ್ಟಿದೆ. ಈ ಎರಡು ಕಾರುಗಳ ನಡುವಿನ ಸ್ಥಾನದಲ್ಲಿರುವ ಮಹೀಂದ್ರಾ ಮರಾಜೋ ಕಾರು ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸುವಲ್ಲಿ ವಿಫಲವಾಗುತ್ತಿದ್ದು, ಇನೋವಾ ಮತ್ತು ಎರ್ಟಿಗಾ ನಡುವಿನ ಸ್ಥಾನವನ್ನು ತುಂಬಲು ಕಿಯಾ ಮೋಟಾರ್ಸ್ ಹೊಸ ಎಂಪಿವಿ ಕಾರು ಉತ್ಪನ್ನವನ್ನು ಸಿದ್ದಪಡಿಸುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಕಿಯಾ ಕಾರ್ನಿವಾಲ್ ಎಂಪಿವಿ ಕಾರು ಮಾದರಿಯು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ಬೆಲೆಯೊಂದಿಗೆ ಮಾರಾಟಗೊಳ್ಳುತ್ತಿದ್ದು, ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.
ಕಾರ್ನಿವಾಲ್ ಕಾರು ಮಾದರಿಯು ಸದ್ಯ 2.2-ಲೀಟರ್ ವಿಜಿಟಿ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 24.95 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಮಧ್ಯಮ ಕ್ರಮಾಂಕದ ಎಂಪಿವಿ ಕಾರು ಮಾದರಿಯು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.
ಇನೋವಾ ಕ್ರಿಸ್ಟಾ ಎಂಪಿವಿ ಕಾರು ಮಾದರಿಯು 2.4-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್ಶೋರೂಂ ಪ್ರಕಾರ ರೂ. 16.27 ಲಕ್ಷದಿಂದ ಟಾಪ್ ಎಂಡ್ ಮಾದರಿಯು 24.34 ಲಕ್ಷ ಬೆಲೆ ಹೊಂದಿದೆ.
ಬೆಲೆ ನಡುವಿನ ಅಂತರವನ್ನು ಸರಿದೂಗಿಸುವ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ಮಾರುತಿ ಸುಜುಕಿ ಎರ್ಟಿಗಾ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ನಡುವಿನ ಸ್ಥಾನದಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!
ಪ್ರತಿ ವರ್ಷ ಎರಡು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟ ಆರಂಭಿದ ಒಂದೂವರೆ ವರ್ಷದಲ್ಲಿ ಮೂರು ಕಾರುಗಳನ್ನು ಬಿಡುಗಡೆ ಮಾಡಿದ್ದು, ಇದೀಗ ನಾಲ್ಕನೇ ಕಾರು ಮಾದರಿಯಾಗಿ ಹೊಸ ಎಂಪಿವಿ ಕಾರನ್ನು ಮುಂದಿನ ವರ್ಷದ ಮಧ್ಯಂತರದಲ್ಲಿ ರಸ್ತೆಗಿಳಿಸುವ ಸಿದ್ದತೆಯಲ್ಲಿದೆ.
ನಾಲ್ಕನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿರುವ ಮಧ್ಯಮ ಕ್ರಮಾಂಕದ ಎಂಪಿವಿ ಮಾದರಿಯು ಸೆಲ್ಟೊಸ್ ಪ್ಲ್ಯಾಟ್ಫಾರ್ಮ್ ಅಡಿಯಲ್ಲಿ ಎರ್ಟಿಗಾ ಕಾರಿಗಿಂತಲೂ ಹೆಚ್ಚಿನ ವೀಲ್ಹ್ ಬೆಸ್ ಹೊಂದಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಅರಾಮದಾಯಕ ಸ್ಥಳಾವಕಾಶ ಹೊಂದಿದೆ.
MOST READ: 2020 ಫ್ಲ್ಯಾಶ್ಬ್ಯಾಕ್: ಭಾರತೀಯ ಆಟೋ ಉದ್ಯಮದಲ್ಲಿ ನಡೆದ ಪ್ರಮುಖ ಘಟನೆಗಳಿವು..
ಇದೇ ಕಾರಣಕ್ಕೆ ಎಂಪಿವಿ ಕಾರು ಮಾರಾಟದಲ್ಲಿ ಕಿಯಾ ಹೊಸ ಎಂಪಿವಿ ಕಾರು ಭರ್ಜರಿ ಬೇಡಿಕೆ ಗಿಟ್ಟಿಸಿಕೊಳ್ಳವ ನೀರಿಕ್ಷೆಯಲ್ಲಿದ್ದು, ಬೆಲೆಯಲ್ಲಿ ಎರ್ಟಿಗಾ ಕಾರಿಗಿಂತ ತುಸು ದುಬಾರಿ ಮತ್ತು ಮತ್ತು ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅತಿ ಕಡಿಮೆ ಬೆಲೆಯೊಂದಿಗೆ ರಸ್ತೆಗಿಳಿಯಲಿದೆ.