2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಾ ವಿಧದ ಕಾರುಗಳು ಲಭ್ಯವಿದೆ. ಗ್ರಾಹಕರಿಗೆ ತಮ್ಮ ಆದ್ಯತೆಗೆ ಅನುಗುಣವಾಗಿ ಕಾರುಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಇತ್ತೀಚೆಗೆ ಗ್ರಾಹಕರು ಹೆಚ್ಚಾಗಿ ಎಸ್‍ಯುವಿಗಳ ಕಡೆ ಮುಖ ಮಾಡುತಿದ್ದರು ಸೆಡಾನ್ ಕಾರುಗಳ ಬೇಡಿಕೆಯು ಕಡೆಮೆಯಾಗಿಲ್ಲ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಭಾರತೀಯ ಮಾರುಕಟ್ಟೆಯಲ್ಲಿ ಸೆಡಾನ್ ಕಾರುಗಳು ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಹೆಚ್ಚಾಗಿ ಫ್ಯಾಮಿಲಿ ಕಾರ್ ಆಗಿ ಸೆಡಾನ್ ಮಾರಾಟವಾಗುತ್ತಿದೆ. ಉತ್ತಮ ಲಗೇಜ್ ಸ್ಪೇಸ್ ಗಳನ್ನು ಹೊಂದಿರುವುದರಿಂದ ಸೆಡಾನ್ ಕಾರುಗಳು ಫ್ಯಾಮಿಲ್ ಕಾರ್ ಆಗಿದೆ, ಈ ವರ್ಷ ಭಾರತದಲ್ಲಿ ಹಲವು ಸೆಡಾನ್ ಕಾರುಗಳು ಬಿಡುಗಡೆಯಾಗಿವೆ. ಮುಂದಿನ ವರ್ಷವು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸೆಡಾನ್ ಕಾರುಗಳು ಬಿಡುಗಡೆಯಾಗಲಿವೆ. ಇದರಲ್ಲಿ ಪ್ರಮುಖ ಸೆಡಾನ್ ಕಾರುಗಳ ಮಾಹಿತಿ ಇಲ್ಲಿವೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಸ್ಕೋಡಾ ಸ್ಲಾವಿಯಾ

ಸ್ಕೋಡಾ ತನ್ನ ಹೊಸ ಸ್ಲಾವಿಯಾ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಸ್ಕೋಡಾ ಸ್ಲಾವಿಯಾ(Skoda Slavia) ಸೆಡಾನ್ ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಸ್ಕೋಡಾ ಸ್ಲಾವಿಯಾ ಕಾರಿನ ಖರೀದಿಗಾಗಿ ಅಧಿಕೃತ ಬುಕ್ಕಿಂಗ್‌ಗಳನ್ನು ಈಗಾಗಲೇ ಪ್ರಾರಂಭಿಸಿದ್ದಾರೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಈ ಹೊಸ ಮಾದರಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.11,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಈ ಹೊಸ ಸ್ಕೋಡಾ ಸ್ಲಾವಿಯಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಕಾರಿನ ವಿತರಣೆಯು ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಭಾರತದಲ್ಲಿ ಸ್ಕೋಡಾ ಸ್ಲಾವಿಯಾ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲು ಸಿದ್ಧವಾಗಿದೆ. ಫೋಕ್ಸ್‌ವ್ಯಾಗನ್ ಗ್ರೂಪ್‌ನ ಇಂಡಿಯಾ ಪ್ಲಾನ್ 2.0 ಅಡಿಯಲ್ಲಿ ಇದು ಬ್ರಾಂಡ್‌ನ ಎರಡನೇ ಮಾದರಿಯಾಗಿದೆ,

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಇದು ಹೊಸ ಹೂಡಿಕೆ ಮತ್ತು ಉತ್ಪನ್ನಗಳ ಶ್ರೇಣಿಯನ್ನು ತರುತ್ತದೆ. ರ‍್ಯಾಪಿಡ್ ಸೆಡಾನ್ ಅನ್ನು ಬದಲಿಸಲು, ಹೊಸ ಸ್ಕೋಡಾ ಸ್ಲಾವಿಯಾ ಫೋಕ್ಸ್‌ವ್ಯಾಗನ್ ಹೆಚ್ಚು ಸ್ಥಳೀಯ ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಸ್ಕೋಡಾ ಸ್ಲಾವಿಯಾ ಕಾರು ಜೆಕ್ ಬ್ರ್ಯಾಂಡ್‌ನ ಇತ್ತೀಚಿನ ವಿನ್ಯಾಸ ಶೈಲಿಯನ್ನು ಅನುಸರಿಸುತ್ತದೆ. ಈ ಪ್ಲಾಟ್‌ಫಾರ್ಮ್ ವಿವಿಧ ಬಾಡಿಯ ಶೈಲಿಗಳು ಮತ್ತು ಎಂಜಿನ್ ಆಯ್ಕೆಗಳನ್ನು ಸರಿಹೊಂದಿಸಲು ಸಾಕಷ್ಟು ಬಹುಮುಖವಾಗಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಟಾಟಾ ಟಿಗೋರ್

ಸಿಎನ್‌ಜಿ-ಚಾಲಿತ ಟಿಗೊರ್ ಸಬ್‌ಕಾಂಪ್ಯಾಕ್ಟ್ ಸೆಡಾನ್ ಶೀಘ್ರದಲ್ಲೇ ದೇಶದಲ್ಲಿ ಮಾರಾಟವಾಗಲಿದೆ, ಬಹುಶಃ ಮುಂದಿನ ತಿಂಗಳು. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಕಾಣಿಸಿಕೊಂಡಾಗಿನಿಂದ ಟಿಗೋರ್ ಸಿಎನ್‌ಜಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕುತೂಹಲದಿಂದ ಕಾಯುತ್ತಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಈ ಕಾರು 85 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಆರ್ಕ್ ಅನ್ನು ಉತ್ಪಾದಿಸುವ ಅದೇ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುವ ನಿರೀಕ್ಷೆಯಿದೆ. ಈ ಟಿಗೋರ್ ಸಿಎನ್‌ಜಿಯು ಹ್ಯುಂಡೈ ಔರಾ ಸಿಎನ್‌ಜಿ ಮಾದರಿಗೆ ಪೈಪೋಟಿ ನೀಡುತ್ತದೆ,

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಟೊಯೊಟಾ ಬೆಲ್ಟಾ

ಟೊಯೊಟಾ ಮುಂದಿನ ವರ್ಷ ಭಾರತದಲ್ಲಿ ಮಾರುತಿ ಸುಜುಕಿ ಸಿಯಾಜ್ ಆಧಾರಿತ ಕಾಂಪ್ಯಾಕ್ಟ್ ಸೆಡಾನ್ ಅನ್ನು ಪರಿಚಯಿಸಲು ಯೋಜಿಸಿದೆ. ಈಗ ಸ್ಥಗಿತಗೊಂಡಿರುವ ಯಾರಿಸ್ ಬದಲಿಗೆ ಇದು ಹೆಜ್ಜೆ ಹಾಕಲಿದೆ. ಜಪಾನಿನ ಕಾರು ತಯಾರಕರು ಟೊಯೋಟಾ ಬೆಲ್ಟಾವನ್ನು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗಾಗಿ ಇತ್ತೀಚೆಗೆ ಅನಾವರಣಗೊಳಿಸಿತ್ತು.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಹೊಸ ಕಾರು ಸಿಯಾಜ್ ಮಾದರಿಯಲ್ಲಿರುವಂತೆ ಬಹುತೇಕ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಲಿದ್ದು, ರೀಬ್ಯಾಡ್ಜ್ ಆವೃತ್ತಿಯಲ್ಲಿ ಟೊಯೊಟಾ ಬ್ಯಾಡ್ಜ್ ಸೇರಿದಂತೆ ಮುಂಭಾಗದ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಮೂಲ ಮಾದರಿಗಿಂತ ರೀಬ್ಯಾಡ್ಜ್ ಕಾರನ್ನು ತುಸು ಆಕರ್ಷಕಗೊಳಿಸುವುದಕ್ಕಾಗಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೊಸ ರೀಬ್ಯಾಡ್ಜ್ ಕಾರು ಮೂಲ ಸಿಯಾಜ್ ಕಾರು ಮಾದರಿಗಿಂತಲೂ ತುಸು ದುಬಾರಿಯಾಗಲಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಫೋಕ್ಸ್‌ವ್ಯಾಗನ್ ವರ್ಟಸ್

ಫೋಕ್ಸ್‌ವ್ಯಾಗನ್ ಭಾರತದಲ್ಲಿ ತನ್ನ ಹೊಸ ವರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ. ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಈ ವರ್ಷದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬೇಕಿತ್ತು. ಆದರೆ ಕರೋನಾ ಆತಂಕದಿಂದ ಈ ಹೊಸ ವರ್ಟಸ್ ಕಾರಿನ ಬಿಡುಗಡೆಯನ್ನು ಫೋಕ್ಸ್‌ವ್ಯಾಗನ್ ಮುಂದೂಡಿಕೆ ಮಾಡಲಾಗಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಇದು 2022ರ ಮೊದಲಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಅನ್ನು ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅಡಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತದೆ. ಫೋಕ್ಸ್‌ವ್ಯಾಗನ್ ಕಂಪನಿಯು ಈ ಹೊಸ ಸೆಡಾನ್ ಅನ್ನು ಸ್ಥಳಿಯವಾಗಿ ಅಭಿವೃದ್ದಿ ಪಡಿಸಬಹುದು ಎಂದು ಹೇಳಲಾಗುತ್ತಿದೆ. ಸ್ಕೋಡಾ-ಫೋಕ್ಸ್‌ವ್ಯಾಗನ್ ಇಂಡಿಯಾ 2.0 ಯೋಜನೆಯಡಿ ಎಂಕ್ಯೂಬಿ ಪ್ಲಾಟ್‌ಫಾರ್ಮ್ ಅನ್ನು ಎಂಕ್ಯೂಬಿ ಎಒ ಇನ್ ಎಂದು ಸ್ಥಳೀಕರಿಸಲಾಗುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಇನ್ನು ಟೈಗನ್ ಮಿಡ್ ಸೈಜ್ ಎಸ್‍ಯುವಿಯು ಇದೇ ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರುಸಲಾಗಿದೆ. ಇದರ ಪರಿಣಾಮವಾಗಿ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪ್ರತ್ಯೇಕವಾಗಿ ತಯಾರಿಸಲು ಮೂಲ ಮಾದರಿಯಾಗಿ ಬಳಸಲಾಬಹುದು. ಇನ್ನು ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಆಯಾಮಗಳು ಜಾಗತಿಕ-ಸ್ಪೆಕ್ ವರ್ಚಸ್‌ನಂತೆಯೇ ಇರುತ್ತದೆ. ಇದು 4,482 ಮಿಮೀ ಉದ್ದ, 1,751 ಮಿಮೀ ಅಗಲ ಮತ್ತು 1,472 ಮಿಮೀ ಎತ್ತರವನ್ನು ಹೊಂದಿದೆ. ಇನ್ನು ಈ ಸೆಡಾನ್ 2,651 ಎಂಎಂ ವ್ಹೀಲ್‌ಬೇಸ್‌ ಅನ್ನು ಹೊಂದಿದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್

ಹೊಸ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ 2022ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. ಮಾದರಿಯು 2865 ಎಂಎಂ ಅಳತೆಯ 25 ಎಂಎಂ ಉದ್ದದ ವೀಲ್‌ಬೇಸ್‌ನೊಂದಿಗೆ ಒಳಭಾಗದಲ್ಲಿ ಸ್ವಲ್ಪ ಹೆಚ್ಚು ವಿಶಾಲವಾಗಿರುತ್ತದೆ. ಇದಲ್ಲದೆ, ಹೊರಹೋಗುವ ಮಾದರಿಗೆ ಹೋಲಿಸಿದರೆ ಸೆಡಾನ್ 65 ಎಂಎಂ ಉದ್ದ ಮತ್ತು 10 ಎಂಎಂ ಅಗಲವಾಗಿರುತ್ತದೆ.

2022ರಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಸೆಡಾನ್ ಕಾರುಗಳಿವು..

ಈ ಹೊಸ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮತ್ತು 2.0-ಲೀಟರ್ ಡೀಸೆಲ್ ಜೊತೆಗೆ 48V ಬೆಲ್ಟ್-ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಈ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್ ಕಾರು ಮಾದರಿಯು ಬಿಎಂಡಬ್ಲ್ಯು 3 ಸೀರಿಸ್, ಆಡಿ ಎ 4 ಮತ್ತು ಜಾಗ್ವಾರ್ XE ಕಾರುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Upcoming top sedans in india in 2022 read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X