ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಜಾಗತಿಕ ಆಟೋ ಮೊಬೈಲ್ ಮಾರುಕಟ್ಟೆಯಂತೆಯೇ ಭಾರತದ ಆಟೋ ಮೊಬೈಲ್ ಉದ್ಯಮವು ಸಹ ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ವಾಹನಗಳ ಮಾರಾಟ ಪ್ರಮಾಣ ಕಡಿಮೆಯಾಗಲು ಇದು ಪ್ರಮುಖ ಕಾರಣವಾಗಿದೆ. ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಫಾಡಾ) 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಾರಾಟವಾದ ಎಲ್ಲಾ ರೀತಿಯ ವಾಹನಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಈ ಅಂಕಿ ಅಂಶಗಳ ಪ್ರಕಾರ ಭಾರತೀಯ ಆಟೋ ಮೊಬೈಲ್ ಉದ್ಯಮವು ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ 5% ನಷ್ಟು ಕುಸಿತವನ್ನು ದಾಖಲಿಸಿದೆ. ದ್ವಿ ಚಕ್ರ ವಾಹನ ಹಾಗೂ ಟ್ರಾಕ್ಟರ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಫಾಡಾ ಅಂಕಿ ಅಂಶಗಳ ಪ್ರಕಾರ ಕಳೆದ ತಿಂಗಳು ರಿಟೇಲ್ ಮಾರಾಟದಲ್ಲಿ ಒಟ್ಟು 12,96,257 ಯುನಿಟ್‌ ವಾಹನಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿಗಿಂತ 5.27% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ ರಿಟೇಲ್ ಮಾರಾಟದಲ್ಲಿ ಒಟ್ಟು 13,68,307 ಯುನಿಟ್‌ ವಾಹನಗಳು ಮಾರಾಟವಾಗಿದ್ದವು. ಕಳೆದ ತಿಂಗಳು ದ್ವಿ ಚಕ್ರ ವಾಹನ ಹಾಗೂ ಟ್ರ್ಯಾಕ್ಟರ್ ಮಾರಾಟ ಪ್ರಮಾಣವು ಕಡಿಮೆಯಾಗಿದ್ದರೆ, ಇತರ ವಿಭಾಗಗಳಾದ ಪ್ರಯಾಣಿಕ ವಾಹನ, ಕಮರ್ಷಿಯಲ್ ವಾಹನ ಹಾಗೂ ತ್ರಿ ಚಕ್ರ ವಾಹನಗಳ ರಿಟೇಲ್ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಫಾಡಾ ದೇಶದ 1,562 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿ‌ಒ) ಪೈಕಿ 1,357 ಕಚೇರಿಗಳಿಂದ ವಾಹನ ನೋಂದಣಿ ಅಂಕಿ ಅಂಶಗಳನ್ನು ಸಂಗ್ರಹಿಸಿದೆ, ಅದರ ಪ್ರಕಾರ ಕಳೆದ ತಿಂಗಳು ದ್ವಿ ಚಕ್ರ ವಾಹನಗಳ ಮಾರಾಟ ಪ್ರಮಾಣವು 9,14,621 ಯೂನಿಟ್‌ಗಳಾಗಿದೆ. ಈ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 11.54% ನಷ್ಟು ಕಡಿಮೆಯಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 10,33,895 ಯುನಿಟ್‌ ದ್ವಿ ಚಕ್ರ ವಾಹನಗಳು ಮಾರಾಟವಾಗಿದ್ದವು.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ರಿಟೇಲ್ ಟ್ರಾಕ್ಟರ್ ಮಾರಾಟ ಪ್ರಮಾಣವು ಕಳೆದ ತಿಂಗಳು 52,896 ಯುನಿಟ್‌ಗಳಿಗೆ ಇಳಿದಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 69,462 ಯುನಿಟ್‌ಗಳಾಗಿತ್ತು. ಈ ಮೂಲಕ ರಿಟೇಲ್ ಮಾರಾಟ ಪ್ರಮಾಣವು ಕಳೆದ ತಿಂಗಳು 23.85% ನಷ್ಟು ಕುಸಿದಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 2,00,576 ಯುನಿಟ್‌ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಕಳೆದ ತಿಂಗಳು 2,33,308 ಯುನಿಟ್‌ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಮೂಲಕ ಪ್ರಯಾಣಿಕ ವಾಹನಗಳ ಮಾರಾಟ ಪ್ರಮಾಣವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ 16.32% ನಷ್ಟು ಹೆಚ್ಚಳವಾಗಿದೆ. ಕಮರ್ಷಿಯಲ್ ವಾಹನಗಳ ರಿಟೇಲ್ ಮಾರಾಟವು 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 46.64% ನಷ್ಟು ಏರಿಕೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

2020ರ ಸೆಪ್ಟೆಂಬರ್ ತಿಂಗಳಿನಲ್ಲಿ 40,112 ಯುನಿಟ್‌ ಕಮರ್ಷಿಯಲ್ ವಾಹನಗಳು ಮಾರಾಟವಾಗಿದ್ದರೆ ಕಳೆದ ತಿಂಗಳು 58,820 ಯುನಿಟ್‌ ಕಮರ್ಷಿಯಲ್ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಸೆಪ್ಟೆಂಬರ್'ನಲ್ಲಿ 24,262 ಯುನಿಟ್‌ ತ್ರಿ ಚಕ್ರ ವಾಹನಗಳು ಮಾರಾಟವಾಗಿದ್ದರೆ, ಈ ಬಾರಿ ಮಾರಾಟ ಪ್ರಮಾಣವು 50.9% ನಷ್ಟು ಹೆಚ್ಚಳವಾಗಿ 36,612 ಯುನಿಟ್‌ ತ್ರಿ ಚಕ್ರ ವಾಹನಗಳು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಜಾಗತಿಕ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ 150 ಸಿಸಿ ಮೋಟಾರ್‌ಸೈಕಲ್ ವಿಭಾಗವು ಪರಿಣಾಮ ಎದುರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದ್ವಿಚಕ್ರ ವಾಹನ ವಿಭಾಗವು ಉತ್ತಮವಾಗಿ ಪ್ರಗತಿಯನ್ನು ತೋರಿಲ್ಲ. ಜೊತೆಗೆ ಎಂಟ್ರಿ ಲೆವೆಲ್ ಮೋಟಾರ್‌ಸೈಕಲ್‌ಗಳು ಸಹ ಹೆಚ್ಚು ಮಾರಾಟವಾಗಿಲ್ಲ. ಆದರೆ ಮುಂದೆ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ವಿತರಕರು 30% - 35% ನಷ್ಟು ದಾಸ್ತಾನು ಉಳಿಸಿಕೊಂಡಿದ್ದಾರೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ದೇಶಿಯ ಮಾರುಕಟ್ಟೆಯ ಕಾರು ಮಾರಾಟ ಪ್ರಮಾಣವು ಕಳೆದ ತಿಂಗಳು ಸುಮಾರು 36.6% ನಷ್ಟು ಕುಸಿದಿದೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟು 1,85,636 ಯುನಿಟ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ 2,92,858 ಯುನಿಟ್ ಪ್ಯಾಸೆಂಜರ್ ಕಾರುಗಳು ಮಾರಾಟವಾಗಿದ್ದವು. ಕಳೆದ ತಿಂಗಳ ಮಾರಾಟ ಪ್ರಮಾಣವು ಈ ವರ್ಷದ ಆಗಸ್ಟ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 28.5% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

2020ರ ಸೆಪ್ಟೆಂಬರ್ ತಿಂಗಳಿನಲ್ಲಿ Maruti Suzuki ಕಂಪನಿಯ 1,47,912 ಯುನಿಟ್ ಕಾರುಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಕೇವಲ 63,111 ಯುನಿಟ್ ಕಾರುಗಳು ಮಾರಾಟವಾಗಿವೆ. ಅದೇ ರೀತಿ ಮತ್ತೊಂದು ಪ್ರಮುಖ ಕಾರು ತಯಾರಕ ಕಂಪನಿಯಾದ Hyundai ಕಾರುಗಳ ಮಾರಾಟವು ಸಹ ಕಳೆದ ತಿಂಗಳು 34.2% ನಷ್ಟು ಕುಸಿದಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ 5% ನಷ್ಟು ಕುಸಿದ ರಿಟೇಲ್ ವಾಹನ ಮಾರಾಟ

ಕಳೆದ ತಿಂಗಳು ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ Hyundai ಕಂಪನಿಯ ಒಟ್ಟು 33,087 ಯುನಿಟ್ ಕಾರುಗಳು ಮಾರಾಟವಾಗಿವೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ದಕ್ಷಿಣ ಕೊರಿಯಾ ಮೂಲದ Hyundai ಕಂಪನಿಯು 50,313 ಯುನಿಟ್ ಕಾರುಗಳನ್ನು ಮಾರಾಟ ಮಾಡಿತ್ತು. ಈ ಎರಡು ಪ್ರಮುಖ ಕಂಪನಿಗಳು ಮಾರಾಟದಲ್ಲಿ ಕುಸಿತ ದಾಖಲಿಸಿದ್ದರೆ ಭಾರತೀಯ ಮೂಲದ Tata Motors ಕಂಪನಿಯ ಪ್ರಯಾಣಿಕ ಕಾರುಗಳ ಮಾರಾಟವು 21.4% ನಷ್ಟು ಹೆಚ್ಚಾಗಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Vehicle retail sales decline in september 2021 details
Story first published: Friday, October 8, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X