ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ದೇಶದ ಬಹುನೀರಿಕ್ಷಿತ ವೆಹಿಕಲ್ ಸ್ಕ್ರ್ಯಾಪೇಜ್ ಪಾಲಿಸಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಧಿಕೃತವಾಗಿ ಚಾಲನೆ ನೀಡಿದ್ದು, ಸ್ವಯಂಪ್ರೇರಿತ ವಾಹನ ಗುಜುರಿ ನೀತಿ ಅಡಿಯಲ್ಲಿ ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್‌ಗಳನ್ನು ನೀಡಲು ನಿರ್ಧರಿಸಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷಿ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯನ್ನು ಹಂತ-ಹಂತವಾಗಿ ಜಾರಿಗೆ ತರುತ್ತಿದ್ದು, ಸ್ವಯಂಪ್ರೇರಿತ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಗುಜುರಿಗೆ ಹಾಕುವ ಮೂಲಕ ಹೊಸ ವಾಹನ ಖರೀದಿಗೆ ಹಲವು ವಿನಾಯ್ತಿಗಳನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಗುಜರಾತ್‌ನಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಆರ್ಥಿಕ ಪ್ರಗತಿಗಾಗಿ ತ್ವರಿತ ಬೆಳವಣಿಗೆ ಸಾಧಿಸಲು ಹಲವು ಮಹತ್ವದ ಯೋಜನೆಗಳು ಅವಶ್ಯವಿದ್ದು, ದೇಶದ ಆಟೋ ಉತ್ಪಾದನಾ ವಲಯಕ್ಕೆ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಅವಶ್ಯವಾಗಿದೆ ಎಂದರು.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ವಿಡಿಯೋ ಕಾನ್ಫರೆನ್ ಮೂಲಕವೇ ನೂತನ ವಾಹನ ಗುಜುರಿ ನೀತಿಗೆ ಚಾಲನೆ ನೀಡಿದ ಪ್ರಧಾನಿ ಮೋದಿಯವರು ಯಾವುದೇ ಒಂದು ದೇಶದ ಆರ್ಥಿಕತೆ ಬೆಳವಣಿಯಲ್ಲಿ ತ್ವರಿತ ಚಲನಶೀಲತೆ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಹೊಸ ಸ್ಕ್ಯಾಪೇಜ್ ನೀತಿಯಿಂದ ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತ-ಹಂತವಾಗಿ ತೊಡೆದುಹಾಕಿ ಸ್ವಚ್ಚ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದಿರುವ ಪ್ರಧಾನಿಯವರು ದೇಶದ ಅಭಿವೃದ್ಧಿ ಪಯಣದಲ್ಲಿ ಈ ಹೊಸ ಸ್ಕ್ರ್ಯಾಪೇಜ್ ನೀತಿಯು ಮಹತ್ವದ ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟಿದ್ದಾರೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಹೊಸ ವಾಹನಗಳ ಸ್ಕ್ರ್ಯಾಪೇಜ್ ನೀತಿಯು ಅಕ್ಟೋಬರ್ 1, 2021ರಿಂದ ಅಧಿಕೃತ ಚಾಲನೆ ಪಡೆದುಕೊಳ್ಳಲಿದ್ದು, ಹೊಸ ನೀತಿಯ ಪ್ರಕಾರ, ಪ್ರತಿಯೊಂದು ಖಾಸಗಿ ಮತ್ತು ವಾಣಿಜ್ಯ ವಾಹನಗಳು ಕ್ರಮವಾಗಿ 15 ಮತ್ತು 10 ವರ್ಷಗಳ ಆರಂಭಿಕ ನೋಂದಣಿ ಅವಧಿಯ ನಂತರ ಫಿಟ್ನೆಸ್ ಪರೀಕ್ಷೆಗೆ ಒಳಗಾಗುತ್ತವೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಹಳೆಯ ವಾಹನಗಳು ರಸ್ತೆಗಳಲ್ಲಿ ಸಂಚಾರವನ್ನು ಮುಂದುವರಿಸಲು ಫಿಟ್ನೆಸ್ ಪರೀಕ್ಷೆಯನ್ನು ತೆರವುಗೊಳಿಸುವುದು ಕಡ್ಡಾಯವಾಗಿದ್ದು, ವಿಫಲವಾದರೆ ಅಂತಹ ವಾಹನವನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

2022ರ ಏಪ್ರಿಲ್ 1ರಿಂದ 15 ವರ್ಷ ಮೇಲ್ಪಟ್ಟ ಎಲ್ಲಾ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪೇಜ್ ನೀತಿಯಡಿಯಲ್ಲಿ ಮುಕ್ತಿ ನೀಡಲಾಗುತ್ತಿದ್ದು, ಖಾಸಗಿ ವಾಹನಗಳು ಮತ್ತು ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗುತ್ತಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ಮತ್ತು 10 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಕಠಿಣ ಮಾನದಂಡಗಳೊಂದಿಗೆ ಫಿಟ್ನೆಸ್ ಪರೀಕ್ಷೆಯನ್ನು ಎದುರಿಸಬೇಕಿದ್ದು, ಪರೀಕ್ಷೆಯಲ್ಲಿ ವಿಫಲವಾದರೆ ಸ್ಕ್ರ್ಯಾಪ್ ಮಾಡಬೇಕಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಯಾವುದೇ ಒಂದು ವಾಹನದ ಆರಂಭಿಕ ನೋಂದಣಿ ಅವಧಿ ಮುಗಿಯುವ ದಿನಾಂಕದಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಯಾಗಲಿದ್ದು, ಯಾವುದೇ ಸಮಯದಲ್ಲಿ ಹಳೆಯ ವಾಹನವು ಪರೀಕ್ಷೆಯಲ್ಲಿ ವಿಫಲವಾದರೆ ಅದನ್ನು ರಸ್ತೆಯಲ್ಲಿ ಸಂಚಾರಕ್ಕೆ ಯೋಗ್ಯವಲ್ಲವೆಂದು ಪರಿಗಣಿಸಿ ಸ್ಕ್ರಾಪೇಜ್ ಪಾಲಿಸಿ ಮೂಲಕ ಮರುಬಳಕೆ ಮಾಡಲಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಹೊಸ ನೀತಿಯಡಿಯಲ್ಲಿ 15 ವರ್ಷದ ತನಕ ಖಾಸಗಿ ವಾಹನಗಳಿಗೆ ಮತ್ತು 10 ವರ್ಷ ವಾಣಿಜ್ಯ ವಾಹನಗಳಿಗೆ ಯಾವುದೇ ತೊಂದರೆಯಿಲ್ಲವಾದರೂ ಆರಂಭಿಕ ನೋಂದಣಿ ಅವಧಿ ಮುಗಿದ ನಂತರ ಕಡ್ಡಾಯ ಫಿಟ್ನೆಸ್ ಪರೀಕ್ಷೆ ತೇರ್ಗಡೆಯು ಸಾಕಷ್ಟು ಕಠಿಣವಾಗಿರಲಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ವಾಹನ ಸ್ಕ್ರ್ಯಾಪೇಜ್ ಪಾಲಿಸಿಗೆ ಫಿಟ್ನೆಸ್ ಪರೀಕ್ಷೆಯ ವಿವರಗಳು ವಾಹನಗಳ ಸಂಚಾರ ಯೋಗ್ಯತೆಯನ್ನು ನಿರ್ಧರಿಸುತ್ತದೆ. ಇದು ಅನುಮತಿಸಿದ ಮಿತಿಯ ಅಡಿಯಲ್ಲಿ ಮಾಲಿನ್ಯ, ಬ್ರೇಕಿಂಗ್‌ ಕಾರ್ಯಾಚರಣೆ, ಎಂಜಿನ್ ಕಾರ್ಯಕ್ಷಮತೆ ಮತ್ತು ಇತರೆ ಪರೀಕ್ಷೆಗಳನ್ನು ಒಳಗೊಂಡಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಈ ಪರೀಕ್ಷೆಗಳನ್ನು ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಹಳೆಯ ವಾಹನಗಳ ಹೆಡ್‌ಲ್ಯಾಂಪ್‌ಗಳಲ್ಲಿನ ಅಸಮರ್ಪಕತೆಯನ್ನು ಪರಿಗಣಿಸಲಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಸಹಜವಾಗಿ 15 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ಮತ್ತು 10 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳಲ್ಲಿ ಹೊಸ ವಾಹನ ಮಾದರಿಯಲ್ಲಿ ಸಾಕಷ್ಟು ಶಕ್ತಿಯುತವಾಗಿರದ ಹಿನ್ನಲೆ ಪರೀಕ್ಷೆಯು ವಿಫಲಗೊಳ್ಳುವ ಅವಕಾಶ ಹೆಚ್ಚಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಒಂದು ವೇಳೆ ಫಿಟ್ನೆಸ್ ಪರೀಕ್ಷೆಯಲ್ಲಿ ಯಶಸ್ವಿಯಾದರೆ ಅಂತಹ ವಾಹನಗಳಿಗೆ ಮತ್ತೆ 5 ವರ್ಷಗಳ ಕಾಲ ರಸ್ತೆಗಳಲ್ಲಿ ಓಡಿಸಲು ಅನುಮತಿ ನೀಡಲಿದ್ದು, ಐದು ವರ್ಷಗಳ ನಂತರ ಅವು ಮತ್ತೆ ಫಿಟ್ನೆಸ್ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಅನರ್ಹ ವಾಹನವನ್ನು ಹೇಗೆ ಸ್ಕ್ರ್ಯಾಪ್ ಮಾಡಲಾಗುತ್ತೆ?

ಹಳೆಯ ವಾಹನವು ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದ ನಂತರ ಅವುಗಳನ್ನು EOLV (ಎಂಡ್ ಆಫ್ ಲೈಫ್ ವೆಹಿಕಲ್) ಎಂದು ಘೋಷಣೆ ಮಾಡಲಾಗುತ್ತೆ. ನಂತರ ಈ ವಾಹನಗಳನ್ನು ನೋಂದಾಯಿತ ವಾಹನ ಸ್ಕ್ರಾಪಿಂಗ್ ಸೆಂಟರ್‌ಗಳ ಮೂಲಕ ಮರುಬಳಕೆ ಮಾಡಲಾಗುತ್ತದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ವಾಹನ ಸ್ಕ್ರ್ಯಾಪೇಜ್ ಪಾಲಿಸಿ ಪ್ರೋತ್ಸಾಹ ಕ್ರಮಗಳು ಯಾವವು?

ಹಳೆಯ ವಾಹನ ಮಾಲೀಕರು ತಮ್ಮ ಅನರ್ಹ ವಾಹನವನ್ನು ಸ್ಕ್ಯಾಪ್ ಮಾಡಿಸಿದ ನಂತರ ಹೊಸ ವಾಹನ ಖರೀದಿಯ ಯೋಜನೆಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಕ್ರಮಗಳಿಗೆ ಅರ್ಹರಾಗಲಿದ್ದು, ಹೊಸ ವಾಹನದ ಮೇಲೆ ಎಕ್ಸ್ ಶೋರೂಂ ಬೆಲೆಯಲ್ಲಿ ಶೇ.5 ರಷ್ಟು ವಿನಾಯ್ತಿ ಪಡೆಯಲಿದ್ದಾರೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಹೆಚ್ಚುವರಿಯಾಗಿ, ಅವರು ಹೊಸ ವಾಹನವನ್ನು ಖರೀದಿಸಿದ ನಂತರ ರಸ್ತೆ ತೆರಿಗೆಯಲ್ಲಿ ಶೇ. 25 ರಷ್ಟು ರಿಯಾಯಿತಿ ಪಡೆಯಲಿದ್ದು, ವಾಣಿಜ್ಯ ವಾಹನಗಳಾದರೆ ರಸ್ತೆ ತೆರಿಗೆಯಲ್ಲಿ ಶೇ.15ರಷ್ಟು ರಿಯಾಯಿತಿ ದೊರೆಯಲಿದೆ.

ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಬಿಡುಗಡೆ: ಹಳೆಯ ವಾಹನ ಮಾಲೀಕರಿಗೆ ಭರ್ಜರಿ ಆಫರ್!

ಜೊತೆಗೆ ವಾಹನ ತಯಾರಕರಿಗೆ ಸ್ಕ್ಯಾರ್ಪಿಂಗ್ ಪಾಲಿಸಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೊಸ ವಾಹನ ಖರೀದಿ ಮೇಲೆ ಶೇ.5 ವಿನಾಯ್ತಿ ನೀಡಲು ಸೂಚಿಸಲಾಗಿದ್ದು, ಹೊಸ ನೀತಿಯು ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಹಳೆಯ ಮತ್ತು ಅನರ್ಹ ವಾಹನಗಳನ್ನು ಹಂತ ಹಂತವಾಗಿ ತೊಡೆದುಹಾಕಲು ಸಹಕಾರಿಯಾಗಲಿದೆ.

Most Read Articles

Kannada
English summary
Vehicle scrappage policy in india here are the list of benefits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X