ನಾಳೆಯಿಂದ ಫಾಸ್ಟ್‌ಟ್ಯಾಗ್ ಹೊಂದಿಲ್ಲದ ವಾಹನಗಳಿಗೆ ಬೀಳಲಿದೆ ದುಪ್ಪಟ್ಟು ಟೋಲ್ ಶುಲ್ಕ
ಫೆಬ್ರವರಿ 15ರಿಂದ ದೇಶಾದ್ಯಂತವಿರುವ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಅದರ ನಂತರ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಮಾತ್ರ ಟೋಲ್ ಪಾವತಿಸಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ಡಬಲ್ ಟೋಲ್ ಪಾವತಿಸಬೇಕಾಗುತ್ತದೆ. 80%ನಷ್ಟು ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ. ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿ ಅಳವಡಿಸುವುದಕ್ಕೆ 2020ರ ಡಿಸೆಂಬರ್‌ವರೆಗೆ ಗಡುವು ನೀಡಲಾಗಿತ್ತು. ನಂತರ ಈ ಗಡುವನ್ನು ಜನವರಿವರೆಗೆ ವಿಸ್ತರಿಸಲಾಯಿತು. ಈಗ ಫೆಬ್ರವರಿ 15ರವರೆಗೆ ಗಡುವು ನೀಡಲಾಗಿದೆ.

2017ರ ಡಿಸೆಂಬರ್ 1ರಿಂದ ಎಲ್ಲಾ ನಾಲ್ಕು ಚಕ್ರ ವಾಹನಗಳ ನೋಂದಣಿಯೊಂದಿಗೆ, ಫಾಸ್ಟ್‌ಟ್ಯಾಗ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮೋಟಾರು ವಾಹನ ಕಾಯ್ದೆ 1989ರ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ವಾಹನ ತಯಾರಕ ಕಂಪನಿಗಳಿಗೆ ಹಾಗೂ ಡೀಲರ್'ಗಳಿಗೆ ನಾಲ್ಕು ಚಕ್ರ ವಾಹನಗಳಲ್ಲಿ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಅಳವಡಿಸುವಂತೆ ಸೂಚನೆ ನೀಡಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫಾಸ್ಟ್‌ಟ್ಯಾಗ್ ಎಂದರೇನು?
ಫಾಸ್ಟ್‌ಟ್ಯಾಗ್ ಎನ್ನುವುದು ಗಾಜಿನ ವಾಹನಗಳ ಮೇಲೆ ಅಳವಡಿಸುವ ಡಿಜಿಟಲ್ ಸ್ಟಿಕ್ಕರ್ ಆಗಿದೆ. ಈ ಸ್ಟಿಕ್ಕರ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿ ಮೂಲಕ ಕಾರ್ಯನಿರ್ವಹಿಸುತ್ತದೆ.

ಟೋಲ್ ಪ್ಲಾಜಾ ಮೂಲಕ ವಾಹನಗಳು ಹಾದುಹೋದಾಗ, ಸಂಬಂಧಿಸಿದ ಟೋಲ್ ಶುಲ್ಕವು ಫಾಸ್ಟ್‌ಟ್ಯಾಗ್ ಪ್ರಿಪೇಯ್ಡ್ ಖಾತೆಯಿಂದ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟೋಲ್ ಶುಲ್ಕ ಪಾವತಿಸಲು ಟೋಲ್ ಪ್ಲಾಜಾದಲ್ಲಿ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ. ಟೋಲ್ ಹಣವು ಫಾಸ್ಟ್‌ಟ್ಯಾಗ್ ಖಾತೆಯಿಂದ ನೇರವಾಗಿ ಕಡಿತಗೊಳ್ಳುತ್ತದೆ. ಟೋಲ್ ಶುಲ್ಕ ಸಂಗ್ರಹವನ್ನು ಡಿಜಿಟಲ್ ಮೂಲಕ ಪಾರದರ್ಶಕವಾಗಿಸಲು ಜೊತೆಗೆ ಟೋಲ್‌ನಲ್ಲಿ ಸಮಯವನ್ನು ಉಳಿಸಲು ಫಾಸ್ಟ್‌ಟ್ಯಾಗ್ ಅನ್ನು ಜಾರಿಗೊಳಿಸಲಾಗಿದೆ.

ಫಾಸ್ಟ್‌ಟ್ಯಾಗ್ ಎಲ್ಲಿ ಖರೀದಿಸಬೇಕು?
ಫಾಸ್ಟ್‌ಟ್ಯಾಗ್ ವಿತರಿಸುವ ಕಾರ್ಯವನ್ನು 23 ಬ್ಯಾಂಕ್‌ಗಳಿಗೆ ವಹಿಸಲಾಗಿದ್ದು, ಅಲ್ಲಿ ಪಾಯಿಂಟ್-ಆಫ್-ಸೇಲ್ ಮೂಲಕ ಫಾಸ್ಟ್‌ಟ್ಯಾಗ್ ಖರೀದಿಸಬಹುದು. ನಿಗದಿಪಡಿಸಿರುವ ಸಾರಿಗೆ ಕಚೇರಿ ಅಥವಾ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಖರೀದಿಸಬಹುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫಾಸ್ಟ್‌ಟ್ಯಾಗ್ ಖರೀದಿಸಲು ಕೆವೈಸಿ ಹಾಗೂ ವಾಹನದ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ತೋರಿಸಬೇಕು. ಅಮೆಜಾನ್ ಹಾಗೂ ಪೇಟಿಎಂ ಮೂಲಕವೂ ಫಾಸ್ಟ್‌ಟ್ಯಾಗ್'ಗಳನ್ನು ಖರೀದಿಸಬಹುದು.

ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳದೇ ಟೋಲ್ ಮೂಲಕ ಸಾಗುವ ವಾಹನಗಳಿಂದ ಎರಡು ಪಟ್ಟು ಹೆಚ್ಚು ಟೋಲ್ ಶುಲ್ಕವನ್ನು ಸಂಗ್ರಹಿಸಲಾಗುವುದು. ಫಾಸ್ಟ್‌ಟ್ಯಾಗ್ ಹೊಂದಿರುವವರು ಟೋಲ್ ಪ್ಲಾಜಾಗಳಲ್ಲಿ ಕಾಯುವಂತಿಲ್ಲ ಹಾಗೂ ಸಮಯದ ಉಳಿತಾಯವಾಗುತ್ತದೆ ಎಂಬುದು ಇದಕ್ಕೆ ಕಾರಣ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್‌ಟ್ಯಾಗ್ ಜಾರಿಯಾದ ನಂತರ, ಟೋಲ್ ಸಂಗ್ರಹವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭದ್ರತೆ ಕಾರಣಕ್ಕೆ ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸಹ ಫಾಸ್ಟ್‌ಟ್ಯಾಗ್ ಅನ್ನು ಬಳಸಲಾಗುತ್ತದೆ. ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ಪ್ರತಿಯೊಂದು ವಾಹನದ ದಾಖಲೆಯನ್ನು ಸರ್ಕಾರ ಹೊಂದಿರುತ್ತದೆ.


Click it and Unblock the Notifications