ಕಂಫರ್ಟ್‌ಲೈನ್ ಟಿಎಸ್ಐ ವರ್ಷನ್ ಬಿಡುಗಡೆ ಮಾಡಿದ ಫೋಕ್ಸ್‌ವ್ಯಾಗನ್
ಫೋಕ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕಾರು ಮಾದರಿಗಳಾದ ಪೊಲೊ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಲ್ಲಿ ಹೊಸದಾಗಿ ಕಂಫರ್ಟ್‌ಲೈನ್ ಮಾದರಿಯನ್ನು ಟಿಎಸ್ಐ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ.

ಪೊಲೊ ಹ್ಯಾಚ್‌ಬ್ಯಾಕ್ ಕಾರಿನ ಕಂಫರ್ಟ್‌ಲೈನ್ ಟಿಎಸ್ಐ ಮಾದರಿಯನ್ನು ಸ್ಥಗಿತಗೊಳ್ಳಲಿರುವ ಟರ್ಬೊ ಮಾದರಿಯನ್ನು ಆಧರಿಸಿ ಬಿಡುಗಡೆ ಮಾಡಿದ್ದು, ಸ್ಟ್ಯಾಂಡರ್ಡ್ ಕಂಪರ್ಟ್‌ಲೈನ್ ಮಾದರಿಗಿಂತಲೂ ಹೊಸ ಆವೃತ್ತಿಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಹೊಸ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7.41 ಲಕ್ಷ ಬೆಲೆ ನಿಗದಿಪಡಿಸಲಾಗಿದ್ದು, ಹೊಸ ಕಾರಿನ ಬೆಲೆಯು ಸ್ಟ್ಯಾಂಡರ್ಡ್ ಕಂಪರ್ಟ್‌ಲೈನ್ ಮಾದರಿಗಿಂತಲೂ ತುಸು ದುಬಾರಿಯಾಗಿದೆ.

ಹೊಸ ಕಾರುಗಳಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್ ಒಳಗೊಂಡಂತೆ ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದ್ದು, ಕಂಪನಿಯು ಮೊದಲ ಬಾರಿಗೆ ಕಂಪರ್ಟ್‌ಲೈನ್ ಮಾದರಿಯಲ್ಲಿ ಟಿಎಸ್ಐ ಎಂಜಿನ್ ಆಯ್ಕೆ ನೀಡಿದೆ.

ಹೊಸ ತಾಂತ್ರಿಕ ಅಂಶಗಳು ಮತ್ತು ಆಕರ್ಷಕ ಎಂಜಿನ್ ಆಯ್ಕೆಯು ಸ್ಪೋರ್ಟಿ ಹ್ಯಾಚ್‌ಬ್ಯಾಕ್ ಕಾರು ಖರೀದಿದಾರರನ್ನು ಸೆಳೆಯಲು ಹೊಸ ಕಾರು ಮಾದರಿಯು ಸಹಕಾರಿಯಾಗಲಿದ್ದು, ಎಂಜಿನ್ ಮತ್ತು ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಹೊಸ ವೆರಿಯೆಂಟ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ತಾಂತ್ರಿಕ ಅಂಶಗಳನ್ನು ಮುಂದುವರಿಸಿದೆ.

ಸ್ಥಗಿತಗೊಳಿಸಲಾಗುತ್ತಿರುವ ಟರ್ಬೊ ಎಡಿಷನ್‌ಗಳಲ್ಲಿ ಕಾರು ಮಾದರಿಯನ್ನೇ ಆಧರಿಸಿರುವ ಹೊಸ ಕಂಫರ್ಟ್‌ಲೈನ್ ಮಾದರಿಯು 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿದ್ದು, ಹೊಸ ಎಂಜಿನ್ ಮಾದರಿಗಳಿಗೆ ಅನುಗುಣವಾಗಿ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.

ಪೊಲೊ ಆರಂಭಿಕ ಕಾರು ಮಾದರಿಯಲ್ಲಿರುವ 1.0-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 76-ಬಿಎಚ್‌ಪಿ ಮತ್ತು 95-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಟಿಎಸ್ಐ ಆವೃತ್ತಿಗಳಲ್ಲಿರುವ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಕಾರು ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗರಿಷ್ಠ 109-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 16.47 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಫೋಕ್ಸ್‌ವ್ಯಾಗನ್ ಕಂಪನಿಯು ವೆಂಟೊದಲ್ಲಿನ ಎಲ್ಲಾ ವೆರಿಯೆಂಟ್‌ಗಳಲ್ಲೂ 1.0-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಪೊಲೊ ಮಾದರಿಯಲ್ಲಿ ಮಾತ್ರ ಎಂಪಿವಿ ಮತ್ತು ಟಿಎಸ್ಐ ಮಾದರಿಗಳೊಂದಿಗೆ ಎಂಜಿನ್ ಆಯ್ಕೆ ನೀಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪೊಲೊ ಕಂಫರ್ಟ್‌ಲೈನ್ ಟಿಎಸ್ಐ ಎಡಿಷನ್ ಹೊರತು ಪಡಿಸಿ ಸ್ಟ್ಯಾಂಡರ್ಡ್ ಮಾದರಿಗಳಿಗೆ ಅನುಸಾರವಾಗಿ ಪೊಲೊ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.16 ಲಕ್ಷದಿಂದ ರೂ. 9.99 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ಮಾದರಿಯಾಗಿ ಜಿಟಿ ಮಾದರಿ ಮಾರಾಟವಾಗುತ್ತಿದೆ.


Click it and Unblock the Notifications








