ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಎಲೆಕ್ಟ್ರಿಕ್ ಕಾರು ಮಾದರಿಗಳ ಮಾರಾಟವನ್ನು ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ವಿಸ್ತರಿಸುವ ಯೋಜನೆಯಲ್ಲಿದ್ದು, ಕಂಪನಿಯ ಹೊಸ ಐಡಿ ಸರಣಿಯಲ್ಲಿ ಎಸ್‌ಯುವಿ, ಕ್ರಾಸ್ ಓವರ್ ಎಸ್‌ಯುವಿ, ಹ್ಯಾಚ್‌ಬ್ಯಾಕ್, ಕೂಪೆ ಮತ್ತು ಸೆಡಾನ್ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಮ್ಯಾಡುಲರ್ ಎಲೆಕ್ಟ್ರಿಕ್ ಡ್ರೈವ್ ಮ್ಯಾಟ್ರಿಕ್ಸ್ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಸಿದ್ದಗೊಂಡಿರುವ ಫೋಕ್ಸ್‌ವ್ಯಾಗನ್ ಕಂಪನಿಯ ಹೊಸ ಇವಿ ಕಾರು ಮಾದರಿಗಳು ಈಗಾಗಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದು, ಐಡಿ.4 ಎಲೆಕ್ಟ್ರಿಕ್ ಸರಣಿ ಕಾರುಗಳ ಮೂಲಕ ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯುತ್ತಿದೆ.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

2025ರ ವೇಳೆಗೆ ವಿಶ್ವಾದ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಂಪನಿಯು ಇತ್ತೀಚೆಗೆ ಹೊಸ ಪ್ಲ್ಯಾಟ್‌ಫಾರ್ಮ್ ಆಧರಿತ ಐಡಿ.4 ಜಿಟಿಎಕ್ಸ್, ಐಡಿ.6 ಎಸ್‌ಯುವಿ ಕಾರು ಸರಣಿಯನ್ನು ಅನಾವರಣಗೊಳಿಸಿತ್ತು.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರುಗಳನ್ನು 2022ರ ವೇಳೆಗೆ ವಿವಿಧ ರಾಷ್ಟ್ರಗಳಲ್ಲಿ ಮಾರಾಟಗೊಳಿಸಲು ಸಜ್ಜಾಗುತ್ತಿರುವ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಆರಂಭಿಕ ಎಲೆಕ್ಟ್ರಿಕ್ ಕಾರು ಮಾದರಿಯಾದ ಐಡಿ.3 ಮಾದರಿಯನ್ನು ಆಧರಿಸಿ ಮತ್ತೊಂದು ಹೊಸ ಪರ್ಫಾಮೆನ್ಸ್ ಹ್ಯಾಚ್‌ಬ್ಯಾಕ್ ಕಾನ್ಸೆಪ್ಟ್ ಮಾದರಿಯು ಅನಾವರಣಗೊಂಡಿದೆ.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಐಡಿ.3 ಮಾದರಿಯನ್ನು ಆಧರಿಸಿ ಅಭಿವೃದ್ದಿಗೊಂಡಿರುವ ಐಡಿ.ಎಕ್ಸ್ ಕಾರು ಪರ್ಫಾಮೆನ್ಸ್ ಕಾರು ಮಾದರಿಯು ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಮಾದರಿಯಿಂದಲೂ ಪ್ರಮುಖ ತಾಂತ್ರಿಕ ಅಂಶಗಳನ್ನು ಹಂಚಿಕೊಂಡಿದ್ದು, ಮೂಲ ಕಾರು ಮಾದರಿಯಾದ ಐಡಿ.3 ಕಾರಿಗಿಂತಲೂ ಹೆಚ್ಚುವರಿಯಾಗಿ 62 ಕಿವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯಲಿದೆ.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಹೊಸ ಕಾರನ್ನು ಫೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ಸ್ ವಿಭಾಗದ ಸಿಇಒ ರಾಲ್ಫ್ ಬ್ರಾಂಡ್‌ಸ್ಟ್ಯಾಟರ್ ತಮ್ಮ ಲಿಂಕ್ಡ್ಇನ್ ಸಾಮಾಜಿಕ ಜಾಲತಾಣದ ಇವಿ ಹ್ಯಾಚ್‌ಬ್ಯಾಕ್ ಅನಾವರಣಗೊಳಿಸಿದ್ದು, ಆಲ್ ವೀಲ್ಹ್ ಡ್ರೈವ್ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಐಡಿ.ಎಕ್ಸ್ ಮಾದರಿಯು ಹೊಚ್ಚ ಹೊಸ ಗಾಲ್ಫ್ ಆರ್ ಹಾಟ್ ಹ್ಯಾಚ್‌‌ಬ್ಯಾಕ್ ಕಾರಿನ ನೋಡಿದಂತೆ ಕಂಡರೂ ಹೊಸ ಕಾರಿನ ಪರಿಕಲ್ಪನೆಯು ಡ್ರಿಫ್ಟ್ ಮೋಡ್‌ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳೊಂದಿಗೆ ವಿಭಿನ್ನಲಾಗಿದ್ದು, ಕೇವಲ 5.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಕಂಪನಿಯ ಮಾಹಿತಿಯ ಪ್ರಕಾರ, ಸದ್ಯ ಪರಿಕಲ್ಪನೆ ಮಾದರಿಯಾಗಿರುವ ಐಡಿ.ಎಕ್ಸ್ ಮಾದರಿಯು ಈ ವರ್ಷಾಂತ್ಯಕ್ಕೆ ಉತ್ಪಾದನಾ ಮಾದರಿಯೊಂದಿಗೆ ಅನಾವರಣಗೊಳ್ಳಲಿದ್ದು, ಐಡಿ ಸರಣಿಯಲ್ಲಿ ಇನ್ನು ಹಲವು ಹೊಸ ಕಾರುಗಳು ವಿವಿಧ ಮಾರುಕಟ್ಟೆಗಾಗಿ ಬಿಡುಗಡೆಯಾಗುತ್ತಿವೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಐಡಿ.ಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಸದ್ಯ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಉದ್ದೇಶದಿಂದ ಹಲವಾರು ಕಠಿಣಕ್ರಮಗಳನ್ನು ಜಾರಿಗೆ ತರುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ಉತ್ಪಾದನೆಯತ್ತ ಹೆಚ್ಚು ಗಮಹರಿಸುತ್ತಿವೆ.

More from DriveSpark

Article Published On: Tuesday, May 25, 2021, 8:45 [IST]
English summary
Volkswagen Unveils IDX Performance EV Concept Based On ID3. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+