Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಹೊಸ ಕಾರುಗಳನ್ನು ಪಡೆಯಲು ಇಷ್ಟು ದಿನ ಕಾಯಲೇ ಬೇಕು
ಹೊಸ ವರ್ಷದಲ್ಲಿ ಹೊಸ ಕಾರುಗಳ ಮಾರಾಟವು ಜೋರಾಗಿದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ವೈಯಕ್ತಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಕಾರಣಕ್ಕೆ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಸಣ್ಣ ಕಾರುಗಳಿಂದ ಎಸ್‌ಯುವಿಗಳವರೆಗೆ ವಿತರಣೆಯನ್ನು ಪಡೆಯಲು ಹೆಚ್ಚು ಕಾಲ ಕಾಯಬೇಕಾಗಿದೆ. ವರದಿಗಳ ಪ್ರಕಾರ ಕಾರುಗಳ ವಿತರಣೆಯನ್ನು ಪಡೆಯಲು 1 ತಿಂಗಳಿನಿಂದ 10 ತಿಂಗಳವರೆಗೆ ಕಾಯಬೇಕಾಗಿದೆ. ಮಾರುತಿ ಸುಜುಕಿ ಕಂಪನಿಯು ಅಕ್ಟೋಬರ್ ತಿಂಗಳಿನಿಂದ ಪೂರ್ಣ ಸಾಮರ್ಥ್ಯದೊಂದಿಗೆ ಕಾರುಗಳನ್ನು ಉತ್ಪಾದಿಸುತ್ತಿದೆ.

ಆದ್ದರಿಂದ ಕಂಪನಿಯ ಜನಪ್ರಿಯ ಕಾರುಗಳಾದ ಸ್ವಿಫ್ಟ್, ಆಲ್ಟೊ ಹಾಗೂ ವ್ಯಾಗನ್ಆರ್ ಗಳ ವಿತರಣೆಯನ್ನು ಪಡೆಯಲು 3 - 4 ವಾರಗಳ ಕಾಯಬೇಕಾಗುತ್ತದೆ. ಆದರೆ ಎರ್ಟಿಗಾ ಕಾರಿನ ವಿತರಣೆಯನ್ನು ಪಡೆಯಲು 6 - 8 ವಾರಗಳ ಕಾಯಬೇಕಾಗುತ್ತದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಾರುತಿ ಸುಜುಕಿ ಕಂಪನಿಯು ಡಿಸೆಂಬರ್ 27ರಿಂದ ಜನವರಿ 3ರವರೆಗೆ ನಿರ್ವಹಣೆಯನ್ನು ಸ್ಥಗಿತಗೊಳಿಸಿತ್ತು. ಇನ್ನು ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಕಳೆದ ಆರು ತಿಂಗಳಿನಿಂದ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ.

ಕಳೆದ ಆರು ತಿಂಗಳಲ್ಲಿ ಕಂಪನಿಯು ಕ್ರೆಟಾ ಕಾರಿನ ಉತ್ಪಾದನೆಯನ್ನು 340 ಯುನಿಟ್‌ನಿಂದ 640 ಯುನಿಟ್‌ಗಳಿಗೆ ಹೆಚ್ಚಿಸಿದೆ. ಇದರಿಂದಾಗಿ ಈ ಮೊದಲು 6 ತಿಂಗಳಿದ್ದ ಕಾಯುವ ಅವಧಿಯು 2 - 3 ತಿಂಗಳುಗಳಿಗೆ ಇಳಿಕೆಯಾಗಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಹ್ಯುಂಡೈ ವೆನ್ಯೂ ಹಾಗೂ ವರ್ನಾ ಕಾರುಗಳ ಉತ್ಪಾದನೆಯನ್ನು ಸಹ ಹೆಚ್ಚಿಸಲಾಗಿದೆ. ಹೊಸ ಐ 20 ಕಾರಿನ ವಿತರಣೆಯನ್ನು ಪಡೆಯಲು 2 - 3 ತಿಂಗಳ ಕಾಲ ಕಾಯಬೇಕಾಗಿದೆ. ಹ್ಯುಂಡೈ ಕಂಪನಿಯು ಈ ಅವಧಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ.

ಸದ್ಯಕ್ಕೆ ಕಂಪನಿಯು ಪ್ರತಿ ತಿಂಗಳು ಈ ಕಾರಿನ 8000 - 9000 ಯುನಿಟ್'ಗಳನ್ನು ಉತ್ಪಾದಿಸುತ್ತಿದೆ. ಈ ಪ್ರಮಾಣವನ್ನು ತಿಂಗಳಿಗೆ 12,000 ಯುನಿಟ್‌ಗಳಿಗೆ ಹೆಚ್ಚಿಸುವ ಸಾಧ್ಯತೆಗಳಿವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಿಯಾ ಮೋಟಾರ್ಸ್ ಕಂಪನಿಯ ಸೆಲ್ಟೋಸ್ ಹಾಗೂ ಸೊನೆಟ್ ಕಾರುಗಳ ವಿತರಣೆಯನ್ನು ಪಡೆಯಲು 2-3 ತಿಂಗಳು ಕಾಯಬೇಕಾಗಿದೆ. ಇನ್ನು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದೆ.

ಸದ್ಯಕ್ಕೆ ಪ್ರತಿ ತಿಂಗಳು ಈ ಎಸ್‌ಯುವಿಯ 2000 ಯೂನಿಟ್'ಗಳನ್ನು ಉತ್ಪಾದಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಈ ಪ್ರಮಾಣವನ್ನು 3000 ಯುನಿಟ್ ಹಾಗೂ 3500 ಯುನಿಟ್'ಗಳಿಗೆ ಹೆಚ್ಚಿಸಲಾಗುವುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಉತ್ಪಾದನೆಯ ಹೆಚ್ಚಳವಾದ ನಂತರ ಕಾಯುವ ಅವಧಿಯು ಕಡಿಮೆಯಾಗಲಿದೆ. ಸದ್ಯಕ್ಕೆ ಥಾರ್ ಎಸ್‌ಯುವಿ ವಿತರಣೆಯನ್ನು ಪಡೆಯಲು 20 - 40 ವಾರಗಳ ಕಾಲ ಕಾಯಬೇಕಾಗಿದೆ.

ನಿಸ್ಸಾನ್ ಕಂಪನಿಯು ಈ ವಾರ ತನ್ನ ಮ್ಯಾಗ್ನೈಟ್ ಕಾರಿನ ಉತ್ಪಾದನೆಯನ್ನು ತಿಂಗಳಿಗೆ 2700 ಯೂನಿಟ್'ಗಳಿಂದ 4000 ಯೂನಿಟ್'ಗಳಿಗೆ ಹೆಚ್ಚಿಸುತ್ತಿದೆ. ಇದರಿಂದಾಗಿ ಕಾಯುವ ಅವಧಿಯು 6 ತಿಂಗಳಿಂದ 2 - 3 ತಿಂಗಳುಗಳಿಗೆ ಇಳಿಯಲಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬಹುತೇಕ ಕಂಪನಿಗಳ ಡೀಲರ್'ಗಳು ಡಿಸೆಂಬರ್‌ನಲ್ಲಿ ತಮ್ಮ ಬಳಿಯಿದ್ದ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ 2,76,500 ಯುನಿಟ್ ಕಾರುಗಳು ಮಾರಾಟವಾಗಿವೆ. ಈ ಪ್ರಮಾಣವು ಕಳೆದ ಒಂದು ದಶಕದ ಅವಧಿಯಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚಿನದಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.