ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಕರೋನಾ ವೈರಸ್ ಎರಡನೇ ಅಲೆಯಿಂದ ಉಂಟಾಗುತ್ತಿರುವ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಟಯರ್ ತಯಾರಕ ಕಂಪನಿಯಾದ ಸಿಯೆಟ್ ಟಯರ್ಸ್ ಭಾರತದಲ್ಲಿರುವ ತನ್ನ ಎಲ್ಲಾ ಟಯರ್‌ಗಳ ವಾರಂಟಿ ಅವಧಿಯನ್ನು 3 ತಿಂಗಳವರೆಗೆ ವಿಸ್ತರಿಸಿದೆ.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಲಾಕ್‌ಡೌನ್ ಮಧ್ಯೆ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಏಪ್ರಿಲ್ 1ರಿಂದ ಜೂನ್ 30ರವರೆಗೆ ವಾರಂಟಿ ಅವಧಿ ಮುಕ್ತಾಯಗೊಳ್ಳುವ ಟಯರ್‌ಗಳಿಗೆ ಈ ವಾರಂಟಿ ವಿಸ್ತರಣೆ ಅನ್ವಯವಾಗಲಿದೆ. ಉತ್ಪಾದನೆಯ ದಿನಾಂಕದಿಂದ ಹೆಚ್ಚುವರಿ 3 ತಿಂಗಳ ವಾರಂಟಿ ಅವಧಿಯನ್ನು ಪರಿಗಣಿಸಲಾಗುತ್ತದೆ.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಈ ಬಗ್ಗೆ ಮಾತನಾಡಿರುವ ಸಿಯೆಟ್ ಟಯರ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ನಾಬ್ ಬ್ಯಾನರ್ಜಿರವರು, ನಮ್ಮ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ನಾವು ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ಲಾಕ್‌ಡೌನ್ ಅವಧಿಯಲ್ಲಿ ಗ್ರಾಹಕರಿಗೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ವಾರಂಟಿ ಅವಧಿಯನ್ನು ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಗ್ರಾಹಕರಿಗೆ ವಾರಂಟಿ ಪ್ರಯೋಜನಗಳನ್ನು ಮುಂದುವರೆಸಲು ಬಯಸಿರುವ ಕಂಪನಿಯು, ದೇಶಾದ್ಯಂತವಿರುವ ಎಲ್ಲಾ ಡೀಲರ್'ಗಳ ಮೂಲಕ ತನ್ನ ಗ್ರಾಹಕರಿಗೆ ಉಚಿತ ಹಾಗೂ ಎಕ್ಸ್ ಟೆಂಟೆಡ್ ವಾರಂಟಿ ಪ್ರಯೋಜನಗಳನ್ನು ತಲುಪಿಸಲಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಸಿಯೆಟ್ ಟಯರ್ ಭಾರತದಲ್ಲಿ ಮೊದಲ ಬಾರಿಗೆ ಲೇಬಲ್ ಮಾಡಿದ ಕಾರು ಟಯರ್‌ಗಳನ್ನು ಪರಿಚಯಿಸಿದೆ. ಗ್ರಾಹಕರಿಗೆ ಅಗತ್ಯವಿರುವ ಪ್ರಕಾರ ಸರಿಯಾದ ಟಯರ್‌ಗಳನ್ನು ಒದಗಿಸುವ ಕಾರಣಕ್ಕೆ ಕಂಪನಿಯು ಈ ಟಯರ್‌ಗಳನ್ನು ಪರಿಚಯಿಸಿದೆ.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಕಂಪನಿಯು ವಿಭಿನ್ನ ಕಾರ್ಯಕ್ಷಮತೆ ರೇಟಿಂಗ್ ಅಡಿಯಲ್ಲಿ ಈ ಟಯರ್‌ಗಳನ್ನು ಪರಿಚಯಿಸಿದೆ. ಇಂಧನ ಉಳಿಸುವ ಫ್ಯೂಯಲ್ ಸ್ಮಾರ್ಟ್ ಹಾಗೂ ಸೆಕ್ಯುರಾಡ್ರೈವ್ ಸೇರಿದಂತೆ ಎರಡು ಟಯರ್ ಸರಣಿಗಳನ್ನು ಪರಿಚಯಿಸಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಟಯರ್ ಖರೀದಿದಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಟಯರ್ ಅನ್ನು ಆಯ್ಕೆ ಮಾಡಬಹುದು. ಈ ಟಯರ್ ಸರಣಿಗಳನ್ನು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ತಯಾರಿಸಲಾಗಿದೆ ಎಂದು ಕಂಪನಿ ಹೇಳಿದೆ.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಈ ಟಯರ್‌ಗಳನ್ನು ಹಲವಾರು ಮಾನದಂಡಗಳ ಪ್ರಕಾರ ರೇಟ್ ಮಾಡಲಾಗಿದೆ. ಟಯರ್‌ಗಳಿಗೆ ರೇಟಿಂಗ್ ನೀಡಲು ರೋಡ್ ಗ್ರಿಪ್, ತೇವವಾಗಿರುವ ರಸ್ತೆಯಲ್ಲಿನ ಚಾಲನಾ ಸಾಮರ್ಥ್ಯ, ಶಬ್ದ, ಡ್ರೈವ್ ಕಂಫರ್ಟ್ ಸೇರಿದಂತೆ ಹಲವಾರು ಮಾನದಂಡಗಳನ್ನು ಪಾಲಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಸಿಯೆಟ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ಹಾಗೂ ಹಿಮಾಲಯನ್‌ ಬೈಕುಗಳಿಗೆ ಟಯರ್‌ಗಳನ್ನು ತಯಾರಿಸುತ್ತದೆ. ಸಿಯೆಟ್ ಕಂಪನಿಯು ಇತ್ತೀಚೆಗೆ ವಿಶೇಷ ಸರಣಿಯ ಪಂಕ್ಚರ್ ಫ್ರೀ ಟಯರ್‌ಗಳನ್ನು ಪರಿಚಯಿಸಿದೆ.

ಟಯರ್‌ಗಳ ವಾರಂಟಿ ಅವಧಿ ವಿಸ್ತರಿಸಿದ ಸಿಯೆಟ್ ಟಯರ್ಸ್

ಈ ಪಂಕ್ಚರ್ ಫ್ರೀ ಟಯರ್‌ಗಳು ಪಂಕ್ಚರ್ ಆದ ಸಂದರ್ಭದಲ್ಲಿ ಗಾಳಿಯ ಪ್ರೆಶರ್ ಬೀಳದಂತೆ ತಡೆದು ಬೈಕಿನ ಸಮತೋಲನವನ್ನು ಕಾಪಾಡುತ್ತವೆ ಎಂದು ಸಿಯೆಟ್ ಕಂಪನಿ ಹೇಳಿಕೊಂಡಿದೆ.

Most Read Articles

Kannada
English summary
Warranty period extended for three months on Ceat Tyres. Read in Kannada.
Story first published: Wednesday, May 19, 2021, 17:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X