ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಏರ್ ಸ್ಪೀಡರ್ ಎಂಕೆ 3 ಎಂಬ ಹೆಸರಿನ ಈ ಕಾರು ಪೂರ್ಣ ಗಾತ್ರದ ರಿಮೋಟ್ ಆಪರೇಟೆಡ್ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ (ಇವಿಟಿಒಎಲ್) ಕಾರ್ ಆಗಿದೆ.

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಕಾರಿನ ಕ್ರಿಯಾತ್ಮಕ ಮಾದರಿಗಳನ್ನು ಮುಂಬರುವ ರೇಸಿಂಗ್ ಸರಣಿಯಲ್ಲಿ ಪರಿಚಯಿಸಲಾಗುತ್ತದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಈ ರೇಸಿಂಗ್ ಸರಣಿಯು ನಡೆಯಲಿದೆ ಎಂದು ಹೇಳಲಾಗಿದೆ. ಏರ್ ಸ್ಪೀಡರ್ ಎಂಕೆ 3 ಕಾರ್ ಅನ್ನು ಎಕ್ಸ್'ಪರ್ಟ್ ರಿಮೋಟ್ ಆಪರೇಟರ್'ಗಳು ನೆಲದ ಮೇಲಿಂದ ನಿರ್ವಹಿಸಲಿದ್ದಾರೆ.

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಕಾರು ಇವಿಟಿಒಎಲ್ ಕ್ರಾಫ್ಟ್‌ನಲ್ಲಿ ಹಿಂದೆಂದೂ ಕಾಣದ ಹಲವು ತಂತ್ರ ಹಾಗೂ ಎಂಜಿನಿಯರಿಂಗ್ ಅಂಶಗಳನ್ನು ಒಳಗೊಂಡಿದೆ. ಈ ಕಾರ್ ಅನ್ನು ಸ್ಟೀಲ್'ಗಿಂತಐದು ಪಟ್ಟು ಹೆಚ್ಚು ಬಲಿಷ್ಠವಾದ ಆದರೆ ಅದಕ್ಕಿಂತಲೂ ಹಗುರವಾದ ಕಾರ್ಬನ್ ಫೈಬರ್ ಟಬ್'ನಿಂದ ನಿರ್ಮಿಸಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಕಾರು ಪ್ರತಿ ಮೂಲೆಯಲ್ಲಿ ರೋಟರ್ ಬ್ಲೇಡ್‌ಗಳನ್ನು ಹೊಂದಿದೆ. ಈ ಬ್ಲೇಡ್‌ಗಳು ಸಾಂಪ್ರದಾಯಿಕ ಹೆಲಿಕಾಪ್ಟರ್‌ ಅಥವಾ ಸ್ಥಿರ ರೆಕ್ಕೆಗಳ ವಿಮಾನಗಳಿಗಿಂತ ಹೆಚ್ಚು ತಿರುಗುವ ಸಾಮರ್ಥ್ಯವನ್ನು ಹೊಂದಿವೆ.

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಕಾರು ಲಿಡಾರ್ ಹಾಗೂ ಕ್ರಾಶ್ ಕೊಲ್ಯುಶಾನ್ ಸಿಸ್ಟಂ ಹೊಂದಿದೆ. ಈ ಸಿಸ್ಟಂ ಎಂಕೆ 3 ಕಾರಿನ ಸುತ್ತ ವರ್ಚುವಲ್ ಫೋರ್ಸ್ ಕ್ಷೇತ್ರವನ್ನು ಸೃಷ್ಟಿಸಿ, ಅಂತಿಮವಾಗಿ ಸುರಕ್ಷಿತ ಓಟವನ್ನು ಖಚಿತಪಡಿಸುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಕಾರ್ ಅಂಡ್ ಬೈಕ್ ವರದಿಗಳ ಪ್ರಕಾರ ಎಂಕೆ 3 ಕಾರ್ ಅನ್ನು ಇಂಗ್ಲೆಂಡ್ ಮೂಲದ ಕಂಪನಿಯೊಂದು ಇದನ್ನು ನಿರ್ಮಿಸಿದೆ. ಎಂಕೆ 3 ಫ್ಲೈಯಿಂಗ್ ಕಾರುಗಳ ಪೂರ್ಣ ಗ್ರಿಡ್ ಅನ್ನು ಆಸ್ಟ್ರೇಲಿಯಾದ ಅಡೆಸ್ಲೆ, ಏರ್ ಸ್ಪೀಡರ್ ಹಾಗೂ ಅಲಾಡಾ ಟೆಕ್ನಿಕಲ್ ಸೆಂಟರ್'ನಲ್ಲಿ ತಯಾರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಮುಂಬರುವ ರೇಸಿಂಗ್ ಸರಣಿಯಲ್ಲಿ ಭಾಗವಹಿಸುವ ತಂಡಗಳಿಗೆ ಎಂಕೆ 3 ಇವಿ ಫ್ಲೈಯಿಂಗ್ ಕಾರ್ ಅನ್ನು ಸರಬರಾಜು ಮಾಡಲಾಗುತ್ತದೆ. ಹೊಸ ಎಂಕೆ 3 ಕಾರಿನಲ್ಲಿ 96 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಎಲೆಕ್ಟ್ರಿಕ್ ಮೋಟರ್ ಆಡಿ ಎಸ್‌ಕ್ಯೂ 7 ಕಾರಿಗಿಂತ 429 ಹೆಚ್ಚು ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಪವರ್ ಅನ್ನು ಕಾರಿನ ನಾಲ್ಕು ಮೂಲೆಗಳಲ್ಲಿರುವ ರೋಟರ್ ಬ್ಲೇಡ್‌ಗಳಿಗೆ ಕಳುಹಿಸಲಾಗುತ್ತದೆ.

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಕಾರು 130 ಕೆ.ಜಿ ತೂಕವನ್ನು ಹೊಂದಿದೆ. ಈ ತೂಕವು ಎಫ್ 15 ಇ ಸ್ಟ್ರೈಕ್ ಈಗಲ್ ಫೈಟರ್ ಜೆಟ್‌ಗಿಂತ ಹೆಚ್ಚಿನದಾಗಿದೆ ಎಂದು ಹೇಳಲಾದ ಒತ್ತಡ ತೂಕದ ಅನುಪಾತವನ್ನು ನೀಡುತ್ತದೆ. ಈ ಅನುಪಾತವು ಎಂಕೆ 3 ನಲ್ಲಿ 3.5 ಆಗಿದ್ದರೆ ಫೈಟರ್ ಜೆಟ್‌ನಲ್ಲಿ 1.2 ಆಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಜಾಗತಿಕವಾಗಿ ಅನಾವರಣಗೊಂಡ ವಿಶ್ವದ ಮೊದಲ ಎಲೆಕ್ಟ್ರಿಕ್ ಫ್ಲೈಯಿಂಗ್ ರೇಸಿಂಗ್ ಕಾರು

ಈ ಫೀಚರ್ ಈ ಫ್ಲೈಯಿಂಗ್ ರೇಸ್ ಕಾರ್ ಅನ್ನು ಕೇವಲ 2.8 ಸೆಕೆಂಡುಗಳಲ್ಲಿ ಗಂಟೆಗೆ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡಲು ನೆರವಾಗುತ್ತದೆ. ಈ ಮೂಲಕ ಎಂಕೆ 3 ಕಾರು ಗಂಟೆಗೆ 120 ಕಿ.ಮೀಗಿಂತ ಹೆಚ್ಚು ವೇಗದಲ್ಲಿ ಸಾಗಬಹುದು.

Most Read Articles

Kannada
English summary
World's first flying electric racing car Air Speeder MK3 unveiled globally. Read in Kannada.
Story first published: Monday, May 24, 2021, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X