ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಹಲವು ಶತಮಾನಗಳ ಹಿಂದೆ ಮನುಷ್ಯ ಸಂಚಾರಕ್ಕಾಗಿ ಪ್ರಾಣಿಗಳನ್ನು ಬಳಸುತ್ತಿದ್ದ. ನಂತರ ಎತ್ತಿನ ಗಾಡಿ, ಕುದುರೆ ಗಾಡಿಗಳ ಬಳಕೆಯನ್ನು ಆರಂಭಿಸಿದ. ತಂತ್ರಜ್ಞಾನ ಬೆಳೆದಂತೆ ಕಾರುಗಳನ್ನು ಆವಿಷ್ಕಾರ ಮಾಡಿ, ಅವುಗಳಲ್ಲಿಯೇ ಸಂಚರಿಸುತ್ತಿದ್ದ. ಆರಂಭದಲ್ಲಿ ಕಾರುಗಳು ಕೇವಲ ಸೀಟುಗಳನ್ನು ಮಾತ್ರ ಹೊಂದಿರುತ್ತಿದ್ದವು. ಕಾಲ ಕಳೆದಂತೆ ಕಾರುಗಳಲ್ಲಿ ಹಲವು ಫೀಚರ್ ಗಳನ್ನು ಅಳವಡಿಸಲಾಯಿತು.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಕಾರುಗಳನ್ನು ಕಾಣಬಹುದು. ನಿಜ ಜೀವನದಲ್ಲಿಯೂ ಈ ರೀತಿಯ ಕಾರುಗಳಿದ್ದರೆ ಎಷ್ಟು ಚೆಂದ ಎಂದು ಅನಿಸದೇ ಇರದು. ಆದರೆ ಕೆಲವು ಕಾರುಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಲು ದೊಡ್ಡ ಪರದೆಯನ್ನು ಹೊಂದಿರುತ್ತವೆ. ಕೆಲವು ಕಾರುಗಳಲ್ಲಿ ಮಸಾಜ್ ಸೌಲಭ್ಯವೂ ಇರುತ್ತದೆ.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಈ ಫೀಚರ್ ಗಳನ್ನು ಈಗ ಬಿಡುಗಡೆಯಾಗುತ್ತಿರುವ ಐಷಾರಾಮಿ ಕಾರುಗಳಲ್ಲಿ ನೀಡಲಾಗುತ್ತದೆ. ಇಂತಹ ಸೌಲಭ್ಯಗಳು 20 - 30 ವರ್ಷಗಳ ಹಿಂದೆ ಇರಲಿಲ್ಲ. ಆದರೆ ಅಮೆರಿಕಾದಲ್ಲಿ 1980 ರ ದಶಕದಲ್ಲಿಯೇ ಬಾತ್ ಟಬ್, ಹೆಲಿಪ್ಯಾಡ್ ಹಾಗೂ ಮಿನಿ ಗಾಲ್ಫ್ ಕೋರ್ಸ್ ಗಳನ್ನು ಹೊಂದಿದ್ದ ಉದ್ದವಾದ ಕಾರ್ ಅನ್ನು ನಿರ್ಮಿಸಲಾಗಿತ್ತು ಈ ಸಂಗತಿ ಈಗ ಬಹಿರಂಗವಾಗಿದೆ. ಈ ಕಾರು ಸುಮಾರು 100 ಅಡಿ ಉದ್ದವಿದೆ.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಈ ಕಾರು ತನ್ನ ವಿಶಿಷ್ಟ ಫೀಚರ್ ಹಾಗೂ ಸಂಗತಿಗಳ ಕಾರಣಕ್ಕೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ಗೆ ಸೇರ್ಪಡೆಯಾಗಿದೆ. ಉದ್ದದ ಲಿಮೋಸಿನ್ ಆಗಿ ಅಭಿವೃದ್ಧಿಪಡಿಸಲಾದ ಈ ಕಾರ್ ಅನ್ನು ಅಮೆರಿಕನ್ ಡ್ರೀಮ್ ಎಂದು ಕರೆಯಲಾಗುತ್ತದೆ. ಅಲ್ಲದೆ ಕೆಲವರು ಈ ಉದ್ದದ ಕಾರ್ ಅನ್ನು ಲೆಮೊಕಿನ್ ಎಂದು ಸಹ ಕರೆಯುತ್ತಾರೆ. ಮೇಲೆ ಹೇಳಲಾದ ಈ ಸೌಕರ್ಯಗಳ ಜೊತೆಗೆ ಈ ಕಾರಿನಲ್ಲಿ ರೆಫ್ರಿಜರೇಟರ್, ಅನೇಕ ಟಿವಿ ಹಾಗೂ ಫೋನ್‌ಗಳನ್ನು ಸಹ ಒದಗಿಸಲಾಗಿದೆ.

ಈ ಕಾರ್ ಅನ್ನು ನಿರ್ಮಿಸಲು ಈಗ ಮಾರುಕಟ್ಟೆಯಲ್ಲಿರುವ ಐಷಾರಾಮಿ ಕಾರುಗಳಿಗಿಂತ ಹೆಚ್ಚು ವೆಚ್ಚ ಮಾಡಲಾಗಿದೆ. ಈ ಅಮೆರಿಕನ್ ಡ್ರೀಮ್ ಕಾರಿನಲ್ಲಿ ಒಟ್ಟು 70 ಜನರು ಕುಳಿತು ಕೊಳ್ಳಬಹುದು. ವಿಶ್ವ ದಾಖಲೆಯನ್ನು ತನ್ನ ಮುಡುಗೇರಿಸಿ ಕೊಂಡಿರುವ ಈ ಅಮೆರಿಕನ್ ಡ್ರೀಮ್ ಕಾರ್ ಅನ್ನು ಯಾವುದೇ ಜನಪ್ರಿಯ ಕಾರು ತಯಾರಕ ಕಂಪನಿ ತಯಾರಿಸಿಲ್ಲ. ಬದಲಿಗೆ ಜೇ ಆರ್ಬರ್ಗ್ ಎಂಬ ವ್ಯಕ್ತಿ ಈ ಕಾರ್ ಅನ್ನು ಉತ್ಪಾದಿಸಿದ್ದಾರೆ.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಜೇ ಓರ್ಬರ್ಗ್ ಹಾಲಿವುಡ್ ಚಲನಚಿತ್ರಗಳಿಗಾಗಿ ವಾಹನಗಳನ್ನು ವಿನ್ಯಾಸಗೊಳಿಸುವಲ್ಲಿ ಪರಿಣತಿ ಪಡೆದಿದ್ದಾರೆ. ಈ ಅಮೆರಿಕನ್ ಡ್ರೀಮ್ ಕಾರು ಮಾತ್ರವಲ್ಲದೆ, ಹಲವು ವಿಶಿಷ್ಟ ಕಾರುಗಳನ್ನು ಅವರು ತಮ್ಮ ವೈಯಕ್ತಿಕ ಬಳಕೆಗಾಗಿ ವಿನ್ಯಾಸಗೊಳಿಸಿದ್ದಾರೆ. ಅವರು 1980ರ ದಶಕದಲ್ಲಿ ಈ ಅಮೆರಿಕನ್ ಡ್ರೀಮ್ ಕಾರ್ ಅನ್ನು ತಯಾರಿಸಿದರು. ಅಮೆರಿಕನ್ ಡ್ರೀಮ್ 1976ರ ಕ್ಯಾಡಿಲಾಕ್ ಎಲ್ಡೊರಾಡೊ ಲಿಮೋಸಿನ್ ಕಾರ್ ಅನ್ನು ಆಧರಿಸಿದೆ.

1980 ರಲ್ಲಿ ಉತ್ಪಾದನೆಯನ್ನು ಆರಂಭಿಸಿದ ವಿಶ್ವದ ಅತಿ ಉದ್ದದ ಕಾರಿನ ನಿರ್ಮಾಣವನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಬೇಕಾಯಿತು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಅಂದ ಹಾಗೆ ಈ ಕಾರಿನ ನಿರ್ಮಾಣವನ್ನು ಪೂರ್ಣಗೊಳಿಸಲು ಬರೋಬ್ಬರಿ 12 ವರ್ಷ ಬೇಕಾಯಿತು. ಈ ಕಾರು 1992 ರವರೆಗೂ ರಸ್ತೆಗಿಳಿಯಲಿಲ್ಲ. ಸುಮಾರು 26 ಚಕ್ರಗಳಿರುವ ಈ ಕಾರ್ ಅನ್ನು ಹೇಗೆ ತಿರುಗಿಸುವುದು ಎಂಬ ಪ್ರಶ್ನೆ ಉದ್ಭವಿಸಬಹುದು.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಇದಕ್ಕಾಗಿ ಈ ಲಿಮೋಸಿನ್‌ ಕಾರಿನಲ್ಲಿ ಎರಡೂ ತುದಿಗಳಿಂದ ಕಾರ್ಯನಿರ್ವಹಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಹೆಲಿಕಾಪ್ಟರ್‌ಗಳನ್ನು ನಿಲುಗಡೆ ಮಾಡಲು ಮುಂಭಾಗ ಹಾಗೂ ಹಿಂಭಾಗದ ಬಾನೆಟ್ ಅನ್ನು ಸಮಾನ ಭಾಗವಾಗಿ ಬಳಸಲಾಗುತ್ತದೆ. ಈ ಅಮೆರಿಕನ್ ಡ್ರೀಮ್ ಕಾರು ವಿ 8 ಎಂಜಿನ್‌ಗಳನ್ನು ಹೊಂದಿದ್ದು, ಚಲನ ಶಕ್ತಿಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಎರಡೂ ತುದಿಗಳಿಂದ ಡ್ರೈವಿಂಗ್ ಅನ್ನು ನೀಡಲಾಗಿದ್ದರೂ, ಕಾರ್ ಅನ್ನು ಅರ್ಧಕ್ಕೆ ವಿಭಜಿಸಬಹುದು. ನಂತರ ಮತ್ತೆ ಜೋಡಿಸಬಹುದು ಎಂದು ವರದಿಗಳು ತಿಳಿಸಿವೆ. ಕಾರ್ ಅನ್ನು ತಿರುಗಿಸುವುದಕ್ಕೆ ಹಾಗೂ ಹೊರಡುವುದಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಈ ಆಯ್ಕೆ ನೀಡಲಾಗಿದೆ. ವಾಸ್ತವವಾಗಿ ಈ ಕಾರ್ ಅನ್ನು ಸಾಮಾನ್ಯ ರಸ್ತೆಗಳಲ್ಲಿ ಬಳಸಲು ಉತ್ಪಾದಿಸಿಲ್ಲ.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಬದಲಿಗೆ ಹಾಲಿವುಡ್ ಸಿನಿಮಾಗಳಿಗಾಗಿ ನಿರ್ಮಿಸಲಾಗಿದೆ. ಈ ಲಿಮೋಸಿನ್ ಕಾರು ಇದುವರೆಗೂ ವಿವಿಧ ಪ್ರದರ್ಶನಗಳಲ್ಲಿ ಪ್ರದರ್ಶನಗೊಂಡಿದೆ. ಜೊತೆಗೆ ಕೆಲವು ಶ್ರೀಮಂತರ ಮೋಜಿನ ಪ್ರವಾಸಕ್ಕೆಂದು ಗಂಟೆಗೆ ರೂ. 14,000 ಗಳಂತೆ ಬಾಡಿಗೆಗೆ ನೀಡಲಾಗಿದೆ. ಈ ಕಾರು 1990 ರ ದಶಕದಲ್ಲಿ ಮೊದಲ ಬಾರಿಗೆ ಬಳಕೆಗೆ ಬಂದಾಗ ಅಮೆರಿಕಾ ಜನರಲ್ಲಿ ಹೆಚ್ಚು ಜನಪ್ರಿಯವಾಯಿತು.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಆದರೆ ಈ ಕಾರಿನ ನಿರ್ವಹಣೆ ತುಂಬಾ ದುಬಾರಿಯಾಗಿದ್ದರಿಂದ ಕ್ರಮೇಣ ಆಕರ್ಷಣೆಯನ್ನು ಕಳೆದುಕೊಂಡಿತು. ಅದೇ ರೀತಿ ಸಿನಿಮಾ ನಿರ್ಮಾಣ ಸಂಸ್ಥೆಗಳಿಗೂ ಅಮೆರಿಕನ್ ಡ್ರೀಮ್ ಕಾರು ಬೇಡವಾಯಿತು. ದುಬಾರಿ ನಿರ್ವಹಣೆಯ ಜೊತೆಗೆ ಈ ಕಾರ್ ಅನ್ನು ನಿಲ್ಲಿಸಲು ಸುಮಾರು 100 ಅಡಿ ಸ್ಥಳಾವಕಾಶ ಬೇಕಾಗಿರುವುದು ಸಹ ಇದಕ್ಕೆ ಪ್ರಮುಖ ಕಾರಣವಾಯಿತು.

ಹೆಲಿ ಪ್ಯಾಡ್, ಸ್ವಿಮ್ಮಿಂಗ್ ಪೂಲ್ ಹೊಂದಿರುವ 100 ಅಡಿ ಉದ್ದದ ಕಾರಿದು

ಈ ಕಾರಿನ ಬಹುತೇಕ ಭಾಗಗಳು ತುಕ್ಕು ಹಿಡಿದಿದ್ದು, ನಿರ್ಮಾಣವಾದ ಸುಮಾರು 30 ವರ್ಷಗಳ ನಂತರ ಈ ಅಮೆರಿಕನ್ ಡ್ರೀಮ್ ಕಾರು ಹಾಳಾಗಿದೆ ಎಂದು ಅಲ್ಲಿನ ವರದಿಗಳು ತಿಳಿಸಿವೆ. ಇತ್ತೀಚೆಗೆ ಕಾರ್ ಮ್ಯೂಸಿಯಂ ಒಂದು ಈ ಕಾರ್ ಅನ್ನು ಖರೀದಿಸಿದೆ. ಜೊತೆಗೆ ಕಾರ್ ಅನ್ನು ಕಾರನ್ನು ಹಳೆಯ ಸ್ಥಿತಿಗೆ ತರಲು ಸಿದ್ಧತೆ ನಡೆಸಿದೆ. ಇದರ ಬಗ್ಗೆ ಪಾಸ್ಟ್ ಟೈಮರ್ಸ್ ವರ್ಲ್ದ್ಸ್ ಬೆಸ್ಟ್ ಅಂಡ್ ವರ್ಸ್ಟ್ ಎಂಬ ವೀಡಿಯೊವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

Most Read Articles

Kannada
English summary
World s longest car with helipad and swimming pool details
Story first published: Saturday, November 20, 2021, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X