ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಭಾರತದಲ್ಲಿ ಕಾರು ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಅನೇಕ ಸಾವು-ನೋವುಗಳು ಸಂಭವಿಸುತ್ತಲೇ ಇವೆ. ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಜನಪ್ರಿಯ ಮಾದರಿಗಳು ಸುರಕ್ಷತಾ ವಿಷಯದಲ್ಲಿ ಬಹಳ ಹಿಂದೆ ಇದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ದುರದೃಷ್ಟವಶಾತ್, ಮಾರುತಿ ಸುಜುಕಿಯಂತಹ ಜನಪ್ರಿಯ ಬ್ರ್ಯಾಂಡ್‌ಗಳ ಕೆಲವು ಕಾರುಗಳು ಕನಿಷ್ಠ ಸುರಕ್ಷತೆಯೊಂದಿಗೆ ಮಾರಾಟವಾಗುತ್ತಿದೆ. ಮಾರುತಿ ಸುಜುಕಿ ಕಾರುಗಳು ಹೆಚ್ಚು ಮೈಲೇಜ್ ವಿಷಯಗಳಿಗೆ ಪ್ರಾಮುಖ್ಯಯತೆಯನ್ನು ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಗ್ಲೋಬಲ್ ಎನ್‌ಸಿಎಪಿ ಮತ್ತು ಸರ್ಕಾರದೊಂದಿಗೆ ಸುರಕ್ಷತೆಗಾಗಿ ಜಾಗೃತಿಯನ್ನು ಹರಡುವುದರೊಂದಿಗೆ ನಿಧಾನವಾಗಿ ಬದಲಾಗುತ್ತಿದೆ. ಈಗ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್ ಗಳು ಪ್ರತಿ ಕಾರಿಗೆ ಅಗತ್ಯವಾಗಿವೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಪ್ರತಿಯೊಂದು ವಾಹನದಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಅತ್ಯಗತ್ಯವಾಗಿ ಮಾಡುವಂತೆ ಕಾರು ತಯಾರಕರಿಗೆ ತಿಳಿಸಿದ್ದಾರೆ, ವಿಶೇಷವಾಗಿ ಸಣ್ಣ ಕುಟುಂಬ ಹ್ಯಾಚ್‌ಬ್ಯಾಕ್‌ಗಳಿಗೂ ಅತ್ಯಗತವಾಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮತ್ತು ಮಹೀಂದ್ರಾ ಬ್ರಾಂಡ್‌ಗಳು ಸುರಕ್ಷತೆಯ ಕಾರುಗಳನ್ನು ಹೊಂದಿರುವ ಮೂಲಕ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಹೊಸ ಟಾಟಾ ಪಂಚ್ ಕೂಡ ಆಲ್ಟ್ರೋಜ್ ಮತ್ತು ನೆಕ್ಸನ್‌ನಂತೆಯೇ ಐದು ಸುರಕ್ಷತಾ ಸ್ಟಾರ್ ಗಳಿಸಿತು. ಮಹೀಂದ್ರಾ ಕಂಪನಿಯ XUV300 ಐದು ಸ್ಟಾರ್‌ಗಳನ್ನು ಗಳಿಸಿದ್ದರೆ, ಆಪ್-ರೋಡ್ ಎಸ್‍ಯುವಿಯಾದ ಥಾರ್ ನಾಲ್ಕು ಸ್ಟಾರ್‌ಗಳನ್ನು ಗಳಿಸಿದೆ. ಇನ್ನು ಜಾಗತಿಕ ಎನ್‌ಸಿಎಪಿ, ಹೊಸ ಕಾರು ಮೌಲ್ಯಮಾಪನ ಕಾರ್ಯಕ್ರಮವು ವಾಹನಗಳ ಸುರಕ್ಷತೆಗಾಗಿ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರು ವಿಶ್ವಸಂಸ್ಥೆಯ ನಿರ್ಣಾಯಕ ಮೋಟಾರು ವಾಹನ ಸುರಕ್ಷತಾ ಮಾನದಂಡಗಳನ್ನು ಉತ್ತೇಜಿಸಲು ಮತ್ತು ಕಾರ್ಯಗತಗೊಳಿಸಲು ಕೆಲಸ ಮಾಡುತ್ತಾರೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

NCAP ಕ್ರ್ಯಾಶ್-ಟೆಸ್ಟ್ ನಲ್ಲಿ ಕಾರನ್ನು ವೇಗವಾಗಿ ಓಡಿಸಿ ಡಿಕ್ಕಿ ಹೊಡೆಸಿ ಅಪಘಾತದಂತೆ ಮಾಡಿ ಎಷ್ಟರ ಮಟ್ಟಿಗೆ ಪ್ರಯಾಣಿಕರು ಸುರಕ್ಷಿತವಾಗಿರುತ್ತಾರೆ ಎಂಬುದನ್ನು ಪರೀಕ್ಷಿಸಲಾಗುವುದು. ಭಾರತದ ಜನಪ್ರಿಯ ಮೂರು ಕಾರುಗಳು ಈ ಲ್ಯಾಟಿನ್ NCAP 2021 ರಲ್ಲಿ ಕ್ರ್ಯಾಶ್-ಟೆಸ್ಟ್ ಒಳಪಡಿಸಿದಾಗ ಶೂನ್ಯ ಸ್ಟಾರ್ ರೇಂಟಿಂಗ್ ಅನ್ನು ಪಡೆದುಕೊಂಡಿದೆ, ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ,

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್

ಭಾರತದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಬಿಡುಗಡೆಯಾದರೂ ಮಾರುತಿ ಸ್ವಿಫ್ಟ್ ಕಳೆದ 15 ವರ್ಷದಿಂದ ದೇಶಿಯ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ದಾಖಲೆಯ ಮಟ್ಟದಲ್ಲಿ ಜನಪ್ರಿಯ ಸ್ವಿಫ್ಟ್ ಕಾರು ಮಾರಾಟವಾಗುತ್ತಿದೆ. ಅಲ್ಲದೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಕೂಡ ಸ್ವಿಫ್ಟ್ ಕಾರು ಉತ್ತಮವಾಗಿ ಮಾರಾಟವಾಗುತ್ತಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಈ ಸ್ವಿಫ್ಟ್ ಕಾರು ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್‌ನಲ್ಲಿ ವಯಸ್ಕ ಪ್ರಯಾಣಿಕರ ರಕ್ಷಣೆಗಾಗಿ ಈ ಕಾರು ಶೇಕಡಾ 15.53 ರಷ್ಟು ರೇಟಿಂಗ್ ಪಡೆಯಿತು, ಆದರೆ ಮಕ್ಕಳ ರಕ್ಷಣೆಯಲ್ಲಿ ಇದು ಶೇಕಡಾ ಶೂನ್ಯ ಆಗಿತ್ತು. ಕಾರು ಆಶ್ಚರ್ಯಕರವಾಗಿ ಪಾದಚಾರಿ ರಕ್ಷಣೆ ಮತ್ತು ದುರ್ಬಲ ಟ್ರ್ಯಾಕ್ ಬಳಕೆದಾರರಿಗೆ ಶೇಕಡಾ 66 ರಷ್ಟು ಅಂಕಗಳನ್ನು ಗಳಿಸಿದೆ, ಭದ್ರತಾ ಸಹಾಯ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ರೇಟಿಂಗ್ ಮತ್ತೆ 7 ಪ್ರತಿಶತಕ್ಕೆ ಇಳಿದಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಲ್ಯಾಟಿನ್ ಎನ್‌ಸಿಎಪಿ ತನ್ನ ವರದಿಯಲ್ಲಿ ಶೂನ್ಯ ಸ್ಟಾರ್ ಫಲಿತಾಂಶವನ್ನು ಕಳಪೆ ರಕ್ಷಣೆ ಮತ್ತು ಟೆಸ್ಟ್ ನಡೆಸುವ ವೇಳೆ ಡೋರುಗಳ ಓಪನ್ ಆಗಿರುವುದನ್ನು ವಿವರಿಸಲಾಗಿದೆ. ಹಿಂಭಾಗದ ಪರಿಣಾಮ ಪರೀಕ್ಷೆಗೆ ಯುಎನ್ 32 ಸಾಬೀತು ಇಲ್ಲದಿರುವುದು, ಸ್ಟ್ಯಾಂಡರ್ಡ್ ಸೈಡ್ ಹೆಡ್ ಪ್ರೊಟೆಕ್ಷನ್ ಏರ್‌ಬ್ಯಾಗ್‌ಗಳ ಕೊರತೆ, ಸ್ಟ್ಯಾಂಡರ್ಡ್ ಇಎಸ್‌ಸಿ ಕೊರತೆ ಮತ್ತು ಸಿಆರ್‌ಎಸ್ ಅನ್ನು ಪರೀಕ್ಷೆಗೆ ಶಿಫಾರಸು ಮಾಡದಿರಲು ಸುಜುಕಿಯ ನಿರ್ಧಾರದಿಂದಾಗಿ ಕಾರಿನ ಸ್ಕೋರ್ ಕೂಡ ಕಡಿಮೆಯಾಗಿತ್ತು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಮಾರುತಿ ಸುಜುಕಿ ಬಲೆನೊ

ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಇದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಬಲೆನೊ ಕಾರು ಮಾರಾಟದಲ್ಲಿ 1 ಮಿಲಿಯನ್ ಅಥವಾ 10 ಲಕ್ಷ ಯುನಿಟ್‌ಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಲ್ಯಾಟಿನ್ ನ್ಯೂ ಕಾರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಥವಾ ಲ್ಯಾಟಿನ್ ಎನ್‌ಸಿಎಪಿ ಮೇಡ್-ಇನ್-ಇಂಡಿಯಾ ಸುಜುಕಿ ಬಲೆನೊ ಕಾರನ್ನು ಕೂಡ ಟೆಸ್ಟ್ ಮಾಡಿದೆ. ಮೇಡ್-ಇನ್-ಇಂಡಿಯಾ ಸುಜುಕಿ ಬಲೆನೊ ಕಾರು ಕೂಡ ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ-ಸ್ಟಾರ್ ರೇಟಿಂಗ್ ಅನ್ನು ಗಳಿಸಿದೆ. ಸುಜುಕಿ ಬಲೆನೊವನ್ನು ಸುಜುಕಿಯ ಗುಜರಾತ್ ಮೂಲದ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಪರೀಕ್ಷಿಸಿದ ಮಾದರಿಯು ಎರಡು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್‌ನಂತೆ ಹೊಂದಿತ್ತು. ಇದು ವಯಸ್ಕ ಪ್ರಯಾಣಿಕರ ವಿಭಾಗದಲ್ಲಿ ಶೇ.20.03 ರಷ್ಟು ಮತ್ತು ಮಕ್ಕಳ ವಿಭಾಗದಲ್ಲಿ ಶೇ. 17.06 ರಷ್ಟು ಅಂಕವನ್ನು ಗಳಿಸಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ಪಾದಚಾರಿ ರಕ್ಷಣೆ ಮತ್ತು ದುರ್ಬಲ ರಸ್ತೆ ಬಳಕೆಯಲ್ಲಿ ಶೇ.64.06 ಹಾಗೂ ಸುರಕ್ಷತೆ ಸಹಾಯದ ವೈಶಿಷ್ಟ್ಯಗಳಿಗೆಬಂದಾಗ, ಸ್ಕೋರ್ ನಿರಾಶಾದಾಯಕ ಶೇಕಡಾ 6.98 ಕ್ಕೆ ಕುಸಿಯಿತು. ಶೂನ್ಯ-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದ ಸುಜುಕಿ ಬಲೆನೊ ಕಳಪೆ ಅಡ್ಡ ಪರಿಣಾಮದ ರಕ್ಷಣೆ, ಹಿಂಬದಿಯ ಪರಿಣಾಮ ಪರೀಕ್ಷೆಗೆ UN32 ಪುರಾವೆಯ ಕೊರತೆಯಿಂದಾಗಿ ಕಡಿಮೆ ವಿಪ್ಲ್ಯಾಶ್ ಸ್ಕೋರ್, ಗುಣಮಟ್ಟದ ಸೈಡ್ ಹೆಡ್ ಪ್ರೊಟೆಕ್ಷನ್ ಏರ್‌ಬ್ಯಾಗ್‌ಗಳ ಕೊರತೆ, ಸ್ಟ್ಯಾಂಡರ್ಡ್ ESC ಕೊರತೆ ಮತ್ತು ಮಕ್ಕಳ ಪರೀಕ್ಷೆಗಾಗಿ ಚೈಲ್ಡ್ ರೆಸ್ಟಂಟ್ ಸಿಸ್ಟಂ(CRS) ಹೊಂದಿಲ್ಲ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ರೆನಾಲ್ಟ್ ಡಸ್ಟರ್

ರೆನಾಲ್ಟ್ ಡಸ್ಟರ್ ದೇಶದ ಅತ್ಯಂತ ಹಳೆಯ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದನ್ನು 2012 ರಲ್ಲಿ ಮೊದಲು ಬಿಡುಗಡೆಗೊಳಿಸಲಾಯಿತು ಮತ್ತು ಇದು ವರ್ಷಗಳಲ್ಲಿ ಕೆಲವು ಫೇಸ್‌ಲಿಫ್ಟ್‌ಗಳನ್ನು ಸ್ವೀಕರಿಸಿದೆ ಆದರೆ ಎಂದಿಗೂ ಗಮನಾರ್ಹ ನವೀಕರಣವಾಗಿಲ್ಲ. ಎರಡನೇ ತಲೆಮಾರಿನ ಡಸ್ಟರ್ ಕೂಡ ಫೇಸ್ ಲಿಫ್ಟ್ ಅನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ರೆನಾಲ್ಟ್ ಡಸ್ಟರ್ ಕಾರು ಕ್ರ್ಯಾಶ್ ಟೆಸ್ಟ್‌ನಲ್ಲಿ ವಿಫಲವಾಗಿದೆ. ಲ್ಯಾಟಿನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಎಸ್‌ಯುವಿ ಶೂನ್ಯ-ಸ್ಟಾರ್ ರೇಟಿಂಗ್ ಪಡೆಯಿತು. ಮುಂಭಾಗದ ಪ್ರಭಾವದ ಮೇಲೆ ಎಸ್‍ಯುವಿಯು ಇಂಧನ ಸೋರಿಕೆಯ ಲಕ್ಷಣಗಳನ್ನು ತೋರಿಸಿದೆ. ಎಸ್‌ಯುವಿಯು ಅಡ್ಡ ಪರಿಣಾಮದಲ್ಲಿ ಪಲ್ಟಿ ಹೊಡೆದಿದೆ, ಇದು ಬಿ-ಪಿಲ್ಲರ್ ಮೇಲೆ ಪರಿಣಾಮ ಬೀರಿತು, ಇದು ಒಂದು ಡೋರ್ ತೆರೆಯಲು ಕಾರಣವಾಯಿತು.

ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಗಳಿಸಿದ ಭಾರತದ ಜನಪ್ರಿಯ ಕಾರುಗಳಿವು

ರೆನಾಲ್ಟ್ ಡಸ್ಟರ್ ಮಾದರಿಯು ಡಬಲ್ ಏರ್ ಬ್ಯಾಗ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಜನಪ್ರಿಯ ಎಸ್‌ಯುವಿ ವಯಸ್ಕರ ಆಕ್ಯುಪಂಟ್ ಬಾಕ್ಸ್‌ನಲ್ಲಿ 29.47%, ಚೈಲ್ಡ್ ಆಕ್ಯುಪಂಟ್ ಬಾಕ್ಸ್‌ನಲ್ಲಿ 22.93%, ಪಾದಚಾರಿ ರಕ್ಷಣೆ ಮತ್ತು ದುರ್ಬಲ ರಸ್ತೆ ಬಳಕೆದಾರರ ವಿಭಾಗದಲ್ಲಿ 50.79% ಮತ್ತು ಸುರಕ್ಷತಾ ಅಸಿಸ್ಟ್ ವಿಭಾಗದಲ್ಲಿ 34.88% ಅಂಕಗಳನ್ನು ಪಡೆದಿದೆ,

Most Read Articles

Kannada
English summary
Zero star safety rating cars in india find here more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X