ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಕಾರುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗು ಕಾರೆಂದರೆ ಅದೇನೋ ಮೋಜು.

Recommended Video

Mahindra Scorpio-N ಬಿಡುಗಡೆ ರೂ.11.99 ಲಕ್ಷಕ್ಕೆ | ರೂಪಾಂತರಗಳು, ಎಂಜಿನ್, ಬುಕಿಂಗ್ ಮತ್ತು ಇನ್ನಷ್ಟು..

ಹೊಸ ಕಾರುಗಳನ್ನು ಕಂಡರೆ ಒಮ್ಮೆಯಾದರು ಅದರಲ್ಲಿ ಪ್ರಯಾಣಿಸಬೇಕು, ಅದನ್ನು ಓಡಿಸಬೇಕು ಎಂದುಕೊಳ್ಳುವವರೆ ಹೆಚ್ಚು. ಆದರೆ ಮಕ್ಕಳು ಕಾರನ್ನು ಓಡಿಸಬೇಕು ಎಂದುಕೊಳ್ಳುವುದು ಅನಾಹುತಗಳಿಗೆ ಕಾರಣವಾಗಬಹುದು.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಇದಕ್ಕೆ ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ಹಾಲಿವುಡ್ ನಟರೊಬ್ಬರ 10 ವರ್ಷದ ಮಗ ದುಬಾರಿ ಕಾರೊಂದಕ್ಕೆ ಏರಿ ಚಾಲನೆ ಮಾಡಲು ಪ್ರಯತ್ನಿಸಿ ಮತ್ತೊಂದು ದುಬಾರಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಈ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ನೋಡೋಣ.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಹಾಲಿವುಡ್ ನಟ, ನಿರ್ದೇಶಕ ಮತ್ತು ಬರಹಗಾರರಾದ ಬೆನ್ ಅಫ್ಲೆಕ್ ಕಾರ್‌ ಡೀಲರ್‌ ಶಾಪ್‌ವೊಂದಕ್ಕೆ ಪತ್ನಿ ಜೆನ್ನಿಫರ್ ಲೋಪೆಜ್ ಅವರೊಂದಿಗೆ ತಮ್ಮ 10 ವರ್ಷದ ಮಗ ಸ್ಯಾಮ್ಯುಯೆಲ್ ಗಾರ್ನರ್ ಅಫ್ಲೆಕ್ ಅವರನ್ನು ಕರೆದೊಯ್ದಿದ್ದರು. ಈ ವೇಳೆ ಡೀಲರ್‌ ಶಾಪ್‌ನಲ್ಲಿ ಕಾರುಗಳನ್ನು ನೋಡಲು ಹೋಗಿದ್ದ ಬೆನ್ ಅಫ್ಲೆಕ್, ಮಗ ಹಾಗೂ ಪತ್ನಿಯನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದರು.

ಈ ವೇಳೆ ಲಂಬೋರ್ಘಿನಿ ಉರಸ್ ಕಾರಿನಲ್ಲಿ ಡ್ರೈವರ್ ಸೀಟ್‌ಗೆ ಹಾರಿದ ಮಗ ಸ್ಯಾಮ್ಯುಯೆಲ್, ರಿವರ್ಸ್ ಗೇರ್ ಹಾಕಿ ವಾಹನವನ್ನು ಹಿಂದಕ್ಕೆ ಮೂವ್ ಮಾಡಿದ್ದಾನೆ. ಇದೇ ವೇಳೆ ಹಿಂದೆ ನಿಂತಿದ್ದ BMW ಕಾರಿಗೆ ಡಿಕ್ಕಿಯಾಗಿದೆ. ಈ ಘಟನೆಯು 777 ಎಕ್ಸೋಟಿಕ್ಸ್ - ಬೆವರ್ಲಿ ಹಿಲ್ಸ್ ಐಷಾರಾಮಿ ಕಾರು ಬಾಡಿಗೆ ಡೀಲರ್‌ಶಿಪ್‌ನಲ್ಲಿ ಸಂಭವಿಸಿದೆ.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಬೆನ್ ಅಫ್ಲೆಕ್ ತನ್ನ ಮಗ ಸ್ಯಾಮ್ಯುಯೆಲ್‌ನನ್ನು ಲ್ಯಾಂಬೋರ್ಗಿನಿ ಉರುಸ್‌ನಲ್ಲಿ ಬಿಟ್ಟು ಹೋಗಿದ್ದಾಗ ವಿವಿಧ ಕಾರುಗಳನ್ನು ನೋಡುತ್ತಿದ್ದರು. ಇದೇ ವೇಳೆ ಅವರ ತಾಯಿ ಕೂಡ ಕಾರಿನಲ್ಲಿ ಇದ್ದರು, ಆದರೆ ಮಗ ಆಟವಾಡುತ್ತಿದ್ದಾನೆ ಎಂದು ಸುಮ್ಮನಾಗಿದ್ದರು. ಆದರೆ ಘಟನೆಯ ಬಳಿಕ ಗಾಬರಿಯಾಗಿ ಕಾರಿನ ಹಾನಿಯನ್ನು ನೋಡಲು ವಾಹನದಿಂದ ಇಳಿದು ಬಂದರು.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಇನ್ನು ಡೀಲರ್‌ಶಿಪ್‌ನಲ್ಲಿದ ಬೆನ್ ಅಫ್ಲೆಕ್ ಘಟನೆಯ ನಂತರ ಸ್ಥಳಕ್ಕೆ ಓಡಿಬಂದು ಗಾಬರಿಗೊಂಡಿದ್ದ ತನ್ನ ಮಗನನ್ನು ಅಪ್ಪಿಕೊಂಡು ಸಾಂತ್ವನ ಹೇಳಿದರು. ಈ ವೇಳೆ ಬೆನ್‌ನ ಪ್ರತಿನಿಧಿಯೊಬ್ಬರು ಯಾವುದೇ ಹಾನಿ ಉಂಟಾಗಿಲ್ಲ ಎಂದು ಹೇಳಿದರು.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಸ್ಥಳೀಯ ವರದಿಯ ಪ್ರಕಾರ, ಎಂಜಿನ್ ಚಾಲನೆಯಲ್ಲಿದ್ದಾಗ ಸ್ಯಾಮ್ಯುಯೆಲ್ ಡ್ರೈವರ್ ಸೀಟಿಗೆ ಹೋಗಿ ವಾಹನವನ್ನು ರಿವರ್ಸ್ ಗೇರ್‌ಗೆ ಹಾಕಿದ್ದಾನೆ. ಪಾರ್ಕಿಂಗ್ ಜಾಗದಲ್ಲಿ ಇಕ್ಕಟ್ಟಿನ ಜಾಗವಿದ್ದರಿಂದ ಲಂಬೋರ್ಗಿನಿ ಉರುಸ್ ನಿಲ್ಲಿಸಿದ ಸ್ವಲ್ಪ ಅಂತರಲದಲ್ಲೇ BMW ಇದ್ದ ಕಾರಣ ಹಿಂದಕ್ಕೆ ಕಾರನ್ನು ಮೂವ್ ಮಾಡಿದಾಗ ಘಟನೆ ನಡೆದಿದೆ.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಘಟನೆ ವೇಳೆ ಅಲ್ಲೇ ಇದ್ದ 777 ಎಕ್ಸೋಟಿಕ್ಸ್‌ ಡೀಲರ್‌ಶಿಪ್‌ ಉದ್ಯೋಗಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿ, ಸ್ಯಾಮ್ಯುಯೆಲ್ ಕಾರಿಗೆ ಹತ್ತಿದಾಗ ಅದು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಿತಿತ್ತು. ಪಾರ್ಕಿಂಗ್ ಸ್ಥಳದಲ್ಲಿ ಕಾರುಗಳನ್ನು ಪರಸ್ಪರ ಹತ್ತಿರದಲ್ಲಿ ನಿಲ್ಲಿಸಿರುವುದು ಈ ಘಟನೆಗೆ ಕಾರಣವಾಗಿದೆ. ಬೆನ್ ಅಫ್ಲೆಕ್ ಅವರಿಗೆ ಕಾರುಗಳೆಂದರೆ ಬಹಳ ಇಷ್ಟ. ಅವರು ಹೊಸ ಕಾರುಗಳು ಬಂದಾಗಲೆಲ್ಲಾ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಹೇಳಿದರು.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಲ್ಯಾಂಬೊರ್ಗಿನಿ ಉರುಸ್

ಉರುಸ್ ಪ್ರಪಂಚದಾದ್ಯಂತ ಸಾರ್ವಕಾಲಿಕ ವೇಗವಾಗಿ ಮಾರಾಟವಾಗುವ ಸ್ಪೋರ್ಟಿ ಕಾರಾಗಿದೆ. ಉರುಸ್ ಅತ್ಯಂತ ಶಕ್ತಿಶಾಲಿ 4.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದು 650 PS ನ ಗರಿಷ್ಠ ಶಕ್ತಿಯನ್ನು ಮತ್ತು 850 Nm ನ ಗರಿಷ್ಠ ಟಾರ್ಕ್ ಅನ್ನು ಹೊರ ಹಾಕುವ ಸಾಮರ್ಥ್ಯವನ್ನು ಹೊಂದಿದೆ.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಇದು AWD ಸಿಸ್ಟಮ್ ಮತ್ತು 8-ಸ್ಪೀಡ್ Automatic transmission ನೊಂದಿಗೆ ಬರುತ್ತದೆ. ಉರುಸ್ ಕೇವಲ 3.6 ಸೆಕೆಂಡ್‌ಗಳಲ್ಲಿ 0-100 ಕಿಮೀ/ಗಂ ವೇಗವನ್ನು ತಲುಪುವುದರ ಜೊತೆಗೆ ಗಂಟೆಗೆ 305 ಕಿ.ಮೀ ಗರಿಷ್ಠ ವೇಗವನ್ನು ತಲುಪಬಲ್ಲದು.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಲಂಬೋರ್ಗಿನಿ ಉರುಸ್ ಬ್ರ್ಯಾಂಡ್‌ನ ಮೊದಲ ಆಧುನಿಕ SUV ಆಗಿದ್ದು, ಇದು ಪ್ರಪಂಚದಾದ್ಯಂತ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಭಾರತದಲ್ಲಿ, ಇದು ಅತ್ಯಂತ ವೇಗವಾಗಿ ಮಾರಾಟವಾಗುವ ಲಂಬೋರ್ಗಿನಿ ಮಾದರಿಯಾಗಿದೆ. ಬ್ರ್ಯಾಂಡ್ ದೇಶದಲ್ಲಿ ಉನ್ನತ-ಕಾರ್ಯಕ್ಷಮತೆಯ SUV ಯ 100 ಕ್ಕೂ ಹೆಚ್ಚು ಘಟಕಗಳನ್ನು ವಿತರಿಸಿದೆ.

ದುಬಾರಿ BMW ಕಾರಿಗೆ ಡಿಕ್ಕಿ ಹೊಡೆದ ಹಾಲಿವುಡ್ ಖ್ಯಾತ ನಟನ 10 ವರ್ಷದ ಮಗ

ಈ ಸುಂದರವಾದ ಇಟಾಲಿಯನ್ ಆಧುನಿಕ SUV ಯ ಮೂಲ ಬೆಲೆಯು INR 5 ಕೋಟಿಗಳಿಂದ ಪ್ರಾರಂಭವಾಗುತ್ತದೆ. ಜೊತೆಗೆ ಒಳಗೊಂಡಿರುವ ಗ್ರಾಹಕೀಕರಣದ ಮಟ್ಟಕ್ಕೆ ಅನುಗುಣವಾಗಿ ಬೆಲೆ ಬದಲಾಗುತ್ತದೆ. ಇದು ಆಲ್-ವೀಲ್-ಡ್ರೈವ್ ಸಿಸ್ಟಮ್‌ನೊಂದಿಗೆ ಎಲ್ಲಾ ನಾಲ್ಕು ಚಕ್ರಗಳ ಶಕ್ತಿಯನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.

Most Read Articles

Kannada
English summary
10 year old boy who collided with an expensive car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X