ಮಹೀಂದ್ರಾ ಕಾರುಗಳಿಗಾಗಿ ಕಾಯುತ್ತಿದ್ದಾರೆ 2.50 ಲಕ್ಷ ಗ್ರಾಹಕರು: ಡೆಲಿವರಿ ವಿಳಂಬಕ್ಕೆ ಕಾರಣವೇನು?

ಭಾರತದ ಜನಪ್ರಿಯ ಕಾರು ತಯಾರಕರಾದ ಮಹೀಂದ್ರಾ & ಮಹೀಂದ್ರಾ ಅವರು ಕಳೆದ ಕೆಲ ವರ್ಷಗಳಿಂದ ಯಶಸ್ಸಿನ ಸಿಹಿ ರುಚಿಯನ್ನು ಅನುಭವಿಸುತ್ತಿದ್ದಾರೆ.

ಆ ಯಶಸ್ಸು ಎರಡನೇ ತಲೆಮಾರಿನ ಥಾರ್‌ನಿಂದ ಇದೀಗ ಬಿಡುಗಡೆಯಾದ ಸ್ಕಾರ್ಪಿಯೊ-ಎನ್ ಎಸ್‌ಯುವಿವರೆಗೆ ವಿಸ್ತರಿಸಿದೆ. ಆದರೆ ಮಹೀಂದ್ರಾದ ಈ ಯಶಸ್ಸು ಕೇವಲ ಖರೀದಿದಾರರನ್ನು ಆಕರ್ಷಿಸಲು ಮತ್ತು ಬುಕಿಂಗ್ ಪಡಿಯಲು ಮಾತ್ರ ಸೀಮಿತವಾಗಿದೆ.

ಡೆಲಿವರಿ ವಿಚಾರದಲ್ಲಿ ಮಹೀಂದ್ರಾ ಹಿಂದುಳಿದಿದ್ದು, ಗ್ರಾಹಕರಿಗಾಗಿ ಸ್ವಲ್ಪ ಹೆಚ್ಚಾಗಿಯೇ ಬೆವರು ಹರಿಸುತ್ತದೆ. ಆಗಸ್ಟ್ 2021 ರಲ್ಲಿ XUV700 ಅನ್ನು ಬಿಡುಗಡೆ ಮಾಡಿದಾಗ, ಬುಕ್ಕಿಂಗ್ ಪ್ರಾರಂಭವಾದ ಎರಡು ದಿನಗಳಲ್ಲಿ ವಾಹನವನ್ನು ಹುಡುಕುವ ಜನರ ಸಂಖ್ಯೆ 50,000 ಯುನಿಟ್‌ಗಳನ್ನು ತಲುಪಿತು. ಆದರೆ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ಬುಕಿಂಗ್‌ಗಳ ಸಂಖ್ಯೆಯನ್ನು ನಾವು ನೋಡಿದರೆ, ವಾಹನವು ಕೇವಲ 30 ನಿಮಿಷಗಳಲ್ಲಿ 1 ಲಕ್ಷ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ.

ಇದಲ್ಲದೇ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು ಥಾರ್ ಕೂಡ ಹೆಚ್ಚು ಬೇಡಿಕೆಯಲ್ಲಿದೆ. ಹಾಗಾಗಿ ಪ್ರಸ್ತುತ 2.50 ಲಕ್ಷಕ್ಕೂ ಹೆಚ್ಚು ಜನರು ಮಹೀಂದ್ರಾ ಎಸ್‌ಯುವಿಗಳ ವಿತರಣೆಗಾಗಿ ಕಾಯುತ್ತಿದ್ದಾರೆ ಎಂದು ಹೊಸ ವರದಿಯೊಂದು ಹೇಳುತ್ತಿದೆ. ದೀರ್ಘಾವಧಿಯ ಕಾಯುವಿಕೆಯಿಂದಾಗಿ ಗ್ರಾಹಕರ ಸಂಕಟಗಳು ಈಗ ತುಂಬಾ ಹೆಚ್ಚಾಗಿವೆ.

ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಾಗಿ, ಮಹೀಂದ್ರಾಗೆ ವಿತರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕಾಯುವ ಅವಧಿಯನ್ನು ಕಡಿಮೆ ಮಾಡಲು ತನ್ನ ಉತ್ಪಾದನೆಯನ್ನು ಹೆಚ್ಚಿಸುವುದಾಗಿ ಮಹೀಂದ್ರಾ ಇತ್ತೀಚೆಗೆ ಘೋಷಿಸಿದೆ. ನವೆಂಬರ್ 1, 2022 ರ ವೇಳೆಗೆ ತನ್ನ SUV ಶ್ರೇಣಿಯ 2.60 ಲಕ್ಷ ಬುಕಿಂಗ್‌ಗಳು ಬಾಕಿ ಉಳಿದಿವೆ ಎಂದು ಮಹೀಂದ್ರಾ ಘೋಷಿಸಿತ್ತು.

ಇವುಗಳನ್ನು ಇನ್ನೂ ಗ್ರಾಹಕರಿಗೆ ತಲುಪಿಸಬೇಕಿದೆ. ಈ ಸಂಖ್ಯೆಯು ಥಾರ್‌ನ 20,000 ಯುನಿಟ್‌ಗಳು, XUV300 ಕಾಂಪ್ಯಾಕ್ಟ್ ಎಸ್‌ಯುವಿಯ 13,000 ಯುನಿಟ್‌ಗಳು, ಬೊಲೆರೊ ಶ್ರೇಣಿಯ 13,000 ಯುನಿಟ್‌ಗಳು, ಹೊಸ ಸ್ಕಾರ್ಪಿಯೊ-ಎನ್ ಮತ್ತು ಕ್ಲಾಸಿಕ್ ಸೇರಿದಂತೆ 1.30 ಲಕ್ಷ ಬುಕಿಂಗ್‌ಗಳು ಮತ್ತು ಫ್ಲ್ಯಾಗ್‌ಶಿಪ್ ಎಕ್ಸ್‌ಯುವಿ700 ಮಾದರಿಯ 80,000 ಬುಕಿಂಗ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಮಹೀಂದ್ರಾದ ಮಾಸಿಕ ಉತ್ಪಾದನಾ ಸಾಮರ್ಥ್ಯವು 29,000 ಯುನಿಟ್‌ಗಳವರೆಗೆ ಇದೆ. ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರ ಕಾಯುವ ಅವಧಿಯನ್ನು ಕಡಿಮೆ ಮಾಡಲು, ಕಂಪನಿಯು FY2024 ರ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಮಾಸಿಕ ಸಾಮರ್ಥ್ಯವನ್ನು 49,000 ಯುನಿಟ್‌ಗಳಿಗೆ ಹೆಚ್ಚಿಸಲು ಯೋಜಿಸಿದೆ. ಇದಕ್ಕಾಗಿ ಕಂಪನಿಯು ಮುಂದಿನ 3 ವರ್ಷಗಳಲ್ಲಿ 7,900 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ.

ಸ್ಕಾರ್ಪಿಯೊ-ಎನ್, ಎಕ್ಸ್‌ಯುವಿ700 ಮತ್ತು ಥಾರ್‌ನಂತಹ ಪ್ರಸ್ತುತ ಬೇಡಿಕೆಯಲ್ಲಿರುವ ಎಸ್‌ಯುವಿಗಳ ಹೊರತಾಗಿ, ಮಹೀಂದ್ರಾ ಭವಿಷ್ಯದ ಉತ್ಪನ್ನಗಳನ್ನು ತನ್ನ ಶ್ರೇಣಿಯಲ್ಲಿ ಸೇರಿಸಲು ಸಜ್ಜಾಗುತ್ತಿದೆ. ಈ ಭವಿಷ್ಯದ ಉತ್ಪನ್ನಗಳು 5-ಡೋರ್ ಥಾರ್ ಅನ್ನು ಒಳಗೊಂಡಿವೆ, ಇದು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದರೇ ಮುಂದಿನ ವರ್ಷದ ಆರಂಭದಲ್ಲಿ XUV400 ಎಲೆಕ್ಟ್ರಿಕ್ SUV ಬಿಡುಗಡೆಯಾಗಲಿದೆ.

ಮಹೀಂದ್ರಾ ತನ್ನ EV ಶ್ರೇಣಿಗೆ 15,000 ದಿಂದ 17,000 ಯುನಿಟ್‌ಗಳ ಸಂಯೋಜಿತ ಮಾಸಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಘನ ಅಡಿಪಾಯವನ್ನು ಸಹ ರಚಿಸುತ್ತದೆ. ಈ ಕ್ರಮದೊಂದಿಗೆ, ಕಂಪನಿಯು ತನ್ನ ಒಟ್ಟು ಉತ್ಪಾದನಾ ಸಾಮರ್ಥ್ಯದ ಶೇ30 ರಷ್ಟು ಇವಿಗಳಿಗಾಗಿ ಇರಿಸಿಕೊಳ್ಳಲು ಯೋಜಿಸಿದೆ. ಮುಂದಿನ ವರ್ಷದ ಬ್ರ್ಯಾಂಡ್‌ನ ಯೋಜನೆಗಳನ್ನು ನೋಡುವುದಾದರೆ, ಬೊಲೆರೊ ನಿಯೋ ಪ್ಲಸ್ ಎಂಬ ದೊಡ್ಡ ವಾಹನವು ಸಹ ಕಾರ್ಯನಿರ್ವಹಿಸುತ್ತಿದೆ.

Most Read Articles

Kannada
English summary
2 50 lakh customers waiting for mahindra cars
Story first published: Tuesday, November 15, 2022, 19:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X