ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ವಿಶ್ವಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಪರಿಸರ ಸ್ನೇಹ ವಾಹನಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದ್ದು, ಎಥೆನಾಲ್ ಬಳಕೆಗಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಗಮನಹರಿಸುತ್ತಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ವಿಶ್ವ ಜೈವಿಕ ಇಂಧನ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆ ಹೆಚ್ಚಳಕ್ಕಾಗಿ ಇಂದು ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಹರಿಯಾದ ಪಾಣಿಪತ್‌ನಲ್ಲಿ ನಿರ್ಮಿಸಲಾದ ಎರಡನೇ ತಲೆಮಾರಿನ ಎಥೆನಾಲ್ ಉತ್ಪಾದನಾ ಸ್ಥಾವರವನ್ನು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಕ್ಕೆ ಸಮರ್ಪಿಸಿದರು.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಹೊಸ ಘಟಕದ ನಿರ್ಮಾಣಕ್ಕಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಕಂಪನಿಯು ರೂ. 900 ಕೋಟಿ ವೆಚ್ಚದಲ್ಲಿ ಈ ಜೈವಿಕ ಇಂಧನ ಘಟಕವನ್ನು ನಿರ್ಮಿಸಿದ್ದು, ದೇಶದಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಬಲಪಡಿಸುವ ಉದ್ದೇಶದಿಂದ ಈ ಹೊಸ ಸ್ಥಾವರವನ್ನು ಸ್ಥಾಪಿಸಲಾಗಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಹೊಸ ಜೈವಿಕ ಇಂಧನ ಉತ್ಪಾದನಾ ಘಟಕದಿಂದ ಕಂಪನಿಯು ಪ್ರತಿ ವರ್ಷ 30 ಮಿಲಿಯನ್ ಲೀಟರ್‌ಗೂ ಅಧಿಕ ಜೈವಿಕ ಇಂಧನವನ್ನು ಉತ್ಪಾದಿಸಲಿದ್ದು, ಕೃಷಿ-ಬೆಳೆ ಅವಶೇಷಗಳಿಂದಲೇ ಎಥೆನಾಲ್ ತಯಾರಿಕೆ ಮಾಡಲಾಗುತ್ತದೆ. ಇದು ರೈತರನ್ನು ಸಬಲಗೊಳಿಸುವುದಲ್ಲದೇ ಹೊಸ ಉದ್ಯಮ ಕಾರ್ಯಾಚರಣೆಯು ರೈತರಿಗೂ ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಹೊಸ ಘಟಕ ಉತ್ಪಾದನಾ ಆರಂಭಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಪ್ರಕೃತಿಯನ್ನು ಆರಾಧಿಸುವ ನಮ್ಮ ದೇಶದಲ್ಲಿ ಜೈವಿಕ ಇಂಧನವು ಪ್ರಕೃತಿಯನ್ನು ರಕ್ಷಿಸುವ ಕೀಲಿಯಾಗಿದೆ. ನಮ್ಮ ರೈತರು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಿದ್ದು, ನಮಗೆ ಜೈವಿಕ ಇಂಧನ ಎಂದರೆ ಪರಿಸರವನ್ನು ಉಳಿಸುವ ಹಸಿರು ಇಂಧನ ಎಂದಿದ್ದಾರೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಜೊತೆಗೆ ಹೊಸ ಜೈವಿಕ ಇಂಧನ ಸ್ಥಾವರಗಳು ಸ್ಥಾಪಿಯಾದರೇ ಇದು ಹೊಸ ಉದ್ಯೋಗ ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಎಥೆನಾಲ್ ಉತ್ಪಾದನೆಯಿಂದ ಎಲ್ಲಾ ಗ್ರಾಮಸ್ಥರು, ರೈತರು ಪ್ರಯೋಜನ ಪಡೆಯಲಿದ್ದು, ಇದರಿಂದ ಮಾಲಿನ್ಯದ ಸವಾಲುಗಳು ಕಡಿಮೆಯಾಗುತ್ತವೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಪ್ರತಿ ವರ್ಷ 30 ಮಿಲಿಯನ್ ಲೀಟರ್ ಜೈವಿಕ ಇಂಧನವನ್ನು ಉತ್ಪಾದಿಸಲಾಸಲಾಗತ್ತಿದ್ದು, ಸ್ಥಳೀಯ ತಂತ್ರಜ್ಞಾನದ ಆಧಾರದ ಮೇಲೆ, ಈ ಯೋಜನೆಯು ವಾರ್ಷಿಕವಾಗಿ ಸುಮಾರು ಎರಡು ಲಕ್ಷ ಟನ್ ಭತ್ತದ ಹುಲ್ಲು ಬಳಸಿ ವಾರ್ಷಿಕವಾಗಿ ಸುಮಾರು 30 ಮಿಲಿಯನ್ ಲೀಟರ್ ಜೈವಿಕ ಇಂಧನವನ್ನು ಅಂದರೆ ಎಥೆನಾಲ್ ಅನ್ನು ಉತ್ಪಾದಿಸುತ್ತದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಇದಲ್ಲದೆ ಕೃಷಿ-ಬೆಳೆ ಅವಶೇಷಗಳನ್ನು ಸಹನ ಎಥೆನಾಲ್ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದು ಇದು ರೈತರನ್ನು ಸಬಲಗೊಳಿಸುತ್ತದೆ ಮತ್ತು ಹೆಚ್ಚುವರಿ ಆದಾಯವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಎಥೆನಾಲ್ ತಯಾರಿಕೆಗಾಗಗಿ ಇನ್ಮುಂದೆ ಅನಾವಶ್ಯಕವಾಗಿ ಸುಡಲಾಗುವ ಭತ್ತದ ಒಣಹುಲ್ಲನ್ನು ವ್ಯಾಪಕ ಬಳಕೆಯಾಗುವುದದರಿಂದ ಸುಡುವ ಪ್ರಕ್ರಿಯೆ ಕಡಿಮೆ ಮಾಡುತ್ತದೆ. ಭತ್ತದ ಒಣಹುಲ್ಲಿನ ಕೊಯ್ಲು, ಸಾಗಣೆ, ಸಂಗ್ರಹಣೆ ಇತ್ಯಾದಿಗಳಿಗೆ ಸರಬರಾಜು ಸರಪಳಿಯಲ್ಲಿ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಈ ಯೋಜನೆಯು ವರ್ಷಕ್ಕೆ ಸುಮಾರು 3 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಗೆ ಸಮಾನವಾದ ಹಸಿರುಮನೆ ಅನಿಲಗಳ ಕಡಿತವಾಗಲಿದ್ದು, ಇದು ದೇಶದ ರಸ್ತೆಗಳಲ್ಲಿ ವಾರ್ಷಿಕವಾಗಿ ಸುಮಾರು 63,000 ಕಾರುಗಳನ್ನು ಬದಲಿವಷ್ಟು ಸಮನಾಗಿರುತ್ತದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಜೈವಿಕ ಇಂಧನವನ್ನು ತಯಾರಿಸಲು ಕೇವಲ ಭತ್ತ ಹುಲ್ಲನ್ನು ಮಾತವಲ್ಲದೇ ವಿವಿಧ ಸಾವಯವ ಉತ್ಪನ್ನಗಳಾದ ಜೋಳ, ಕಬ್ಬು ಮತ್ತು ಭತ್ತದ ಬೆಳೆಗಳನ್ನು ಸಹ ಬಳಸಲಾಗುತ್ತದೆ. ಸದ್ಯ ಹೆಚ್ಚಿನ ಮಟ್ಟದಲ್ಲಿ ಜಟ್ರೋಫಾ ​​ಒಂದು ರೀತಿಯ ಸಸ್ಯದ ಮೂಲಕ ಜೈವಿಕ ಇಂಧನ (ಎಥೆನಾಲ್) ತಯಾರಿಸಲು ಬಳಸಲಾಗುತ್ತಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಸಾವಯವ ಉತ್ಪನ್ನಗಳನ್ನು ಜೈವಿಕ ಇಂಧನ ಕಾರ್ಖಾನೆಯಲ್ಲಿ ರಾಸಾಯನಿಕ ಸಂಸ್ಕರಣೆಯ ಹಲವಾರು ಹಂತಗಳಲ್ಲಿ ಸಿದ್ದಪಡಿಸಲಾಗುತ್ತದೆ. ಇದು ಕಡಿಮೆ ಕ್ಯಾಲೋರಿಫಿಕ್ ಮೌಲ್ಯವನ್ನು ಹೊಂದಿದ್ದು, ಪೆಟ್ರೋಲ್‌ಗಿಂತಲೂ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೂ ಅದು ದಹಿಸಿದಾಗ ಇಂಗಾಲದ ಡೈಆಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳ ಹೊರಸೂಸುವಿಕೆಯ ಪ್ರಮಾಣ ಕೂಡಾ ಕಡಿಮೆ ಇರುತ್ತದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಈ ಮೂಲಕ ಪೆಟ್ರೋಲ್ ದರ ಇಳಿಕೆಗಾಗಿ ಕೇಂದ್ರ ಸರ್ಕಾರವು 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹಂತ-ಹಂತವಾಗಿ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರವು ಇದೀಗ ಅವಧಿಗೂ ಮುನ್ನವೇ ಈಗಾಗಲೇ ಶೇ.10 ಎಥೆನಾಲ್ ಮಿಶ್ರಣದ ಗುರಿಯನ್ನು ತಲುಪಲಾಗಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಯೋಜನೆಯ ಪ್ರಕಾರ 2022ರ ಕೊನೆಯಲ್ಲಿ ಶೇ.5 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಹೊಂದಲಾಗಿತ್ತು. ಆದರೆ ನಿಗದಿತ ಅವಧಿಗೂ ಮುನ್ನವೇ ಎಥೆನಾಲ್ ಪ್ರಮಾಣದ ಮಿಶ್ರಣವನ್ನು ಮೇ ಆರಂಭದಲ್ಲಿಯೇ ಗುರಿತಲುಪಲಾಗಿದ್ದು, ಈ ವರ್ಷಾಂತ್ಯಕ್ಕೆ ಇದರ ಪ್ರಮಾಣವು ಶೇ.12ರಿಂದ ಶೇ.14ಕ್ಕೆ ಹೆಚ್ಚಳವಾಗಬಹುದಾಗಿದೆ.

ವಿಶ್ವ ಜೈವಿಕ ಇಂಧನ ದಿನ: ವಾರ್ಷಿಕವಾಗಿ 3 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸ್ಥಾವರ ಆರಂಭ

ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ ಇಳಿಕೆಗಾಗಿ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗುತ್ತಿದ್ದು, ಹೊಸ ಗುರಿಸಾಧನೆಯೊಂದಿಗೆ ಸರ್ಕಾರವು ಮುಂದಿನ ಅಕ್ಟೋಬರ್ ವೇಳೆಗೆ ಪೆಟ್ರೋಲ್ ಮೇಲಿನ ಹಸಿರು ತೆರಿಗೆಯನ್ನು ಪ್ರತಿ ಲೀಟರ್‌ಗೆ ರೂ.2 ರಷ್ಟು ಇಳಿಕೆ ಮಾಡಬಹುದಾಗಿದೆ.

Most Read Articles

Kannada
English summary
2g biofuel plant inaugurated in panipat by pm narendra modi details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X