ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳ ಸುರಕ್ಷಾ ಮಾನದಂಡಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಮತ್ತೊಂದು ಹೊಸ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ದವಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಹೊಸ ವಾಹನಗಳ ಉತ್ಪಾದನೆ ಮತ್ತು ಸುರಕ್ಷಾ ಫೀಚರ್ಸ್‌ಗಳ ಅಳವಡಿಕೆಯು ನಿರಂತರವಾಗಿ ಬದಲಾಗುತ್ತಿದ್ದು, ಕಡ್ಡಾಯಗೊಂಡಿರುವ ಹಲವು ಸುರಕ್ಷಾ ಮಾನದಂಡಗಳು ಅಪಘಾತಗಳ ತೀವ್ರತೆಯನ್ನು ತಗ್ಗಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಿವೆ. ಹೊಸ ವಾಹನಗಳಲ್ಲಿ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಚಿತಪಡಿಸಲು 6 ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಕ್ಕೆ ಸಿದ್ದತೆ ನಡೆಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯು ಇನ್ನು ಸಾಕಷ್ಟು ಸುಧಾರಣೆಗೊಳ್ಳಬೇಕಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಸುರಕ್ಷಾ ಫೀಚರ್ಸ್‌ಗಳಿಗೆ ಗ್ರಾಹಕರು ಒತ್ತು ನೀಡುತ್ತಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಹೆಸರಿನಲ್ಲಿ ಕಳೆಪೆ ಗುಣಮಟ್ಟದ ವಾಹನಗಳ ಮಾರಾಟ ಮಾಡುತ್ತಿರುವುದು ಅಪಘಾತಗಳಲ್ಲಿ ಹೆಚ್ಚಿನ ಮಟ್ಟದ ಪ್ರಾಣಹಾನಿಗೆ ಕಾರಣವಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಕಳೆಪೆ ಗುಣಮಟ್ಟಕ್ಕೆ ಬ್ರೇಕ್ ಹಾಕಿ ಪ್ರಯಾಣಿಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಒದಗಿಸುವ ಕುರಿತಂತೆ ಹೊಸ ನಿಯಮ ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು ಈಗಾಗಲೇ 2019ರ ಜುಲೈ 1ರಿಂದಲೇ ಅನ್ವಯಿಸುವಂತೆ ಹೊಸದಾಗಿ ಉತ್ಪಾದನೆಗೊಳ್ಳುವ ಪ್ರತಿ ಕಾರಿನಲ್ಲೂ ಕನಿಷ್ಠ ಎರಡು ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಕೇಂದ್ರ ಸರ್ಕಾರದ ಹೊಸ ನಿಯಮ ಜಾರಿ ನಂತರ ಬಹುತೇಕ ಕಾರುಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ. ವ್ಯಯಕ್ತಿಕ ಬಳಕೆಯ ಕಾರುಗಳಿಗೂ ಕನಿಷ್ಠ 6 ಏರ್‌ಬ್ಯಾಗ್ ಜೋಡಣೆ ಮಾಡುವ ಕುರಿತಂತೆ ಕರಡು ಜಿಎಸ್ಆರ್ ಅಧಿಸೂಚನೆ ಹೊರಡಿಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಹೊಸ ಸುರಕ್ಷಾ ಸೌಲಭ್ಯ ಕಡ್ಡಾಯದೊಂದಿಗೆ ಬೆಲೆ ನಿಗದಿ ಕುರಿತಂತೆ ಪ್ರಮುಖ ಆಟೋ ಉತ್ಪದನಾ ಕಂಪನಿಗಳ ಜೊತೆಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಹೆಚ್ಚುವರಿ ಏರ್‍‌ಬ್ಯಾಗ್ ಅಳವಡಿಕೆ ಕುರಿತಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ಸರಣಿ ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಭಾರತದಲ್ಲಿ ಮೋಟಾರು ವಾಹನಗಳನ್ನು ಎಂದಿಗಿಂತಲೂ ಸುರಕ್ಷಿತವಾಗಿಸಲು ಇದು ನಿರ್ಣಾಯಕ ಹೆಜ್ಜೆಯಾಗಲಿದೆ ಎಂದಿರುವ ಕೇಂದ್ರ ಸಚಿವರು ಎಂ1 ವಾಹನ ವಿಭಾಗದಲ್ಲಿ(ಎಂಪಿವಿ) ಕಾರುಗಳಿಗೆ 4 ಹೆಚ್ಚುವರಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದಿದ್ದಾರೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಹೊಸ ಸುರಕ್ಷಾ ಮಾನದಂಡವು ಮುಂಭಾಗದ ಪ್ರಯಾಣಿಕರ ಜೊತೆಗೆ ಹಿಂಭಾಗದಲ್ಲಿನ ಎರಡೂ ವಿಭಾಗಗಳಲ್ಲಿ ಕುಳಿತಿರುವ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಲಿದ್ದು, ಇದು ಸಂಪೂರ್ಣವಾಗಿ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲವಾದರೂ ಅಪಘಾತಗಳಿಂದ ಆಗುವ ಪ್ರಾಣಹಾನಿಯನ್ನು ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಪ್ರತಿ ವರ್ಷ ರಸ್ತೆಗಳಿಯುವ ಲಕ್ಷಾಂತರ ಹೊಸ ವಾಹನಗಳ ಪರಿಣಾಮ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಅಪಘಾತದಲ್ಲಿ ಪ್ರಯಾಣಿಕರ ಸಾವಿನ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳಲ್ಲಿ ವಿವಿಧ ಸುರಕ್ಷಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಏರ್‌ಬ್ಯಾಗ್ ಸೌಲಭ್ಯವು ಅಪಘಾತದ ಭೀಕರತೆಯನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಹೀಗಾಗಿ ಪ್ರತಿ ಕಾರುಗಳಲ್ಲೂ ಡ್ಯುಯಲ್ ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಇದೀಗ ಮೊದಲ ಹಂತವಾಗಿ ಎಂ1 ವಿಭಾಗದ ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಅಳವಡಿಕೆ ಕುರಿತಂತೆ ಮಹತ್ವದ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಹೊಸ ಸೌಲಭ್ಯ ಅಳವಡಿಕೆಗೆ ಆಟೋ ಕಂಪನಿಗಳಿಗೆ ಡೆಡ್‌ಲೈನ್ ಹೊರಡಿಸಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಹೊಸದಾಗಿ ಬಿಡುಗಡೆಯಾಗುತ್ತಿರುವ ಬಹುತೇಕ ಐಷಾರಾಮಿ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ನೀಡಲಾಗುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳುತ್ತಿರುವ ಕೆಲವೇ ಕೆಲವು ಕಾರುಗಳ ಹೈ ಎಂಡ್ ಮಾದರಿಯಲ್ಲಿ ಮಾತ್ರ ಗರಿಷ್ಠ ಏರ್‌ಬ್ಯಾಗ್ ಅಳವಡಿಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಎಂಟ್ರಿ ಲೆವಲ್ ಮತ್ತು ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಬೆಲೆಗೆ ಅನುಗುಣವಾಗಿ 2 ಏರ್‌ಬ್ಯಾಗ್ ಇಲ್ಲವೇ 4 ಏರ್‌ಬ್ಯಾಗ್ ನೀಡಲಾಗುತ್ತಿದ್ದು, 6 ಏರ್‌ಬ್ಯಾಗ್ ಕಡ್ಡಾಯ ಜಾರಿಗೆ ಬಂದಲ್ಲಿ ಸುರಕ್ಷಾ ಮಾನದಂಡಕ್ಕಾಗಿ ಅನುಗುಣವಾಗಿ ಬೆಲೆ ಏರಿಕೆ ಸಹಜವಾಗಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಏರ್‌ಬ್ಯಾಗ್ ಗುಣಮಟ್ಟವನ್ನು ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನದಂಡಗಳಿಗೆ ಅನುಗುಣವಾಗಿ ಪ್ರಮಾಣೀಕರಿಸಲಾಗಿದ್ದು, 6 ಏರ್‌ಬ್ಯಾಗ್ ಹೊಂದಿರುವ ಕಾರುಗಳಲ್ಲಿ ಮುಂಭಾಗ ಪ್ರಯಾಣಿಕರಿಗೆ ಮಾತ್ರವಲ್ಲ ಹಿಂಬದಿಯ ಪ್ರಯಾಣಿಕರಿಗೂ ಸಹ ಸುರಕ್ಷತೆ ನೀಡಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಎಂ1 ವಿಭಾಗದ ವಾಹನಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ- ನಿತಿನ್ ಗಡ್ಕರಿ

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಸುರಕ್ಷಾ ನಿಯಮಗಳ ಕಡ್ಡಾಯದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಹೊಸ ವಾಹನಗಳ ಗುಣಮಟ್ಟವನ್ನು ಸಾಕಷ್ಟು ಸುಧಾರಣೆಗೊಳಿಸಲಾಗುತ್ತಿದೆ.

Article Published On: Saturday, January 15, 2022, 21:46 [IST]
English summary
6 airbags compulsory for every upto 8 seater cars in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+