ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಆಟೋ ಉದ್ಯಮದಲ್ಲಿ ಹೊಸ ಬದಲಾಣೆಗಾಗಿ ನಿರಂತರ ಬದಲಾವಣೆಗಳನ್ನು ಘೋಷಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಹೊಸ ಕಾರುಗಳಲ್ಲಿ ಗರಿಷ್ಠ ಸುರಕ್ಷತೆಗಾಗಿ ಕಡ್ಡಾಯವಾಗಿ 6 ಏರ್‌ಬ್ಯಾಗ್ ಅಳವಡಿಕೆಯನ್ನು ಜಾರಿಗೆ ತರುತ್ತಿದ್ದು, ಮುಂದಿನ ತಿಂಗಳು ಅಕ್ಟೋಬರ್ 1ರಿಂದ ಜಾರಿಯಾಬೇಕಿದ್ದ ಹೊಸ ನಿಯಮವನ್ನು ಕಾರಣಾಂತರಗಳಿಂದ 2023ರ ಅಕ್ಟೋಬರ್ 1ರಿಂದ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ರಸ್ತೆ ಅಪಘಾತಗಳಲ್ಲಿ ಪ್ರಾಣಹಾನಿಯನ್ನು ತಗ್ಗಿಸಲು ಹೊಸ ವಾಹನಗಳ ಸುರಕ್ಷಾ ನಿಯಮವನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಗರಿಷ್ಠ ಏರ್‌ಬ್ಯಾಗ್ ಅಳವಡಿಕೆಗೆ ಸುಗ್ಗಿವಾಜ್ಞೆ ಹೊರಡಿಸಿದ್ದು, ಮುಂದಿನ ವರ್ಷದ ಅಕ್ಟೋಬರ್ 1ರಿಂದ ಎಂ-1 ವರ್ಗದಲ್ಲಿರುವ ಪ್ರತಿ ಕಾರುಗಳಲ್ಲೂ ಕಡ್ಡಾಯವಾಗಿ ಆರು ಏರ್‌ಬ್ಯಾಗ್ ಹೊಂದಿರಬೇಕಾಗುತ್ತದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ದೇಶಾದ್ಯಂತ ಹೆಚ್ಚುತ್ತಿರುವ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆಯನ್ನು ತಗ್ಗಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ಹಲವಾರು ಕಠಿಣ ಸಾರಿಗೆ ಸಂಚಾರ ನಿಯಮ ಜಾರಿಯೊಂದಿಗೆ ವಾಹನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಹೀಗಾಗಿ ಸರ್ಕಾರವು ಪ್ರಮುಖ ಕಾರು ಉತ್ಪಾದನಾ ಕಂಪನಿಗಳೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಂತರ ಎಂ-1 ವಿಭಾಗದ ಕಾರುಗಳಲ್ಲಿ 6 ಏರ್‌ಬ್ಯಾಗ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆದರೆ ಇದೇ ವರ್ಷ ಜಾರಿಗೆ ಬರಬೇಕಿದ್ದ ಹೊಸ ನಿಯಮವು ಕಾರಣಾಂತರಗಳಿಂದ ಇದೀಗ ಮುಂದಿನ ವರ್ಷದ ಅಕ್ಟೋಬರ್‌ಗೆ ಮುಂದೂಡಲಾಗಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಹೊಸ ನಿಯಮ ಜಾರಿಗೆ ಮುನ್ನ ಬೇಡಿಕೆಗೆ ತಕ್ಕಂತೆ ಭಾರತದಲ್ಲಿ ಏರ್‌ಬ್ಯಾಗ್ ಪೂರೈಕೆ ಇಲ್ಲದಿರುವುದು ಹೊಸ ನಿಯಮ ಜಾರಿ ಮುಂದೂಡಲೂ ಪ್ರಮುಖ ಕಾರಣವಾಗಿದ್ದು, ಏರ್‌ಬ್ಯಾಗ್ ಉತ್ಪಾದನೆ ಹೆಚ್ಚಳ ನಂತರವಷ್ಟೇ ಹೊಸ ನಿಯಮ ಜಾರಿಗೆ ತರುವಂತೆ ಕಾರು ಉತ್ಪಾದನಾ ಕಂಪನಿಗಳು ಪಟ್ಟುಹಿಡಿದ್ದವು.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಸದ್ಯ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಹೊಸ ಕಾರುಗಳಿಗೆ ಕಡ್ಡಾಯವಾಗಿ 6 ಏರ್‌ಬ್ಯಾಗ್ ನಿಯಮ ಜಾರಿಗೆ ತಂದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ಕಾರು ಉತ್ಪಾದನಾ ಕಂಪನಿಗಳು ಕನಿಷ್ಠ ಇನ್ನು ಒಂದು ವರ್ಷಗಳ ಕಾಲಾವಕಾಶ ಕೇಳಿವೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಭಾರತದಲ್ಲಿ ಸದ್ಯ ವಾರ್ಷಿಕವಾಗಿ ವಿವಿಧ ಬಿಡಿಭಾಗಗಳ ಉತ್ಪಾದನಾ ಕಂಪನಿಗಳು 6 ಮಿಲಿಯನ್(60 ಲಕ್ಷ) ಏರ್‌ಬ್ಯಾಗ್‌ಗಳನ್ನು ಉತ್ಪಾದನೆ ಮಾಡುತ್ತಿದ್ದು, ಹೊಸ ನಿಯಮ ಜಾರಿಗೆ ಬಂದಲ್ಲಿ ವಾರ್ಷಿಕವಾಗಿ ಕನಿಷ್ಠ 18 ಮಿಲಿಯನ್(1.80 ಕೋಟಿ) ಏರ್‌ಬ್ಯಾಗ್‌ಗಳು ಬೇಕಾಗುತ್ತದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಉತ್ಪಾದನೆ ಸಾಮರ್ಥ್ಯ ಮತ್ತು ಹೊಸ ನಿಯಮ ಜಾರಿಗೆ ಬೇಕಿರುವ ಲಭ್ಯತೆಗೂ ಹೆಚ್ಚಿನ ವ್ಯತ್ಯಾಸ ಇರುವುದರಿಂದ ಇದು ನೇರವಾಗಿ ಕಾರು ಉತ್ಪಾದನೆಯನ್ನು ಕುಂಠಿತಗೊಳಿಸುವುದಾಗಿ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಆತಂಕ ವ್ಯಕ್ತಪಡಿಸಿದ್ದು, ಈ ಹಿನ್ನಲೆ ಹೊಸ ನಿಯಮ ಜಾರಿಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಹೊಸ ನಿಯಮ ಜಾರಿಗಾಗಿ ಕೇವಲ ಏರ್‌ಬ್ಯಾಗ್ ಉತ್ಪಾದನೆ ಹೆಚ್ಚಳ ಮಾತ್ರವಲ್ಲ ಕಾರುಗಳಲ್ಲಿ ಏರ್‌ಬ್ಯಾಗ್ ಕಾರ್ಯನಿರ್ವಹಣೆಗೆ ಪೂರಕವಾದ ಹಲವು ತಾಂತ್ರಿಕ ಸೌಲಭ್ಯಗಳ ಉತ್ಪಾದನೆ ಕೂಡಾ ಹೆಚ್ಚಳವಾಗಬೇಕಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಕಾರು ಕಂಪನಿಗಳು ತಮ್ಮ ಹೊಸ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಎರಡು ಏರ್‌ಬ್ಯಾಗ್ ಜೋಡಣೆ ಮಾಡುತ್ತಿದ್ದು, ಇನ್ನು ಕೆಲವು ಕಾರು ಉತ್ಪಾದನಾ ಕಂಪನಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಾಲ್ಕು ಏರ್‌ಬ್ಯಾಗ್‌ಗಳನ್ನು, ಆರು ಏರ್‌ಬ್ಯಾಗ್‌ಗಳನ್ನು ಮತ್ತು ಒಂಬತ್ತು ಏರ್‌ಬ್ಯಾಗ್ ಸೌಲಭ್ಯವನ್ನು ಒದಗಿಸುತ್ತಿವೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಆದರೆ ಎರಡು ಮತ್ತು ನಾಲ್ಕು ಏರ್‌ಬ್ಯಾಗ್ ಹೊಂದಿರುವ ಕಾರುಗಳಿಂತಲೂ ಆರಕ್ಕಿಂತ ಹೆಚ್ಚು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಕಾರುಗಳು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸಲಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ಎಂಟ್ರಿ ಲೆವಲ್ ಕಾರುಗಳಿಗೂ ಅನ್ವಯಿಸುವಂತೆ ಹೊಸ ಏರ್‌ಬ್ಯಾಗ್ ನಿಯಮ ಜಾರಿಗೆ ತರುತ್ತಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಹೊಸ ಯೋಜನೆಗೆ ಆರಂಭದಲ್ಲಿ ಪ್ರಮುಖ ಎಂಟ್ರಿ ಲೆವಲ್ ಕಾರು ಉತ್ಪಾದನಾ ಕಂಪನಿಗಳು ಉತ್ಪಾದನಾ ವೆಚ್ಚ ಹೆಚ್ಚಳ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದರೂ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು 6 ಏರ್‌ಬ್ಯಾಗ್ ಕಡ್ಡಾಯಕ್ಕೆ ಒಪ್ಪಿಗೆ ಸೂಚಿಸಿವೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಆದರೆ ಏರ್‌ಬ್ಯಾಗ್ ಉತ್ಪಾದನಾ ಪ್ರಮಾಣವು ಕಡಿಮೆಯಿರುವುದರಿಂದ ಹೊಸ ನಿಯಮವು ಮುಂಡೂಡಿಕೆಯಾಗಿದ್ದು, ಹೊಸ ನಿಯಮದಿಂದಾಗಿ ಕಾರುಗಳ ಬೆಲೆ ಕೂಡಾ ಹೆಚ್ಚಳವಾಗಲಿದೆ. ಈಗಾಗಲೇ ಆರು ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲವಾದರೂ ಎಂಟ್ರಿ ಕಾರುಗಳ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಆರು ಏರ್‌ಬ್ಯಾಗ್ ಹೊಂದುವಂತೆ ಕಾರಿನ ವಿನ್ಯಾಸ ಬದಲಾವಣೆ ಜೊತೆಗೆ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉನ್ನತೀಕರಿಸಬೇಕಿದ್ದು, ಇದು ಸಹಜವಾಗಿಯೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಲಿದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಎಂಟ್ರಿ ಲೆವಲ್ ಕಾರುಗಳಲ್ಲಿ ಆರು ಏರ್‌ಬ್ಯಾಗ್ ಜೋಡಣೆಗಾಗಿ ಮೊದಲು ಏರ್‌ಬ್ಯಾಗ್ ಕಾರ್ಯನಿರ್ವಹಣೆಯಾಗುವಂತೆ ಮಾಡಲು ಅವುಗಳ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆ ಮುಖ್ಯವಾಗಿದ್ದು, ಜೊತೆಗೆ ಅಪಘಾತದ ವೇಳೆ ಏರ್‌ಬ್ಯಾಗ್ ಸರಿಯಾಗಿ ಕಾರ್ಯನಿರ್ವಹಿಸಲು ಸೆನ್ಸಾರ್ ಮತ್ತು ಸೀಟ್ ಬೆಲ್ಟ್ ಸೌಲಭ್ಯವನ್ನು ಉನ್ನತೀಕರಿಸಬೇಕಾಗುತ್ತದೆ.

ಹೊಸ ಕಾರಿಗಳಲ್ಲಿ 6 ಏರ್‌ಬ್ಯಾಗ್ ನಿಯಮಕ್ಕೆ ಹೊಸ ಡೆಡ್‌ಲೈನ್ ಘೋಷಣೆ ಮಾಡಿದ ಕೇಂದ್ರ ಸರ್ಕಾರ

ಇದಕ್ಕಾಗಿ ಹೊಸ ಕಾರುಗಳಲ್ಲಿ ಸೀಟ್ ಬೇಲ್ಟ್ ಅಲಾರಾಂ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕಿದ್ದು, ಈ ಎಲ್ಲಾ ಕಾರಣಗಳಿಂದ ಹೊಸ ಏರ್‌ಬ್ಯಾಗ್ ಕಡ್ಡಾಯ ನಿಯಮ ಜಾರಿಯು ಮುಂದೂಡಿಕೆಯಾಗಿದೆ.

Article Published On: Thursday, September 29, 2022, 21:42 [IST]
English summary
6 airbags mandatory from 1st october 2023 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+