Just In
- 58 min ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 15 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ADAS ತಂತ್ರಜ್ಞಾನ ಪರೀಕ್ಷಿಸಲು XUV 700 ನಲ್ಲಿ ಸ್ಟೀರಿಂಗ್ ಬಿಟ್ಟು ಜೂಜಾಡಿದ ಯುವಕ: ವಿಡಿಯೋ ವೈರಲ್
ಬಹುತೇಕ ಎಲ್ಲಾ ವಾಹನ ಅಪಘಾತಗಳು ಚಾಲಕನ ನಿಯಂತ್ರಣ ದೋಷದಿಂದಲೇ ಸಂಭವಿಸುತ್ತವೆ. ಇಂತಹ ಅಪಘಾತಗಳನ್ನು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಮೂಲಕ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಭಾರತದಲ್ಲಿ ಬಹುತೇಕ ಕಾರುಗಳು ಇತ್ತೀಚೆಗೆ ADAS ತಂತ್ರಜ್ಞಾನವನ್ನೊಳಗೊಂಡು ಬರುತ್ತಿವೆ.

ಈ ಎಡಿಎಎಸ್ ತಂತ್ರಜ್ಞಾನವನ್ನು ಕೆಲವರು ಅನಾವಶ್ಯಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಇತ್ತೀಚೆಗೆ ಮಹೀಂದ್ರಾ ಎಕ್ಸ್‌ಯುವಿ 700 ಕಾರು ಮಾಲೀಕನೊಬ್ಬ ಚಾಲನೆ ವೇಳೆ ಸ್ಟೀರಿಂಗ್ ವೀಲ್ ಬಿಟ್ಟು ಸ್ನೇಹಿತರೊಂದಿಗೆ ಜೂಜಾಡಿದ್ದಾನೆ. ಈ ಘಟನೆಯು ADAS ತಂತ್ರಜ್ಞಾನವು ಚಾಲಕನ ಪ್ರಮೆಯವಿಲ್ಲದೆಯೂ ಅಷ್ಟೊಂದು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

XUV 700 SUV ಮಹೀಂದ್ರಾ ಮಾರಾಟ ಮಾಡುವ ಅತ್ಯಂತ ಐಷಾರಾಮಿ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಕಾರು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸಲು ವ್ಯಾಪಕ ಶ್ರೇಣಿಯ ಸುರಕ್ಷತಾ ಸಾಧನಗಳು ಮತ್ತು ತಾಂತ್ರಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಕಂಪನಿ ಒದಗಿಸುವ ಪ್ರಮುಖ ವೈಶಿಷ್ಟ್ಯಗಳಲ್ಲಿ ಅಡ್ವಾನ್ಸ್ಡ್ ಲೆವೆಲ್-2 ADAS ಕೂಡ ಒಂದಾಗಿದೆ.
ಈ ವೈಶಿಷ್ಟ್ಯವನ್ನು ಹೊಂದಿರುವ ಅಗ್ಗದ ಕಾರು ಎಂಬ ಖ್ಯಾತಿಯನ್ನು ಸಹ ಮಹೀಂದ್ರ XUV700 ಪಡೆದುಕೊಂಡಿದೆ. ಈ ವೈಶಿಷ್ಟ್ಯದ ಕಾರ್ಯವನ್ನು ಪರೀಕ್ಷಿಸಲು ಯುವಕನೊಬ್ಬ ಮಾಡಿರುವ ಈ ಕೆಲಸವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ADAS ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ನಂತರ ಯುವಕ ಸ್ಟೀರಿಂಗ್ ಅನ್ನು ಬಿಟ್ಟು ಕಾರಿನಲ್ಲಿ ತನ್ನೊಂದಿಗೆ ಇದ್ದ ಸ್ನೇಹಿತರೊಂದಿಗೆ ಕಾರ್ಡ್ಸ್ ಆಡಿದ್ದಾನೆ.

ನಮ್ಮ ರಕ್ಷಣೆಗಾಗಿ ADAS ಇದೆಯೆಂಬ ಧೈರ್ಯದಿಂದ ಯುವಕ ಈ ಕೆಲಸ ಮಾಡಿದ್ದಾನೆ. ಇಂತಹ ಫೀಚರ್ ಬಳಸಿಕೊಂಡು ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿರುವ ಕ್ರಮಕ್ಕೆ ನಾನಾ ಕಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಕೆಲವು ಅನಪೇಕ್ಷಿತ ಚಟುವಟಿಕೆಗಳಿಗೆ ತಾಂತ್ರಿಕ ಸೌಲಭ್ಯಗಳನ್ನು ಬಳಸುವುದು ಉದ್ಧಟತನವೆಂದು ಕಮೆಂಟ್ ಮಾಡಿದ್ದಾರೆ.

ಏಕೆಂದರೆ ಈ ಹಿಂದೆಯೂ ಇಂತಹ ಅನಾವಶ್ಯಕ ಕಾರ್ಯಗಳನ್ನು ಮಾಡಿ ಸಮಸ್ಯೆ ಎದುರಿಸಿದವರು ಬಹಳ ಮಂದಿ ಇದ್ದಾರೆ. ಅದರಲ್ಲೂ ಹೆಚ್ಚಿನ ತಾಂತ್ರಿಕ ಸೌಲಭ್ಯಗಳಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರಿನಲ್ಲಿ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿ ಹಲವರು ಅಪಘಾತಕ್ಕೀಡಾಗಿದ್ದಾರೆ. ಅದರಲ್ಲಿ ಒದಗಿಸಲಾದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದೆ ಅಪಘಾತಗಳು ಸಂಭವಿಸಿದ ಘಟನೆಗಳು ನಡೆದಿವೆ.

ಮಹೀಂದ್ರಾ XUV 700 ಲೆವೆಲ್ 2 ಸ್ವಾಯತ್ತ ವೈಶಿಷ್ಟ್ಯದೊಂದಿಗೆ ಬರುತ್ತದೆ, ಇದು ಕಾರನ್ನು ಲೇನ್‌ನಲ್ಲಿ ಇರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಮುಂಭಾಗದಲ್ಲಿರುವ ವಾಹನವನ್ನು ಪತ್ತೆ ಮಾಡಿ ವೇಗವನ್ನು ಕಡಿಮೆ ಮಾಡಲು ಸ್ವಯಂಚಾಲಿತವಾಗಿ ಬ್ರೇಕ್ ಅನ್ನು ಅನ್ವಯಿಸುತ್ತದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಚಾಲನೆಯಲ್ಲಿರುವ ವಾಹನವನ್ನು ಸ್ವಯಂಚಾಲಿತವಾಗಿ ನಿಲ್ಲಿಸುತ್ತದೆ.

ಇದು ಕೇವಲ ಪ್ರಯಾಣಿಕರ ರಕ್ಷಣೆಗಾಗಿ ನೀಡಲಾಗುತ್ತದೆ. ಇಷ್ಟು ದೊಡ್ಡ ಫೀಚರ್ ಅನ್ನು ಯುವಕರು ಹೈವೇಯಲ್ಲಿ ಅತಿವೇಗದಲ್ಲಿ ವಾಹನ ಚಲಾಯಿಸುತ್ತಾ ಕಾರಿನಲ್ಲಿ ಜೂಜಾಟ ಆಡಿರುವುದು ಮೂರ್ಖತನ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ. XUV700 ಸುರಕ್ಷಿತ ಕಾರು ಆಗಿದ್ದರೂ, ಈ ರೀತಿ ಆಡುವುದು ತುಂಬಾ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಬೇಕು.

ಮಹೀಂದ್ರ XUV 700 ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ವಾಹನವು ಚಲಿಸುತ್ತಿರುವಾಗ ಚಾಲಕನು ಸ್ಟೀರಿಂಗ್ ಚಕ್ರದಿಂದ ಕೈಗಳನ್ನು ತೆಗೆದರೆ, ತಕ್ಷಣವೇ ಎಚ್ಚರಿಸುತ್ತದೆ. ಅಲ್ಲದೆ ಸ್ಟೀರಿಂಗ್ ವೀಲ್ ಕಂಪಿಸುವ ಮೂಲಕ ಎಡಿಎಸ್ ಸಿಸ್ಟಮ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ. ಬಳಿಕ ಕಾರು ರಸ್ತೆಯ ಮೇಲಿನ ಬಿಳಿ ರೇಖೆಯನ್ನು (ಲೇನ್) ಅನುಸರಿಸುತ್ತದೆ.

ಒಂದು ವೇಳೆ ರಸ್ತೆಯಲ್ಲಿ ಸರಿಯಾದ ಬಿಳಿ ಗೆರೆಗಳು ಇಲ್ಲದಿದ್ದರೇ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇದಕ್ಕಾಗಿಯೇ ಕಾರಿನ ಸ್ವಾಯತ್ತ ವೈಶಿಷ್ಟ್ಯವನ್ನು ಅನಗತ್ಯವಾಗಿ ಪರೀಕ್ಷಿಸಬೇಡಿ ಎಂದು ಕಂಪನಿಗಳು ಸಹ ಹೇಳುತ್ತವೆ. ಇನ್ನು XUV700 ವಿಷಯಕ್ಕೆ ಬಂದರೆ ಕಾರು ಅತ್ಯಂತ ಉತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಭಾರತದಲ್ಲಿ ಉತ್ತಮ ಸ್ವಾಗತವನ್ನು ಪಡೆಯುತ್ತಿದೆ.

ಪ್ರಸ್ತುತ ವರದಿಗಳ ಪ್ರಕಾರ ಮಹೀಂದ್ರ XUV700 1 ವರ್ಷದ ಕಾಯುವ ಅವಧಿಯನ್ನು ಹೊಂದಿದೆ. XUV700 2.2-ಲೀಟರ್ Mhawk ಡೀಸೆಲ್ ಮತ್ತು 2.0-ಲೀಟರ್ M-ಸ್ಟಾಲಿಯನ್ ಪೆಟ್ರೋಲ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಎಂಜಿನ್ 200 ಪಿಎಸ್ ಪವರ್ ಮತ್ತು ಡೀಸೆಲ್ ಎಂಜಿನ್ 155 ಪಿಎಸ್ ಪವರ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿವೆ. ಅಂತೆಯೇ ಈ ಮೋಟಾರ್‌ಗಳು 380 Nm ಮತ್ತು 360 Nm ಅನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಅಡ್ವಾನ್ಸ್ಡ್ ಟೆಕ್ನಾಲಜಿ ಬಗ್ಗೆ ಹೇಳುವುದಾದರೆ ಮೊದಲು ಟೆಸ್ಲಾ ಬಗ್ಗೆ ಹೇಳಬೇಕಾಗುತ್ತದೆ. ತನ್ನ ವಾಹನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ವಾಹನ ಉದ್ಯಮದಲ್ಲಿ ಕ್ರಾಂತಿ ತಂದಿತ್ತು. ಇದರಲ್ಲಿ ಒಂದು ಭಾಗವಾದ ADAS ತಂತ್ರಜ್ಞಾನವನ್ನು ಪ್ರಸ್ತುತ ಅಪಘಾತಗಳನ್ನು ತಡಿಯಲು ಬಹುತೇಕ ಕಾರು ಕಂಪನಿಗಳು ಬಳಸುತ್ತಿವೆ. ಇದನ್ನು ಸಂದರ್ಭಕ್ಕನುಗುಣವಾಗಿ ಬಳಸಬೇಕೇ ಹೊರತು ಅನಾವಶ್ಯಕ ಚಟುವಟಿಕೆಗಳಿಗಾಗಿ ಬಳಸುವುದು ತುಂಬಾ ಅಪಾಯಕಾರಿ.