ಬರೋಬ್ಬರಿ 2,300 ಕಿ.ಮೀ ಕಾರನ್ನು ಓಡಿಸಿದ ನಟ ಮಮ್ಮುಟ್ಟಿ... ಇದು ರೀಲ್ ಅಲ್ಲ, ರಿಯಲ್

ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ತಮ್ಮ ಮನೋಜ್ಞ ನಟನೆ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಅವರ ಗ್ಯಾರೇಜ್‌ನಲ್ಲಿ ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳ ಭಾರಿ ಸಂಗ್ರಹವಿದೆ. ಮಮ್ಮುಟ್ಟಿ ತಮ್ಮ ಮಗ, ನಟ ದುಲ್ಕರ್ ಸಲ್ಮಾನ್ ಜೊತೆಗೂಡಿ ಬರೋಬ್ಬರಿ 369 ಕಾರುಗಳಿಗೆ ಮಾಲೀಕರಾಗಿದ್ದಾರೆ.

ನಟ ಮಮ್ಮುಟ್ಟಿ ಕಾರುಗಳನ್ನು ಡ್ರೈವ್ ಮಾಡಲು ತುಂಬಾ ಇಷ್ಟಪಡುತ್ತಾರೆ. ಅನೇಕ ಸೆಲೆಬ್ರಿಟಿಗಳಂತೆ, ಅವರು ಎಂದಿಗೂ ಹಿಂದಿನ ಸೀಟಿನಲ್ಲಿ ಅಥವಾ ಸಹ-ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಅವರೇ ವಾಹನವನ್ನು ಚಾಲನೆ ಮಾಡುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಅದರಲ್ಲಿ ನಟ ಮಮ್ಮುಟ್ಟಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಹೆದ್ದಾರಿಯಲ್ಲಿ ತಾವೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾರ್ ಅನ್ನು ಡ್ರೈವ್ ಮಾಡಿದ್ದಾರೆ.

ಬರೋಬ್ಬರಿ 2,300 ಕಿ.ಮೀ ಕಾರನ್ನು ಓಡಿಸಿದ ನಟ ಮಮ್ಮುಟ್ಟಿ... ಇದು ರೀಲ್ ಅಲ್ಲ, ರಿಯಲ್

ಕೇರ್ ಅಂಡ್ ಶೇರ್ ಇಂಟರ್‌ನ್ಯಾಶನಲ್ ಫೌಂಡೇಶನ್‌ ನಿರ್ದೇಶಕ ಹಾಗೂ ನಟ ಮಮ್ಮುಟ್ಟಿ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿರುವ ರಾಬರ್ಟ್ ಕುರಿಯಾಕೋಸ್ ಅವರು, ಈ ವೀಡಿಯೊವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಮ್ಮುಟ್ಟಿ ತಮ್ಮ ಪತ್ನಿ ಮತ್ತು ಸ್ನೇಹಿತ ರಾಜಶೇಖರನ್ ಜೊತೆಗೆ ಆಸ್ಟ್ರೇಲಿಯಾ ದೇಶದಲ್ಲಿ ತೆರಳಿದ್ದರು. ಅಲ್ಲಿ ರೋಡ್ ಟ್ರಿಪ್ ಮಾಡಬೇಕೆಂದು ತೀರ್ಮಾನ ಮಾಡಿ, ಒಂದಲ್ಲ, ಎರಡಲ್ಲ ಬರೋಬ್ಬರಿ 2,300 ಕಿ.ಮೀ ಕಾರನ್ನು ಓಡಿಸಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಈ ವಿಡಿಯೋದಲ್ಲಿ ನಟ ಮಮ್ಮುಟ್ಟಿ ಓಡಿಸುತ್ತಿರುವ ಕಾರಿನ ಸ್ಟೀರಿಂಗ್ ವೀಲ್ ಅನ್ನು ನೋಡಿದರೆ, ಅದು ಕಿಯಾದಂತೆ ಕಾಣಿಸುತ್ತಿದೆ. ಈ ಟ್ರಿಪ್ ನಲ್ಲಿ ಮಮ್ಮುಟ್ಟಿ ಅವರ ಜೊತೆಗಿದ್ದ ರಾಬರ್ಟ್, ಸಣ್ಣ ವಿಡಿಯೋ ಕ್ಲಿಪ್ ಗಳನ್ನೂ ರೆಕಾರ್ಡ್ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೊದಲು ಅವುಗಳನ್ನು ಒಂದೇ ವಿಡಿಯೋದಲ್ಲಿ ಬರುವಂತೆ ಎಡಿಟ್ ಮಾಡಿದ್ದಾರೆ. ನಟ ಮಮ್ಮುಟ್ಟಿ ಸಿಡ್ನಿಯಿಂದ ತಮ್ಮ ಡ್ರೈವ್ ಅನ್ನು ಪ್ರಾರಂಭಿಸಿ, ಮೆಲ್ಬೋರ್ನ್‌ನ ಕ್ಯಾನ್‌ಬೆರಾವನ್ನು ದಾಟಿ ಟ್ಯಾಸ್ಮೆನಿಯಾಗೆ ತೆರಳಿದಿದ್ದಾರೆ.

ರಾಬರ್ಟ್ ಅವರು, ನಟ ಮಮ್ಮುಟ್ಟಿ ಪ್ರತಿ ಕಿಲೋಮೀಟರ್ ರಸ್ತೆ ಪ್ರಯಾಣವನ್ನು ಎಂಜಾಯ್ ಮಾಡಿದರು. ಜೊತೆಗೆ ಆಸ್ಟ್ರೇಲಿಯಾದಲ್ಲಿ ಜನರು ಚಾಲನೆ ಮಾಡುವಾಗ ನಿಯಮಗಳನ್ನು ಹೇಗೆ ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡಿ ತುಂಬಾ ಸಂತೋಷಪಟ್ಟಿದ್ದಾರೆ ಎಂದು ಈ ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಮಮ್ಮುಟ್ಟಿ ಕಾರನ್ನು ಆ ದೇಶದ ಹೆದ್ದಾರಿ ರಸ್ತೆಯಲ್ಲಿ ಕೊಂಚವು ಅಳುಕಿಲ್ಲದೆ ಕೂಲ್ ಆಗಿ ಓಡಿಸಿದ್ದಾರೆ. ಅಲ್ಲದೆ, ಅಲ್ಲಿನ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಮನಸಾರೆ ಸವಿದರು ಎಂದು ರಾಬರ್ಟ್ ಹೇಳಿದ್ದಾರೆ.

ನಟ ಮಮ್ಮುಟ್ಟಿ ಅವರು, ಹುಲ್ಲುಗಾವಲುಗಳ ಮೂಲಕ ಹಾದು ಹೋಗುವ ರಸ್ತೆಗಳು ಜೊತೆಗೆ ಎತ್ತರದ ಮರಗಳನ್ನು ಹೊಂದಿರುವ ರಸ್ತೆಯ ಮೂಲಕ ಕಾರನ್ನು ಓಡಿಸಿದ್ದಾರೆ. ಅಲ್ಲಿ ಮಳೆ ಸಹ ಬರುತ್ತಿದ್ದು, ಅವರು ತನ್ನ ಕಾಲೇಜು ದಿನಗಳ ಕೆಲವು ಕಥೆಗಳನ್ನು ಡ್ರೈವ್‌ ಮಾಡಬೇಕಾದರೆ ಹಂಚಿಕೊಂಡಿದ್ದಾರೆ ಎಂದು ರಾಬರ್ಟ್ ಹೇಳಿದ್ದಾರೆ. ಈ ವೀಡಿಯೊದಲ್ಲಿ ಮಮ್ಮುಟ್ಟಿ ಚಾಲನೆ ಮಾಡುತ್ತಿರುವುದು ಹೊಸ ಕಾರು ಆಗಿದ್ದು, ಇದು ಆಸ್ಟ್ರೇಲಿಯಾದಲ್ಲಿರುವ ರಾಬರ್ಟ್ ಅವರ ಸ್ನೇಹಿತನ ಮಾಲೀಕತ್ವದಲ್ಲಿದೆ.

ಮಲಯಾಳಂ ಚಿತ್ರರಂಗದ ದೊಡ್ಡ ನಟರ ಪೈಕಿ ಮಮ್ಮುಟ್ಟಿ ಸಹ ಒಬ್ಬರು. ಅವರು 1971ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದ ಅವರು, 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಮಮ್ಮುಟ್ಟಿ, ಹಲವು ಸಿನಿಮಾಗಳನ್ನು ಕೂಡ ನಿರ್ಮಾಣ ಮಾಡಿದ್ದಾರೆ. ಜೊತೆಗೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಚಲನಚಿತ್ರಗಳ ಹೊರತಾಗಿ, ಮಮ್ಮುಟ್ಟಿ ಅವರು, ಸ್ಮಾರ್ಟ್‌ಫೋನ್, ಕ್ಯಾಮೆರಾದಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಕ್ರೇಜ್‌ನಿಂದಲ್ಲೂ ಖ್ಯಾತಿಗಳಿಸಿದ್ದಾರೆ.

ಇಷ್ಟೇಅಲ್ಲದೆ, ಅವರ ಗ್ಯಾರೇಜ್‌ನಲ್ಲಿ 369 ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳಿವೆ. ಅದರಲ್ಲಿ ಪ್ರಮುಖವಾಗಿ ಪೋರ್ಷೆ ಪನಾಮೆರಾ, ಲ್ಯಾಂಡ್ ರೋವರ್ ಡಿಫೆಂಡರ್, ಮರ್ಸಿಡಿಸ್-ಬೆನ್ಜ್ ಜಿ63 ಎಎಂಜಿ, ಪೋರ್ಷೆ ಕಯೆನ್ ಕಾರು. ಇದನ್ನು ಹೊರತುಪಡಿಸಿ ಇತರೆ ಕೆಲವು ಕಾರುಗಳೆಂದರೆ ಮರ್ಸಿಡಿಸ್-ಬೆನ್ಜ್ SLS AMG, ಪೋರ್ಷೆ 911 GT3, BMW M3 E46 ಇದೆ. ಇನ್ನು, ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಖರೀದಿ ಮಾಡಿರುವ ಒಂದೆರಡು ತಲೆಮಾರುಗಳ ಲ್ಯಾಂಡ್ ಕ್ರೂಸರ್ SUVಗಳು ಕೂಡ ಇವೆ.

More from DriveSpark

Article Published On: Thursday, December 8, 2022, 16:18 [IST]
English summary
Actor mammootty drive a car for 2300 km
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+