Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಆಟೋ ಉದ್ಯಮದಲ್ಲೂ ಛಾಪು ಮೂಡಿಸಲಿದೆ ಅದಾನಿ ಗ್ರೂಪ್
ಭಾರತೀಯ ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್ ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದಾನಿ ಗ್ರೂಪ್ ಶೀಘ್ರದಲ್ಲಿಯೇ ಆಟೋಉದ್ಯಮಕ್ಕೂ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಅದಾನಿ ಗ್ರೂಪ್ ಈಗಾಗಲೇ ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ಪ್ರಸರಣ, ನವೀಕರಿಸಬಹುದಾದ ಇಂಧನ ಶಕ್ತಿ, ಗಣಿಗಾರಿಕೆ, ವಿಮಾನ ನಿಲ್ದಾಣ ಕಾರ್ಯಾಚರಣೆ, ನೈಸರ್ಗಿಕ ಅನಿಲ ಉತ್ಪಾದನೆ, ಆಹಾರ ಸಂಸ್ಕರಣೆ ಮತ್ತು ಮೂಲಸೌಕರ್ಯ ಅಭಿವೃದ್ದಿಯಲ್ಲಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಹೆಚ್ಚಿನ ಮಟ್ಟದ ಆದಾಯವನ್ನು ಹೊಂದಿದ್ದು, ಕಂಪನಿಯು ಇದೀಗ ತೀವ್ರ ಬೆಳವಣಿಗೆ ಸಾಧಿಸುತ್ತಿರುವ ಇವಿ ವಾಹನ ಉದ್ಯಮದ ಮೇಲೆ ಹೂಡಿಕೆ ಮಾಡಬಹುದಾಗಿದೆ.

ಅದಾನಿ ಗ್ರೂಪ್ ಕಂಪನಿಯು ಕೇಂದ್ರ ಸಾರಿಗೆ ಇಲಾಖೆಯಲ್ಲಿ 'ಅದಾನಿ' ಹೆಸರಿನಲ್ಲಿ ಟ್ರೇಡ್‌ಮಾರ್ಕ್ ಸಲ್ಲಿಸಿದ್ದು, ಪರಿಸರ ಸ್ನೇಹಿ ವಾಹನಗಳ ಅಭಿವೃದ್ದಿ ಮತ್ತು ಉತ್ಪಾದನೆಗೆ ಹೂಡಿಕೆ ಮಾಡಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಅದಾನಿ ಗ್ರೂಪ್ ಇತ್ತೀಚೆಗೆ ಹೊಸ ಅಂಗಸಂಸ್ಥೆಯೊಂದನ್ನು ಪ್ರಾರಂಭಿಸಿದ್ದು, ಅದಾನಿ ನ್ಯೂ ಇಂಡಸ್ಟ್ರೀಸ್ ಲಿಮಿಟೆಡ್ (ANIL) ಹೆಸರಿನಲ್ಲಿ ಪ್ರಾರಂಭಿಸಲಾದ ಅಂಗಸಂಸ್ಥೆಯು ಹಸಿರು ಶಕ್ತಿ ಯೋಜನೆಗಳು ಮತ್ತು ಕಡಿಮೆ ಇಂಗಾಲದ ಇಂಧನಗಳು, ಕಡಿಮೆ ಇಂಗಾಲದ ಶಕ್ತಿ ಉತ್ಪಾದನೆ ಸೇರಿದಂತೆ ಹಸಿರು ಶಕ್ತಿ ಯೋಜನೆಗಳನ್ನು ಕೈಗೊಳ್ಳಲು ಯೋಜಿಸುತ್ತಿದೆ.

ಅದಾನಿ ಗ್ರೂಪ್‌ನ ಹೊಸ ಅಂಗಸಂಸ್ಥೆಯು ಸೌರ ಉಪಕರಣಗಳು, ಬ್ಯಾಟರಿ, ಜನರೇಟರ್‌ಗಳು, ಏರ್ ಟರ್ಬೈನ್‌ಗಳು ಮತ್ತು ಹೈಡ್ರೋಜನ್ ಜನರೇಟರ್‌ಗಳ ತಯಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದು, ಜಗತ್ತಿನಾದ್ಯಂತ ಹಸಿರು ವಾಹನಗಳು ಮತ್ತು ನೈಸರ್ಗಿಕ ಅನಿಲ ಚಾಲಿತ ವಾಹನ ಬಳಕೆಯತ್ತ ಸಾಗುತ್ತಿರುವುದು ಕೂಡಾ 'ಅದಾನಿ' ಟ್ರೇಡ್‌ಮಾರ್ಕ್ ಕುತೂಹಲ ಮೂಡಿಸಿದೆ.

ಭಾರತ ಸರ್ಕಾರವು ಸಹ ಸದ್ಯ ಪರಿಸರ ಸ್ನೇಹಿ ವಾಹನಗಳ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಾಗಿ ಎಲೆಕ್ಟ್ರಿಕ್, ಸಿಎನ್‌ಜಿ, ಹೈಡ್ರೊಜೆನ್ ಫ್ಯೂಲ್ ಸೆಲ್ಸ್ ಸೇರಿದಂತೆ ವಿವಿಧ ನವೀಕರಿಸಬಹುದಾದ ಇಂಧನ ಚಾಲಿತ ವಾಹನಗಳು ಮುಂಚೂಣಿ ಸಾಧಿಸಲಿವೆ.

ಹೀಗಾಗಿ ನವೀಕರಿಸಬಹುದಾದ ಇಂಧನಗಳ ಉದ್ಯಮದಲ್ಲಿ ಮುಂಚೂಣಿ ಸಾಧಿಸುತ್ತಿರುವ ಅದಾನಿ ಗ್ರೂಪ್ ವಿವಿಧ ಉದ್ಯಮ ವ್ಯವಹಾರಗಳ ಸಹಾಯದೊಂದಿಗೆ ಆಟೋ ಉದ್ಯಮದಲ್ಲೂ ಅಧಿಪತ್ಯ ಸಾಧಿಸಬಹುದಾದ ಸಾಧ್ಯತೆಗಳನ್ನು ಎದುರುನೋಡುತ್ತಿದೆ.

ಆಟೋಉದ್ಯಮದಲ್ಲಿ ಸದ್ಯ ಭವಿಷ್ಯ ವಾಹನ ಮಾದರಿಗಳಿಗೆ ಬೇಕಿರುವ ಇವಿ ವಾಹನಗಳ ಲೀಥಿಯಂ ಅಯಾನ್ ಬ್ಯಾಟರಿ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳು ಮತ್ತು ವಾಹನ ತಂತ್ರಜ್ಞಾನ ನಿರ್ವಹಣೆಯ ಸೆಮಿಕಂಡಕ್ಟರ್ ಉದ್ಯಮ ಮೇಲೆ ಗಮನಹರಿಸುತ್ತಿದೆ.

ಇವಿ ವಾಹನಗಳ ಉತ್ಪಾದನೆಗಿಂತಲೂ ಸದ್ಯ ಇವಿ ವಾಹನಗಳಿಗೆ ಬೇಕಿರುವ ಬ್ಯಾಟರಿ ಪ್ಯಾಕ್ ಮತ್ತು ಚಾರ್ಜಿಂಗ್ ನಿಲ್ದಾಣಗಳ ನಿರ್ವಹಣೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು, ಅದಾನಿ ಗ್ರೂಪ್ ಕಂಪನಿಯು ತನ್ನ ವಿದ್ಯುತ್ ಪ್ರಸರಣ ಉದ್ಯಮದ ಮೂಲಕ ಇವಿ ವಾಹನ ಉದ್ಯಮದಲ್ಲಿ ಮುನ್ನಡೆ ಸಾಧಿಸಬಹುದಾಗಿದೆ.

ನವೀಕರಿಸಬಹುದಾದ ಇಂಧನಗಳ ಮೂಲಕ ವಿದ್ಯುತ್ ಪ್ರಸರಣದಲ್ಲಿ ಸದ್ಯ ಶೇ.3 ರಷ್ಟು ಪಾಲು ಹೊಂದಿರುವ ಅದಾನಿ ಗ್ರೂಪ್ ಮುಂಬರುವ 2030ರ ವೇಳೆಗೆ ಶೇ.30ಕ್ಕೆ ಹೆಚ್ಚಿಸುವ ಯೋಜನೆಯಲ್ಲಿದ್ದು, ವಿದ್ಯುತ್ ಪ್ರಸರಣದಲ್ಲಿ ದೊಡ್ಡ ಪಾಲು ಹೊಂದಲಿರುವ ಅದಾನಿ ಗ್ರೂಪ್ ಸಹಜವಾಗಿಯೇ ಇವಿ ವಾಹನಗಳ ಚಾರ್ಜಿಂಗ್ ವಲಯದಲ್ಲೂ ತನ್ನ ಅಧಿಪತ್ಯ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ಜೊತೆಗೆ ಹೊಸ ವಾಹನಗಳಿಗೆ ಅತಿ ಅವಶ್ಯಕವಾಗಿ ಬೇಕಿರುವ ಸೆಮಿಕಂಡಕ್ಟರ್ ಗಳಿಗೆ ವಿದೇಶಿ ಮಾರುಕಟ್ಟೆಯನ್ನು ಅವಲಂಬಿಸಿರುವುದು ದೇಶಿಯ ಮಾರುಕಟ್ಟೆಯಲ್ಲಿನ ಆಟೋ ಕಂಪನಿಗಳಿಗೆ ಹೆಚ್ಚಿನ ಹಿನ್ನಡೆ ಉಂಟು ಮಾಡುತ್ತಿದ್ದು, ಅದಾನಿ ಗ್ರೂಪ್ ಕಂಪನಿಯು ಕೂಡಾ ಸೆಮಿಕಂಡಕ್ಟರ್ ಉತ್ಪಾದನೆ ಭಾರತದಲ್ಲಿಯೇ ಸ್ವಾವಲಂಬನೆಗೊಳಿಸುವ ಯೋಜನೆಯಲ್ಲಿದೆ.

ಇದಕ್ಕಾಗಿಯೇ ಕೇಂದ್ರ ಸರ್ಕಾರವು ಕೂಡಾ ಇತ್ತೀಚೆಗೆ ಸೆಮಿ ಕಂಡಕ್ಟರ್‌ಗಳನ್ನು ಭಾರತದಲ್ಲಿಯೇ ಉತ್ಪಾದನೆಗಾಗಿ ರೂ. 76 ಸಾವಿರ ಕೋಟಿ ಪಿಐಎಲ್‌ಗೆ ಅನುಮೋದನೆ ನೀಡಿದ್ದು, ಇದರಲ್ಲಿ ಅದಾನಿ ಗ್ರೂಪ್ ಭಾರೀ ಪ್ರಮಾಣದ ಹೂಡಿಕೆ ಮಾಡಬಹುದಾಗಿದೆ.

ಒಟ್ಟಿನಲ್ಲಿ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಯಶಸ್ವಿ ಕಾರ್ಯಾಚರಣೆಯೊಂದಿಗೆ ಲಾಭದಾಯಕ ಕಂಪನಿಯಾಗಿ ಹೊರಹೊಮ್ಮಿರುವ ಅದಾನಿ ಗ್ರೂಪ್ ಇದೀಗ ಮೊದಲ ಬಾರಿಗೆ ಆಟೋಮೊಬೈಲ್ ಕ್ಷೇತ್ರದಲ್ಲೂ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದು, ಆಟೋ ಉದ್ಯಮ ಕಾರ್ಯಚರಣೆಯೂ ಸಹ ಶೀಘ್ರದಲ್ಲೇ ಆರಂಭವಾಗಬಹುದಾಗಿದೆ.