ಯುರೋಪಿನಲ್ಲಿ ಕಾರುಗಳ ವೇಗಕ್ಕೆ ಸ್ವಯಂಚಾಲಿತ ಬ್ರೇಕ್ ಹಾಕಲು ಹೊಸ ಸುರಕ್ಷಾ ಸೌಲಭ್ಯ ಜಾರಿ
ಕಳೆದ ಒಂದು ದಶಕದಲ್ಲಿ ಕಾರುಗಳ ಸುರಕ್ಷತೆಯಲ್ಲಿ ಹಲವಾರು ಹೊಸ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗಿದ್ದು, ಯುರೋಪಿಯನ್ ಯೂನಿಯನ್ (EU) ನಲ್ಲಿ ಇದೀಗ ಹೊಸ ಕಾರುಗಳಲ್ಲಿ ಆಂಟಿ-ಸ್ಪೀಡಿಂಗ್ ತಂತ್ರಜ್ಞಾನ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಯುರೋಪಿಯನ್ ಯೂನಿಯನ್ ಒಕ್ಕೂಟದ ಹೊಸ ಸಾರಿಗೆ ಕಾನೂನಿನ ನಿಯಮದ ಭಾಗವಾಗಿ ಇನ್ಮುಂದೆ ಉತ್ಪಾದನೆಗೊಳ್ಳುವ ಪ್ರತಿ ಕಾರುಗಳಿಗೂ ಇಂಟೆಲಿಜೆಂಟ್ ಸ್ಪೀಡ್ ಅಸಿಸ್ಟೆನ್ಸ್ ಜೋಡಿಸಬೇಕಿದೆ. ಹೊಸ ಮಾನದಂಡ ಪ್ರಕಾರ ಕಾರು ಉತ್ಪಾದನಾ ತಯಾರಕರು ಈಗಾಗಲೇ ಕಡ್ಡಾಯವಾಗಿ ಹಲವಾರು ತಾಂತ್ರಿಕ ಆಯ್ಕೆಗಳಲ್ಲಿ ಇದನ್ನು ಕೂಡಾ ಅಳವಡಿಸಬೇಕಿದ್ದು, ಇದು ನಿಗದಿತ ಪ್ರಮಾಣದ ವೇಗ ಹೆಚ್ಚಾದಾಗ ಕಾರಿನ ವೇಗವನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡುತ್ತದೆ.

ಹೆಚ್ಚುತ್ತಿರುವ ಕಾರು ಅಪಘಾತ ಪ್ರಕರಣಗಳಲ್ಲಿ ಅತಿವೇಗವು ಪ್ರಮುಖ ಕಾರಣವಾಗಿರುವುದರಿಂದ ಯುರೋಪಿಯ್ ಯೂನಿಯನ್ ಒಕ್ಕೂಟವು ಈ ಹೊಸ ಸುರಕ್ಷಾ ಮಾನದಂಡವನ್ನು ಕಡ್ಡಾಯವಾಗಿ ಜಾರಿಗೆ ತಂದಿದ್ದು, ವೇಗ ನಿಯಂತ್ರಕ ತಂತ್ರಜ್ಞಾನವು ಅಪಘಾತಗಳ ಸಂಖ್ಯೆ ತಗ್ಗಿಸಲು ನೆರವಾಗಿಲಿದೆ ಎನ್ನಲಾಗಿದೆ.

ಆಂಟಿ-ಸ್ಪೀಡಿಂಗ್ ತಂತ್ರಜ್ಞಾನವು ಕಾರು ಚಾಲಕನಿಗೆ ದೃಶ್ಯ ಎಚ್ಚರಿಕೆಯ ನಂತರ ಅಕೌಸ್ಟಿಕ್ ಅಥವಾ ಕಂಪನದ ಎಚ್ಚರಿಕೆಯೊಂದಿಗೆ ಎಚ್ಚರಿಸಲಿದ್ದು, ಪೆಡಲ್ ಮೇಲಿನ ಚಾಲಕನ ಪಾದವನ್ನು ನಿಧಾನವಾಗಿ ಹಿಂದಕ್ಕೆ ತಳ್ಳಬಹುದು ಅಥವಾ ಕಾರು ಸ್ವಯಂಚಾಲಿತವಾಗಿ ವೇಗವನ್ನು ಕಡಿಮೆ ಮಾಡುತ್ತದೆ.

ಯುರೋಪಿಯನ್ ಯೂನಿಯನ್ ಒಕ್ಕೂಟವು ಹೇಳುವಂತೆ ಇದು ಯುರೋಪಿಯನ್‌ರನ್ನು ಟ್ರಾಫಿಕ್ ಅಪಘಾತಗಳಿಂದ ರಕ್ಷಿಸಲು ಮತ್ತು ಕಳಪೆ ಗಾಳಿಯ ಗುಣಮಟ್ಟ ಮತ್ತು ಹವಾಮಾನವನ್ನು ಬದಲಾವಣೆಗೊಳಿಸುವ ಗುರಿಯನ್ನು ಹೊಂದಿದೆ ಎಂದಿದೆ.

ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಹಲವು ಕಾರು ಮಾದರಿಗಳಲ್ಲಿ ಈ ಹೊಸ ಸುರಕ್ಷಾ ಸೌಲಭ್ಯ ಈಗಾಗಲೇ ಆಯ್ಕೆ ರೂಪದಲ್ಲಿ ಅಳವಡಿಸಲಾಗುತ್ತಿದ್ದು, ಇದೀಗ ಅದನ್ನು ಕಡ್ಡಾಯಗೊಳಿಸಲಾಗುತ್ತಿದೆ.

ಆದರೆ ಈಗಾಗಲೇ ಹೊಸ ಸೌಲಭ್ಯವನ್ನು ಹೊಂದಿರುವ ಕಾರುಗಳಲ್ಲಿ ಆಂಟಿ-ಸ್ಪೀಡಿಂಗ್ ತಂತ್ರಜ್ಞಾನವನ್ನು ಆನ್/ಆಫ್ ಪ್ರಕ್ರಿಯೆ ಮ್ಯಾನುವಲ್ ಸೌಲಭ್ಯ ಹೊಂದಿದ್ದು, ಇದನ್ನು ಇದೀಗ ಆಟೋಮ್ಯಾಟಿಕ್ ಮೋಡ್‌ನೊಂದಿಗೆ ಕಡ್ಡಾಯವಾಗಿ ಜೋಡಣೆಗೆ ಶಿಫಾರಸ್ಸು ಮಾಡಲಾಗಿದೆ.

ಮ್ಯಾನುವಲ್ ವೈಶಿಷ್ಟ್ಯತೆಯಿಂದ ಕೆಲವು ಕಾರು ಮಾಲೀಕರು ಸುರಕ್ಷಾ ಸೌಲಭ್ಯವನ್ನು ಬಳಸದೆ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿನ ವೇಗ ಕಾರು ಚಾಲನೆ ಮಾಡುತ್ತಿದ್ದು, ಇದರಿಂದ ಕಾರಿನ ವೇಗದ ಕುರಿತಾದ ಡೇಟಾ ಸಂಗ್ರಹವು ಅಸ್ಪಷ್ಟವಾಗಿದೆ.

ಹೀಗಾಗಿ ಹೊಸ ಆದೇಶದೊಂದಿಗೆ ಪ್ರತಿ ಕಾರು ಮಾದರಿಯಲ್ಲೂ ಆಟೋ ಮೋಡ್ ವೈಶಿಷ್ಟ್ಯತೆಯೊಂದಿಗೆ ಆಂಟಿ-ಸ್ಪೀಡಿಂಗ್ ತಂತ್ರಜ್ಞಾನವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಆದೇಶಿಸಿದ್ದು, ಹೊಸ ನಿಯಮ ಜಾರಿ ನಂತರ ಕಾರು ಮಾಲೀಕರಿಗೆ ಹೊಸ ಸುರಕ್ಷಾ ಮಾನದಂಡವನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಾಗುತ್ತದೆ.

ಇನ್ನು ವಿಶ್ವಾದ್ಯಂತ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಲು ಮತ್ತು ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾಲು ಉಪಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಕ್ರಮಗಳನ್ನು ಪ್ರಕಟಿಸಲಾಗುತ್ತಿದೆ.

ಇಂಗಾಲ ಉತ್ಪಾದನೆ ಅತಿದೊಡ್ಡ ಕೊಡುಗೆ ಹೊಂದಿರುವ ಪ್ರಯಾಣಿಕರ ಬಳಕೆಯ ಕಾರು ಮಾದರಿಗಳನ್ನು ಗಣನೀಯವಾಗಿ ತಗ್ಗಿಸುವತ್ತ ಯುರೋಪಿನ ಪ್ರಮುಖ ರಾಷ್ಟ್ರಗಳು ಈಗಾಗಲೇ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು, ಪರಿಣಾಮಕಾರಿಯಾದ ಇವಿ ವಾಹನ ಅಳವಡಿಕೆಗಾಗಿ ಕಂಪನಿಯು ಇದೀಗ ಯುರೋಪಿನ್ ಒಕ್ಕೂಟವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

2030ರ ವೇಳೆಗೆ ಶೇ.50ರಷ್ಟು ಇವಿ ವಾಹನ ಬಳಕೆಯ ಗುರಿಯೊಂದಿಗೆ ಇಂಧನ ಚಾಲಿತ ವಾಹನಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಪ್ರಮಾಣದ ಇವಿ ವಾಹನಗಳ ಮಾರಾಟವು ದಾಖಲಾಗಿದೆ.

ಆದರೆ ಇಂಧನ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಬಳಕೆಯು ಇನ್ನು ಕೂಡಾ ಸಾಕಷ್ಟು ಸುಧಾರಿಸಬೇಕಿದ್ದು, ಈ ಹಿನ್ನಲೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿರುವ ಯುರೋಪಿಯನ್ ಒಕ್ಕೂಟವು 2035ರ ವೇಳೆಗೆ ಶೇ.100 ರಷ್ಟು ಇಂಧನ ಚಾಲಿತ ವಾಹನಗಳನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ.

ಹೊಸ ಉಪಕ್ರಮಗಳ ಪರಿಣಾಮ ಈ ದಶಕದ ಅಂತ್ಯಕ್ಕೆ ಕಾರ್ಬನ್ ಡೈಆಕ್ಸೈಡ್ (CO2) ಹೊರಸೂಸುವಿಕೆ ಪ್ರಮಾಣವು ಸರಾಸರಿ 37.5 ಪ್ರತಿಶತದಷ್ಟು ಕಡಿಮೆಯಾಗುವ ಸಾಧ್ಯತೆಗಳಿದ್ದು, ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಶೇ. 12ರಷ್ಟು ಕಾರುಗಳೇ ಕಾರಣ ಎನ್ನಲಾಗಿದೆ.

ಇದೇ ಕಾರಣಕ್ಕೆ ಇಂಧನ ಚಾಲಿತ ವಾಹನ ತಗ್ಗಿಸುವ ನಿಟ್ಟಿನಲ್ಲಿ 27 ದೇಶಗಳನ್ನು ಒಳಗೊಂಡಿರುವ ಯುರೋಪಿಯನ್ ಒಕ್ಕೂಟವು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಮತ್ತು ವಿದ್ಯುದ್ದೀಕರಣದಲ್ಲಿ ಹೆಚ್ಚಿನ ಹೂಡಿಕೆಗೆ ಸಹಕಾರಿಯಾಗುವಂತೆ ಹೊಸ ನಿರ್ಣಯ ಪ್ರಕಟಿಸಿದೆ.


Click it and Unblock the Notifications